ಕಾವ್ಯ ಸಂಗಾತಿ
ಒಂದವಕಾಶ ಸಿಕ್ಕರೆ….
ಕ್ಷಣಗಳಲ್ಲ ದಿನವೇ ಉರುಳಿತು
ಯಾವಾಗ? ಹೇಗೆ? ಯಾಕೆ ಬಂದೆ?
ಎನ್ನುವ ಔಪಚಾರಿಕತೆಗೆ
ಯಾರ ಮನಸ್ಸೂ ತೆರೆದುಕೊಂಡಿಲ್ಲ
ನಾನೋ ಗಾಳಿಯ ರಭಸಕ್ಕೆ
ಮುಚ್ಚಿದಷ್ಟೂ ತೆರೆದುಕೊಳ್ಳುವ
ಕಿಟಕಿಯಂತೆ
ಒಂಟಿತನವಲ್ಲ ಅನಾಥಪ್ರಜ್ಞೆ
ಸದ್ದು- ಗದ್ದಲವಿಲ್ಲ, ಸುತ್ತಲೂ
ಒಂದಷ್ಟು ಜನ ಮಲಗಿದ್ದಾರೆ
ಶಾಂತ ಸಾಗರದಲ್ಲಿ.
ಧ್ಯಾನ ಮಗ್ನರಾಗಿದ್ದಾರೆ
ನಿದ್ರಾ ಲೋಕದಲ್ಲಿ
ಯಾರು? ಯಾರಿಗೆ? ಯಾರಿದ್ದಾರೆ?
ಇಲ್ಲಿ ಹೃದಯ ಬಡಿತವೂ ಇಲ್ಲ.
ಹೆಜ್ಜೆ, ದನಿ, ಮಾತು
ಎಲ್ಲವೂ ಮೌನವಹಿಸಿವೆ.
ನನಗೋ ಇಲ್ಲಿ ಹಾರಾಡುವ ಬಯಕೆ,
ಹಾಡುವ ಇಂಗಿತ, ಎಲ್ಲರೊಡಗೂಡಿ
ಒಲವಿಂದ ಬಾಳ ಹೂಡುವ ಬಯಕೆ,
ಒಂದೇ ಒಂದು ಬಾರಿ ನನ್ನ ಹೃದಯ
ಬಡಿಯಲು ಅವಕಾಶ ಸಿಕ್ಕರೆ….
————————
ಒಲವು
ತುಂಬಾ ಚಂದ
ವಾಸ್ತವ ಚೆನಾಗಿದೆ.
ಥ್ಯಾಂಕ್ಯು
Thank you