ಕಾವ್ಯ ಸಂಗಾತಿ
ಗಜಲ್ ಎಂದರೇ
ಶ್ರೀನಿವಾಸ ಜಾಲವಾದಿ
ಒಲವ ತುಂಬಿದ ಹೃದಯದ ಮಾತು
ಪ್ರೀತಿ ಪ್ರೇಮದ ಸುಂದರ ಕನಸು
ಕಾವ್ಯಾರಾಧಕರ ಪ್ರೀತಿಯ ನಲಿವು
ಮದಿರೆಯ ಮತ್ತಿನಲಿರುವ ದುಂಬಿ
ಹೃದಯದ ಮಾತು ಪಿಸುಗುಟ್ಟುವಿಕೆ
ಕಣ್ಣ ಸನ್ನೆಯ ತುಂಟಾಟದ ಮಜಲು
ಪ್ರೇಮಿಯೊಡನಾಟದ ಯಕ್ಷಗಾನ
ದುಂಬಿ ಝೇಂಕಾರ ದಿನ ಅನುದಿನ
ನಿಸರ್ಗದ ಚೆಲುವಿಗೆ ಮುಂಗುರುಳು
ಸೂರ್ಯದೇವನ ಬೆಳ್ಳಿ ರಥಯಾತ್ರೆ
ಗಜಲ್ ಎಂದರೆ ಪ್ರೀತಿ ಪ್ರೇಮದ ಜೇನು
ಹರುಷದ ಹೊನಲು ಬೆಳಕಿನ ಅಮಲು
ಸುಂದರ ಸಮಗ್ರ ವ್ಯಾಖ್ಯಾನ
ಗಜಲ್ ಎಂದರೆ ಗಜಲ್ ರೂಪದಲ್ಲಿಯೇ ವ್ಯಾಖ್ಯಾನಿಸಿರುವ ರೀತಿ ಸುಂದರವಾಗಿಯೇ ಮೂಡಿಸಿದ್ದೀರಿ