ಕಿಟಕಿ-ಬಾಗಿಲು
ಕವಿತೆ ಕಿಟಕಿ-ಬಾಗಿಲು ಸ್ಮಿತಾ ಅಮೃತರಾಜ್.ಸಂಪಾಜೆ. ಮುಂಬಾಗಿಲು ಸದಾದಿಡ್ಡಿಯಾಗಿ ತೆರೆದೇಇರುತ್ತದೆ.ಬೆಳಕು ಕಂದಿದ ಮೇಲಷ್ಟೇಮುಚ್ಚಿಕೊಳ್ಳುತ್ತದೆ. ಬಾಗಿಲೆಡೆಗೆ ಮುಖವೂತೋರಿಸಲು ಬಿಡುವಿಲ್ಲದವರುಒಳಗೆ ಗಡಿಬಿಡಿಯಲ್ಲಿರುತ್ತಾರೆಅದಕ್ಕೇ ಬಾಗಿಲು ಸದಾತೆರೆದೇ ಇರುತ್ತದೆ. ಪುಣ್ಯಕ್ಕೆ ಪ್ರತೀ ಕೋಣೆಗಳಿಗೂಪುಟ್ಟ ಪುಟ್ಟ ಕಿಟಕಿಗಳಿವೆ.ಹೊರಕ್ಕೆ ನೋಡಲು ಹಾತೊರೆಯುವವರುಏನನ್ನೂ ನೋಡದೇ ಸಾಯುತ್ತಿದ್ದೇವೆ ಅಂತಹಲುಬುತ್ತಾ ಶಾಪ ಹಾಕುವಂತಿಲ್ಲ. ಗಾಳಿಯಷ್ಟೇ ಅಲ್ಲಿ ಒಳನುಗ್ಗುತ್ತಿದೆಅಂತ ಖಾತ್ರಿ ಪಡಿಸಿಕೊಂಡ ಮೇಲೂಅಗತ್ಯಕ್ಕಿಂತ ಜಾಸ್ತಿಯೇ ಸರಳುಗಳುಬಿಗಿಯಲ್ಪಟ್ಟಿವೆ. ಬೆಟ್ಟ ಗುಡ್ಡ ಹಸಿರುದೂರದಲ್ಲಿ ಹರಿಯುವತೊರೆಯ ಸದ್ದುಚಿತ್ರ ಬಿಡಿಸುತ್ತಾ ಓಡುವಮುಗಿಲುಇಷ್ಟಿಷ್ಟೇ ಕಡಲಿಗಿಳಿಯುವಹಗಲು. ಅಂಗೈಯಷ್ಟಗಲ ಕಂಡರೂಅನಂತ ಆಗಸದಗಲಹಬ್ಬುತ್ತಿದೆ ಒಳಮನೆಯೊಳಗೂಕಲ್ಪನೆಯ ಚಿತ್ತಾರ. ಕಿಟಕಿ ಅರೆ ಮುಚ್ಚಿಕ್ಕೊಂಡೇಇರುತ್ತದೆ.ಆದರೂ ಬಿಗಿದ ಸರಳುಗಳಎಡೆಯಿಂದ ಬೆಳಕು […]
ಅರಿವೇ ಗುರು
ಕವಿತೆ ಅರಿವೇ ಗುರು ವಸುಂಧರಾ ಕದಲೂರು ದೀಪ ಆರಿಸಿಬಿಟ್ಟೆ; ಸೂರ್ಯನೂಮುಳುಗಿದ. ಕತ್ತಲೆಂದರೆ- ಕತ್ತಲೀಗಒಳಹೊರಗೂ.. ಮೌನಕ್ಕೆ ಶರಣಾದೆ, ಕಿವುಡುತನದಲಿ.ಶಾಂತಿಯೆಂದರೆ ಶಾಂತಿಯೀಗ ಒಳಹೊರಗೂ.. ಇತಿಮಿತಿಗಳ ಅರಿವಾಯ್ತು,ನನ್ನದೂ ಮತ್ತವರಿವರದು.ಜಾಗರೆಂದರೆ ಜಾಗರೂಕಳೀಗ.ಒಳಹೊರಗೂ.. ಮಮತೆಯ ಕಣ್ತೆರೆದು, ಒಲವಿನಲಿನೋಡಿ ನುಡಿದೆ. ಹರುಷವೆಂದರೆಹರುಷವೀಗ. ಒಳಹೊರಗೂ.. ದೀಪ ಹಚ್ಚಿಟ್ಟೆ, ಬೆಳಕ ಹಂಬಲದಲಿ. ಇರುಳಿನಿಂದ ಸೂರ್ಯನೆದ್ದುಬಂದ. ಬೆಳಕೆಂದರೆ ಬೆಳಕೀಗಒಳಹೊರಗೂ.. ************
