ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ.ಗೀತಾ ದಾನಶೆಟ್ಟಿ ಅವರ ಕವಿತೆ “ಹುಲುಮಾನವ “

ಕಾವ್ಯ ಸಂಗಾತಿ ಡಾ.ಗೀತಾ ದಾನಶೆಟ್ಟಿ “ಹುಲುಮಾನವ “ ಬದುಕಿನ ಸತ್ಯವನು ನೀನಿನ್ನೂಅರಿಯಲೇ ಇಲ್ಲ ಹಲುಮಾನವ ಮೂರು ದಿನದ ಬಾಳಿನ ಪಯಣದಲಿನೂರಾರು ಆಸೆಗಳ ಹೊತ್ತುವಾಸ್ತವ ಸತ್ಯ ಅರಿಯಲೇ ಇಲ್ಲ ಮಣ್ಣಿನಿಂದ ಬಂದು ಮಣ್ಣಿಗೆಮರಳುವೆನೆಂಬುದ ಮರೆತುಮಹಡಿ ಮನೆ ಕಟ್ಟಿ ಮೆರೆಯುವೆಯಲ್ಲ ಹಣ ಹುದ್ದೆ, ಹೆಸರಿಗಾಗಿ ಹಂಬಲಿಸಿನಿನ್ನೊಳಗಿನ ಮಾನವೀಯತೆಮನುಷ್ಯತ್ವದ ಮೌಲ್ಯ ಮರತೆಯಲ್ಲ ಅಧಿಕಾರದ ಅಮಲಿನಲಿಅಹಂಕಾರದ ಕಿರೀಟವ ಧರಿಸಿಆಡಂಭರಕ್ಕೆ ಅದೀನವಾದೆಯಲ್ಲ ಕಂಡ ದೇವರಿಗೆಲ್ಲ ಕೈಮುಗಿಯುತ್ತತನ್ನಲ್ಲಿಯ ದೈವತ್ವ ಅರಿಯದೆದಯೆ ಇಲ್ಲದೆ ದು:ಖಿಯಾದೆಯಲ್ಲ ಜಾತಿ ಧರ್ಮದ ಗೋಡೆಗಳ ಕಟ್ಟಿದ್ವೇಷ ಅಸೂಯೆಗಳ ಬೀಜ ಬಿತ್ತಿಭಾಷೆ ಭಾವನೆಗಳ ಬೆಸೆಯಲಿಲ್ಲ ಹುಟ್ಟಿ ಬಂದಿರುವ ಜಗತ್ತಿಗೆಕೊಟ್ಟು ಹೋಗುವುದು ಬೆಟ್ಟದಷ್ಟಿದೆಎಂಬುದ ತಿಳಿಯದೆ ಮೂಢನಾದೆಯಲ್ಲ ಬದುಕಿನ ಸತ್ಯವನು ನೀನಿನ್ನೂಅರಿಯಲೇ ಇಲ್ಲ ಹುಲುಮಾನವ ಡಾ.ಗೀತಾ ದಾನಶೆಟ್ಟಿ

