ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಅರುಣಾ ನರೇಂದ್ರ ಅವರ ಗಜಲ್

ಕಾವ್ಯ ಸಂಗಾತಿ ಅರುಣಾ ನರೇಂದ್ರ ಗಜಲ್ ನಂಬಿದೆದೆಯಲಿ ಇಂಬಿರದೆ ಬಿಕ್ಕುತಿದೆ ಹಕ್ಕಿಜೊತೆ ನಡೆದ ಗುರುತಿರದೆ ಅಳುತಿದೆ ಹಕ್ಕಿ ಮುರಿದು ಹೋಯಿತು ತಾ ಕುಳಿತ ಕೊಂಬೆಹಾರಲು ಬಲವಿರದೆ ನೋಯುತಿದೆ ಹಕ್ಕಿ ಸುರಿಯುತಿದೆ ಮಳೆ ಬೀಸುತಿದೆ ಬಿರುಗಾಳಿಸುತ್ತ ಕತ್ತಲಲಿ ದಿಕ್ಕಿರದೆ ತೋಯುತಿದೆ ಹಕ್ಕಿ ರೆಕ್ಕೆಯ ಬಣ್ಣ ಮಾಸಿದೆ ಕೊರಳು ಬಿಗಿದಿದೆದುಃಖದಿ ಜೊತೆಯಿರದೆ ಕಾಯುತಿದೆ ಹಕ್ಕಿ ಮೂಕವಾಗಿವೆ ಗಿಡ ಮರ ಹೂ ಬಳ್ಳಿಗಳುಕಾನು ಕಣಿವೆ ಹಿತವಿರದೆ ಕೊರಗುತಿದೆ ಹಕ್ಕಿ ದೂರವಾಗಿದೆ ಬಲು ಬಿತ್ತರದ ನೀಲಿ ಬಾನುಅವನ ಪ್ರೀತಿಯಿರದೆ ಸೋಲುತಿದೆ ಹಕ್ಕಿ ಬದುಕಿಗಾಗಿ ಗಟ್ಟಿಗೊಳ್ಳಬೇಕು ಅರುಣಾನಲಿವಿನಲಿ ನೋವಿರದೆ ಬಾಳುತಿದೆ ಹಕ್ಕಿ ಅರುಣಾ ನರೇಂದ್ರ

ಅರುಣಾ ನರೇಂದ್ರ ಅವರ ಗಜಲ್ Read Post »

ಕಾವ್ಯಯಾನ

“ಅಜೀಬ್ ದಾಸ್ತಾಂ ಹೈ ಏ” ಸುಮತಿ ನಿರಂಜನ

ಕಾವ್ಯ ಸಂಗಾತಿ ಸುಮತಿ ನಿರಂಜನ “ಅಜೀಬ್ ದಾಸ್ತಾಂ ಹೈ ಏ ಸಂಪಾದಕರ ಸುಗ್ರೀವಾಜ್ಞೆ !“ಏನೇ ಇರಲಿ ಹೊಸತು ಬರಲಿಏನಾದ್ರೂ ವಿಭಿನ್ನ ಬರೀರ್ರೀಪ್ರಾಸ ಗೀಸದ ಬೆನ್ನಟ್ಟದಿರಿ!”“ಆದ್ರೆ ಸರ್, ಕಲ್ಪನಾ ವಿಲಾಸಪ್ರಾಸದ್ದೇ ಬೆನ್ನೇರಿ ಬಂದ್ರೆ ?”“ಏನಾದ್ರೂ ಮಾಡ್ರೀ ಹೋಗ್ರೀ !ಆದ್ರೆ ಹಳೇ ದಾಸ್ತಾನಿಂದಮಾತ್ರ ತೆಗೀಬೇಡ್ರೀ !” ಪೆನ್ನು ಪೇಪರು ಹಿಡಿದು ಹೊರಟೆಚಿನ್ನದ ಗಣಿಯೆಲ್ಲಾದರೂಇದೆಯೇನು ಪಕ್ಕ್ದಲ್ಲೇ ?ಅಗ್ದು ಅಗ್ದು“ಪುಟ”ಕ್ಕಿಟ್ಟು ಕೊಡ್ಲಿಕ್ಕೆ ?ಹೋಗ್ಲಿ, ಅಮ್ಮನಅವಳಮ್ಮನ ಒಡವೆ ಮುರಿದುಹೊಸ ಡಿಸೈನು ಮಾ‌ಡಿಸ್ಲೆ ?ಯಾಕೋ ಮನಸ್ಸಾಗ್ಲಿಲ್ಲಬರೇ ಆಂಟಿಕ್ ವಾಲ್ಯೂಎಂದಾರು ಸಂ.ಸಾಹೇಬ್ರು ! ಅಥವಾ,ಪಳ ಪಳ ಹೊಳೆಯುವಹೊಸ ಹೊಸ ಪದಗಳಟಂಕಿಸಿ ಅಂಟಿಸಿ ಪೇಜಿನ ಮೇಲೆಅಂಚೆಗೆ ಹಾಕ್ಲೆ ಈಗ್ಲೆ ?ಹೊಸ ನಾಣ್ಯ ನಡೆಯೋದಲ್ಲಓಡ್ತಾವೆ ನೋಡಿ, ಮಿಂಟ್ ಫ್ರೆಶ್ !ಎಂದನಲ್ಲವೇ ಸಂ ಮಹಾಶಯ !ಆದರೆ…ಹತ್ರ ಎಲ್ಲೂ ಟಂಕಸಾಲೆನೇಕಾಣಿಸ್ತಿಲ್ವಲ್ರೀ !ಈಗ ಅದೇನೋ ಬಂದಿದ್ಯಂತಲ್ಲಾಕೃತ್ರಿಮ ಬುದ್ಧಿ ಮತ್ತೆ ಅಂತ ?ಅದಕ್ಕೇ ಮೊರೆ ಹೋಗ್ಲೇನು ?“ಅದ್ ಬಂದ್ ಮೇಲೆನಿಮ್ಗ್ ಯಾರ್ರೀ ಹಾಕ್ತಾರ್ರ್ ಸೊಪ್ಪು ?”ಎಂದಾನು ಮಹಾನುಭಾವ ! ಸರಿ, ನಡಿ ಮತ್ತೆಹಳೆ ಉಗ್ರಾಣಕ್ಕೆ…ಏನೇನೋ ದಾಸ್ತಾಂ…ಅಳಿದಿದ್ದು ಉಳಿದಿದ್ದುಮುರಿದಿದ್ದು ಮಬ್ಬಾದದ್ದುಎದ್ದಿದ್ದು ಅರ್ಧನಿದ್ರೆಲಿದ್ದಿದ್ದುಏನೇ ಆಗ್ಲಿ ನಂದೇ ಎಲ್ಲಾಬೇರೆಯವ್ರ್ ದಾಸ್ತಾನಂತೂ ಅಲ್ಲಯಾವ್ದೋ ಒಂದನ್ನೆಬ್ಸಿಉಜ್ಜಿ ತೊಳ್ದು ಒಪ್ಪ ಮಾಡಿಹೊಸ ಇಸ್ತ್ರಿ ಅಂಗಿ ಹಾಕಿಕಳಸ್ತೀನಿ ಮಾರಾಯಂಗೆನಡೀಯತ್ತೋ ಓಡತ್ತೋಎಡವಿ ಬೀಳತ್ತೋನೋಡೇ ಬಿಡಾಣ ! ಸುಮತಿ ನಿರಂಜನ

