ಕಾವ್ಯ ಸಂಗಾತಿ
ಜೀ-ವನ
ಜೀವನವೊಂದು ಭವ್ಯ ಸಿರಿ ವನ
ಬಾಲ್ಯ ಜೇನ ಸುರಿವ ಹನಿಗವನ
ಚಿಗುರೊಡೆಯುವ ಸುಂದರ ವನ
ಹದಿಹರೆಯ ಸ್ವಪ್ನಗಳ ಮಧುವನ
ಚಿತ್ತಾರ ಬರೆವ ಭಾವಗಳ ದಿಬ್ಬಣ
ಮತ್ತೆ ಸರಿದ ಒಂಟಿತನ, ಮೌನ
ಯವ್ವನ ಮನಗಳ ಬೆಸೆವ ಪ್ರೇಮವನ
ಸಂಸಾರ ಭೋರ್ಗರೆವ ಘೋರ ಅಲೆಗಳ ತಾಣ
ಮಾರುತಕೆ ಎದೆಯೊಡ್ಡಿ ಧುಮಕಿ ಸಾಗುವ ಪಯಣ
ಮುದಿತನ- ಕಾಡುವ ಒಂಟಿತನ
ಅಪಾರ ಅನುಭವಗಳ ಶೋಧನ
ಮೆಲುಕಿದಷ್ಟು ಮುಗಿಯದ ನೆನಪುಗಳ ತಿರುಗುಬಾಣ
ಮತ್ತೆ ಮರಣವ ಎದುರು ನೋಡುವ ದಿನ
ನವರಸಗಳ ಸಮಾನ ಮಿಲನ ಈ ಜೀವನ
ಎಲ್ಲ ಅರಗಿಸಿ ಸವಿಯುವುದೇ ಜಾಣನ ಲಕ್ಷಣ
—————————————
ಶಾಲಿನಿ ಕೆಮ್ಮಣ್ಣು