ಡಾ.ಗೀತಾ ದಾನಶೆಟ್ಟಿ ಅವರ ಕವಿತೆ “ಹುಲುಮಾನವ “ Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತುಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಗಣನೀಯ ಕೊಡುಗೆ ಸಲ್ಲಿಸಿದ ಮಹಾನ್‌ ಚೇತನ ಆಯೋಗಗಳ ಮುಂದೆ ನಿಂತ ಕನ್ನಡದ ಕಾವಲುಗಾರ್ತಿ ಕರ್ನಾಟಕ ಪ್ರಾಂತ್ಯ ನಿರ್ಮಾಣ ಮತ್ತು ಕನ್ನಡನಾಡಿನ ಏಕೀಕರಣದ ಹೋರಾಟ ಒಂದೇ ದಿನದಲ್ಲಿ, ಒಂದೇ ವೇದಿಕೆಯಲ್ಲಿ ಮುಗಿದ ಹೋರಾಟವಾಗಿರಲಿಲ್ಲ. ಕಾಲ ಬದಲಾದಂತೆ ಪ್ರಶ್ನೆಗಳು ಬದಲಾದವು ಪ್ರಶ್ನೆಗಳು ಬದಲಾದಂತೆ ಸರ್ಕಾರದ ಮುಂದೆ ಹೊಸ ಆಯೋಗಗಳು, ಸಮಿತಿಗಳು ಹುಟ್ಟಿಕೊಂಡವು. ಆದರೆ ಜಯದೇವಿತಾಯಿಯವರ ಗುರಿ ಮಾತ್ರ ಬದಲಾಗಲಿಲ್ಲ…!!. ಪ್ರತಿ ಆಯೋಗವೂ ಕನ್ನಡಿಗರ ಅಸ್ತಿತ್ವವನ್ನು ಪರೀಕ್ಷಿಸುವ ಮತ್ತೊಂದು ಹಂತವಾಗಿತ್ತು. ಒಂದು ಕಡೆ ದಾಖಲೆಗಳು, ಅಂಕಿ-ಅಂಶಗಳು, ಆಡಳಿತದ ವಾದಗಳು…ಮತ್ತೊಂದು ಕಡೆ ಭಾಷೆ, ನೆಲ, ಸಂಸ್ಕೃತಿ ಮತ್ತು ಜನರ ಬದುಕಿನ ಪ್ರಶ್ನೆಗಳು. ಆಯೋಗಗಳು ಬದಲಾಗುತ್ತಿದ್ದವು,ಕಾಲ ಬದಲಾಗುತ್ತಿತ್ತು, ಹೋರಾಟದ ವಿಧಾನ ಬದಲಾಗುತ್ತಿತ್ತು…. ಆದರೆ ಜಯದೇವಿತಾಯಿಯವರ ಸಂಕಲ್ಪ ಮಾತ್ರ ಅಚಲವಾಗಿತ್ತು. ಎಲ್ಲೆಡೆ ಅವರ ಧ್ವನಿ ವಿಭಿನ್ನವಾಗಿದ್ದರೂ, ಅದರ ಅಂತರಾಳದಲ್ಲಿ ಮೊಳಗುತ್ತಿದ್ದ ಮಾತು ಒಂದೇ… “ಕನ್ನಡಿಗರಿಗೆ ಕನ್ನಡ ನಾಡು ಬೇಕು. ಕನ್ನಡಿಗರೆಲ್ಲರೂ ಒಂದಾಗಬೇಕು.ಚದುರಿಹೋಗಿದ್ದ ಕನ್ನಡಿಗರನ್ನು ಒಂದೇ ನಾಡಿನ ಅಡಿಯಲ್ಲಿ ಒಗ್ಗೂಡಿಸುವುದಾಗಿತ್ತು” ೧೯೨೮ರ ನೆಹರು ಸಮಿತಿ, ಸೈಮನ್ ಆಯೋಗ, ೧೯೨೯ರ ವಿಶ್ವನಾಥ್ ಜೋಗೂರ ಗೊತ್ತುವಳಿ, ವರದಿ,೧೯೪೮ರ ಧಾರಾ ಆಯೋಗ,೧೯೪೯ ಜೆ.ವಿ.ಪಿ ಸಮಿತಿಗೆ , ೧೯೪೬, ೧೯೫೧, ೧೯೫೨ರ ಪ್ರಾಂತ್ಯ ರಚನೆ ಆಯೋಗ, ೨೯೫೪ರಂದು ಕೆಪಿಸಿಸಿ ಉಚ್ಛಾಧಿಕಾರಿ ನಿಯೋಗದ ಉಪಸಮಿತಿ, ಫಜಲ್ ಅಲಿ ಆಯೋಗ,೧೯೫೫ರ ತ್ರಿಮೂರ್ತಿ ಆಯೋಗ, ೧೯೫೬ರ ರಾಜ್ಯ ವಿಧಾನ ಮಂಡಳಿಯ ವಿಧೇಯಕ ಸುಕೃತಿ, …೦೧-೧೧-೧೯೫೬ರಂದು ಕನ್ನಡಿಗರಿಗೆ ಪ್ರತ್ಯೇಕ ಮೈಸೂರು ರಾಜ್ಯ ದೊರಕಿದ್ದು…ಈ ಎಲ್ಲ ಹೋರಾಟಗಳಲ್ಲಿ ಜಯದೇವಿ ತಾಯಿಯವರ ಪ್ರಮುಖ ಪಾತ್ರವನ್ನು ವಹಿಸಿದ್ದರು ಧಾರಾ ಆಯೋಗ… ಸ್ವಾತಂತ್ರ ದೊರೆತ ಮೇಲೆ ಆಂಧ್ರ ಕೇರಳ ಕರ್ನಾಟಕಕ್ಕೆ ಮಹಾರಾಷ್ಟ್ರ ಭಾಷಾ ಅನುಗುಣ ಪ್ರಾಂತ ರಚನೆ ಗೆ ಧಾರ ಆಯೋಗ ನಿರ್ಮಿಸಲ್ಪಟ್ಟಿತು. ಗಡಿನಾಡ ಪ್ರದೇಶಗಳು ತಮ್ಮದೇ ಆದ ಅವಶ್ಯಕತೆಗಳನ್ನು ಆರ್ಥಿಕ ಮತ್ತು ಸಾಮಾಜಿಕ ಜೀವನದಲ್ಲಿ ತಮಗೆ ಅನುಕೂಲಸಿದಂತೆ ಹೊಂದಿಕೊಂಡು ಬಾಳುತ್ತಿದ್ದರು… ಅವರಿಗೆ ಒಡೆಯದೆ ಅವರವರಿಗೆ ಬಿಡಬೇಕೆಂದು ೨೦- ೧೨-೪೮ ರಂದು ವರದಿಯಲ್ಲಿ ತಿಳಿಸಿತ್ತು. ಜಯದೇವಿ ತಾಯಿಯವರು ಧಾರಾ ಆಯೋಗವು ಕೊಟ್ಟ ಪರಿಹಾರವನ್ನು ಹೀಗೆ ಖಡಾ ಖಂಡಿತವಾಗಿ ಖಂಡಿಸಿದರು “ರೊಟ್ಟಿ ಬೇಡಿದ ಹೊಟ್ಟೆಗೆ ಕಲ್ಲು ಕೊಟ್ಟಂತಾಯಿತು. …ಮೊಲೆ ಕುಡಿಯುವ ಕರು ಅಟ್ಟದ ಮೇಲೆ ಹಾಲು ಕುಡಿಸುವ ಆಕಳು ಬೆಟ್ಟದ ಮೇಲೆ ಇದ್ದಂತೆ ಹಾಶ್ಯಾಸ್ಪದವಾದದ್ದು,ಅವಾಸ್ತವಿಕವೂ…ಆಗಿದೆ ಪ್ರಾಂತೀಕರಣವೇ ಎಲ್ಲಕ್ಕೂ ಅತ್ಯುತ್ತಮ ಉಪಾಯವೆಂಬ ಸರಳ ವಿಚಾರವೂ ಮೇಧಾವಿಗಳಿಗೆ ತಿಳಿಯದಿದ್ದದ್ದು ವಿಷಾದನೀಯ, ಯಾರಿಗೂ ಇದು ಒಪ್ಪಿದರು…. ಕನ್ನಡಿಗರಿಗೆ ಮಾತ್ರ ಪ್ರಾಂತೀಕರಣವಿಲ್ಲದ ಸ್ವಾತಂತ್ರ್ಯವು ಕೇವಲ ಕನಸಿನ ಗಂಟು ಅದನ್ನು ದೊರಕಿಸುವುದು ನಮ್ಮ ಜನ್ಮ ಸಿದ್ಧ ಹಕ್ಕು ಇಂತಹ ಸಂದಿಗ್ಧ ಸಂದರ್ಭದಲ್ಲಿ ಕನ್ನಡಿಗರು ಮುಂದಾಳುಗಳಾಗಿ ದಾರಿ ಹುಡುಕಬೇಕು “ಎಂದು ಕರೆಕೊಟ್ಟರು .ಧಾರಾ ಆಯೋಗವು ವರದಿ ಒಪ್ಪಿಸಿದ ಮೇಲೆ ಸೊಲ್ಲಾಪುರ ಎರಡು ತಾಲೂಕುಗಳಲ್ಲಿ ಒಡೆಯಲ್ಪಟ್ಟಿತು ಜಯದೇವಿ ತಾಯಿಯವರು ಎಷ್ಟೇ ವಿರೋಧಿಸಿದರು ಸೊಲ್ಲಾಪುರ ಮುಂದೆ ಒಂದಾಗಲಿಲ್ಲ. ಜೆ.ವಿ ಪಿ ಆಯೋಗವು…ಜೆ ವಿ ಪಿ ಆಯೋಗವು ೧-೪-೧೯೪೯ರಲ್ಲಿ ಒಪ್ಪಿಸಿದ ವರದಿಯಿಂದಲೂ ಕರ್ನಾಟಕ ನಿರಾಸೆಯಾಯಿತು. ಆಗ ಜಯದೇವಿ ತಾಯಿಯವರು ಸುಮ್ಮನಿರಲಿಲ್ಲ ಸಭೆ ಸಮಾರಂಭಗಳನ್ನು ಕರೆದು ಗೋತ್ತುವಳಿ ಪಾಸು ಮಾಡಿಸಿ ಕನ್ನಡಿಗರನು ಕೂಡ್ರಿಕರಸಿ ಮನವಿ ಅರ್ಪಿಸಿದರು. ಮಹಿಳಾ ಪರಿಷತ್ತನ್ನು ಕರೆದು ಒಂದು ಮಹತ್ವದ ಹೊತ್ತುವಳಿ ತೆಗೆದುಕೊಂಡರು.ಜೆವಿಪಿ ಆಯೋಗದ ವರದಿಯನ್ನು ವಿರೋಧಿಸಿ ಕರ್ನಾಟಕದ ಪ್ರತಿನಿಧಿಗಳು ಕೇಂದ್ರ ಮತ್ತು ಶಾಸನಸಭೆಗಳಿಗೆ ರಾಜೀನಾಮೆ ಕೊಡಬೇಕೆಂಬ ಬೇಡಿಕೆ ಇಟ್ಟರು….ಈ ಗೊತ್ತುವಳಿಂದ ಕರ್ನಾಟಕದ ಜನತೆಯಲ್ಲಿ ಮಿಂಚು ಸಂಚಾರವಾಯಿತು . ಎಲ್ಲ ಭಾಗಗಳಿಂದ ಬೆಂಬಲ ಬರಲು ಪ್ರಾರಂಭಿಸಿತು ಸ್ವತಂತ್ರ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿದ್ದ ನಾಗಪ್ಪಣ್ಣ ಕಾಡಾದಿವರನ್ನು ಅಭಿನಂದಿಸಲಾಯಿತು. ” ಕನ್ನಡಿಗರ ಪ್ರಾಣ ಮರಣಗಳಂಥ ಅಗ್ನಿ ಪರೀಕ್ಷೆಯ ಕಾಲದಲ್ಲಿ ಜಾತಿ ಪಂಥ ಮತ ಭೇದಗಳನ್ನು ಕಡೆಗಣಿಸಿ ಅಖಿಲ ಕನ್ನಡಿಗರ ಕುಲವೊಂದು ಎಂಬ ಭವ್ಯ ಭಾವ ನರನಾಡಿಗಳಲ್ಲಿ ಹರಿಯಲಿ…..ಭವ್ಯ ಕರ್ನಾಟಕ ಕಟ್ಟಲು ಸಿದ್ಧರಾಗಿ ಎಂದರು…ಮೈಸೂರು ಮಹಾರಾಜರು ವಂಶ ಪಾರಂಪರದಿಂದ ಜನಾನುರಾಗಿಗಳೆಂಬುದನ್ನು ಯಾರು ಮರೆಯುವಂತಿಲ್ಲ ಆದರೆ ಕನ್ನಡಿಗರು ಉಸಿರಾಡಲು ಕಷ್ಟವಾಗಿರುವ ಈ ಸಂದರ್ಭದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಅಖಿಲ ಕನ್ನಡಿಗರ ಸಭೆಗೆ ಸೋಪಾನವಾದ ಮಹಾ ಕರ್ನಾಟಕದ ರಚನೆಯಲ್ಲಿ ತಮ್ಮ ಕೈ ಮೊದಲನೆಯದೆಂದು ಮುಂದೆ ಬಂದು ಅವರ ಕೀರ್ತಿ ಸಂಪಾದಿಸಬೇಕು” ಎಂದು ಸಭೆಯಲ್ಲಿ ವಿನಂತಿಸಿಕೊಂಡರು.ಈ ಗೊತ್ತುಗಳಿಗೆ ಅವಶ್ಯವಾದ ಆಂದೋಲನ ನಡೆಸಲು ಸಿದ್ಧರಾಗಬೇಕೆಂದು ಮೈಸೂರಿನ ಭಗಿನಿಯರಲ್ಲಿಯೂ ಕೇಳಿಕೊಳ್ಳುತ್ತಾರೆ .ಬಳ್ಳಾರಿ ಜಿಲ್ಲೆಯ ವಿಭಜನೆಯನ್ನು ವಿರೋಧಿಸಿ ಕರ್ನಾಟಕದಲ್ಲಿ ಅದನ್ನು ಇಡಿಯಾಗಿ ಸೇರಿಸಲು ಆಗ್ರಹ ಪಡಿಸುತ್ತಾರೆ. ಸೊಲ್ಲಾಪುರದಲ್ಲಿ ಕನ್ನಡ ಮಾತನಾಡುವುದೇ ಅಪರಾಧವೆಂದು ಕಡೆಗಣಿಸಲ್ಪಡುತ್ತಿದ್ದ ಹೆದರುತ್ತಿದ ಕಾಲದಲ್ಲಿ ಜಯದೇವಿ ತಾಯಿಯವರ ಜಯನಿಕೇತನದಲ್ಲಿ (ಸ್ವಂತ ಮನೆಯಲ್ಲಿ)ಇಂತಹ ಸಮ್ಮೇಳನಗಳನ್ನು ಹಮ್ಮಿಕೊಂಡು ಗಂಭೀರ ವಿಷಯಗಳಿಂದ ಎಲ್ಲರ ಮನ ಸೆಳೆಯುತ್ತಿದ್ದರು. ಈ ವಿಷಯವನ್ನು ಇಲ್ಲಿಗೆ ಬಿಡದೆ ಹುಬ್ಬಳ್ಳಿಯ ಅಖಿಲ ಕರ್ನಾಟಕ ರಾಜ್ಯ ನಿರ್ಮಾಣ ಸಮಿತಿ ನಿರ್ಮಿಸಿದರು. ಏಕೀಕರಣ ಸಪ್ತಾಹ ಸಹಿ ಸಂಗ್ರಹ ಮೆರವಣಿಗೆಗೆ ನಡೆದು ಮುಂದಾಳುಗಳು ರಾಜೀನಾಮೆ ಕೊಡುವಂತೆ ಒತ್ತಾಯಿಸಬೇಕೆಂದು ಜಯದೇವಿ ತಾಯಿಯವರು ತಿಳಿಸಿದರು. ಅವರು ನಡೆಸಿದ ಮಹಿಳಾಪಷತ್ತಿನ ಗೊತ್ತುವಳಿಯಲ್ಲಿ ನಿಜಲಿಂಗಪ್ಪನವರು ಮುಂದಾಗಿ ಶಾಸನಸಭೆಗಳಿಗೆ ರಾಜೀನಾಮೆ ಕೊಟ್ಟರು ಇದು ಸೊಲ್ಲಾಪುರದ ಮಹಿಳಾ ವರ್ಗಕ್ಕೆ ಉತ್ಸಾಹ ಉಕ್ಕಿ ಹರಿಯಿತು ಆದರೂ ಯಾವ ಪ್ರಯತ್ನ ಯಶಸ್ವಿಯಾಗಲಿಲ್ಲ.