“ಅಜೀಬ್ ದಾಸ್ತಾಂ ಹೈ ಏ” ಸುಮತಿ ನಿರಂಜನ Read Post »

ಇತರೆ, ಜೀವನ

“ಹೆತ್ತವರು..ಯಾರಿಗೆ ಭಾರ ಯೋಚಿಸಿ!” ವಿಶೇಷ ಲೇಖನ ಶಿವಲೀಲಾ ಶಂಕರ್

ಜೀವನ ಸಂಗಾತಿ ಶಿವಲೀಲಾ ಶಂಕರ್ “ಹೆತ್ತವರು..ಯಾರಿಗೆ ಭಾರ ಯೋಚಿಸಿ!” ನಾವು ಫೇಸ್ ಬುಕ್, ಇನ್ಸ್ಟಾಗ್ರಾಮ್ ಗಳಲ್ಲಿ ವಯಸ್ಸಾದವರ ಬಗ್ಗೆ ಅದೆಷ್ಟು ಕಾಳಜಿಯಿಂದ  ಮರುಕ ವ್ಯಕ್ತಪಡಿಸುತ್ತೆವೆ.ಅಯ್ಯೋ.. ಪಾಪ ಮಗ,ಮಗಳು,ಸೋಸೆ ಇಂತವಳು…ಸಾಕಷ್ಟು ಉತ್ತೇಜಕ ಕಾಮೆಂಟ್ ಹಾಕುತ್ತ ಮನದ ಮೂಲೆಯ ಅಭಿವ್ಯಕ್ತಿ ಹೊರ ಹೊಮ್ಮಿಸುತ್ತೆವೆ..ಅಲ್ಲಗೆ ಮುಗಿತು ನಮ್ಮ ಮಾತು ಕಥೆಗಳು.ಆದರೆ ದೀಪದ ಬುಡದಲ್ಲಿ ಕತ್ತಲೆ ಅಷ್ಟೇ.. ವೃದ್ಧ ದಂಪತಿಗಳು ತಮ್ಮ ಇಳಿವಯಸ್ಸಿನಲ್ಲಿ ಒದ್ದಾಡುವುದು, ಪೇಚಾಡುವುದು ಬೇಕಿತ್ತಾ? ಎಂಬ ಮಾತಿಗೆ ಉತ್ತರ ಕೊಡುವವರು ಯಾರು?.ಮನಸ್ಸು ಒಮ್ಮೆ ಭಾರವಾಗಿ ಮಗ್ಗುಲಾಗಿದ್ದು ಇದೆ.ತಂದೆ ತಾಯಿಗೆ ಮಕ್ಕಳು ಒಂದೇ. ಆದರೆ ಮಕ್ಕಳಿಗೆ ತಂದೆ-ತಾಯಿ ಬೇರೆ ಬೇರೆ..ಹತ್ತಿರವಾಗುವುದು ಯಾವಾಗ? ಅಂದರೆ ಆಸ್ತಿ ಪಾಸ್ತಿ ಯಾರಲ್ಲಿ ಹೆಚ್ಚಿರುತ್ತದೆಯೋ ಅಲ್ಲಿ ಸಂಬಂಧಗಳು ಸಾಪ್ಟ್ ಆಗಿ ಹ್ಯಾಂಡಲ್ ಮಾಡುವಂತಹ ಮನೋಭಾವಕ್ಕೆ ಒಳಗಾಗಿರುತ್ತಾರೆ.ಆಗ ಹೆತ್ತವರು ಭ್ರಮೆಯಲ್ಲಿ..ಮಕ್ಕಳು ನಮ್ಮವರೆಂಬ ಆತ್ಮ ವಿಶ್ವಾಸದ ಸಾಗರದಲ್ಲಿ. ನಾವು ಚಿಕ್ಕವರಿದ್ದಾಗ ಅಪ್ಪ ಅಮ್ಮ ನಮ್ಮ ಬೆಳೆಸಿದ ರೀತಿ,ಅವರು ಕಷ್ಟ ಪಟ್ಟದಿನವನ್ನು ನೆನೆದರೆ ಸಾಕು!. ಅವರ ರೆಟ್ಟೆಗಳು,ಹರಿದ ಚಪ್ಪಲಿ,ಹರಿದ ಅಂಗಿಗಳು,ಅರೆಹೊಟ್ಟೆಯ ದಿನಗಳು.ಅವರಿಗೆಲ್ಲ ಕಾಮನ್.. ಯಾಕೆಂದರೆ ಮಕ್ಕಳ ಭವಿಷ್ಯದ ಬಗ್ಗೆ ಜವಾಬ್ದಾರಿ ಕನಸು ಎಲ್ಲವೂ ನಿರ್ಭರ.ಇಳಿವಯಸ್ಸಿನಲ್ಲಿ ಆಸರಾಗುವರೆಂಬ ಅತಿಆಸೆ.ತಮ್ಮ ಕರ್ತವ್ಯ ಪ್ರಜ್ಞೆಯನ್ನು ಚಾಚು ತಪ್ಪದೆ ಪಾಲಿಸಿದ್ದರ ಪ್ರತಿಫಲ ನಾವೆಲ್ಲ ಪ್ರಪಂಚಕ್ಕೆ ಗುರುತಿಸಲ್ಪಡುವ ವಿಶೇಷ ವ್ಯಕ್ತಿಗಳಾಗಿ ರೂಪುಗೊಂಡಿದ್ದು.ಇಷ್ಟೆಲ್ಲಾ ಆದರೂ ನಮ್ಮ ಅಸಹಜ ಗುಣದಿಂದ ನಾವು ಭಿನ್ನವಾಗಿಯೇ ಬೆಳೆದು ನಿಂತಿದ್ದೆವೆ.ಅವರು ನೆಟ್ಟ ಮಾವಿನ ಮರ ನೀಡಿದ ಫಲ ಸಿಹಿಯಾಗದೇ ಕಹಿಯ ಫಲವಾದರೆ ಪ್ರಾಣಿ ಪಕ್ಷಿಗಳ ಗತಿಯೇನು? ಹೌದರಿ…ಜವಾಬ್ದಾರಿ ಹೊರುವ ಕಾಯಕವನ್ನು ಕೈಗೆತ್ತಿಕೊಂಡು ನೆಡದವರಿಗೆ ಭಗವಂತ ರಕ್ಷಣೆ ಖಂಡಿತ ನೀಡುವನು..