ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸೀತಾಫಲದ ಕಣ್ಣು

30,000+ Free Eye & Cat Images

ಬಂಡೆಗಲ್ಲುಗಳ ನಿಟ್ಟುಸಿರು
ಮುಳ್ಳುಕಂಟಿಗಳ ನರಳಿಕೆಯ
ಸದ್ದಿನಲ್ಲಿ ಅರಳಬೇಕು
ಜಿಗಿದು ಹಸಿರಾಗಬೇಕು
ಕುಡಿದು ಬೆವರು

ಸೀಯೆಂದರೆ ಸೀ…
ಬೆಳ್ಳನ್ನ ಬೆಳ್ಳಗೆ
ನಾಲಿಗೆಯಲಿ ನಲಿವ ತೊಳೆ
ಫಳಕ್ಕನೆ ಹೊರಗೆ ಜಿಗಿವ ಬೀಜ
ಕಣ್ಣು ಬಿಡಬೇಕು ಹಣ್ಣು

ಒಗರೊಗರು…ಒರಗೊರಗು ಮೈಯ್ಯ ಚರ್ಮ

ಶಾಪಗ್ರಸ್ತ ಇಂದ್ರನ ಕಣ್ಣೋ
ಕಾಡಿಗಟ್ಟಿದ ರಾಮನ ವಿಷಾದದ ಕಣ್ಣೋ..
ಇರಿದ ಗಾಯದ ಭುವಿಯ ಕಣ್ಣೋ…

ನೋಟಗಳಂತೂ ಇರಿಯುತಿವೆ..
ಎದೆ ಬಿರಿಯುತಿದೆ.


     ಬಿ.ಶ್ರೀನಿವಾಸ

About The Author

1 thought on “”

  1. ಕಾಡಿಗಟ್ಟಿದ ರಾಮನ ವಿಷಾದ ಎಂದರೆ ಏನೆಂಬುದು ಗೊತ್ತಾಗುತ್ತಿಲ್ಲ.

Leave a Reply

You cannot copy content of this page

Scroll to Top