ಕರ್ನಾಟಕ ನಾಡ ದೇವಿಯ ಒಲುಮೆಗಾಗಿ ರಾಜೀನಾಮೆಗಳನ್ನು ಕೊಟ್ಟವರಿಗೆ ಧನ್ಯವಾದಗಳು ನಿಮ್ಮ ತ್ಯಾಗ ಮಾರ್ಗದರ್ಶನವಾಗಿದೆ ನೀವೆಲ್ಲ ಹಾಕಿಕೊಟ್ಟ ಕಾರ್ಯಕ್ಕೆ ಸೋಲಾಪುರದ ಮಹಿಳೆಯರೆಲ್ಲ ಕಂಕಣಬದ್ಧರಾಗಿ ಸಿದ್ದರಿದ್ದೇವೆ ಎಂದು ಜಯದೇವಿ ತಾಯಿಯವರು ಪತ್ರಿಕೆಗಳಿಗೆ ವರದಿ ನೀಡಿದರು ಕರ್ನಾಟಕ ಏಕೀಕರಣದ ಹೋರಾಟ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದ ಸಂದರ್ಭದಲ್ಲಿ, ಜಯದೇವಿತಾಯಿಯವರ ಹೋರಾಟದ ತೀವ್ರತೆಯನ್ನು ತೋರಿಸುವ ಒಂದು ಮಹತ್ವದ ಘಟನೆ ಉಲ್ಲೇಖಿತವಾಗಿದೆ. ಅಖಂಡ ಕರ್ನಾಟಕದ ಕನಸಿಗಾಗಿ ಅವರು ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ರಕ್ತದಲ್ಲಿ ಪತ್ರ ಬರೆದರು ಎಂದು ಲಭ್ಯವಿರುವ ಸಂಶೋಧನಾ ದಾಖಲೆಯೊಂದು ತಿಳಿಸುತ್ತದೆ.ಕನ್ನಡಿಗರ ಚದುರಿದ ಬದುಕನ್ನು ಒಂದೇ ಆಡಳಿತದ ಅಡಿಯಲ್ಲಿ ತರಬೇಕು, ಕನ್ನಡದ ನೆಲನುಡಿಗೆ ನ್ಯಾಯ ದೊರೆಯಬೇಕು ಎಂಬ ಒತ್ತಾಯದ ಪ್ರತೀಕವಾಗಿತ್ತು. ತಮ್ಮ ರಕ್ತವನ್ನೇ ಮಸಿಯಾಗಿ ಮಾಡಿಕೊಂಡು ದೇಶದ ಪ್ರಧಾನಿಗೆ ಮನವಿ ಸಲ್ಲಿಸುವ ಮಟ್ಟಿಗೆ ಅವರ ಏಕೀಕರಣದ ಬದ್ಧತೆ ಗಾಢವಾಗಿತ್ತು. ಎಂದು ಜಯದೇವಿ ತಾಯಿಯವರು ಪತ್ರಿಕೆಗಳಿಗೆ ವರದಿ ಸಲ್ಲಿಸಿದರು.ಜೆ.ವಿ.ಪಿ ವರದಿಯ ಪರಿಣಾಮದಿಂದ ಗಡಿನಾಡಿನಲ್ಲಿ ಕನ್ನಡಿಗರ ಜಾಗೃತಿ ಅವಶ್ಯವಿತ್ತು .ಈ ಕಾಲದಲ್ಲಿ ಜಯದೇವಿಯ ಅವರು ಹೋರಾಟ ಮುಂದುವರಿಸಿದರು 3,00,000 ಜನಸಂಖ್ಯೆ ಇದ್ದ ಸೊಲ್ಲಾಪುರದಲ್ಲಿ ಕನ್ನಡದ ಅಸ್ತಿತ್ವ ಪ್ರಶ್ನಿಸುವಂತಹ ಪರಿಸ್ಥಿತಿ ಇತ್ತು ಜಯದೇವಿತಾಯಿಯವರ ಈ ನಡೆ ಅವರ ಹೋರಾಟದ ಸ್ವರೂಪವನ್ನು ನಮಗೆ ಪರಿಚಯಿಸುತ್ತದೆ. , ಏಕೀಕರಣವು ಅವರಿಗೆ ಕನ್ನಡಿಗರ ಅಸ್ತಿತ್ವಭಾಷೆ ಮತ್ತು ಸ್ವಾಭಿಮಾನದ ಪ್ರಶ್ನೆಯಾಗಿತ್ತು.(ಮೂಲಾಧಾರನಲ್ಲಿ ಲಭ್ಯವಿರುವ ಸಂಶೋಧನಾ ದಾಖಲೆಯ ಪ್ರಕಾರ…” “ಕರ್ನಾಟಕ ಏಕೀಕರಣ ಚಳವಳಿ”ಗೆ ಸಂಬಂಧಿಸಿದ ಸಂಶೋಧನಾ ಲೇಖನದಲ್ಲಿ ಜಯದೇವಿತಾಯಿಯವರು ನೆಹರು ಅವರಿಗೆ ರಕ್ತದಲ್ಲಿ ಪತ್ರ ಬರೆದ ಘಟನೆಯ ಉಲ್ಲೇಖವಿದೆ.) ಶಂಕರಗೌಡ ಪಾಟೀಲ್, ನಾರಾಯಣಪ್ಪ, ತಲ್ಲೂರು ರಾಯನಗೌಡ ಪಾಟೀಲರು ದೊಡ್ಡ ಮೀಟಿ ಅಂದಾನಪ್ಪ ಇವರೆಲ್ಲರೂ ಉಪವಾಸ ಕುಳಿತಿದ್ದ ಸತ್ಯಾಗ್ರಹ ನೋಡಿ ತಾಯಿಯವರು ನೊಂದು ನಾವೆಲ್ಲರೂ ಸೇರಿ ಹೋರಾಡೋಣ ಎಂದು ತಿಳಿಸಿ ಹೆಬ್ಬೆರಳಿನಳಿ ರಕ್ತ ಚಿಹ್ನಾಂಕೀತ ಪತ್ರ ಕಳಿಸಿದರು .ಈ ರೀತಿಯ ಘಟನೆ ಗಂಧದ ವಾತಾವರಣ ಉಂಟಾಯಿತು.ಈ ರೀತಿಯಾಗಿ ಕರ್ನಾಟಕಕ್ಕೆ ಉಳಿಯಲು ಬಿ.ಎಂ.ಶ್ರೀ, ಬೆನಗಲ್ ರಾಮರಾಯ, ಜಿನರಾಜ ಹೆಗಡೆ ಮಾಸ್ತಿ ,ಆರ.ನಾಗನಗೌಡ, ದೇವಡು ನರಸಿಂಹ ಶಾಸ್ತ್ರಿ, ಎಚ್. ಸಿದ್ದಯ್ಯ, ಬಿ.ಎಂ. ದಾತರ, ಡಿ.ಪಿ ಕರಮಕರ, ಎಸ್. ಎಸ್. ಬಸವನಾಳ, ಪಂಜೇ ಮಂಗೇಶರಾಯರು, ಗೋವಿಂದ ಪೈ, ರಾಮಕೃಷ್ಣ ಕಾರಂತ,ಎಂ.ಎಸ.ಕೃಷ್ಣ, ಬಿ. ಶಿವಮೂರ್ತಿ ಶಾಸ್ತ್ರಿ,ಎಂ. ಎಸ. ಸರ್ದಾರ್ ,ಮೋದಿ ಮೊದಲಾದವರೊಂದಿಗೆ ಹೋರಾಟದಲ್ಲಿ ಜಯದೇವಿ ತಾಯಿಯವರು ಪ್ರಮುಖರಾಗಿದ್ದರು. ೧೯೫೩ಫಜಲ್ ಅಲಿ ಆಯೋಗ… ೨೨-೧೨-೧೯೫೩-ರಂದು ಭಾರತ ಸರ್ಕಾರ ಸೈಯದ ಫಜಲ್ ಅಲಿ ಅವರ ಅಧ್ಯಕ್ಷತೆ ಪಂಡಿತ ಹೃದಯನಾಥ್ ಕುಂಜರು ಹಾಗೂ ಸರ್ದಾರ್ ಅವರ ಸದಸ್ಯತ್ವದಲ್ಲಿ ರಾಜ್ಯ ಪುನರ ರಚನಾ ಆಯೋಗ ರಚಿಸಿದರು 33 ವರ್ಷಗಳಿಂದ ಬಳ್ಳಾರಿಯ ಬಗ್ಗೆನಡೆದ ವಿವಾದ ಆರು ಸಲ ವಿಚಾರಣೆ ನಡೆದಿತ್ತು. ಮೂರು ತಾಲೂಕು ಸೇರಿಸುವ ಹಿಂದಿನ ನಿರ್ಣಯವನ್ನು ಈ ವರದಿ ಒಪ್ಪದಿದ್ದದ್ದು ಜನತೆಯಲ್ಲಿ ತೀವ್ರ ಅಸಮಾಧಾಮನ ಉಂಟು ಮಾಡಿತ್ತು. ಕಮ್ಯುನಿಸ್ಟ್ ಏಕೀಕರಣದ ಕುರಿತು ಕಾಂಗ್ರೆಸ್ ವಿಳಂಬ ನೀತಿಯನ್ನು ವಿರೋಧಿಸಿಫಜಲ್ ಅಲಿ ಕಮಿಷನ್ ಗೆ ಮನವಿ ಸಲ್ಲಿಸುವ ಕುರಿತು ಚರ್ಚಿಸಲು ದಾವಣಗೆರೆಯಲ್ಲಿ ಕನ್ನಡಿಗರ ಸರ್ವ ಪಕ್ಷಿಯ ಸಭೆಯನ್ನು ಕೈಗೊಳ್ಳಲಾಯಿತು. ಅಖಂಡ ಕರ್ನಾಟಕ ರಚನೆಯ ಕುರಿತು ಸಲ್ಲಿಸಬೇಕಾದ ಆ ಕರಡಿನ ಮನವಿಯಲ್ಲಿ ಸೊಲ್ಲಾಪುರದ ಹೆಸರನ್ನು ಕೈ ಬಿಡಲಾಗಿತ್ತು .ಈ ವಿಷಯವು ಜಯದೇವಿಯವರಿಗೆ ತಿಳಿದು ಈ ಸಭೆಗೆ ಬಂದಿದ್ದರು ಅಲ್ಲಿ ಅವರು ಮುಂದಾಳು ಕಾರ್ಯಕರ್ತರರಿಗೆ ಸೊಲ್ಲಾಪುರ ಸೇರಿಸುವಂತೆ ತಿಳಿಸಿದ ನಂತರ ಮನವಿಯಲ್ಲಿ ಸೇರಿಸಲಾಯಿತು. ಅಲ್ಲಿ ಜಯದೇವಿ ಅವರು ನೀವು ಇಂದು ಸೊಲ್ಲಾಪುರವನ್ನು ಬೇಡದೆ ಹೋದರೆ ಸೊಲ್ಲಾಪುರದಲ್ಲಿ ನಡೆಯುವ ಕನ್ನಡ ಚಳುವಳಿಯನ್ನು ಜೀವಂತವಿಡಲು ನೆರವಾಗದೆ ಹೋದರೆ ನಮಗೆ ಬೆಳಗಾವಿ ಉಳಿಯಲಾರದು ಸೊಲ್ಲಾಪುರ ಬೆಳಗಾವಿ ಕಳೆದುಕೊಂಡ ಮೇಲೆ ಅದರ ದಾಳಿ ದಾವಣಗೆರೆಗೂ ಬರಬಹುದು ನಾನೆಂದು ಇಲ್ಲಿ ಬಂದಿರುವುದು ಸೊಲ್ಲಾಪುರವನ್ನು ಉಳಿಸಿಕೊಳ್ಳಿ ಎಂದು ಹೇಳಲು ಅಲ್ಲ ಇಂದು ಸೋಲಾಪುರಕ್ಕೆ ಬಂದ ದುರ್ದಶೇ‌‌ ನಾಳೆ ದಾವಣಗೆರೆ ವರೆಗೂ ಬಾರದಿರುವಂತೆ ಜಾಗೃತವಾಗಿ ಇರುವಂತೆ ತಮ್ಮನ್ನು ಎಚ್ಚರಿಸಲು ಬಂದಿದ್ದೇನೆ ಸ್ವಾತಂತ್ರ ನಂತರ ಭಾಷಾವಾರು ಪ್ರಾಂತ ರಚನೆಗೆ ನೇಮಕವಾದ ಧರ ಮತ್ತು ಫಜಲ್ ಅಲಿ ಕಮಿಷನ್ ಎದುರು ಸೊಲ್ಲಾಪುರ ನಗರ ಅಧ್ಯಕ್ಷ ಮತ್ತು ವಿಧಾನಸಭಾ ಸದಸ್ಯರೊಡಗೊಂಡು 45 ಜನರ ಸಿಸ್ಟಮಂಡಳಿ ಹುಬ್ಬಳ್ಳಿ ಮಕ್ಕ ಮದಲಿ ಭೇಟಿಯಾಗಿ ಮನವಿ ಸಲ್ಲಿಸಿದರು ಈ ಮನವಿಯಲ್ಲಿ ಅಖಂಡ ಕರ್ನಾಟಕದಲ್ಲಿ ಸೊಲ್ಲಾಪುರ, ಬೆಳಗಾವಿ, ಕಾಸರಗೋಡ, ಮಡಕಶಿರ ,ತಾಳವಾಡ ,ಹೊಸೂರ,ಆದವಾನಿ, ಆಲೂರ, ರಾಮದುರ್ಗ, ಜತ್ತ ,ಅಕ್ಕಲಕೋಟೆ ,ದಕ್ಷಿಣ ಉಮೆರ್ಗಾಂ ಮೊದಲಾದ ಪ್ರದೇಶಗಳನ್ನು ಸೇರಿಸಿ ಅಖಂಡ ಕರ್ನಾಟಕ ರಚನೆಯಾಗಬೇಕೆಂಬ ಮನವಿ ಸಲ್ಲಿಸಲ್ಪಟ್ಟಿತು. ದೆಹಲಿಯಲ್ಲಿ ಜಯದೇವಿ ತಾಯಿಯವರ ಸಾಕ್ಷಿ ನುಡಿಯು ಸಂದರ್ಭ ಒದಗಿತು. ಈ ಸಂದರ್ಭದಲ್ಲಿ ಕೇಂದ್ರ ಗೃಹ ಮಂತ್ರಿಯಾದ ಗೋವಿಂದ್ ವಲ್ಲಭ ಪಂಥರು ಜಯದೇವಿ ತಾಯಿಯವರನ್ನು ನೋಡಿ ಪ್ರತಿ ಸಿಸ್ಟಮಂಡಳಿಯಲ್ಲಿಯೂ ನೀವು ಇರುವಿರಲ್ಲ ಎಂದು ನಗುತ್ತಾ ಕೇಳಿದಾಗ … ತಾಯಿ ಯವರು…”ಕರ್ನಾಟಕಕ್ಕೆ ಬರಬೇಕಾದ ಪ್ರತಿ ಹಳ್ಳಿಯೂ ನಮಗೆ ಸಂಬಂಧಪಟ್ಟದ್ದು ಅದರ ಪರ ವಾದಿಸುವುದು ನನ್ನ ಪ್ರಥಮ ಕರ್ತವ್ಯ” ಎಂದು ಹೇಳಿದರು. ಅವರ ಕನ್ನಡ ಪ್ರೇಮಕ್ಕೆ ,ಅವರ ವರ್ಚಸ್ಸಿಗೆ ಪಂಥರು ತಲೆಬಾಗಿದರು. ಕರ್ನಾಟಕ ಏಕೀಕರಣದ ಹೋರಾಟದಲ್ಲಿ ತಾಯಿ ನಿರಂತರವಾಗಿ ಪ್ರತಿಯೊಂದು ಸಭೆ, ಸಮಿತಿ, ಚರ್ಚೆ ಹಾಗೂ ಹೋರಾಟದ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದುದನ್ನು ಗಮನಿಸಿದ್ದ ಅವರು, ನಗುತ್ತಲೇ,“ಪ್ರತಿ ಸಮಿತಿಯಲ್ಲಿಯೂ ನೀವು ಇದ್ದೀರಲ್ಲ!” ಎಂದು ಕೇಳಿದರು.ಆ ಪ್ರಶ್ನೆಯಲ್ಲಿ ತುಸು ಆಶ್ಚರ್ಯವಿತ್ತು….ಆದರೆ ಜಯದೇವಿತಾಯಿಯವರ ಉತ್ತರದಲ್ಲಿ ಇಡೀ ಕರ್ನಾಟಕದ ನೋವು, ಕನಸು ಮತ್ತು ಹಕ್ಕಿನ ಧ್ವನಿ ಮೊಳಗಿತು.“ಕರ್ನಾಟಕಕ್ಕೆ ಬರಬೇಕಾದ ಪ್ರತಿಯೊಂದು ಹಳ್ಳಿಯೂ ನಮಗೆ ಸಂಬಂಧಪಟ್ಟದ್ದು. ಅದರ ಪರವಾಗಿ ವಾದಿಸುವುದು ನನ್ನ ಪ್ರಥಮ ಕರ್ತವ್ಯ.”ಅದು ತಾಯಿಯವರ ಬದುಕಿನ ಧ್ಯೇಯವಾಕ್ಯವಾಗಿತ್ತು.ಅವರಿಗೆ ಕರ್ನಾಟಕವೆಂದರೆ ಗಡಿಯಾಚೆ ಉಳಿದ ಪ್ರತಿಯೊಂದು ಕನ್ನಡಿಗನ ನೋವೂ ತಮ್ಮದೇ ನೋವು, ಕನ್ನಡದ ನೆಲದಿಂದ ದೂರವಾಗುವ ಪ್ರತಿಯೊಂದು ಹಳ್ಳಿಯೂ ತಮ್ಮ ಮನೆಯ ಒಂದು ಭಾಗ ಕಳೆದುಹೋದಂತೆಯೇ ಅವರಿಗೆ ಭಾಸವಾಗುತ್ತಿತ್ತು.ಅವರ ವಾದದಲ್ಲಿ ತೀಕ್ಷ್ಣತೆಯಿತ್ತು.ಕನ್ನಡಿಗರ ಹಕ್ಕನ್ನು ಗೆಲ್ಲಿಸುವ ಉದ್ದೇಶವಿತ್ತು…ತಾಯಿಯವರ ಕನ್ನಡ ಪ್ರೇಮದ ಆ

