ಕಾವ್ಯ ಸಂಗಾತಿ
ಗಜಲ್
ದುಂಬಿಯ ಅಧರ ಮುತ್ತಿಗೆ ಬಿರಿದ ಸುಮಕೆ ಜೇನಾಗುವ ತವಕ
ಬಾನ ಮಿನುಗುವ ಚುಕ್ಕಿಗೆ ಅವಳ ಕಣ್ಣ ಬೆಳಕಾಗುವ ತವಕ
ದೂರಾದ ಜೀವಗಳಿಗೆ ನಿತ್ಯವು ಹೆಚ್ಚಾಗುತಿದೆ ಎದೆ ಝಳ
ತೇಲಾಡುವ ನಭಕೆ ಧಾರಣಿ ಅಪ್ಪಲು ಮಳೆಯಾಗುವ ತವಕ
ಭೂತ ಕಾಲದ ನೆನಪು ಮನಸಿದಲಿ ಕಾಡುತಿದೆ ಸುರುಳಿ ಬಿಚ್ಚಿ
ಮುನಿದ ಮೌನ ವೀಣೆಗೆ ಭಾವರಾಗಕೆ ಶ್ರುತಿಯಾಗುವ ತವಕ
ತಬ್ಬಿದ ತನುವಿಂದ ಹರಡಿದೆ ಗುಪ್ತವಾಗಿ ಪ್ರೇಮದ ಕಂಪು
ತೆವಳುತಾ ಹೊರಟ ಹಳ್ಳ ತೊರೆಗಳಿಗೆ ಕಡಲಾಗುವ ತವಕರ
ನೇಸರನ ಬೆಳ್ಳಿರಥ ಪಯಣ ಮುಗಿದಿದೆ ಪಡವಣ ದಿಗಂತದಲಿ
ಅಲೆಯುವ ಜೋಗಿಗೆ ಜೊನ್ನ “ಪ್ರಭೆ” ಯಲಿ ಲೀನವಾಗುವ ತವಕ
ಪ್ರಭಾವತಿ ಎಸ್ ದೇಸಾಯಿ
Nice to read a beautiful gajal from you thanks a lot