ಸಿರಿವೆನ್ನಲ ಸೀತಾರಾಮ ಶಾಸ್ತ್ರಿ ನೆನಪಿಗೆ.

ಶ್ರೀಸಿರಿವೆನ್ನಲ‌ ಸೀತಾರಾಮಶಾಸ್ತ್ರಿಯವರುತೆಲುಗಿನಖ್ಯಾತಚಲನಚಿತ್ರಗೀತೆರಚನಾಕಾರರು. ಇವರು೩೦-೧೧-೨೦೨೧ರಂದುಮರಣಿಸಿದರು. ಈಸಂತಾಪದಸಂದರ್ಭದಲ್ಲಿಅವರಿಗೆಅವರದೇಗೀತೆಯಅನುವಾದದಮೂಲಕಸಂಗಾತಿ ಪತ್ರಿಕೆಶ್ರದ್ಧಾಂಜಲಿಅರ್ಪಿಸುತ್ತದೆ

ಆಕರ : ಗಾಯಂ (ತೆಲುಗು ಸಿನಿಮಾ)

ತೆಲುಗು ಮೂಲ : ಸಿರಿವೆನ್ನಲ ಸೀತಾರಾಮ ಶಾಸ್ತ್ರಿ

ಕನ್ನಡಕ್ಕೆ : ಧನಪಾಲ ನಾಗರಾಜಪ್ಪ

ನಿಲ್ಲಿಸಿ ಕೇಳು ನಾಚಿಕೆಗೇಡಿಗಳನ್ನು

ಬೆಂಕಿಯಿಂದ ತೊಳೆ ಸಮಾಜ ಜೀವಚ್ಛವವನ್ನು

ಬದಲಾಗದು ಲೋಕ ಬದಲಾಗದು ಕಾಲ

ದೇವರೇ ಇಳಿದು ಬಂದರೂ

ಯಾರು ಏನೇ ಆದರೂ

ಬದಲಾಗದು ಲೋಕ ಬದಲಾಗದು ಕಾಲ

ಗಾಳಿಯೊಡನೆ ಸಾಗಲು

ಕಾಲು ದಾರಿ ಯಾಕೆ?

ಕುರಿ ಮಂದೆಯಂತಹವರಿಗೆ

ಜ್ಞಾನ ಬೋಧನೆ ಯಾಕೆ?

ಯಾವ ಚರಿತೆ ಕಲಿಯಿತು ಅಚ್ಚ ಹಸಿರಾದ ಪಾಠ?!

ಯಾವ ಕ್ಷಣ ಬದಲಿಸಿತು ಕುತಂತ್ರದ ಮಾರ್ಗ?!

ರಾಮಬಾಣ ಆರಿಸಿತೆ ರಾವಣ ಕಾಷ್ಠವನ್ನು?!

ಕೃಷ್ಣ ಗೀತೆ ನಿಲ್ಲಿಸಿತೆ ನಿತ್ಯ ಕುರುಕ್ಷೇತ್ರವನ್ನು?!

ಹಳೆ ಕಲ್ಲಿನ ಗುಹೆಗಳು

ಅಮೃತ ಶಿಲೆಯ ಮನೆಗಳಾದರೂ

ಅಡವಿಯ ನೀತಿ ಬದಲಾಯಿತೆ ಎಷ್ಟು ಯುಗಗಳಾದರೂ?!

ಅದೇ ಬೇಟೆ ಅದೇ ಏಟು

ಅಂದಿನ ಕಥೆಯೇ ಹಾಗೆ!

ನಟ್ಟಡವಿಗಳು ನಡುಬೀದಿಗೆ ನಡೆದು ಬಂದರೆ ವಿಚಿತ್ರವೆ?

ಬಲಿಷ್ಠರೇ ಬದುಕಬೇಕೆಂಬ ಸೂಕ್ತಿ ಮರೆಯದಿರಿ

ಶತಮಾನಗಳು ಓದಲಿಲ್ಲವೆ ಅರಣ್ಯಕಾಂಡವನ್ನು?!

ನಿಲ್ಲಿಸಿ ಕೇಳು ನಾಚಿಕೆಗೇಡಿಗಳನ್ನು

ಬೆಂಕಿಯಿಂದ ತೊಳೆ ಸಮಾಜ ಜೀವಚ್ಛವವನ್ನು

ಬದಲಾಗದು ಲೋಕ ಬದಲಾಗದು ಕಾಲ

ದೇವರೇ ಇಳಿದು ಬಂದರೂ

ಯಾರು ಏನೇ ಆದರೂ

ಬದಲಾಗದು ಲೋಕ ಬದಲಾಗದು ಕಾಲ


ಧನಪಾಲ ನಾಗರಾಜಪ್ಪ

One thought on “ಸಿರಿವೆನ್ನಲ ಸೀತಾರಾಮ ಶಾಸ್ತ್ರಿ ನೆನಪಿಗೆ.

Leave a Reply

Back To Top