Read Post »

ಇತರೆ

“ಪಿ.ಡಿ.ವಾಲೀಕಾರಯವರ ಜನಪದ ಸಾಹಿತ್ಯದ ಒಂದು ಅವಲೋಕನ.” ದಯಾನಂದ ಪಾಟೀಲ

ಜನಪದ ಸಂಗಾತಿ ದಯಾನಂದ ಪಾಟೀಲ “ಪಿ.ಡಿ.ವಾಲೀಕಾರಯವರ ಜನಪದ ಸಾಹಿತ್ಯದ ಒಂದು ಅವಲೋಕನ.” ಬಾಗಲಕೋಟ ಜಿಲ್ಲೆಯ ಜನಪದ ತಜ್ಞರು ಸಾಹಿತಿಗಳು ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.ಕನ್ನಡ ಸಾರಸ್ವತ ಲೋಕಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಜನಪದಕ್ಕೆ ವಿಶೇಪವಾದ ಸ್ಥಾನ ಪಡೆದಿದೆ.ವಾಲೀಕಾರಯವರು ರಚನೆ ಮಾಡಿರುವ ಜನಪದ ಹಾಡುಗಳ ಒಂದು ಝಲಕ ನಿಮ್ಮ ಮುಂದೆ..ಆದಿ ಸ್ಥಳದಲ್ಲಿ ಇದ್ದ ಕಂಬಳಿಹಾಲು ಮತದ ಧರಮಕ ಬತ್ತ ಕಂಬಳಿ ಶಿಷ್ಯಾರದಿಂದ ಹುಟ್ಟಿತ ಕ೦ಬಳಿ ಜಗದ ಗುರುವ ಮಡ್ಡಿಸಿದ್ಯಾಗ ಹೊರುವ ಕಂಬಳಿ ಮಳಿ ರಾಜ ಬಂದಾಗ ಬೆಚ್ಚಾತ ಕಂಬಳಿ ತಲಿ ಮ್ಯಾಲ ಸುತ್ತುವ ಪಾವ ಡಾತ ಕಂಬಳಿ…ಮಳೆರಾಜ ನೀನಿಲ್ಲದೆ ಈ ಜೀವರಾಶಿಗಳು ಬದುಕಲು ಸಾಧ್ಯವಿಲ್ಲ ಆದ್ದರಿಂದ ನೀ ಧರೆಗೆ ಬಾ ಅಂತ ಪರಿಪರಿಯಾಗಿ ಭಕ್ತಿಯಿಂದ ಬೇಡಿಕೊಂಡು ಭಕ್ತಿಯಿಂದ ಕುರುಬರು ಕಂಬಳಿಬೀಸಿದರೆ ಮಳೆ ಆಗುತ್ತದೆ. ಎ೦ದು ಹಿರಿಯರು ಕ್ಷೇತ್ರ ಕಾರ್ಯದಲ್ಲಿ ಹೇಳಿದ್ದಾರೆ.ಬೆಳೆಗಾಗಿ ನಾನೆದ್ದು /ಯಾರಾರ ನೆನೆಯಲಿ /ಎಳ್ಳು ಜೀರಿಗಿ ನೆನೆಯೊಳೆ “ಭೂಮಿತಾಯಿಎದ್ದೊಂದು ಗಳಿಗಿ ನೆನದೋ ಣೊ”ಭೂಮಿ ತಾಯಿ ದೇವರು ಸಕಲ ಚರಾಚರ ಜೀವ ರಾಶಿ ಬದುಕುವುದು ಈ ಭೂಮಿಯ ಮೇಲೆ ಇರುವ 84 ಲಕ್ಷ ಜೀವರಾಶಿ ಇದೆ ಈ ಭೂಮಂಡಲದಲ್ಲಿ ಬದುಕುತ್ತಿವೆ. ಎಲ್ಲಾ ಜೀವರಾಶಿಗೆ ಭೂಮಿ ತಾಯಿ ಅನ್ನ ಹಾಕುತ್ತಿದ್ದಾಳೆ..ಬೆಳ್ಳನೆ ಬೆಳಗಾಗಿ ಬೆಳ್ಳಿ ಮೂಡಲ ಗೈದು ಒಳ್ಳೊಳ್ಳೆ ಮೀನು ಗರಿ ಗಟ್ಟಿ ಆಡ್ಯಾವೋಗರತಿ ಗಂಗಮ್ಮನ ಉಡಿಯಾಗೆ/ಒಕ್ಕಲಿಗನಿಗೆ ನೀರು ಬರಿಯ ನೀರಲ್ಲ ಗರತಿ ಗಂಗವ್ವ ನಸುಕಿನಲ್ಲಿ ಈಕೆಯ ಉಡಿಯಲ್ಲಿ ಮೀನು ಗರಿ ಬಿಚ್ಚಿ ಆಡುವುದೆಂದು ಜನಪದರು ಬಣ್ಣಿಸಿರುವುದು ನೈಜವಾಗಿದೆ ಬೆಳಗು ಕೂಡ ಅವರ ಪಾಲಿಗೆ ಕೇವಲ ಬೆಳಕಲ್ಲ ಬೆಳ್ಳಿ ಬೆಳಕು..ಯೋಗವನು ಮನ ಮುಟ್ಟಿ ? ಭೋಗವನು ತೊರೆದಿಹರೆ |ಮಾಗಿಯಾ ಮಳೆಯ ಸುರಿದ೦ತೆ ಆ…. ಯೋಗ ಸಾಗುತ್ತ ಲಿಹುದು ಸರ್ವಜ್ಞIIಯೋಗಿಯ ದೇಹದ ಬೋಗಗಳೆನ್ನೆಲ್ಲ ಮನಸ್ಸಿನಿಂದ ತಿರಸ್ಕರಿಸಿ ಯೋಗ ಸಾಧನೆಯಲ್ಲಿ ಮನಸು ಲೀನಗೊಳಿಸುತ್ತಾನೆ. ಮಾಗಿಯ ದಿವಸಗಳಲ್ಲಿ ಮಳೆಯಾದರೆ ಭೂಮಿಯ ಮೇಲಿನ ಬೆಳೆಗೆ ಹಿತಕರವಾಗುವುದು ಅದರ೦ತೆಯೇ ಬೆಳೆಯುವ ಬೆಳೆಗೆ ಮಳೆ ನೀರು ಹನಿ ಹನಿಯಾಗಿ ದೊರಕಿದಾಗ ಅದರಲ್ಲಿ ಕಾಣಬರುವ ಸಂತೃಪ್ತಿ ಯೋಗಿಯ ಸಾಧನೆ…ಹಾಕಪ್ಪ ಅಗಳಿ ಹಾಕಪ್ಪ /ಜೋಕಪ್ಪ ಹಾಕಿದ ಅಗಳಿ ಹಿರಿಯಪ್ಪ / ನನ ಕೊಮರ”ಯಾಕೋ ಕೊಮರಾಮ ನೋ ನಿನ್ನ ಬಾಯಿಗೆ ಬೆಣ್ಲಿಲ್ಲ ಮೇಲೆ ಮಾಣಿಕದ ಹರಳಿಲ್ಲ / ಈ ಊರ ಓಣ್ಯಾಗ ನಿನ್ನ ಸುಳಿವಿಲ್ಲIIಡಾ.ಬೆಟಗೇರಿ ಕೃಷ್ಣ ಶರ್ಮ ಇವರು ಜೋಕುಮಾರ ಪದದ ಅರ್ಥ ಬಗ್ಗೆ ವಿವರಿಸಿದ್ದಾರೆ. ಜೋಕುಮಾರ – ಪದದ ಅಪಭ್ರ೦ಶ ಯೋಗ ಕುಮಾರ ಇದು ಸೋಮಾರಿ ಪಿ೦ಡ ಪೋಲಿ ಪೋಕರಿಸೋ ಮಾರಿ ಎಂದು ಕರೆಯಲಾಗುತ್ತದೆ ಎಂದು ವಿವರಿಸಿದ್ದಾರೆ.ಉತ್ತರ ದಿಕ್ಕಿಗೆ ಎತ್ತರಿಸಿ ಗಾಳಿ |ಬೀಸಿದರೆ ಉತ್ತಮ | ಮಳೆ ಎಂದ ಸರ್ವಜ್ಞ |ಶ್ರೀ ಮಳಿಯಪಯ್ಯ ಸ್ವಾಮಿಗಳು ಗ್ರಾಮದಲ್ಲಿ ಹಾದು ಹೋಗುವಾಗ ರೈತರು ಮಳೆ ಕೇಳಿಕೆ ಕೈತೆ ಆಗ ಮಳಿಯಪಯ್ಯ ಸ್ವಾಮಿಗಳು ತಡಿಹಾಕುನ 3 ದಿನಕ್ಕೆ ಬರತನ ಅಂತೆ ಹೇಳಿದಾರ೦ತಾ 3 ದಿನಕ್ಕೆ ಸಾಕಷ್ಟು ಮಳೆ ಆತು ಅಂತ ಹಿರಿಯರ ಹೇಳತಾರ..ಅಂದು ರೊಕ್ಕ ಕಡಿಮೆ ಇತ್ತು ಗೌರವ ಹೆಚ್ಚ ಇತ್ತು.ಇಂದು ರೊಕ್ಕ ಹೆಚ್ಚಾ ಗೈತಿ ಗೌರವ ಕಡಿಮೆ ಆಗೈತಿ..ದೂರದಶ೯ನಮಕ್ಕಳ ಜಾನಪದ ಎಷ್ಟೆಂದು ಸುಂದರ ಇತ್ತು ಅದೆನ್ನೆಲ್ಲ ಕಸಿದುಕೊಂಡಿದ್ದಾರೆಯೇ? ಎಂಬ ಪ್ರಶ್ನೆ ಕಾಡುತ್ತಿದೆ. ಈ ಮಳೆ ಆಚರಣೆ ಕಡಿಮೆಯಾಗುತ್ತಿದೆ.ಹಿರಿಯರಿಗೆ ಗೌರವ ಕೊಡುತ್ತಿಲ್ಲ ಜನಪದ ಸಾಹಿತ್ಯ ಮಾಯವಾಗುತ್ತಿದೆ.ಬಬಲಾದಿ ಚಿಕ್ಕಪ್ಪಯ್ಯಾನವರು ಸಾರಿ ಸಾರಿ ಹೇಳಿದ್ದಾರೆ.ಸಾಹಿತಿ ಜನಪದ ವಿದ್ವಾಂಸರಾದ ಪಿ.ಡಿ.ವಾಲೀಕಾರ ಯವರು ಸಾಹಿತ್ಯಲೋಕವನ್ನು ಶ್ರೀಮಂತಗೊಳಿಸಿದ್ದಾರೆ.ಅವರಿಗೆ ಸವಿ ನೆನಪುಗಳೊಂದಿಗೆ … ದಯಾನಂದ ಪಾಟೀಲ ಅಧ್ಯಕ್ಷರು ಭಾರತೀಯ ಕನ್ನಡ ಸಾಹಿತ್ಯ  ಬಳಗ ಮಹಾರಾಷ್ಟ..

“ಪಿ.ಡಿ.ವಾಲೀಕಾರಯವರ ಜನಪದ ಸಾಹಿತ್ಯದ ಒಂದು ಅವಲೋಕನ.” ದಯಾನಂದ ಪಾಟೀಲ Read Post »

ಕಾವ್ಯಯಾನ

ಜಯಶ್ರೀ ಭ.ಭಂಡಾರಿ ಅವರ ಕವಿತೆ “ಋತುಗಾನ.”

ಕಾವ್ಯ ಸಂಗಾತಿ ಜಯಶ್ರೀ ಭ.ಭಂಡಾರಿ “ಋತುಗಾನ.” ಆಸರೆಯಿಲ್ಲದ ಬಳ್ಳಿಯಂತೆನೆಲೆಯಿಲ್ಲದ ಬಾಳ ಸಂತೆಯಲಿತರಗಲೆಯಂತೆ ಉದುರುವಾಗಭಾವನೆಗಳ ಹೊತ್ತಿಸಿ ದೀಪವಾದೆಬದುಕಲಿ ಬೆಳಕ ಚಿಮ್ಮಿಸಿದೆಮತ್ತೆ ಬದುಕಬೇಕೆಂಬ ಕಿಡಿಹಚ್ಚಿದಚತುರೆ ನೀನಾರೆ…..ಸೋತಬದುಕಲಿ ಗೆಲುವು ತುಂಬಿದೆಬಾನಂಗಳದ ಬೆಳಕಾಗಿ ನಿಂದೆಉಷೆಯಂತೆ ಉಲಿಯುತ ಉನ್ಮಾದ ಉಕ್ಕಿಸಿದೆ ನವಚೈತ್ರದಿಜೀವಜಂಜಡ ಮರೆಸಿದ ಕೋಗಿಲೆಹಾಡು ಕಲಿಸಿದ ಹಮ್ಮಿಲ್ಲದ ಹಕ್ಕಿಯೇ…ನೀನಾರೆ….. ಸುಖವೇನೆಂದು ಅರುಹಿದೆ ನಲುಗಿದಜೀವಕೆ ಜೀವವಾಹಿನಿಯಾದೆ….ಅಂಧಕಾರದ ಮಡಿಲಿಂದ ಜ್ಯೋತಿಯೆಡೆ ಕೈ ಹಿಡಿದು ನಡೆಸಿದೆ.ಬದುಕೇ ಇಲ್ಲ ಬಾಳೇ ಬೇಡಂದವನಬಾಳಲಿ ಭಾಗ್ಯದ ಕಿರಣ ಹೊಮ್ಮಿಸಿದೆಪದಗಳಲಿ ಕಟ್ಟಲಾರೆ ನಿನ್ನನು…. ನೀನಾರು .. ನನ್ನ ಉಸಿರ ಬಸಿರಲಿ ಬೆರಗು ತಂದವಳೆ.ಬೆಂದ ಬಾಳಿಗೆ ಜೀವತುಂಬಿದ ಬೆಡಗಿನವಳೆ.ನೀನೆ ನನ್ನವಳು ಸದಾ ಚಿನ್ಮಯಿ ಚಿತ್ಕಳೆಯವಳೆ…ಮುಂಗುರುಳ ಉಂಗುರದ ಕೆನ್ನೆಯವಳೆಮಲ್ಲಿಗೆಯೆ ನಾಚುವ ಮುಗುಳ್ನಗೆಯವಳೆಹೇಳಬಾರದೆ ನೀನಾರು… ಕಣ್ಣ ಅಂಚಿನ ಸಂಚಿನ ಮಿಂಚಂಚೆಯವಳೆಬೆಂಗಾಡಿನಲಿ ಬಳಕುವ ಬೆಳಕ ಬೀರಿದವಳೆನಗುವ ನೈದಿಲೆಯಾಗಿ ಈ ಹೃದಯವಆಳುಬಾ ಬಾಳುವ ಬಾ ದೀಪವಾಗಿಬೆಳಗು ಬಾ….ಯಾರೆ ನೀ ಮಂದಸ್ಮಿತ ತಂದವಳೆ…. ಜಯಶ್ರೀ ಭ.ಭಂಡಾರಿ.