ಅದೆಷ್ಟೋ ಸಾಂತ್ವಾನ ನೀಡಿದರೂ ಅದ್ಯಾಕೋ… ಮನಸ್ಸು ‘ವಿಲವಿಲ’ ವೆಂದು ಒದ್ದಾಡುತ್ತಿದೆ.ಮಕ್ಕಳು ಮುಪ್ಪಿನಲಿ..ಇದ್ದು ಇಲ್ಲದಂತಾಗುವ ಗಳಿಗೆ ಯಾವ ಜೀವಿಗೂ ಬೇಡ! ನೂರು ದೇವರ ಅನುಗ್ರಹಕ್ಕೆ ನೂರಾರು ದೇವಾಲಯ ಅಲೆದು,ಬೇಡಿ ಬಯಸಿ ಜನ್ಮಕೊಟ್ಟ ಹಸುಗೂಸಿಗೆ ಬೆನ್ನೆಲುಬಾಗಿ ನಿಂತು,ಸಲುಹಿ,ರಟ್ಟೆಯಲ್ಲಿ ಬಲಬರುವ ತನಕವೂ ರೆಸ್ಟಲೆಸ್ ಆಗಿ ದುಡಿದು ದಣಿವಾರಿಸಲು ಬಯಸದ ಕಂಗಳಿಗೆ,ಅದ್ಯಾವ ಪೊರೆ ಮೆತ್ತಿತ್ತೊ ಕಾಣೆ?. ಮನೆಯಂಗಳದಲಿ ನಲಿದಾಡುವ ಪುಟ್ಟ ಜೀವಕ್ಕೊಸ್ಕರ ಎಲ್ಲವನ್ನೂ ಮರೆತು ದುಡಿದಿದ್ದು ಯಾಕಂತ ಅರ್ಥವಾಗುವ  ಸಮಯ ಬರದೆ ಹೋದರೆ ಆ ಬದುಕಿಗೆ ಅರ್ಥವೇನು?.. ಎಷ್ಟೊಂದು ಪರಿಣಾಮವನ್ನು ಬೀರಿತು ನಮ್ಮೆದೆಯೊಳಗೆ..ಆದರೆ ಅದ್ಯಾವ ಭಾವವೂ ಕೂಡ ನಮಗೀಗ ಅರಿವಿಗೆ ಬೇಕಿಲ್ಲ!. ದಿನಕಳೆದಂತೆಲ್ಲ ದೇಹಕ್ಕೊ,ಮನಸ್ಸಿಗೂ ಬಿರುಕುಗಳು ಮೂಡುವ ಕಾಲಘಟ್ಟ.ಯೌವ್ವನದ ಹೇಳ ಹೆಸರಿಲ್ಲದಂತೆ,ಸಂತೆಯೊಳು ಮಾಯವಾದಂತೆ.ಹಿಡಿದಿಟ್ಟುಕೊಳ್ಳುವ ಸಾಹಸ ಯಾರಿಂದ ಸಾಧ್ಯವಾದಿತು!. “ಯಯಾತಿ” ಪ್ರಸಂಗವೊಂದು ಇದಕ್ಕೆ ಸಾಕ್ಷಿಯಾದಿತು.ಸುಖ,ವೈಭೋಗ ಎಷ್ಟು ದಿನ,ವರುಷ ಅನುಭವಿಸಲು ಸಾಧ್ಯ?.ಮುಪ್ಪು ಸದ್ದಿಲ್ಲದೆ ಮೈಗಂಟಿಕೊಳ್ಳುವ ಜಾದೂಗಾರ!.ಅಲ್ಲಿಯೇ ನೋಡಿ ನಮಗಿರುವ ಕಿಮ್ಮತ್ತು ಅಂದರೆ ಸತ್ಯ ದರ್ಶನ !. ಹೌದು ನಾವೆಲ್ಲ ಏನನ್ನೂ ಸಾಧಿಸದೆ…ಒಂದಿಷ್ಟು ಆಸ್ತಿ ಪಾಸ್ತಿ ಹೊಂದಿದ್ದು..ಮಗ,ಮಗಳಿಗೆ ಕಷ್ಟ ಬರಬಾರದೆಂದು ತಮ್ಮೆಲ್ಲಾ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ. ಮಕ್ಕಳ ಭವಿಷ್ಯಕ್ಕೆ ಆಕಾರನೀಡುವಲ್ಲಿ ಯೌವ್ವನ ಯಾವಾಗ ಮುಪ್ಪಾಗಿ ಪರಿಣಮಿಸಿತೋ ಅರಿವಿಗೆ ಬರಲಿಲ್ಲ.ತಾಕತ್ತು ಎಲ್ಲಿಯವರೆಗೆ?.. ಮಗ,ಮಗಳು ಬಲಿಷ್ಠರಾಗುವ ತನಕ.ಅಲ್ಲಿಗೆ ಒಂದು ಧೀರ್ಘಕಾಲದ ಅಧ್ಯಾಯ ಮುಕ್ತಾಯವಾದಂತೆ.ನಿರೀಕ್ಷೆಯ ಮಹಾಪೂರವೇ ಹರಿದುಬಂದಿತೆಂಬ ಕನಸು.ಅಪ್ಪ ಅಮ್ಮ ಮಕ್ಕಳನ್ನು ತಿದ್ದಿ ತೀಡಿ ಆನಂದ ಕಂಡ ಜೀವಗಳು.ತಮ್ಮ ತ್ಯಾಗಕ್ಕೆ ಫಲ ಸಿಗುದೆಂಬುದು ಊಹೆ ಅಷ್ಟೇ!. ರೆಕ್ಕೆ ಬಲಿತ ಮರಿಗಳು ಗೂಡು ಬಿಟ್ಟು ಹಾರಿಹೋದಂತೆ.ವಿದ್ಯೆ, ಸಂಸ್ಕಾರ, ಉದ್ಯೋಗ ಎಲ್ಲವೂ ದಕ್ಕಿದ ಮೇಲೆ ಅಂದರೆ,ಹೊಳೆ ದಾಟಿದ ಮೇಲೆ ಅಂಬಿಗನ ಮರೆತಂತೆ!. ಮಕ್ಕಳ ಬದುಕಿಗೆ ಎಣಿಯಾದ ತಂದೆ ತಾಯಿ ಕೊನೆಗೊಂದು ದಿನ ಮೂಲೆಗುಂಪು.