ಕಾವ್ಯ ಸಂಗಾತಿ
ಕಂಬಳಿ ಕೊಡೆ ಚಾಮರ
ಭೀಮರಾಯ ಹೇಮನೂರ
ನನ್ನವಳು ಅಂದರೆ…
ಮೈ ಕೊರೆಯುವ ಚಳಿಯಲ್ಲಿ
ಕಂಬಳಿಯಾದವಳು
ಪ್ರೀತಿಯ ಮಳೆಗರೆದು
ನೀತಿಯ ಕೊಡೆಯಾದವಳು
ಬಾಳ ಬಿಸಿಲಿಗೆ ಬಸವಳಿದವಗೆ
ಮಾಮರದ ನೆರಳಿಗೆ ತಂದು
ಚಾಮರವಾದವಳು
ನನ್ನವಳು ಅಂದರೆ….
ಮಳೆಯಲಿ ನೆಂದು
ಚಳಿಯಲಿ ಅಂದು
ತಾನೇ ನಡುಗಿದ ಹಲವು
ಮಳೆಗಾಲ ಚಳಿಗಾಲದಲಿ
ಕಂಬಳಿ ಕೊಡೆಯಾದವಳ ,
ಬಿರುಬಿಸಿಲ ದಿನಗಳಲಿ
ಸೆರಗಿನಂಚಿನಿಂದ
ಚಾಮರವ ಬೀಸಿ ಮುತ್ತಿಟ್ಟ
ಮುತ್ತಿಟ್ಟ ಹೆತ್ತಮ್ಮನನು
ಕೊಂಚ ಮರೆಸಿದವಳು
ಅಮ್ಮನನು ಹೊಗಳುತಲಿ
ತೊಟ್ಟಿಲ ತೂಗಿದವಳು
ಅಮ್ಮನಂತೆ ಮತ್ತೆ
ಕಂಬಳಿ,ಕೊಡೆ,ಚಾಮರ
ಹೀಗೆಯೇ ನಿರಂತರ.
ತುಂಬ ಸೊಗಸಾದ ಭಾವಲಹರಿ ಸರ್
ಅಭಿನಂದನೆಗಳು
ಧನ್ಯವಾದಗಳು ಮೇಡಂ. ತಮ್ಮ ತಕ್ಷಣದ ಭಾವಸ್ಪಂದನೆಗಾಗಿ.
ಎದೆಯಾಳದಿಂದ ಬಂದ ಪ್ರೀತಿಯ ಅಕ್ಷರಗಳು… ನಿಮ್ಮ ಕವನಗಳಲ್ಲಿನ ಶಬ್ಧಜೋಡಣೆಯು ಮನ ಸೆಳೆಯುತ್ತದೆ ಸರ್..❤️
ಧನ್ಯವಾದಗಳು