ಜಯಶ್ರೀ ಭ.ಭಂಡಾರಿ ಅವರ ಕವಿತೆ “ಋತುಗಾನ.” Read Post »

ಕಾವ್ಯಯಾನ

ಶಿವಕುಮಾರ ಕೋಡಿಹಾಳ ಮೂಡಲಗಿ ಕವಿತೆ”ಅಹಂಕಾರ”

ಕಾವ್ಯ ಸಂಗಾತಿ ಶಿವಕುಮಾರ ಕೋಡಿಹಾಳ ಮೂಡಲಗಿ “ಅಹಂಕಾರ”  ಕಾಡುತಿಹೆ ವ್ಯಸನವಾಗಿಘನತೆ ಕಳೆವ ಮೌನವಾಗಿದೂರ ಸರಿಸಿಬಿಡು ಮನವೇ ಕೊಬ್ಬಿದ  ಅಹಂಕಾರವಹರಡಿಬಿಡು ಬಾಂಧವ್ಯದ ಮೃದುತನವ ನಾನು ನನ್ನದು ಎಂದುಮೆರೆಯುವ ಮನವೇಈ ಜಗದಲಿ ಯಾವ ತನಗಳು ಶಾಶ್ವತ?ಕೊನೆಯಲಿ ಏನಾಗುವೆ ಎಂಬುದ ಅರಿಯದ ಮೂರ್ಖತನವೇ ನಿನಗೆ? ನಾ ಕಾಣುವುದೇ ಸತ್ಯಆನೆ ನಡೆದದ್ದೇ ದಾರಿಎಂಬುವ ಹುಚ್ಚುಭ್ರಮೆ ಬೇಡಕೊಚ್ಚಿ ಹೋಗುವೆ ನೀ ಹೊಳೆಯಲಿ ಅದ ತಿಳಿಯೋಮನವೇ ನಾನೇ ಶ್ರೇಷ್ಠವೆಂಬ ಭಾವಅಹಂಕಾರದ ಪರಾಕಾಷ್ಠೆಸರ್ವರೊಳಗೂ ಒಂದಾಗಿ  ಶಾಂತಿದೂತ ಬುದ್ಧನಾಗುಬದುಕಿಗೆ ಅದೇ ಪರಮಸುಖಚಿರನೂತನ ಪ್ರೇಮ ಕಾವ್ಯ ಕೋಟೆ ಕಟ್ಟಿ ಮೆರೆದವರುಮಣ್ಣಾಗಿ ಕಣ್ಣಮುಂದೆ ಹೋಗುತಿಹರುಅಹಂಕಾರದ ಅಮಲುವ್ಯಕ್ತಿತ್ವದ ಕೊನೆಯ ಉಯಿಲು ಮನವೇ ನೀ ಶುದ್ಧ ಮನಸ್ಸಿನ ಮಗುವಾಗುದುರಹಂಕಾರಿಯಾಗಬೇಡನೆಮ್ಮದಿಯ ಬದುಕಿಗೆ ಭಂಗ ತಂದುಕೊಳ್ಳಬೇಡ  ಶಿವಕುಮಾರ ಕೋಡಿಹಾಳ ಮೂಡಲಗಿ

ಶಿವಕುಮಾರ ಕೋಡಿಹಾಳ ಮೂಡಲಗಿ ಕವಿತೆ”ಅಹಂಕಾರ” Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಶರಣರ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಕಾಯಕಯೋಗಿ ಒಕ್ಕಲಿಗ ಮುದ್ದಣ್ಣ ಹನ್ನೆರಡನೆಯ ಶತಮಾನದ ಶರಣರು ಬಸವಣ್ಣನವರ ನೇತೃತ್ವದಲ್ಲಿ ಸಮ ಸಮಾಜದ ಪರಿಕಲ್ಪನೆಯ ಅಡಿಯಲ್ಲಿ ಸಾರ್ವಕಾಲಿಕ ಸಮಾನತೆಯನ್ನು ತಂದು ಜಗತ್ತಿನಲ್ಲಿ ಸಾಮಾಜಿಕ ಧಾರ್ಮಿಕ ಸಾಹಿತಿಕ ಸಾಂಸ್ಕೃತಿಕ ಬದುಕಿನಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. ಕಾರಣ ಇಂದು ಇಡಿ ವಿಶ್ವವೆ ಬಸವಣ್ಣನವರ ತತ್ವಗಳನ್ನು ಹೆಮ್ಮೆಯಿಂದ ತಮ್ಮದಾಗಿಸಿಕೊಂಡಿದ್ದಾರೆ. ಒಕ್ಕಲಿಗ ಮುದ್ದಣ್ಣ ಅವರು 12ನೇ ಶತಮಾನದ ಬಸವಣ್ಣನವರ ಸಮಕಾಲೀನರಾದ ಒಬ್ಬ ಶ್ರೇಷ್ಠ ವಚನಕಾರರು ಮತ್ತು ಶಿವಶರಣರು. ಇವರು ಕೃಷಿ ಅಥವಾ ಬೇಸಾಯವನ್ನು ತಮ್ಮ ಮುಖ್ಯ ಕಾಯಕವನ್ನಾಗಿಸಿಕೊಂಡು ಬದುಕಿದವರು. ಒಕ್ಕಲಿಗ ಮುದ್ದಣ್ಣನವರ ಪ್ರಮುಖ ಜೀವನ ಮತ್ತು ಸಾಹಿತ್ಯದ ಪರಿಚಯದ ಒಂದು ನೋಟ: • ಕಾಲ ಮತ್ತು ಸ್ಥಳ: ಇವರು ಬಸವಾದಿ ಶರಣರ ಅವಧಿಯಲ್ಲಿ ಜೀವಿಸಿದ್ದರು ಹಾಗೂ ಇವರ ಜನ್ಮಸ್ಥಳ ಈಗಿನ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿಗೆ ಸೇರಿದ ಜೋಳದಹಾಳು ಗ್ರಾಮ. ಇವರ ತಂದೆ ತಾಯಿ ಮತ್ತು ಮಡದಿ ಮಕ್ಕಳ ಯಾವುದೇ ಉಲ್ಲೇಖ ಕಂಡು ಬಂದಿಲ್ಲ. • ಅಂಕಿತ ನಾಮ: ಮುದ್ದಣ್ಣನವರ ವಚನಗಳ ಅಂಕಿತ ನಾಮ ‘ಕಾಮಭೀಮ ಜೀವಧನದೊಡೆಯ’. • ಕಾಯಕ ಮತ್ತು ದಾಸೋಹ: ಬೇಸಾಯ ವೃತ್ತಿಯನ್ನು ಶ್ರೇಷ್ಠವೆಂದು ನಂಬಿದ್ದ ಇವರು, ನಿತ್ಯವೂ ಜಂಗಮ ದಾಸೋಹ (ಅನ್ನದಾನ) ನಡೆಸುತ್ತಿದ್ದರು. ರಾಜನು ಕೇಳಿದ ಹೆಚ್ಚಿನ ತೆರಿಗೆಯನ್ನು ನೀಡದೆ, ಆ ಹಣವನ್ನು ಶರಣರ ದಾಸೋಹಕ್ಕಾಗಿ ಬಳಸಿದ ಧೀಮಂತ ಶರಣ ಇವರಾಗಿದ್ದಾರೆ. • ವಚನ ಸಾಹಿತ್ಯ: ಪ್ರಸ್ತುತ ಇವರ ಕೇವಲ 12 ವಚನಗಳು ಮಾತ್ರ ದೊರೆತಿವೆ. ಇವರ ವಚನಗಳಲ್ಲಿ ಒಕ್ಕಲುತನದ (ವ್ಯವಸಾಯದ) ಪರಿಭಾಷೆ, ಮುಗ್ಧ ಭಕ್ತಿ ಹಾಗೂ ಸರಳ ಶೈಲಿಯನ್ನು ಕಾಣಬಹುದು. ಪ್ರಸಿದ್ಧ ವಚನದ ಸಾಲುಗಳು: “ಅಂಗವೆ ಭೂಮಿಯಾಗಿ, ಲಿಂಗವೆ ಬೆಳೆಯಾಗಿ, ವಿಶ್ವಾಸವೆಂಬ ಬತ್ತ ಒಲಿದು ಉಂಡು ಸುಖಿಯಾಗಿರಬೇಕೆಂದ ಕಾಮಭೀಮ ಜೀವಧನದೊಡೆಯ.” ಇವರ ವಚನಗಳು ಇಂದಿನ ಕೃಷಿಕರಿಗೂ ಬದುಕಿನ ಸಾರ ಮತ್ತು ಮಾರ್ಗದರ್ಶನವನ್ನು ನೀಡುತ್ತವೆ.  ಒಕ್ಕಲಿಗ ಮುದ್ದಣ್ಣ ಮತ್ತು ಅವರ ವಚನ ತಾತ್ಪರ್ಯ ಒಕ್ಕಲಿಗ ಮುದ್ದಣ್ಣನವರ ಕಾಯಕ ನಿಷ್ಠೆ ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ತೋರ್ಪಡಿಸುವ ಪ್ರಮುಖ ವಚನಗಳು ಹಾಗೂ ಅವುಗಳ ಸರಳ ವಿಶ್ಲೇಷಣೆ ಕಾಣಬಹುದು: 1. ಕೃಷಿ ಮತ್ತು ಆಧ್ಯಾತ್ಮದ ಸಮ್ಮಿಲನ (ವಚನ ವಿಶ್ಲೇಷಣೆ – ) ಅಂಗವೆ ಭೂಮಿಯಾಗಿ, ಲಿಂಗವೆ ಬೆಳೆಯಾಗಿ, ವಿಶ್ವಾಸವೆಂಬ ಬತ್ತ ಒಲಿದು ಉಂಡು ಸುಖಿಯಾಗಿರಬೇಕೆಂದ ಕಾಮಭೀಮ ಜೀವಧನದೊಡೆಯ. • ವಿಶ್ಲೇಷಣೆ:  ಈ ವಚನದಲ್ಲಿ ಮುದ್ದಣ್ಣನವರು ಬೇಸಾಯದ ಪರಿಭಾಷೆಯ ಮೂಲಕವೇ ಆತ್ಮಸಾಕ್ಷಾತ್ಕಾರದ ಹಾದಿಯನ್ನು ವಿವರಿಸಿದ್ದಾರೆ. ನಮ್ಮ ಈ ಭೌತಿಕ ಶರೀರವೇ (ಅಂಗ) ಒಂದು ಕೃಷಿ ಭೂಮಿ. ಅದರಲ್ಲಿ ಬಿತ್ತಿ ಬೆಳೆಯಬೇಕಾದ ಬೆಳೆಯೇ ದೈವತ್ವ ಅಥವಾ ‘ಲಿಂಗ’. ಈ ಬೆಳೆಯನ್ನು ಬೆಳೆಸಲು ಬೇಕಾದ ಮುಖ್ಯ ಶಕ್ತಿ ‘ವಿಶ್ವಾಸ’ ಅಥವಾ ಅಚಲವಾದ ನಂಬಿಕೆ. ಮಾನವನು ತನ್ನ ಶರೀರವೆಂಬ ಭೂಮಿಯಲ್ಲಿ ಭಕ್ತಿಯಿಂದ ಲಿಂಗ ತತ್ವವನ್ನು ಬೆಳೆಸಿ, ಆ ಅರಿವಿನ ಸವಿಯನ್ನುಂಡು ಸುಖಿಯಾಗಿರಬೇಕು ಎಂದು ಅವರು ಸಂದೇಶ ನೀಡುತ್ತಾರೆ. 2. ಕಾಯಕದ ಮುಗ್ಧತೆ ಮತ್ತು ಸಮರ್ಪಣಾ ಭಾವ (ವಚನ ವಿಶ್ಲೇಷಣೆ – ) ವೇದ ಶಾಸ್ತ್ರವನೋದುವುದಕ್ಕೆ ಹಾರುವನಲ್ಲ; ಇರಿದು ಮೆರೆವುದಕ್ಕೆ ಕ್ಷತ್ರಿಯನಲ್ಲ; ಬೆರಸಿ ವ್ಯವಹಾರವ ಮಾಡುವುದಕ್ಕೆ ವೈಶ್ಯನಲ್ಲ; ಉಳುವ ಒಕ್ಕಲ ಮಗನ ತಪ್ಪ ನೋಡದೆ ಒಪ್ಪುಗೊಳ್ಳಯ್ಯಾ ಕಾಮಭೀಮ ಜೀವಧನದೊಡೆಯ. • ವಿಶ್ಲೇಷಣೆ: ಶರಣರು ಚಾತುರ್ವರ್ಣ್ಯ ಪದ್ಧತಿಯನ್ನು ಮೀರಿ ನಿಂತವರು. ಮುದ್ದಣ್ಣನವರು ಇಲ್ಲಿ ತಮ್ಮನ್ನು ತಾವು ಮುಗ್ಧ ಕೃಷಿಕನೆಂದು ಗುರುತಿಸಿಕೊಳ್ಳುತ್ತಾರೆ. “ನಾನು ವೇದ ಓದುವ ಬ್ರಾಹ್ಮಣನಲ್ಲ (ಹಾರುವ), ಯುದ್ಧ ಮಾಡುವ ಕ್ಷತ್ರಿಯನಲ್ಲ, ಅಥವಾ ಲಾಭಕ್ಕಾಗಿ ವ್ಯಾಪಾರ ಮಾಡುವ ವೈಶ್ಯನಲ್ಲ. ನಾನು ಕೇವಲ ಕರಗಷ್ಟ ಪಟ್ಟು ದುಡಿಯುವ ಉಳುವ ಒಕ್ಕಲ ಮಗ” ಎಂದು ಹೆಮ್ಮೆಯಿಂದ ಹೇಳುತ್ತಾರೆ. “ಹೊಲ ಉಳುವಾಗ ನನ್ನಿಂದ ತಿಳಿಯದೇ ತಪ್ಪುಗಳಾಗಿದ್ದರೆ (ಉದಾಹರಣೆಗೆ ಮಣ್ಣಿನಲ್ಲಿರುವ ಕ್ರಿಮಿಕೀಟಗಳಿಗೆ ನೋವಾಗುವುದು), ನನ್ನ ಮುಗ್ಧತೆಯನ್ನು ಕಂಡು ನನ್ನನ್ನು ಒಪ್ಪಿಕೋ ಪ್ರಭುವೇ” ಎಂದು ದೇವರಲ್ಲಿ ಅನನ್ಯವಾಗಿ ಪ್ರಾರ್ಥಿಸುತ್ತಾರೆ. 3. ಕೃಷಿ ಪ್ರಜ್ಞೆ ಮತ್ತು ಜ್ಞಾನದ ಅರಿವು (ವಚನ ವಿಶ್ಲೇಷಣೆ – ) ಪೈರಿಗೆ ನೀರು ಬೇಕೆಂಬಲ್ಲಿ ಉಚಿತವನರಿದು ಬಿಡಬೇಕು ಕ್ರೀಗೆ ಅರಿವು ಬೇಕೆಂಬಲ್ಲಿ ಉಭಯನರಿದು ಘಟಿಸಬೇಕು… ಬೆಳೆಯ ಕೊಯಿದ ಮತ್ತೆ ಹೊಲಕ್ಕೆ ಕಾವಲುಂಟೆ ಕಾಮಭೀಮ ಜೀವಧನದೊಡೆಯ. • ವಿಶ್ಲೇಷಣೆ: ಒಬ್ಬ ಚತುರ ರೈತನಿಗೆ ತನ್ನ ಹೊಲದ ಪೈರಿಗೆ ಯಾವಾಗ, ಎಷ್ಟು ನೀರು ಹಾಯಿಸಬೇಕು ಎಂಬ ‘ಉಚಿತ’ (ಸದಸದ್ವಿವೇಕ) ಜ್ಞಾನವಿರಬೇಕು. ಅತಿಯಾದರೆ ಬೆಳೆ ಕೊಳೆಯುತ್ತದೆ, ಕಡಿಮೆಯಾದರೆ ಒಣಗುತ್ತದೆ. ಹಾಗೆಯೇ ಮನುಷ್ಯ ಮಾಡುವ ಕಾಯಕಕ್ಕೆ (ಕ್ರಿಯೆಗೆ) ಜ್ಞಾನದ (ಅರಿವಿನ) ಬೆಂಬಲವಿರಬೇಕು. ಒಮ್ಮೆ ಸಾಧಕನು ಆಧ್ಯಾತ್ಮಿಕ ಸಾಧನೆಯೆಂಬ ‘ಬೆಳೆಯನ್ನು’ ಕೊಯ್ದು ಜೀವನ್ಮುಕ್ತನಾದ ಮೇಲೆ, ಅವನಿಗೆ ಲೌಕಿಕ ಬಂಧನಗಳಾಗಲಿ ಅಥವಾ ಶರೀರದ ಕಾವಲಿನ ಹಂಗಾಗಲಿ ಇರುವುದಿಲ್ಲ ಎಂಬುದನ್ನು ಕೃಷಿಯ ಉದಾಹರಣೆಯೊಂದಿಗೆ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಒಕ್ಕಲಿಗ ಮುದ್ದಣ್ಣನವರ ಹೆಚ್ಚಿನ ಐತಿಹಾಸಿಕ ಮಾಹಿತಿ: • ಕಾಯಕವೇ ಕೈಲಾಸ ತತ್ವ: ಅವರು ಕೇವಲ ಹೊಲದಲ್ಲಿ ದುಡಿಯುತ್ತಿರಲಿಲ್ಲ, ಆ ದುಡಿಮೆಯ ಆದಾಯದಿಂದ ನಿತ್ಯವೂ ಮನೆಗೆ ಬರುವ ಶರಣರಿಗೆ, ದಾಸೋಹಿಗಳಿಗೆ ಅನ್ನದಾನ (ಜಂಗಮ ದಾಸೋಹ) ಮಾಡುತ್ತಿದ್ದರು. • ವಚನಗಳ ವಿಶೇಷತೆ: ಇವರ ವಚನಗಳಲ್ಲಿ ನೇಗಿಲು, ಕುಂಟೆ, ಎತ್ತು, ಮಳೆ, ಹೊಲ, ಕಾವಲು ಮುಂತಾದ ಕೃಷಿ ಪರಿಭಾಷೆಗಳೇ ಆಧ್ಯಾತ್ಮಿಕ ರೂಪಕಗಳಾಗಿ ಬಳಕೆಯಾಗಿವೆ. 12ನೇ ಶತಮಾನದ ಶರಣ ಚಳವಳಿಯು ಸಮಾಜದ ಕೆಳಸ್ತರದ ಕಾಯಕಜೀವಿಗಳಿಗೆ ಹೇಗೆ ಆತ್ಮಗೌರವ ಮತ್ತು ಸಾಹಿತ್ಯದ ಅಭಿವ್ಯಕ್ತಿಯನ್ನು ನೀಡಿತು ಎಂಬುದಕ್ಕೆ ಒಕ್ಕಲಿಗ ಮುದ್ದಣ್ಣನವರೇ ಸಾಕ್ಷಿ. ಶರಣ ಸಂಸ್ಕೃತಿಗೆ ಶ್ರಮವನ್ನು ಶಿವಯೋಗವನ್ನಾಗಿಸಿದ ಶ್ರೇಷ್ಠ ಶರಣ ವಚನಕಾರ ಒಕ್ಕಲಿಗ ಮುದ್ದಣ್ಣ. ಇವರ ಬದುಕೆ ಒಂದು ಮಾದರಿಯ ಪಾಠ. ಇವರು ಜಗದ ಇತಿಹಾಸದಲ್ಲಿ ಸಾವಿಲ್ಲದ ಶರಣರು. ಡಾಶಶಿಕಾಂತ ಪಟ್ಟಣ ರಾಮದುರ್ಗ ಪುಣೆ  

