ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಹೇಳಿ ಬಿಡು ವಿದಾಯ

Abstract 3d illustration of a pink neon light with heart shape. 3d illustration.

ಹೇಳಿ ಬಿಡು ವಿದಾಯ
ಕಿಡಕಿ ಸರಳುಗಳಿಗಂಟಿದ ಹಲ್ಲಿಗೂ
ಎಲುಬಿನ ಹಂದರಕೆ ನಾಟಿದ ನೆರಳಿಗೂ

ಹೇಳಿ ಬಿಡು ವಿದಾಯ
ಗಾಜಿನಂಥ ಆಕೃತಿಗೂ
ಗಾಜಿನಂಥ ಚಿತ್ತಾರಕೂ

ಹೇಳಿ ಬಿಡು ವಿದಾಯ
ಪ್ರೇಮಿಯ ಒಳನೋಟಕ್ಕೂ
ಪ್ರೇಮವ ದಹಿಸುವ ನೇತ್ರಕ್ಕೂ

ಹೇಳಿ ಬಿಡು ವಿದಾಯ
ಮತ್ತೊಂದು ಮೊಗಕ್ಕೂ
ಮೊಗದಂಥ ಸೂರಿಗೂ

ಹೇಳಿ ಬಿಡು ವಿದಾಯ
ಹರಿದಿಹ ತುತ್ತಿನ ಚೀಲಕ್ಕೂ
ಪ್ರೀತಿ ಹರಾಜಿಟ್ಟ ದೊರೆಗೂ

ಹೇಳಿ ಬಿಡು ವಿದಾಯ
ನನ್ನದೇ ಪ್ರತಿಕೃತಿಗೂ
ನನ್ನದೇ ಪ್ರತಿಕೃತಿಯ ದಹನಕ್ಕೂ


ಅಶೋಕ ಹೊಸಮನಿ

About The Author

Leave a Reply

You cannot copy content of this page

Scroll to Top