ಕಾವ್ಯ ಸಂಗಾತಿ
ಸ್ನೇಹ
ಆಸೀಫಾ
ದೂರಾದರೂ ದೇಹ ಶಾಶ್ವತವಿರಲಿ ಸ್ನೇಹ
ಮರೆತರೂ ಕೂಡ ಮರೆಯದಿರಲಿ ಭಾವ
ಕೆಲಕಾಲದ ಒಡನಾಟ ಅಂಟಿತ್ತು ಮನಸ
ಬಿಟ್ಟು ಹೋದರೂ ಬಿಡದು ನಿನ್ನ ನೆನಪ
ಜೊತೆ ಜೊತೆಯಲಿ ಓಡಾಡಿದ ದಾರಿ
ನೆನಪಾಗುವುದು ಒಂದಲ್ಲ ನೂರು ಬಾರಿ
ನಗುವುದ ಮರೆತೈತೆ ನನ್ನ ಊರು ಕೇರಿ
ಮುಖವಿತ್ತ ಮಾಡಿ ಹೋಗು ಒಂದು ಸಾರಿ
ಹೃದಯದ ತುಂಬ ಅರಳಿದ್ದ ಸುಮಗಳು
ಬಾಡೈತಿ ನೋಡು ನೀ ನಿಲ್ಲದೆ ಗೆಳತಿ
ಬೀಗಿದ ಕ್ಷಣಗಳು ಕೂಗಿ ಕೂಗಿ ಕರೆದರೂ
ಅರಸಿದ ಅರಸಿ ಬಂದಾಳೇ ಒಡತಿ
ಓಡುತೈತೆ ಚಕ್ರ ನಿಲ್ಲುವುದೆಂತು ಕಾಲ
ನೆನ್ನೆ ಮೊನ್ನೆಗಳ ಬದಲಾಗದು ಜಾಲ
ಸಾಗಬೇಕು ಸಾಗಲೇಬೇಕು ಮುಂದ
ಇದುವೇ ಜೀವನದ ಅಂದ ಚೆಂದ