ಕಾವ್ಯ ಸಂಗಾತಿ
ಒಂದೊಮ್ಮೆ ನೀ ನನ್ನ
ಸಖಿಯಾಗಿದ್ದರೆ
ಮುಕುರದಲ್ಲಿ ಬಿಂಬ ಗೋಚರಿಸುತ್ತಿತ್ತು…
ಒಂದೊಮ್ಮೆ ನೀ ನನ್ನ
ಜೊತೆಯಾಗಿದ್ದರೆ
ಮನವು ಆಲಿಂಗನದಿ ತೋಷ ಪಡುತಿತ್ತು…
ಒಂದೊಮ್ಮೆ ನೀ ನನ್ನ
ಹೆಜ್ಜೆ ಹಾಕಿದ್ದರೆ
ಬಾಳ ಮೇನೆಯಲಿ ಜೀವನ ಸಾಗುತಿತ್ತು…
ಒಂದೊಮ್ಮೆ ನೀ ನನ್ನ
ನೋಡಿದ್ದರೆ
ಸ್ವರ್ಗವೆ ಎದುರಿಗೆ ಇಳಿಯುತಿತ್ತು
ಒಂದೊಮ್ಮೆ ನೀ ತಲ್ಪದಲಿ
ತೇಲಿದ್ದರೆ
ಕನಸುಗಳ ನನಸು ಮಾಡಬಹುದಿತ್ತು
ಒಂದೊಮ್ಮೆ ನೀ ನನ್ನ
ಹೃದಯದಲ್ಲಿದ್ದರೆ
ನೋವಿಲ್ಲದಂತೆ ಬದುಕಬಹುದಿತ್ತು…
ಶಂಕರಾನಂದ ಹೆಬ್ಬಾಳ
Super!
Waw