Read Post »

ಪುಸ್ತಕ ಸಂಗಾತಿ

ಅಶ್ಫಾಕ್ ಪೀರಜಾದೆ ಅವರ ಕೃತಿ “ಧ್ಯಾನಕ್ಕೆ ಕೂತ ಕಂಗಳಲಿ” ಒಂದು ಪುಸ್ತಕ ಮೂರು ಅಭಿಪ್ರಾಯ

ಪುಸ್ತಕ ಸಂಗಾತಿ ಅಶ್ಫಾಕ್ ಪೀರಜಾದೆ ಅವರ ಕೃತಿ “ಧ್ಯಾನಕ್ಕೆ ಕೂತ ಕಂಗಳಲಿ” ಒಂದು ಪುಸ್ತಕ ಮೂರು ಅಭಿಪ್ರಾಯ ಒಂದು ಪುಸ್ತಕ; ಮೂರು ಅಭಿಪ್ರಾಯ **** ಅಭಿಪ್ರಾಯ ಒಂದು; ಆಗಾಧ ಅರ್ಥ ತುಂಬಿದ ಬಿಡಿ ಕವಿತೆಗಳು  ಹೆಸರು: ‘ಧ್ಯಾನಕ್ಕೆ ಕೂತ ಕಂಗಳಲಿ‘  ಲೇಖಕರ ಹೆಸರು: ಶ್ರೀ ಅಶ್ಫಾಕ್ ಪೀರಜಾದೆ. ಎಚ್ ಎಸ್ ಆರ್ ಎ ಪ್ರಕಾಶನ. ಪುಟಗಳು: ೧೨೨+೪ ಬೆಲೆ: ₹೧೫೦/- ಗಜಲ್ ಗಳ ಸರದಾರ, ಕಥಾ ಬರಹದ ಸ್ಫೂರ್ತಿ, ಬಿಡಿಗವಿತೆಗಳ ಕರ್ತೃ ಗೆಳೆಯ ಅಶ್ಫಾಕ್ ಪೀರಜಾದೆಯವರ ‘ಧ್ಯಾನಕ್ಕೆ ಕೂತ ಕಂಗಳಲಿ‘ ಪುಸ್ತಕವನ್ನು ಎದುರಿಗಿಟ್ಟುಕೊಂಡು ನಾಲ್ಕು ಮಾತು ಸೇರಿಸಬೇಕೆಂಬ ಹುಕಿಯಲ್ಲಿ ನನ್ನ ಮಾತುಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ. ಶ್ರೀ ಅಶ್ಫಾಕ್ ಅವರು ಈ ಪುಸ್ತಕವನ್ನು ನನಗೆ ಪ್ರೀತಿಯಿಂದ ಕೊಟ್ಟು ತಿಂಗಳುಗಳೇ ಗತಿಸಿವೆ. ಯಾವುದೋ ಗಡಿಬಿಡಿಯಲ್ಲಿ ಈ ಪುಸ್ತಕವನ್ನು ಎಲ್ಲಿಟ್ಟಿದ್ದೇನೆಂಬುದೇ ಮರೆತು ಹೋಗಿ ಪಾಪ ಪ್ರಜ್ಞೆಯಿಂದ ಸಂಕಟಕ್ಕೀಡಾಗಿದ್ದೆ. ಕಳೆದ ವಾರ ಅಚಾನಕ್ಕಾಗಿ ಇದು ಕಣ್ಣೆದುರು ಕಂಡು ಪುಳಕಗೊಂಡೆ. ‘ಧ್ಯಾನಕ್ಕೆ ಕೂತ ಕಂಗಳಲಿ‘ ಪುಸ್ತಕದ ಒಟ್ಟು ೨೦೯ ಬಿಡಿಗವಿತೆಗಳನ್ನು ಬಿಡಿಬಿಡಿಸಿ ಓದಿ ಈಗ ಇಲ್ಲಿ ಅವುಗಳನ್ನು ನನ್ನ ಅರ್ಥ ವ್ಯಾಪ್ತಿಯಲ್ಲಿ ಬಿಡಿಸಲೆತ್ನಿಸುತ್ತಿದ್ದೇನೆ.  ಪುಸ್ತಕದ ಆರಂಭದಲ್ಲೇ ಹ್ಯಾಟ್ರಿಕ್ ಸಾಧಿಸಿ ಬೀಗಿದ್ದಾರೆ ಕವಿಗಳು. ಮೊದಲ ಮೂರು ಬಿಡಿಗವಿತೆಗಳು ಮಾತು ಮೌನದ ಪರಿವ್ಯಾಖ್ಯೆಯನ್ನು, ಮುಗಿಲ ಹನಿಗಳು ಅಣಿಮುತ್ತುಗಳಾದ ಪರಿಯನ್ನು, ಕತೆಗಾರನ ಪಾತ್ರಗೊಳಡನಾಟದ ಬಗೆಯನ್ನು ಲೀಲಾಜಾಲವಾಗಿ ವರ್ಣಿಸಿದ್ದಾರೆ. ಏಳನೇ ‘ಬಿಡಿ‘ಯಲ್ಲಿ “ನಿನ್ನಂತೆ ಹೃದಯ ಚುಚ್ಚೋ ಮುಳ್ಳು ಹುಡುಕಿದರೂ ಸಿಗದು ಅದಕೆ ನೀ ಹೂವಿಗಿಂತಲೂ ಮಿಗಿಲು” ಎಂಬಲ್ಲಿ ಹೂವಾಗಿ ಚುಚ್ಚುವ ವಿಡಂಬನೆಯನ್ನು ಸೂಚ್ಯವಾಗಿ ತಿಳಿಸಿದ್ದಾರೆ. ಅವಳು ಇದ್ದರೂ ಇಲ್ಲದಿದ್ದರೂ ಕವನ ಹುಟ್ಟುವ ಪವಾಡವನ್ನು ಕವಿ ಸಹಜೀಕರಿಸಿದ್ದಾರೆ ತಮ್ಮ ಹತ್ತನೆ ‘ಬಿಡಿ‘ಯಲ್ಲಿ. ಹದಿನೈದನೇ ‘ಬಿಡಿ‘ಯಲ್ಲಿ “ಕಲ್ಪನೆ ಮುಗಿಲು ವಾಸ್ತವ ನೆಲ ಇವೆರಡರ ಸಮಾಗಮ ಕವನ!” ಎಂದು ಸಾರಿ ನೆಲಮುಗಿಲಿನ ಸಂಬಂಧವನ್ನು ಕಾವ್ಯಾತ್ಮ(ಕ)ವಾಗಿ ಬಿಡಿಸಿದ್ದು ಸಿಕ್ಸರ್ ಹೊಡೆದಂತಿದೆ.  ಸಂಗಾತಿಯ ನಗುವಿನ ಹೊಳಹಿನ ಮುಂದೆ ನೇಸರ ಬೆಳಗನ್ನು ಕವಿ ನಿವಾಳಿಸಿ ಒಗೆದಿದ್ದಾರೆ ಹದಿನೆಂಟನೇ ‘ಬಿಡಿ“ಯಲ್ಲಿ. ಇಪ್ಪತ್ನಾಲ್ಕರ ‘ಬಿಡಿ‘ ಕಾಲಾಂತರದಲ್ಲಿ ಪ್ರವಾದಿಗಳ ಉದಯದ ಸುಳುಹನ್ನು ನೀಡಿದ್ದಾರೆ. ಕತೆಯೋ ಕವನವೋ ಏನಾದರೊಂದು ಸೃಜಿಸಬೇಕು ಬರಹಗಾರನ ಸಾರ್ಥಕ್ಯಕ್ಕೆ ಎಂದು ಬರಹಗಾರನ ತುಡಿತ ಮತ್ತು ರಚನೆಯ ಉದ್ಭವದ ಸಾಧ್ಯತೆಯನ್ನು ತೆರೆದಿಟ್ಟಿದ್ದಾರೆ ಕವಿ ಸಹಜೀಕರಿಸಿದ್ದಾರೆ ಮೂವತ್ತೆರಡರ ‘ಬಿಡಿ‘ಯಲ್ಲಿ.  ಮೂವತ್ತಾರರ ‘ಬಿಡಿ‘ ”ಅಂತ:ಕರಣದಲಿ ಉಕ್ಕುವ ಕರುಣೆ ನಿಷ್ಕಾರುಣ್ಯದ ಕಣ್ಣಲ್ಲಿ ಹೇಡಿ” ಕವಿ ಪದಗಳೊಡನೆ ಆಟವಾಡುವ ಜಾದೂ ದರ್ಶಿಸಿದರೆ ನಲವತ್ತೊಂದರ ‘ಬಿಡಿ‘ “ಕವಿತೆ ಅರಳಿಸಬೇಕೆಂದು ನಿಶ್ಚಯಿಸಿ ನನ್ನೇ ನಾ ಒತ್ತಾಯಿಸಿಕೊಂಡಾಗ ಕವಿತೆ ಒಲಿದಳೇ? ಸ್ಫೂರ್ತಿ ಸಿಕ್ಕಿದಾಗಲೆಲ್ಲ ಬೇಡಬೇಡವೆಂದರೂ ಹೊಳೆಯಾಗಿ ಹರಿದಳು!” ಎಂದೆನ್ನುತ್ತ ಕಾವ್ಯೋಗಮದ ಚಮತ್ಕಾರ ಸಾಬೀತುಪಡಿಸಿದ್ದಾರೆ.  ಐವತ್ತನೇ ‘ಬಿಡಿ‘ಯಂತೂ “ಪತಿಯ ಸಾವಿನ ಬಳಿಕ ಎಲ್ಲ ಮುಗಿಯಿತೆಂದುಕೊಂಡವಳು ನವವರ್ಷದ ಮೊದಲ ದಿನ ಕ್ಯಾಲೆಂಡರ್ ಕೊಂಡಳು” ಎಂದು ಬರೆಯಿಸಿಕೊಂಡು ಜೀವನ್ಮುಖಿಯಾಗುವ ಅನಿವಾರ್ಯತೆಯನ್ನು ಎತ್ತಿ ಹಿಡಿದರೆ ಅರವತ್ಮೂರರ ‘ಬಿಡಿ‘ “ನೀ ಕೊರೆದ ಕಂಬೆಳಕಿಗೆ ಬೆಂಕಿ ಬಿದ್ದಿದೆ ಕಾಪಿಟ್ಟ ಹೊಂಗನಸುಗಳು ಸುಟ್ಟು ಭಸ್ಮವಾಗಿವೆ” ಎಂದು ಹೇಳಿ ತಾಪದ ಭೀಕರ ಪರಿಣಾಮ ತೋರಿಸಿದೆ. ಇಲ್ಲಿ ‘ಕಂಬೆಳಕು‘ ಅನ್ನುವ ಪದ ಓದುಗರಲ್ಲಿ ರೋಮಾಂಚನ ಉಂಟು ಮಾಡುತ್ತದೆ.  ಎಂಬತ್ತನೆ ‘ಬಿಡಿ‘ ಕರ್ತೃ ಕೇವಲ ನಿಮಿತ್ತ ಮಾತ್ರ; ಕೃತಿ ಚಿರಂತನವಾದದ್ದು ಎಂಬ ಸಾಲೋಕ್ತಿ ಚಿಂತನೆಗೆ ದೂಡಿದರೆ ತೊಂಬತ್ತೊಂದನೆ ‘ಬಿಡಿ‘ ಹಗಲಿನ ಗಾಯವನ್ನು ‘ಅಮವಾಸೆ‘ಗೆ ಹೋಲಿಸಿ  ಅದ್ಭುತ ರೂಪಕ ದಯಪಾಲಿಸಿದ್ದಾರೆ ಕವಿ.  ತೊಂಬತ್ತೈದನೆ ‘ಬಿಡಿ‘ “ವಿಶ್ವವಿದು ವಿಷ ವರ್ತುಲವಾದರೆ ನಾವು ಅಮೃತ ಬಿಂದುಗಳಾಗೋಣ” ಎಂಬ ವಿಷದಲ್ಲೂ ಅಮೃತತ್ವವನ್ನು ಬಿಚ್ಚಿಟ್ಟು ತತ್ತ್ವವನ್ನು ಉಣಬಡಿಸಿದರೆ ನೂರಾ ನಾಲ್ಕನೆ ‘ಬಿಡಿ‘ ವಲಸೆಯ ಕರುಣಾಜನಕ ಕಥೆಯನ್ನು ತುಂಬಾ ಆರ್ದೃವಾಗಿ ಹೇಳಿದ್ದು ಕಣ್ಣು ಮಂಜಾಗಿಸುತ್ತವೆ “ಆನೆ ಒಂಟೆ ಕುರಿ ಮೇಕೆ ಮುಂದೆ ಕಟ್ಟಿಕೊಂಡು ಗುಳೆ ಹೊರಟನು ಮಳೆರಾಯ!” ನೂರಾ ಹದಿನಾಲ್ಕನೇ ‘ಬಿಡಿ‘  ಅವಸರದ ರಚನೆ ಗರ್ಭಪಾತಕ್ಕೆ ಸಮ ಎಂದು ಹೇಳಿದರೆ ನೂರಾ ಇಪ್ಪತ್ತೊಂದನೆ ‘ಬಿಡಿ‘ “ನಾಕದಾಸೆಗೆ ಅವರು ನಡೆದರು ಪ್ರಾರ್ಥಿಸಲು ನಾ ನಡೆದೆ ಪಾಪಿ ಮನಗಳಲಿ ಬೆಳಕು ಹುಡುಕಲು” ಎಂಬ ಸಾಲಂತೂ ತತ್ತ್ವಜ್ಞಾನವನ್ನು ಸಾರಿ ನೂರಾ ಮೂವತ್ತೊಂದನೆ ‘ಬಿಡಿ‘ ಕಾವ್ಯದೋದು ಒಂದು ರಸಘಳಿಗೆಗೆ ಸಮ; ಅದು ನಡುರಾತ್ರಿಯ ಗಲ್ಲ ಕಚ್ಚಿ ಕಚಗುಳಿ ಇಡುವಂತಿರಬೇಕು ಎಂದು ಉಲ್ಲೇಖಿಸಿ ರಸಜ್ಞತೆಯ ಪರಿಧಿ ತೋರಿಸಿದ್ದಾರೆ.  ನೂರಾ ಮೂವತ್ತೆರಡರ ‘ಬಿಡಿ‘ಯಂತೂ ಕ್ರಾಂತಿಯನ್ನೆ ಮಾಡಿದೆ-“ನಿನ್ನ ಕೆನ್ನೆಯ ಗುಳಿಯಲಿ ಸಮುದ್ರದ ಸುಳಿಯಿದೆ” ಎಂದು ಹೇಳುವ ಮೂಲಕ! ನೂರಾ ನಲವತ್ತೊಂದನೆ ‘ಬಿಡಿ‘ ಜೀವನದ ನಶ್ವರತೆಯನ್ನು ತುಂಬಾ ಅರ್ಥಪೂರ್ಣವಾದ ಉಪಮೆಯೊಂದಿಗೆ ನಿರೂಪಿಸಿದ್ದಾರೆ.  “ಒಮ್ಮೊಮ್ಮೆ ಕವಿ ಕವಿತೆ ವಿಷವಾಗಿ ಕಕ್ಕುತ್ತಾನೆ ಆದರೆ ಕವಿತೆ ಹೂವಿನಂತೆ ನಯವಾಗಿ ಪ್ರೀತಿಯಿಂದ ಅರಳುತ್ತದೆ” ಎಂದು ನೂರಾ ನಲವತ್ತೇಳನೆ ‘ಬಿಡಿ‘ ಹೇಳಿ ಕವಿತೆಯ ಅದ್ಭುತ ಸಾಧ್ಯತೆಗಳನ್ನು ವಿಶದೀಪಡಿಸಿದೆ. ನೂರಾ ಅರವತ್ತೆಂಟನೆ ‘ಬಿಡಿ‘ “ಬದುಕು ಹಣ್ಣಾದಷ್ಟು ರುಚಿ! ಅದರಲ್ಲಿ ಹುಳುಗಳದೇ ಸಿಂಹಪಾಲು” ಎಂದು ಹೇಳುವ ಮೂಲಕ ಕವಿ ‘ಸುಖ‘ದ ಅಪಾಯ ಮತ್ತು ಮಿತಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ಕೊಟ್ಟಿದ್ದಾರೆ.  