ಶಿಶಿರ
ಕವಿತೆ ಶಿಶಿರ ಎಂ.ಆರ್. ಅನಸೂಯ ನೆನಪಿಸುತ್ತಿಲ್ಲಶಿಶಿರದಇಬ್ಬನಿ ಹನಿಮುತ್ತಿನ ಮಣಿಯಕಾಡುತ್ತಿದೆಯಲ್ಲಇಬ್ಬನಿಯಹಿಮ ಕೊರೆವ ಚಳಿಯಲ್ಲೇರಾಜಧಾನಿಯ ಬಯಲಲ್ಲೇಕೂತ ರೈತನ ಪಾಡು !ಜತೆಯಲ್ಲೇಕಲ್ಲು ಮನದ ರಾಜನೂ ! ನೆನಪಿಸುತ್ತವೆಶಿಶಿರದಬೋಳು ಮರಗಳುಭರವಸೆ ಕಾಣದಕೃಷಿಕನ ಬವಣೆಯ ಬದುಕುಲಾಠಿ ಎತ್ತಿದ ಕೈಗೂರೊಟ್ಟಿಯಿತ್ತ ಅನ್ನದಾತನ ಕೂಗುಕೇಳಿಸದುಜಾಣ ಕಿವುಡಿನ ದೊರೆಗೆ ************************
ಸಂ ‘ಕ್ರಾಂತಿ’
ಕವಿತೆ ಸಂ ‘ಕ್ರಾಂತಿ’ ತೇಜಾವತಿ ಹೆ್ಚ್.ಡಿ. ಪುರಾಣದ ನೋಟದಲಿ,ವಿಜ್ಞಾನವು ಇಣುಕಿಸಂಪ್ರದಾಯ ಮಾತನಾಡಿ,ಕೃತಜ್ಞತೆ ಕೈಹಿಡಿದನವ ಬದುಕಿನ ಸಂ’ಕ್ರಾಂತಿ’ಎಳ್ಳು-ಬೆಲ್ಲದೊಂದಿಗೆ ಕರಣದಲಿ ಕಳೆದುಹೋದಹೊಸ ಹುರುಪಿನ ಶ್ರವಣ ಪುಷ್ಯ ವೇಷ ಧರಿಸಿ ಹೊರಬರುತಿದೆ ನವಕ್ರಾಂತಿ ಧರೆ ಪರಿಭ್ರಮಿಸುವ ಗಳಿಗೆದಿನ ರಾತ್ರಿಹಗಲು ಇರುಳುಬೆಳಗು ಕತ್ತಲುಹೀಗೆ ಮಾಸ ಅಯನಗಳ ವರ್ತನೆಉತ್ತರಾಯಣ ತಿರುಗಿ ಸಂಕ್ರಮಣ ಮೂಡಿಬೆಳೆಯ ತಲೆಯ ಇಳೆಗೆ ಬಾಗಿಸುತಸೂರ್ಯರಶ್ಮಿ ಹೊಳಪು ನವಭಾವದ ಕಂಪು ಎಲ್ಲವುಗಳಂತಲ್ಲ ಈ ಹಬ್ಬ!ವರ್ಷವಿಡೀ ತನ್ನೊಡೆಯನಿಗಾಗಿ ದುಡಿದು ದಣಿದಜಾನುವಾರುಗಳ ಅಲಂಕರಿಸಿ,ಪೂಜಿಸಿಮೆರವಣಿಗೆ ಮಾಡಿ,ಕಿಚ್ಚು ಹಾಯಿಸಿಗೋವಿಗೂ ಕೃತಜ್ಞತೆಯ ಅರ್ಪಿಸುವ ಕಾಯಕಬ್ಬ ಹಾಡು ಪಾಡುಎಳ್ಳು ಬೆಲ್ಲ ಹಂಚುವನವೀನ […]
ಪಥ
ತಿರುಗುವುದು ಚಕ್ರದಂದದಿ
ಹಾಗೇ ದುಃಖ ದುಮ್ಮಾನಗಳು
ನಿಲ್ಲಲಾರವು ಸ್ಥಿರವಾಗಿ
ಹಾಯ್ಕುಗಳು
ತೊಟ್ಟಿಲು ಕಟ್ಟಿ :
ಬಾನಿಗೆ, ಲಾಲಿಹಾಡು,
ಹಕ್ಕಿ ಹೇಳಿದೆ.
