ಹನಿ ತಾಕಿದರೆ…

ಕಾವ್ಯ ಸಂಗಾತಿ

ಹನಿ ತಾಕಿದರೆ

ಬಿ.ಶ್ರೀನಿವಾಸ್‍

ತಾಕಿದ್ದರೆ
ಕಣ್ಣ ಹನಿ

ಮುಂಜಾನೆಯ ಆಕ್ರಂದನ
ರಾತ್ರಿಯ ನೀರವ ಮೌನ

ಆಗುತ್ತಿದ್ದವು
ಜೋಗುಳದ ಪದ

ಬೆಚ್ಚಿಬೀಳುತ್ತಿರಲಿಲ್ಲ ಹೀಗೆ

ಕೂರುತ್ತಲೇ ಇರಲಿಲ್ಲ ಇತಿಹಾಸ
ಹಟ ಹಿಡಿದು ಹೀಗೆ ಉಪವಾಸ

ಕೊಲ್ಲುತಿರಲಿಲ್ಲ ಹೀಗೆ
ನಮ್ಮೊಳಗಿನ ಮೌನ ನಮ್ಮನು

ಬಂದೂಕಿಗೆ
ಬಾಂಬುಗಳಿಗೆ
ಕ್ಷಿಪಣಿಗಳಿಗೆ..

ತಾಕಿದ್ದರೆ..
ಬಡವರ ಬೆವರ ಹನಿ

ಸುರಿಯಬಹುದಿತ್ತು
ಶತ್ರುವಿನ ಕಣ್ಣಿಂದಲೂ ಹನಿ!

————————–

Leave a Reply

Back To Top