ಶಿಶುಗೀತೆ
ಚೈತ್ರಾ ತಿಪ್ಪೇಸ್ವಾಮಿ
ಗಾಳಿ ಬೇಕಣ್ಣ ನಮಗೆ ಗಾಳಿಯು ಬೇಕಣ್ಣ
ಬದುಕಲು ನಮಗೆ ಗಾಳಿಯು ಬೇಕಣ್ಣ||ಪ||
ಗಾಳಿಯಿಲ್ಲದೆ ಯಾರು ಉಳಿಯರು
ಅದುವೆ ನಮ್ಮ ಪ್ರಾಣವಾಯುವು
ಕ್ಷಣವೂ ತೊರೆದು ಉಳಿಯಲಾರೆವು.
||ಗಾಳಿಯು||
ಶುದ್ಧ ಗಾಳಿಯು ದೇಹಕೆ ಉತ್ತಮ
ಪರಿಸರದಿಂದಲೆ ಗಾಳಿಯ ಹರಿವು
ಚೆಂದದಿ ಗಿಡಮರ ಬೆಳೆಸಬೇಕಣ್ಣ.
|| ಗಾಳಿಯು||
ಮೀರಿದ ಜನಸಂಖ್ಯೆ ಭೂಮಿ ಮೇಲೆ
ಹೆಚ್ಚಿದೆ ವಾಹನ ರಸ್ತೆಯ ತುಂಬಾ
ಕೆಟ್ಟಿದೆ ಗಾಳಿ ವಿಷಾನಿಲ ಸೇರುತ.
||ಗಾಳಿಯು||
ಮಲಿನಗೊಂಡ ಗಾಳಿಯ ಸೇವಿಸಿ
ಶ್ವಾಸ ರೋಗಗಳು ಬಂದವು ನೋಡಿ
ಮಲಿನ ತಡೆದರ ನಮಗೆ ಉಳಿವು.
||ಗಾಳಿಯು||