ನೂರಾ ಎಪ್ಪತ್ಮೂರರ ‘ಬಿಡಿ‘ ಕವಿತೆ ಹುಟ್ಟುವ ಹಿಂದೆ ಮಿತ್ರನಷ್ಟೆ ಶತ್ರುವೂ ಮುಖ್ಯ ಎಂದು ಹೇಳಿದರೆ ಎರಡು ನೂರಾ ನಾಲ್ಕರ ‘ಬಿಡಿ‘ “ಕಾಗದದಲಿ ದಾಖಲಿಸಿದ್ದೇ ಸಾಹಿತ್ಯವಾಯ್ತು ಹೃದಯದಲಿ ಉಳಿದುದಕೆ ಓದುಗನಾರು?” ಎಂದು ಪ್ರಶ್ನಿಸಿ ಕವಿತೆಯ ಅಮೂರ್ತ ರೂಪದ ವಿರಾಟ ದರ್ಶನವನ್ನು ಓದುಗರಿಗೆ ಮಾಡಿಸಿದ್ದಾರೆ. ಇಲ್ಲಿ ಪ್ರಾತಿನಿಧಿಕವಾಗಿ ಕೆಲವು ‘ಬಿಡಿ‘ಗಳನ್ನೆ ಉಲ್ಲೇಖಿಸಬೇಕೆಂದುಕೊಂಡರೂ ಅವುಗಳ ಸಂಖ್ಯೆ ೨೭ನ್ನು ತಲುಪಿದೆ ಎಂದರೆ ಈ ‘ಬಿಡಿ‘ಗಳ ಅಗಾಧತೆಯನ್ನು ಓದುಗರು ಕಲ್ಪಿಸಿಕೊಳ್ಳಬಹುದು. ಕವಿ ಅಶ್ಫಾಕ್ ಅವರ ಕಾವ್ಯ ಪ್ರೇಮ ಬಹಳ ದೊಡ್ಡದು. ಅದಕ್ಕೆ ಅವರು ನಡೆಸಿದ ಕೃಷಿಯೂ ಸಾವಯವ ಪದ್ಧತಿಯದೆ. ತಮ್ಮ ವೃತ್ತಿಯ ಕಾರ್ಯ ವ್ಯಾಪ್ತಿಯ ಗದ್ದಲದ ನಡುವೆಯೂ ಅಶ್ಫಾಕರು ಇಂಥ ಕವಿತೆಗಳ ಉಗಮಕ್ಕೆ ಕಾರಣರಾಗುತ್ತಾರೆ ಎಂದರೆ ಅವರ ರಸಾಗ್ರತೆಯ ಸೀಮೆಯನ್ನು ಓದುಗ ಮಹಾಶಯ ಅಂದಾಜಿಸಿಕೊಳ್ಳಬಹುದು. ಈ ಕೆಲಸಕ್ಕೆ ಕಿರೀಟ ಪ್ರಾಯವಾದ ಘಟನೆ ಏನೆಂದರೆ ಪುಟಪುಟದಲ್ಲೂ(೨೦೯ ಪುಟಗಳು)ಅದ್ಭುತ ಕಲಾವಿದ ಶ್ರೀ ಜಬೀವುಲ್ಲಾ ಅಸದ್ ಅವರ  ರೇಖಾಚಿತ್ರಗಳು! ಜನಾಬ್ ಅಸದ್ ಅವರು ಜನಾಬ್ ಅಶ್ಫಾಕ್ ಅವರೊಂದಿಗೆ ಸೇರಿ ಈ ಬಿಡಿಗವಿತೆಗಳನ್ನು ರಚಿಸಿದ್ದಾರೆ ಎನ್ನುವಷ್ಟರ ಮಟ್ಟಿಗೆ ರೇಖಾಚಿತ್ರಗಳು ಒಂದರನೊಡನೆ ಇನ್ನೊಂದು ಸಾಪೇಕ್ಷವಾಗಿವೆ!  ಅಲ್ಲಲ್ಲಿ ಕತ್ತೆತ್ತಿ ತೋರುವ ಮುದ್ರಾ ರಾಕ್ಷಸನ ಹಾವಳಿಯನ್ನು ಕಡೆಗಣಿಸಿ ರಸಿಕರು ಓದಿಗೆ ಈ ಪುಸ್ತಕವನ್ನು ಕೈಗೆತ್ತಿಕೊಂಡು ತಮ್ಮ ರಸಘಳಿಗೆಗೆ ಖಂಡಿತವಾಗಿಯೂ ನೀರುಣಿಸಿ ಪೋಷಿಸಬಹುದು ಎಂದು ಧೈರ್ಯವಾಗಿ ಹೇಳಬಹುದು. *ರವೀಂದ್ರ ಮುನ್ನೋಳಿಮಠ*         – ಧಾರವಾಡ ಅಭಿಪ್ರಾಯ ಎರಡು; ಚಿಕ್ಕ ಸಾಲುಗಳಲ್ಲಿ ಸಾಗರದಷ್ಟು ಭಾವನೆ             ಅಶ್ಫಾಕ್ ಪೀರಜಾದೆ ಅವರ ಕಲ್ಪನೆಯ ಕುಸುಮ ” ಧ್ಯಾನಕ್ಕೆ ಕೂತ,,,,,,,”  ಸಂಕಲನದಲ್ಲಿ ಚಿಕ್ಕ ಚಿಕ್ಕ ಸಾಲುಗಳಲ್ಲಿ ಸಾಗರದಷ್ಟು ಭಾವನೆ ತುಂಬಿದ್ದಿರಿ, “ಹೃದಯದ ಬೆಂಕಿಗೆ ಅಗ್ನಿಶಾಮಕದಳ ಎನುಮಾಡಿತು?”       ಸಾಲು ಓದಿ ಒಂದು ಕ್ಷಣ “ಮನ”  ಮೌನ  ಕ್ಕೆ ಸಾಗಿದರೆ,,,  ಮೆಹಂದಿಯ ಕೈಗೆ… ರಕ್ತ ಚಿತ್ತಾರ ”  ವಾಸ್ತವದ ಕ್ರೌರ್ಯಕ್ಕೆ ತಲ್ಲಣಗೊಳ್ಳುತ್ತದೆ ,  “ರೊಷವನ್ನು ಸುಟ್ಟು….ಕಪ್ಪು ವಜ್ರ ವಾಗಲಿ”   ಶಾಂತಿ ಸಲಹೆಗೆ ಹಚ್ಚುವ  ಮಲಾಮು,  “ಹಸಿವಿನ ಅನುಭವ,, ಬಡವರ ಬವಣೆ ”   ಭಂಡರಿಗೆ  ಚಾಟೀಯೇಟು ….  “ಮಡದಿಯ ಮುನಿಸು” ” ತಾಯಿಯ ನೆನಪು ” ಇತ್ಯಾದಿ ಇತ್ಯಾದಿಯ ಈ ಅದ್ಭತ ಅಕ್ಷರ ಜೋಡಣೆ ಸಾಲಿಗೆ, ನನ್ನಬಳಿ ಮೌನ ಒಂದೇ !    ಕವಿ ರಸಿಕತನದ ಸುವಾಸನೆ ಹಲವು ಕಡೆ ಚಿಮ್ಮಿಸಿ,ನನ್ನಂತ ನಿವೃತ್ತಿ ಮನಸ್ಸಿಗೂ ಮದ ನೀಡುವಂಥದ್ದು,     ಒಟ್ಟಾರೆ ಮತ್ತೆ, ಮತ್ತೆ,ಓದುವಂತೆ ಮಾಡುವ ಈ ಕೃತಿ ಕವಿಯ” ಧ್ಯಾನ” ಮನಸಿನ ಕಂಗಳಿಂದ ಸದಾ ಪ್ರಕಟವಾಗುತ್ತಿರಲಿ  ಎಂದು ಬಯಸುವ… ತಮ್ಮ  ಡಾ. ಬಿ ಪಿ ಹಿರೇಮಠ ಧಾರವಾಡ ಅಭಿಪ್ರಾಯ ಮೂರು; ಹೃದಯದಲ್ಲಿ ಪಿಸು ಮಾತಾಡುವ ಹನಿಗವಿತೆಗಳು ಹೃದ್ಯವಾಗುವ ಚಿಕ್ಕ ಸಾಲುಗಳನ್ನು ಓದಿದಾಗ ಹಲವು ಸಮಯದವರೆಗೂ ತರಂಗದಂತೆ ಶಬ್ಧ ಮಾಡುತ್ತಲೇ ಇರುವಂತಹವು.ಚಿಕ್ಕ ಪದಗಳ ಒಳಗೆ ವಿಸ್ತಾರವಾದ ಅರ್ಥದ ಹೂರಣವನ್ನು ತುಂಬುವಲ್ಲಿ ಯಶಸ್ವಿಯಾಗಿದ್ದಾರೆ ಲೇಖಕ, ಕವಿ, ಬರಹಗಾರರಾದ ಶ್ರೀ Ashfaq Peerzade ಧಾರವಾಡ ಅವರು‌. ಮೊನ್ನೆ ಮನ್ನೆ ಕಳಿಸಿದ ಹನಿಗವಿತೆಗಳ ಸುಂದರ ಸಂಕಲನ ಕೈ ಸೇರಿ ಒಂದೇ ದಿನದೊಳಗೆ ಓದಿ ಮುಗಿಯಿತು.ಬಹಳ ಸ್ವಾರಸ್ಯಕರವಾದ ಚಿಕ್ಕ ಸಾಲುಗಳು ಇಲ್ಲಿವೆ. ಭಾವಾಂತರಂಗದೊಳಗೆ ಬಂಧಿಸಲ್ಪಟ್ಟ ಪದಗಳ ವೈಖರಿ ಬಹಳ ಇಷ್ಟವಾಗುತ್ತದೆ. ಸರಿಯಾಗಿ ಆತ್ಮಾವಲೋಕನ ಮಾಡಿಕೊಂಡರೆ ಇಲ್ಲಿನ ಸಾಲುಗಳು ಯಾವುದೋ ಲೋಕದತ್ತ ನಮ್ಮನ್ನು ಹೊತ್ತೊಯ್ಯುವುದು ಖಚಿತ. ಹೀಗಾಗಿಯೇ ಕವಿ ತುಂಬಾ ಜಾಣತನದಿಂದ ಪುಸ್ತಕಕ್ಕೆ “ಧ್ಯಾನಕ್ಕೆ ಕೂತ ಕಂಗಳಲಿ“ ಎಂಬ ಶಿರೋನಾಮೆಯನ್ನು ಇಟ್ಟಿರುವುದು. ಕೆಲವನ್ನು ಇಲ್ಲಿ ಹೆಚ್ಚು ಇಷ್ಟವಾದ ಸಾಲುಗಳನ್ನು ನಮೂದಿಸಲು ಪ್ರಯತ್ನ ಪಟ್ಟಿದ್ದೇನೆ. ಉದಾಹರಣೆಗೆ “ಪ್ರೇಮಿಗಳ ಹೃದಯ ಸೀಳುವ  ಹತಾರಗಳು ಮಾಯವಾಗಲಿ ಕವಿ ಕನಸಿನ ಪ್ರೇಮ ಸಾಮ್ರಾಜ್ಯ ಉದಯವಾಗಲಿ“ ಎನ್ನುವಲ್ಲಿ ಜಾತಿ ಧರ್ಮದ ನೆಪವೊಡ್ಡಿ ಅರಳಿದ್ದ ಪ್ರೇಮ ವೈಫಲ್ಯ ಕಾಣದಿರಲಿ.ಕವಿ ಕನಸಿಗೆ ಹೊಂದಿಕೊಂಡ ಪ್ರೇಮ ವಿಶಾಲವಾಗಿ ಅರಳಿ ಸಾಮ್ರಾಜ್ಯವಾಗಲಿ ಎಂಬ ಆಶಯದ ಭಾವ ಇಷ್ಟವಾಗುತ್ತದೆ. ಜೀವನ ನಿಂತ ನೀರಲ್ಲ.ಪ್ರೇಮಕ್ಕೆ ಜಾತಿಯ ಅಡ್ಡಗೋಡೆ ಸಲ್ಲದು.ಅದು ಎರಡು ಮನಸ್ಸುಗಳು ಇಷ್ಟ ಪಟ್ಟಾಗ ಮಾತ್ರ ಬೆಳೆದು ಹೂಗಳಂತೆ ಅರಳಿ ಘಮಿಸುವುದು.ಹೃದಯದೊಳಗೆ ಪಿಸು ನುಡಿಗಳನ್ನಾಡುವುದು.ಅದನ್ನು  ಹೊಸಕಿ ಹಾಕುವುದು ಬೇಡ ಎಂಬ ಅವರ ಸವಿನಯದ ಕೋರಿಕೆಯುಳ್ಳ ಈ ಹನಿಗವಿತೆಯಂತೆಯೇ ತುಂಬಾ ಸಾಲುಗಳು ಇಲ್ಲಿವೆ. “ಬಾಳಿನುದ್ದಕ್ಕೂ ಅರಳಿದ ಹೂಗಳು ಚುಚ್ಚಿದ ಮುಳ್ಳುಗಳೇ ನನ್ನಂತರಂಗದಿ  ಉದಿಸಿದ ಕಾವ್ಯಗಳು“ ಎಂತಹ ನೋವಿಂದ ಕೂಡಿದ ಸಾಲುಗಳಿವು! ಮೌನದೊಳಗೆ ಅವಿತಿದ್ದ ನೋವಿನೆಳೆಗಳು ನೂರಾರು ತಾಪತ್ರಯದ ಗೋಡೆ ಏರಿ ಬಂದು ನಿಂತ ಪದಗಳ ಪೋಣಿಕೆಯಾದಾಗ ಇಂತಹ ಸಾಲುಗಳು ಉದಯಿಸುತ್ತವೆ.ಕವಿ ಅಂತರಂಗದಲ್ಲಿ ನೋವುಂಡು ಬಾಹ್ಯ ಪ್ರಪಂಚಕ್ಕೆ ನಗುವಿನ ಮುಖವಾಡ ಹಾಕಿಕೊಳ್ಳುವುದು ಇಲ್ಲಿ ಗೋಚರವಾಗುತ್ತದೆ. “ಕಾವ್ಯವೆಂದರೆ ಸುಂದರವಾದ  ಪದಪುಂಜಗಳ ಪೋಣಿಸಿ ಭಾವನೆಗಳಿಗೆ ಅಂಗಿ ತೊಡಿಸುವುದೇ? ಅಲ್ಲ ಇದ್ದ ಬಟ್ಟೆಗಳನ್ನೆಲ್ಲ  ಕಳಚಿ ಬೆಳಕಿನಲ್ಲೂ ಬೆತ್ತಲಾಗುವುದು!” ಅತ್ಯಂತ ಸುಂದರವಾದ ಸಾಲುಗಳೊಳಗೆ ತೆರೆದ ಮನಸ್ಸಿಂದ ಬಂದ ಅರ್ಥಸಾದೃಶ್ಯದ ಸಾಲುಗಳ ಗುಚ್ಚ ಕಾವ್ಯವಾಗಬೇಕು.ಅದಕ್ಕೆ ಗಡಿಯೊಳಗಿನ ಮಿತಿ ಸಲ್ಲದು. ಕಾವ್ಯ ಇವೆಲ್ಲವುಗಳ ದಾಟಿ ವಿಶಾಲ ಭಾವನೆಯಿಂದ ಕಟ್ಟಿಕೊಳ್ಳುವ ಹಿತವಾದ ಗೂಡಾಗಬೇಕು.ಆಗ ಕಾವ್ಯ ಕನ್ನಿಕೆ ನಕ್ಕಾಳು ಎಂಬ ಸದಾಶಯ ಬೀರುವ ಇಂತಹುದೇ ಸಾಲುಗಳಿಂದ ತುಂಬಿಕೊಂಡ ಹನಿಗವಿತೆಯ ಸಂಕಲನ  *ಧ್ಯಾನಕ್ಕೆ ಕೂತ ಕಂಗಳಲಿ* ಇಂತಹ ಕವನ ಸಂಕಲನಗಳು ದಾಪುಗಾಲಿಡುತ್ತ ಇವರ ಶಾಯ್ಮೊಳೆಯಿಂದ ಈ ಹಿಂದೂ  ಮೂಡಿ ಬಂದಿವೆ.ಮುಂದೆಯೂ ಮೂಡಿ ಬರುತ್ತವೆ ಎಂಬ ನಂಬಿಕೆ ನನಗಿದೆ.ಎಲ್ಲವೂ ಗಟ್ಟಿಯಾದ ಸಾಹಿತ್ಯದಿಂದ ಈ ಸಮಾಜಕ್ಕೆ ಏನಾದರೂ ಸಂದೇಶ ನೀಡುವಂತಹವುಗಳೇ ಆಗಿವೆ. ಆದರೆ ಡಿಟಿಪಿ ಅಥವಾ ಟೈಪಿಂಗ್ ನಲ್ಲಿ ಪ್ರತೀ ಕವಿತೆಯಲ್ಲೂ ಅಕ್ಷರದ ದೋಷ ಎದ್ದು ಕಾಣಿಸುತ್ತದೆ. ಈ ದಿಶೆಯತ್ತ ಇವರು ಗಮನ ನೀಡದೆ ಹೋದರೆ ಗಟ್ಟಿ ಸಾಹಿತ್ಯವಿದ್ದೂ ನಿಜವಾದ ಸಂಗತಿ ಹೇಳುವುದರಲ್ಲಿ ಪೊಳ್ಳಾಗುವ ಸಾಧ್ಯತೆ ಇದೆ. ಇದರ ಬಗ್ಗೆ ಕವಿ ಇನ್ನು ಮುಂದೆ ಹೆಚ್ಚಿನ ಗಮನ ನೀಡಬೇಕಾಗಿದೆ. ಇನ್ನು ಮುಂದೆಯೂ ಇವರ ಇಂತಹ ಬರಹಗಳು ಹೆಚ್ಚೆಚ್ಚು ಮೂಡಿ ಬಂದು ನನ್ನಂತಹ ಸಾಮಾನ್ಯ ಓದುಗನ  ಹೃದಯಕ್ಕೂ ಸ್ಪರ್ಶಿಸುವಂತಾಗಲೆಂದು ಕೋರುತ್ತೇನೆ.  ಅಶ್ಪಾಕ್ ಗುರುಗಳಿಗೆ ಶುಭನಮನಗಳು. ಒಳ್ಳೆಯ ಹನಿಗವಿತೆಯುಳ್ಳ ಈ ಪುಸ್ತಕಗಳನ್ನು