ಏಕತಾರಿಯ ಸಂಚಾರಿ ಸ್ವರಗಳು
ಕಾತ್ಯಾಯಿನಿ ಕುಂಜಿಬೆಟ್ಟು ಬರೆಯುತ್ತಾರೆ
ಹೊರ ದಾರಿಯಲ್ಲಿ ನೀನು ನಡೆದು ದೂರ ಹೋಗಿ ಬಿಡು
ನಿನ್ನದೇ ಕನಸುಗಳ ಊರಿಗೆ
ಕಡಲಾಚೆಯ ಆ ದೇಶಕೆ
ಇಬ್ಬನಿಯ ಸೆರಗು
ಶಾಂತಲಾಮಧು ಕವಿತೆ
ಕ್ಷಣಿಕಬದುಕಿನ ನೆನಹು
ಇಬ್ಬನೀಯ ಸೆರಗು
ಸಂಕ್ರಾಂತಿ ಕಾವ್ಯ ಸುಗ್ಗಿ ಕನ್ನಡಿ ಟಿ ಎಸ್ ಶ್ರವಣ ಕುಮಾರಿ ಅಜ್ಜನ ಮನೆಯಲ್ಲಿದ್ದ ಕನ್ನಡಿ ಅವರಜ್ಜ ತಂದದ್ದಂತೆ;ಅಜ್ಜನಜ್ಜ ಆ ಮನೆಕಟ್ಟಿದಾಗ ಗೋಡೆಗೆ ಹಾಕಿದ್ದಂತೆ. ಎರಡಡಿ ಎತ್ತರ, ಒಂದೂವರೆಯಡಿಯಗಲದ ಕನ್ನಡಿಗೆ –ಕರಿಮರದ ಕೆತ್ತನೆಯ ಚೌಕಟ್ಟು, ಹಿಂಬದಿಗೆ ಗಟ್ಟಿ ಹಲಗೆ.ಮಿರಮಿರ ಮಿಂಚುವ ಬೆಲ್ಜಿಯಂ ಗ್ಲಾಸಿನ ಕನ್ನಡಿಯಡಿಗೆ –ಮರದ ಗೂಡು, ಅದರಲ್ಲಿ ಸಾದು, ಕುಂಕುಮ, ಹಣಿಗೆ… ಬಚ್ಚಲ ಮನೆಯಿಂದ ಬಂದರೆ ಎದುರಿಗೇ ಕಾಣುವಂತೆ,ಮುಚ್ಚಟೆಯಿಂದ ಬಾಚಿ, ಹಣೆಗಿಡಲು ಅನುವಾಗುವಂತೆ,ಮಚ್ಚಿನಿಂದ ಬೀಳುತಿದ್ದ ಬೆಳಕು ಮುಖ ತೋರುವಂತೆ,ಅಚ್ಚೆಯಿಂದಿತ್ತು ಗೋಡೆಯಲಿ ಮೌನವೇ ಮಾತಾದಂತೆ! ಅಜ್ಜನಜ್ಜನ ಕಾಲದಿಂದದೆಷ್ಟು ಮುಖಗಳ […]
ಶಪಥ
ಸಂಕ್ರಾಂತಿಗೆ ಸುಧಾರಾಣಿಯವರ ವಿಶೇಷ ಕವಿತೆ ಶಪಥ ಹೊಸ ವರುಷಕೆ ಒಂದುಶಪಥವಿದೆ ಸಾಕಿಮತ್ತೆಂದೂ ಎದಿರುಗೊಳ್ಳುವುದಿಲ್ಲಹನಿ ಪ್ರೀತಿಗಾಗಿಅಂಗಲಾಚುವುದೂ ಇಲ್ಲನೀ ಸಾಗಿದ ದಾರಿಯಲ್ಲಿಸಾವಿರ ಬಾರಿ ತಿರುಗಿ ತಿರಿಗಿನೋಡುವುದೂ ಇಲ್ಲ ನಿನ್ನ ನೆನಪಲಿ ಕಣ್ಣಾಲಿಗಳುಒಡ್ಡು ಕಟ್ಟಿ ನಿಂತರೂ,ಥುಳುಕಿದರೂತುಟಿ ಕಂಪಿಸಿದರೂನಿನ್ನ ಸಂತೈಸುವಿಕೆಗೆಹಾತೊರೆಯುವುದೂ ಇಲ್ಲಒರಗಿದ್ದ ನಿನ್ನೆದೆಯ ನೆನೆದುಸಂತೈಸಿಕೊಳ್ಳುವುದು ಇಲ್ಲಬಿಡು, ನಿರಾಳವಾಗಲಿ ಮನಸ್ಸು, ಅದೆಷ್ಟೂ ಖಾಲಿತನಉಸಿರು ನಿಂತ ಮೇಲೆಯಾರಿಗ್ಯಾವ ಹೆಸರು?ಹೆಣವೆಂದಷ್ಟೇ ಅಲ್ಲವೇ ಸಾಕಿಈ ವರ್ಷಕೂ ಅದೇ ಶಪಥನನ್ನಲ್ಲಿ ನೀನಿರುವವರೆಗೂಬದುಕಬೇಕುಅದಮ್ಯವಾಗಿ ಪ್ರೀತಿಸಬೇಕು