ಇದು ಕಾಲಚಕ್ರದ ಪರಿಣಾಮವೂ,ವಿಧಿಯ ಆಟವೋ,ಅಥವಾ ಬೆಳೆಸುವುದರಲ್ಲಿ ಹೆಚ್ಚು ಪ್ರಾಮಾಣಿಕರಾಗಿದ್ದೋ ಗೊತ್ತಿಲ್ಲ.ಯಾರಾದರೇನು? ಸಮಯಕ್ಕೆ ಆಗದ ಹಣವಾದರೇನು? ನೆಂಟರಾದರೇನು? ಮಕ್ಕಳಾದರೇನು?. ನೋವು ನೋವೆ!. ಅದನ್ನು ಸರಿದೂಗಿಸಲು ಯಾರಿಂದಲೂ ಸಾಧ್ಯವಿಲ್ಲ. ಹೌದು..ಇದೆಲ್ಲ ಯಾಕೆ? ಹೆತ್ತವರ ಎದೆಗೊದ್ದು ಬದುಕುವ ಅವಕಾಶ ಗಿಟ್ಟಿಸಿಕೊಂಡ ಮಕ್ಕಳು.ಕೇವಲ ಅವರ ಆಸ್ತಿಗಾಗಿಯೇ ಹೊರತು ಹೆತ್ತವರ ಆರೈಕೆಗಲ್ಲ. ಮನಸ್ಸು ಭಾರವಾದಿತು ಒಂದುಕ್ಷಣ!. ಹೆಣ್ಣಾಗಲಿ,ಗಂಡಾಗಲಿ ನಡೆದುಕೊಳ್ಳುವ ರೀತಿಗೆ ಕರುಳು ಚುರ್ ಅನ್ನುತ್ತೆ. ಮಕ್ಕಳಿಗೆ ಹೆತ್ತವರು ಭಾರವಾದರೆ ಬೇರಾವ ಮಾತಿದೆ?. ಕೂಲಿನಾಲಿ ಮಾಡಿ,ತಾವು ಉಪವಾಸವಿದ್ದು ನಮಗೆ ತುತ್ತು ನೀಡಿ ಬೆಳೆಸಿದ ಅವರಿಗೆ…ಊಟ ಹಾಕದೆ ಕೊಂದ ಮಕ್ಕಳ ಬಗ್ಗೆ ಆಕ್ರೋಶವಿದೆ…ಹೌದು.ವಯಸ್ಸಾದ ಮೇಲೆ ದುಡಿಯುವ ಕ್ಷಮತೆ ಕ್ಷೀಣಿಸುತ್ತದೆ ಎಂಬ ಸಣ್ಣ ಅಂಶ ಅರಿವಿಗೆ ಬಾರದಿದ್ದರೆ ಈ ಜನ್ಮಕೆ ಬೆಲೆಯಿಲ್ಲ!.ಹೆತ್ತವರು ಯಾರಿಗೆ ಭಾರ ಯೋಚಿಸಿ!. ನಿಜ ಅಲ್ವಾ…ವಯಸ್ಸಾದವರು ಕಾಯಿಲೆಗೆ ಬಿದ್ದರೆ ಅವರನ್ನು ಮನೆಯಿಂದ ಹೊರದೂಡುವುದು..ಈಗೀಗ ಸಾಮಾನ್ಯವಾಗಿ ಬಿಟ್ಟಿದೆ. ನನ್ನಪ್ಪನ ಹೋರಾಟ ಇದಷ್ಟುದಿನ ಒಮ್ಮೆ ಹಸಿವ ನೀಗಿಸಲು ಕಠಿಣ ಪರಿಶ್ರಮದ ಬಾಗಿಲು ತಟ್ಟಿದವ,ಒಂದು ಪೈಸೆಯು ಸಾಲವಿಲ್ಲದೆ ನಿವೃತ್ತಿಯಾದವ..ಕೈಗಡ ಸಾಲವೂ ಉಳಿಸಿಕೊಳ್ಳದವ‌..೧೦ ರೂಪಾಯಿಯಲ್ಲೆ ಬದುಕುವುದು ಹೇಗೆ ಎಂಬುದನ್ನು ಬಲ್ಲವ..ತನಗಾಗಿ ಕೂಡಿಡುವ ಕನಸು ಕಂಡವನಲ್ಲ.ಕಲಿಯುವ ಆಸೆ ಹೊತ್ತ ನನಗೆ ಕಲಿಯಲು ಬಿಂದಾಸ್ ಆಗಿ ಬಿಟ್ಟವ.ಅವನ ಭರವಸೆ,ನಂಬಿಕೆ ಉಳಿಸಿಕೊಂಡು ಕಲಿತ ಫಲ ಇವತ್ತು ನಾನು ಉಣ್ಣುವ ಅನ್ನವೆಂದರೆ ತಪ್ಪಾಗದು..ಅಪ್ಪ ಅಮ್ಮರನ್ನು ನೋಡಿಕೊಳ್ಳುವ ಭಾಗ್ಯ ನನ್ನದು..ಅವರು ಸ್ವಾವಲಂಬಿ ನಿಲುವಿನ ವ್ಯಕ್ತಿಗಳು.. ಆದರೆ ಮುಪ್ಪು,ಕಾಯಿಲೆ ಯಾರ ಮನೆ ಸೊತ್ತು?… ಅದು ಬಂದಾಗಲೇ ಯಾರು? ಯಾರಿಗೆ? ಹತ್ತಿರವಾಗುತ್ತಾರೆ ಎಂಬುದು?…. ಮಗನಾದವ ಕೈ ಚೆಲ್ಲಿದ ಮೇಲೆ…ಮಗಳಾಗಿ ನನ್ನ ಕರ್ತವ್ಯ ಮಾಡುವುದು ಪುಣ್ಯವೆಸರಿ.. ಅಪ್ಪ…ಕಲ್ಲು ತಿಂದು ಕಲ್ಲು ಕರುಗಿಸಿದ ದೇಹ…ಕೆಮ್ಮು,ದಮ್ಮು,ಕಫಕ್ಕೆ ನಲುಗಿದ್ದ…ನಮ್ಮ ಯಜಮಾನ್ರು,ಇನ್ನೋರ್ವ ಸಹೋದರ ಡಾಕ್ಟರ್ ದಂಪತಿಗಳು,ನನ್ನ ಮಕ್ಕಳು ಅಜ್ಜನ ಸೇವೆ ಮಾಡಲು ಎಚ್ಚರಿದ್ದವರು.