ಕಾವ್ಯ ಸಂಗಾತಿ
ಡಿಸೆಂಬರ್ ಆರು
ಬಿ.ಶ್ರೀನಿವಾಸ
ಅಗೋ…..
ಆ ನಿನ್ನ ಪಾಠ ಕಲಿಸಿದ ಮೇಷ್ಟ್ರು
ರೋಗ ವಾಸಿ ಮಾಡುವ ಡಾಕ್ಟ್ರು,
ಪುಸ್ತಕ ಬರೆದವರು
ಅಷ್ಟೇ ಅಲ್ಲ
ನಿನ್ನ ಅಣ್ತಮ್ಮಂದಿರು
ಅಕ್ತಂಗೀರು
ಪ್ರಭುತ್ವ,
ಮೀಡಿಯಾ
ಪೊಲೀಸು,
ಕೂಡ
ಉನ್ಮಾದದಲ್ಲಿದೆ
ಮಗೂ…
ಮನೆ ಬಿಟ್ಟು ಹೊರಗೆಲ್ಲೂ ಬರಬೇಡ
ನ್ಯಾಯ
ಕೂಡ
ಉನ್ಮಾದದಲ್ಲಿದೆ!
ಮಗುವೇ
ಈ ದೇಶವನು
ಕಾಪಾಡುವ ಮುನ್ನ
ನಿನ್ನನು ನೀನು
ಕಾಪಾಡಿಕೊಳುವ ದಾರಿ ಹುಡುಕು
ಡಿಸೆಂಬರ್ ಆರೂ…
ಈ ತೇದಿ
ಯಾವಾಗಲೂ ಹೀಗೇ
ಕಣ್ಣಲ್ಲಿ
ನೀರುಳಿಸಿಯೇ ಬಿಟ್ಟಿರುತ್ತೆ