ಅವ್ವ ಸಾಕಷ್ಟು ಪ್ರಯತ್ನ ಮಾಡಿ ಒಂದು ಚೇತರಿಕ ಹಂತಕ್ಕೆ.ತಂದಿದ್ದರು.ನಮಗೆಲ್ಲ 81 ರ ಅಪ್ಪನ ಮಾತು ಖಡಕ್…ಅವನ ಒದ್ದಾಟ,ನೋವು ಅನುಭವಿಸುವುದು ಕಂಡಾಗೆಲ್ಲ ಕಣ್ಣೀರ ಹೊರತು ಮತ್ತೇನಿಲ್ಲ..ಗಂಜಿ ಕುಡಿಸುವಾಗ ಅವನ ಅಸಹಾಯಕ ಸ್ಥಿತಿ ಯಾರಿಗೂ ಈ ನೋವು ಬೇಡ ಅನ್ನುತ್ತಿದ್ದರು.ಹಾಗಂತ ಮಲಗಿದವರಲ್ಲ.. ಓಡಾಡುತ್ತಿದ್ದರು.ರೂಮನ್ನು ಹೀಟರ್ ಮೂಲಕ ಗರಂ ಇಟ್ಟರೂ,ಅದ್ಯಾಕೆ ಈ ಸಲ ವಿಪರೀತ ಚಳಿ ನಡುಕ..ರಕ್ತ ಹಾಕಿಸಿ ಇನ್ನೇನು ಗುಣಮುಖರಾದರೂ ಅನ್ನುವ ಮೂರುದಿನ ಅವರು ತನ್ನ ಪೂರ್ವಜರ ಹೊಲದಲ್ಲಿಯ ದೃಶ್ಯಾವಳಿಗಳನ್ನು ಹೇಳತೊಡಗಿದ್ದ…ವಯಸ್ಸಾದ ಮೇಲೆ ಹಿರಿಯರು ಪುಟ್ಟ ಮಕ್ಕಳಂತೆ ಅನ್ನೊ ಮಾತು ಅಕ್ಷರಶಃ ಸತ್ಯ.ಮನೆಯವರು ಉಸಿರಾಟಕ್ಕೆ ತೊಂದರೆಯಾದಿತೆಂದು ಚಕ್ ಮಾಡಿಸಿ ರಕ್ತ ಪರೀಕ್ಷೆ,ಎಕ್ಷರೆ ತಗಿಸಿಕೊಂಡು ಕರೆತಂದಿದ್ದರು.ಮನೆಯ ಅಂಗಳ ಕಟ್ಟೆಯ ಮೇಲೆ ಕುಳಿತು ಗಂಜಿ ಕುಡಿದು,,ಮೆಡಿಸಿನ್ ತಗೊಂಡು ಸ್ವಲ್ಪ ಹೊತ್ತಿಗೆ ಇಹಲೋಕ ತ್ಯಜಿಸಿದರು… ಆಗ ನಾನು ಶಾಲೆಯಲ್ಲಿ!. ಬೆಳಿಗ್ಗೆ ಮಾತಾಡಿದ್ದೆ ಬಂತು.ಒಂದು ಸುಳಿವು ಕೊಡದೆ ನನ್ನಪ್ಪ ಮೌನಕ್ಕೆ ಜಾರಿದ್ದ. ಒಟ್ಟಾರೆ ಹೇಳುವುದಾದರೆ, ಹೆತ್ತವರನ್ನು ಮಕ್ಕಳು ಭಾರವಾಗಿ ನೋಡಬಾರದು…ಅವರಿಗಾಗಿ ಸಮಯ ಕಳೆಯಬೇಕು..ಅವರು ತಮ್ಮ ಸುಖಸಂತೋಷವನ್ನು ತ್ಯಾಗ ಮಾಡಿ ನಮ್ಮ ಬದುಕ ಕಟ್ಟಿರುವಾಗ.. ಇಳಿವಯಸ್ಸಿನಲ್ಲಿ ನಾವುಗಳು ಅವರ ಆತ್ಮ ಬಲವಾಗದಿದ್ದರೆ ಏನು ಪ್ರಯೋಜನ?. ಹೆಣ್ಣಿರಲಿ,ಗಂಡಿರಲಿ ಯಾರಾದರೇನು? ಕರ್ತವ್ಯ ಮಾಡಲೇಬೇಕು..ಅವರ ಆಶೀರ್ವಾದ ನಮಗೆ ಶ್ರೀರಕ್ಷೆ..ಆದರೆ ನಾನು ನನ್ನ ಮಕ್ಕಳು ಹೆಂಡತಿಯಂತ ಇದ್ದರೆ ಅವರೆಲ್ಲಿ ಹೋಗಬೇಕು? ಮೌಲ್ಯಗಳನ್ನು ಬಿತ್ತುವುದು ಬರಿ ಶಾಲೆಯ ಕೆಲಸವಲ್ಲ, ಮನೆಯಿಂದ ಬರಬೇಕಾದ ಸಂಸ್ಕಾರ! ತಂದೆ ತಾಯಿ ಇದ್ದ ಮನೆಗೆ ಹೆಣ್ಣು ಕೊಡುದಿಲ್ಲ ಅನ್ನೊ ವಿಷಯ ಒಂದಾದರೆ,ಮಗನಾದವ ತಂದೆಯ ಆಸ್ತಿ ಪಾಸ್ತಿ ಗಾಗಿ ಮಾತ್ರ ಬರುವುದು..ಹತ್ತು ಹಲವಾರೂ ರೂಪಗಳು ಹೆತ್ತವರನ್ನು ಪೀಡಿಸಲು!. ಇದ್ದಾಗ ಅವರಿಗೆ ಹೊಟ್ಟೆ ತುಂಬ ಊಟ ಮಾಡಿಸಿ,ಅವರು ಖುಷಿಯಿಂದ ಇರುವಂತೆ ನೋಡಿ.. ಅಂದರೆ ಅವರು ಇಲ್ಲದಾಗ ಮಾಡುವ ‘ತಿಥಿ’ ಊಟಕ್ಕೆ ಬೆಲೆ ಬಂದಿತು!. ಆಡಂಬರದ ಬದುಕಿಗಿಂತ ಸಾಮರಸ್ಯದ ಜೀವನ ಬಹುಮುಖ್ಯ… ಏನಂತಿರಿ?. ಶಿವಲೀಲಾ ಶಂಕರ್

“ಹೆತ್ತವರು..ಯಾರಿಗೆ ಭಾರ ಯೋಚಿಸಿ!” ವಿಶೇಷ ಲೇಖನ ಶಿವಲೀಲಾ ಶಂಕರ್ Read Post »

ಕಾವ್ಯಯಾನ

ರಾಶೇ ಬೆಂಗಳೂರು ಅವರ ಕವಿತೆ “ನೆನಪುಗಳು”

ಕಾವ್ಯ ಸಂಗಾತಿ ರಾಶೇ ಬೆಂಗಳೂರು “ನೆನಪುಗಳು” ಸೊಗಸು ಸೊಗಸಾದಸಿಹಿ ಸಿಹಿಯಾದಆ ನೆನಪುಗಳುಮಧುರವಾಗಿರಲಿ.. ಜೀವ ಭಾವದಪ್ರೀತಿ ಮರೆಯದಹೊಂಗನಸುಗಳುಸದಾ ನನಗಿರಲಿ.. ಮತ್ತೆ ಬಾರದನೋವು ಗಾಯದಕಹಿ ಘಟನೆಗಳುಮರುಕಳಿಸದಿರಲಿ.. ಕಳೆದುಹೋದಕೆಣಕಿ ದೂರಾದಉರಿ, ದಳ್ಳುರಿಗಳುಬೆಂದು ಬೂದಿಯಾಗಲಿ.. ರಾಶೇ ಬೆಂಗಳೂರು

ರಾಶೇ ಬೆಂಗಳೂರು ಅವರ ಕವಿತೆ “ನೆನಪುಗಳು” Read Post »

ಕಾವ್ಯಯಾನ

ಸುಮನಾ ರಮಾನಂದ,ಕೊಯ್ಮತ್ತೂರು “ಮಮತೆಯ ಸ್ವಗತ”

ಕಾವ್ಯ ಸಂಗಾತಿ ಸುಮನಾ ರಮಾನಂದ,ಕೊಯ್ಮತ್ತೂರು “ಮಮತೆಯ ಸ್ವಗತ” ಸುಮನಾ ರಮಾನಂದ,ಕೊಯ್ಮತ್ತೂರು “ಮಮತೆಯ ಸ್ವಗತ” ಒಲುಮೆಯ ಕಾಣಿಕೆಯಂತೆಬಂದೆ ಅಪ್ಪ ನೀ ನನ್ನ ಬಾಳಿಗೆ!ನಿನ್ನ ಮಡಿಲಲಿ ನಾ ನೆಲೆಯಾಗಿ ನಿಂತೆ..ತುಂಬಿ ನನ್ನ ಸಂತಸದ ಜೋಳಿಗೆ!! ನಿನ್ನ ನೆನೆಯದೇ ಇನಿತೂಕಳೆಯದು ಈ ಬದುಕು!ನಿನ್ನ ಸವಿನೆನಪಿನ ಕ್ಷಣಗಳೆ..ಈ ಮಗಳಿಗೆ ಹಸಿರ ಬೆಳಕು!! ಮನದಂತರಾಳದ ಬೆಚ್ಚನೆಯ ಕಾವಲಲಿನಿನ್ನದೇ ಒಲವದು ಅಡಗಿದೆ!ಸಂತಸದಿ ಮಿಡಿದ ಕಂಬನಿಯಲೂ..ಅಳಿಯದ ನಿನ್ನ ಭಾವವಿದೆ!! ಪಡೆದ ಸಂತಸದ ಎಣಿಕೆಯಿರದುನಿನ್ನ ಪ್ರೀತಿಯ ಸಿಂಚನದಲಿ!ಹನಿಯೊಂದು ತಾ ಜಿಗಿಯಲುತವಕಿಸಿದಂತೆಮೋಡದಂಚಿನಲಿ!! ಸುಮನಾ ರಮಾನಂದ,ಕೊಯ್ಮತ್ತೂರು

ಸುಮನಾ ರಮಾನಂದ,ಕೊಯ್ಮತ್ತೂರು “ಮಮತೆಯ ಸ್ವಗತ” Read Post »

ನಿಮ್ಮೊಂದಿಗೆ

ಕೆ. ಎಂ. ಕಾವ್ಯ ಪ್ರಸಾದ್ “ಹೇಳಿ ಹೋಗ ಬೇಕಿತ್ತು ಕಾರಣ”

ಕಾವ್ಯ ಸಂಗಾತಿ ಕೆ. ಎಂ. ಕಾವ್ಯ ಪ್ರಸಾದ್ “ಹೇಳಿ ಹೋಗ ಬೇಕಿತ್ತು ಕಾರಣ” ನೀ ಹೇಳಿ ಹೋಗ ಬೇಕಿತ್ತು ಕಾರಣವುನನ್ನ ಬಿಟ್ಟು ದೂರ ಹೋಗುವ ಮೊದಲು!ನನ್ನನ್ನು ಒಂಟಿಯಂತೆ ಬೇರೆ ಮಾಡಿ ನೋಡಲುಸಂಶಯವು ನಿನ್ನಲ್ಲಿ ಹುಟ್ಟಿದೆ ನನ್ನ ಮರಣವು!! ನಿನ್ನ ಕಣ್ಣೆದುರೆ ಬಿರಿಯೆ ಕರುಳ ಕುಡಿ ಸತ್ಯವುಕಣ್ಣನೀರು ಸುರಿಸಿದೆ ಏಕೆ ನೀನು ಮೌನವು!ನಿನ್ನ ಜೊತೆ ಕೂಡಿ ಬಾಳುವ ಆಸೆ ನಾ ಕಂಡೆನುನೂರಾರು ಕನಸನು ಗಾಳಿಗೆ ತೂರಿ ಹೋದನು!! ಕರುಳ ಸಂಬಂಧ ಅನುಬಂಧ ಕಡಿದು ಎಸೆದೆಪ್ರೀತಿ ಕುರುಡು ನಂಬಿಕೆ ಮೋಸವನು ವೆಸಗಿದೆ!ಸುಡುವ ಬೆಂಕಿಯಂತೆ ಮಾತಲ್ಲೇ ನನ್ನ ಕೊಂದೆಕೊಟ್ಟ ಆಣೆ ಪ್ರಮಾಣ ಮರೆತು ದೂರ ಹೋದೆ!! ನನ್ನ ನೆರಳಲ್ಲಿ ನಿನ್ನ ನೆರಳು ಜೊತೆ ಕಂಡೆನುಕತ್ತಲು ಕವಿದ ಇರುಳಲ್ಲಿ ನಿನ್ನ ನೆನಪು ಸವಿದೇನು!ಬೆಳಕು ಚೆಲ್ಲುವ ಸಮಯದಲ್ಲಿ ಕೊರಳು ಕಡಿದನುಸೆರೆ ಸಿಕ್ಕ ಮೀನಿನಂತೆ ನನ್ನ ದೂರ ತಳ್ಳಿದನು!! ನನ್ನ ಜೀವನವೇಕೆ ಅಲೆಮಾರಿ ಬದುಕಾಯಿತುಕನಸಿನ ಗೋಪುರವು ನುಚ್ಚು ನುರಾಯಿತುಎಲ್ಲಿಗೆ ಸಾಗಿದೆ ಕರುಣೆ ಇಲ್ಲದ ಈ ಜಗವುನನ್ನ ನೆರಳ ದಾರಿ ದೀಪ ಮುಳುಗುತ್ತಿರುವುದು!! ಕೆ. ಎಂ. ಕಾವ್ಯ ಪ್ರಸಾದ್

ಕೆ. ಎಂ. ಕಾವ್ಯ ಪ್ರಸಾದ್ “ಹೇಳಿ ಹೋಗ ಬೇಕಿತ್ತು ಕಾರಣ” Read Post »

ನಿಮ್ಮೊಂದಿಗೆ

“ಅದೃಷ್ಟವಶಾತ್ ಹುಲ್ಲು ಸಿಕ್ಕರೆ ಮುದಿ  ಎಮ್ಮೆಯೂ ಮೇಯುತ್ತೆ!”ವನಜಾ ಮಹಾಲಿoಗಯ್ಯ

ಗಾದೆ ಸಂಗಾತಿ ವನಜಾ ಮಹಾಲಿoಗಯ್ಯ “ಅದೃಷ್ಟವಶಾತ್ ಹುಲ್ಲು ಸಿಕ್ಕರೆ ಮುದಿ  ಎಮ್ಮೆಯೂ ಮೇಯುತ್ತೆ!” “ಪುಕ್ಕಟೆ ಸಿಕ್ಕರೆ ಮೈಯೆಲ್ಲಾ ಬಾಯಿ” ಎಂಬಗಾದೆಯನ್ನು ಕೇಳಿದ್ದೀರಿ. ಕಷ್ಟಪಡದೆ ಏನು ಸಿಕ್ಕರೂ ನಮಗೆ ಬೇಕು. ಕೆಲಸಕ್ಕೆ ಹೋಗದೆ ಸಂಬಳ ಬರುತ್ತದೆ ಅಂತಾದರೆ ನಮ್ಮಷ್ಟು ಸುಖಿಗಳು ಈ ಜಗತ್ತಿನಲ್ಲಿ ಯಾರು ಇಲ್ಲ ಅಂದುಕೊಳ್ಳುತ್ತೇವೆ. ಆದರೆ, ಕೂತು ಉಣ್ಣುವವರನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ.ಅವರಿಗೆ ನಿಜಕ್ಕೂ ಅದರ ಸುಖವೇ ಅರಿವಿಗೆ ಬರುತ್ತಿರುವುದಿಲ್ಲ.ಏಕೆಂದರೆ ಆ ಊಟ ಗಳಿಸಲು ಅವರು ಕಷ್ಟಪಟ್ಟಿಲ್ಲ.ಸುಖವನ್ನು ಮನಸಾರೆ ಅನುಭವಿಸಬೇಕು ಅಂದರೆ ನಮಗೆ ಕಷ್ಟದ ಅನುಭವವೂ ಇರಬೇಕು. ಇಲ್ಲವಾದರಸುಖ ಅರ್ಥವಾಗುವುದಿಲ್ಲ. ಆಗಭ೯ ಶ್ರೀಮಂತನಿಗೆಮೃಷ್ಟಾನ್ನ ಭೋಜನ ಮಾಡಿಸುವುದರಿಂದ ಯಾವ ವಿಶೇಷ ಆಸಕ್ತಿಯೂ ಇಲ್ಲದೆ ಅದನ್ನು ಊಟ ಮಾಡುತ್ತಾನೆ. ಬಡವನಿಗೆ ಬಡಿಸಿದರೆ ಹತ್ತು ದಿನವಾದರೂ ನೆನಪಿಟ್ಟುಕೊಂಡು ಸುಖಿಸು ತ್ತಾನೆ.ಅದೃಷ್ಟ ದಿಂದ ಬರುವುದಕ್ಕೆ ಮಹತ್ವವಿಲ್ಲ.ಲಾಟರಿಯಿಂದ ಬಂದ ದುಡ್ಡು ಬಹಳ ದಿನ ಉಳಿಯುವುದಿಲ್ಲ. ಆದರೆ ಕಷ್ಟಪಟ್ಟು ಗಳಿಸುವುದಕ್ಕೆ ನಿಜಕ್ಕೂ ತುಂಬಾ ಮಹತ್ವವಿದೆ. ಜೀವನವಿಡೀ ಹಣ ಉಳಿಸಿ ಮನೆ ಕಟ್ಟಿದವನು ಅದನ್ನು ಅರಮನೆಯoತೆಅನುಭವಿಸುತ್ತಾನೆ ಮತ್ತು ಕಾಪಾಡಿಕೊಳ್ಳುತ್ತಾನೆ. ಯಾವ ಪ್ರಯತ್ನವನ್ನು ಮಾಡದೆ ಹಣ ಸಿಕ್ಕರೆ ಅದನ್ನು ಅನುಭವಿಸುವುದರಲ್ಲಿ ಏನು ಸುಖವಿದೆ ?ಎಮ್ಮೆ ಮುದಿಯಾಗಿದೆ. ಜೀರ್ಣ ಶಕ್ತಿ ಕುಂದಿದೆ, ಕಾಲಿನಲ್ಲಿ ಕಸುವಿಲ್ಲ, ಮೇವು ಹುಡುಕಲು ಚೈತನ್ಯವಿಲ್ಲ. ಕೊನೆದಿನಗಳನ್ನು ಎಣಿಸುತ್ತಾ ಕೊಟ್ಟಿಗೆಯಲ್ಲಿ ಬಿದ್ದುಕೊಂದಿದೆ. ಆಗ ಯಾರಾದರೂ ಎರಡು ಹಿಡಿ ಹುಲ್ಲು ಹಾಕಿದರೆ ಅದನ್ನು ಜೀರ್ಣಿ ಸಿಕೊಳ್ಳಲು ಶಕ್ತಿ ಇಲ್ಲದಿದ್ದರೂ ತಿನ್ನುತ್ತದೆ. ಏಕೆಂದರೆ ಅದು ಪ್ರಯತ್ನ ಪಡದೆ ಸಿಕ್ಕಿದ್ದು. ಬೇಕೋ ಬೇಡವೋ ಅದನ್ನು ತಿನ್ನಬೇಕು ಎಂದು ಅದರ ಮನಸ್ಸು ಹೇಳುತ್ತದೆ. ಆದರೆ ತಿಂದ ಮೇಲೆ ಜೀರ್ಣಸಿಕೊಳ್ಳಲಾಗದೆ ಒದ್ದಾಡುತ್ತದೆ.ಕೆಲವು ರಾಜಕಾರಣಿಗಳು, ಕೆಲವು ಅಧಿಕಾರಿಗಳು, ಕಳ್ಳರು ಹೀಗೆ, ತಿಂದಿದ್ದನ್ನು ಜೀರ್ಣಿಸಿಕೊಳ್ಳಲಾಗದೆ ಒದ್ದಾಡುತ್ತಿರುವ ಎಷ್ಟೋ ನಿದರ್ಶನ ಗಳು ನಮ್ಮ ಕಣ್ಣಮುಂದಿವೆ. ಪುಕ್ಕಟೆ ಸಿಕ್ಕುತ್ತೆ ಅಂತ ಹೊಟ್ಟೆಬಿರಿಯೆ ತಿಂದವರು ಅವರುಗಳು. ಕಷ್ಟಪಟ್ಟು ಗಳಿಸಿದ್ದವರಿಗೆ ಜೀರ್ಣಿಸಿಕೊಳ್ಳುವ ಪ್ರಮೇಯವೇ ಬರುವುದಿಲ್ಲ. ಜೊತೆಗೆ ಗಳಿಸಿದ್ದನ್ನು ಮನಸಾರೆ ಉಣ್ಣುವ ಸುಖವೂ ಸಿಗುತ್ತಿತ್ತು.ಕೊನೆಯಲ್ಲಿ ನಾನು ಹೇಳುವುದೊಂದೆ ಅದೃಷ್ಟ ಅನ್ನುವುದು ಒಂದು ಭ್ರಮೆ. ಭ್ರಮೆ ಎನ್ನುವುದೊಂದುಮಾಯೆ. ಅದರ ಹಿಡಿತಕ್ಕೆ ಸಿಕ್ಕಿಹಾಕಿಕೊಳ್ಳುವ ಮುನ್ನ ಹುಷಾರು.ವನಜಾ ಮಹಾಲಿoಗಯ್ಯ

“ಅದೃಷ್ಟವಶಾತ್ ಹುಲ್ಲು ಸಿಕ್ಕರೆ ಮುದಿ  ಎಮ್ಮೆಯೂ ಮೇಯುತ್ತೆ!”ವನಜಾ ಮಹಾಲಿoಗಯ್ಯ Read Post »

ಕಾವ್ಯಯಾನ

ಅಕ್ಷತಾ ಜಗದೀಶ ಅವರ ಕವಿತೆ,”ಮೌನ ಮಾತಾದಾಗ…”

ಕಾವ್ಯ ಸಂಗಾತಿ ಅಕ್ಷತಾ ಜಗದೀಶ “ಮೌನ ಮಾತಾದಾಗ…” ಅಟ್ಟದ ಮೇಲೆ ಕೂಡಿಟ್ಟಕನಸುಗಳು ಅದೆಷ್ಟೋ,ನನಸಾಗದೆ ನೆನಪುಗಳಾಗಿಕಿಡಕಿಯ ಕಂಬದಬಣ್ಣಗಳಾಗಿ ಉಳಿದಮಾತುಗಳು ಅದೆಷ್ಟೋ….. ಇಂದೇಕೋ ಮನೆ ಮಾತಾಡಿದೆ,ಮನಗಳು ಮೌನವಾದಾಗ…ಗಾಜಿನ ಹಂಚಿನಿಂದಬೆಳಕೊಂದು ಇಣುಕಿ ನೋಡಿದೆ,ಮನೆಯೊಳಗೆ ಮಂದಿಎಷ್ಟೂ ಇಹರೆಂದು…. ಅದೆಷ್ಟೋ ನಗುವಿನ ಸದ್ದುಕೇಳಿರುವ ಕಂಬಗಳುಮತ್ತೆ ಮತ್ತೆ ಎದುರು ನೋಡುತಲಿದೆ,ಅಳುವಿನಲ್ಲೊಂದು ನಗುವುಸಿಗಬಹುದೆಂದು… ಅಜ್ಜನ ಕವಳದ ಚಂಚಿಯೊಂದುಮತ್ತೆ ಹಂಬಲಿಸುತಲಿದೆಜಗುಲಿಯ ಹಾಳು ಹರಟೆಯ ಸದ್ದು…ಅಂಗಳದ ರಂಗವಲ್ಲಿಮತ್ತೆ ಎದುರು ನೋಡುತ್ತಿದೆ,ಪಟ್ಟಣ ನುಂಗಿದ ಕನಸುಗಳುನನಸಾಗಿ ಮತ್ತೆ ಚಿತ್ತಾರ ಮೂಡಿಸುವುದೆಂದು……………….. ಅಕ್ಷತಾ ಜಗದೀಶ.

ಅಕ್ಷತಾ ಜಗದೀಶ ಅವರ ಕವಿತೆ,”ಮೌನ ಮಾತಾದಾಗ…” Read Post »

You cannot copy content of this page

Scroll to Top