ಅಶ್ಫಾಕ್ ಪೀರಜಾದೆ ಅವರ ಕೃತಿ “ಧ್ಯಾನಕ್ಕೆ ಕೂತ ಕಂಗಳಲಿ” ಒಂದು ಪುಸ್ತಕ ಮೂರು ಅಭಿಪ್ರಾಯ Read Post »

ಕಥಾಗುಚ್ಛ

ಶ್ರೀಧರ ಗಸ್ತಿ ಅವರ ಸಣ್ಣ ಕಥೆ “ಕುಂಟಲಗಿತ್ತಿ”

ಕಥಾ ಸಂಗಾತಿ ಶ್ರೀಧರ ಗಸ್ತಿ “ಕುಂಟಲಗಿತ್ತಿ”   ‌        ಮುರಗಾಲೆಪ್ಪನ ಧ್ವನಿ ಕ್ಷೀಣಿಸುತ್ತಿತ್ತು. ಹೆಂಡತಿ ಪಾರ್ವತಿ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದಳು. ಆಕೆಯ ಸ್ಥಿತಿ ಕಂಡ ಕ್ಷಣವೇ ಆತನ ಉಸಿರು ಗಂಟಲಲ್ಲೇ ಸಿಕ್ಕಿಕೊಂಡಿತ್ತು. “ಯಾರಾದ್ರೂ ಕಾಪಾಡ್ರಿ…” ಎನ್ನುವ ಆತನ ಕೂಗು ಮನೆಯ ಗೋಡೆಗಳನ್ನು ದಾಟಿ ಹೊರಗೆ ಹೋಗಲೇ ಇಲ್ಲ. ಮುರಗಾಲೆಪ್ಪ ಅಂಗವಿಕಲ. ಸದಾ ಮೂರುಗಾಲಿಯನ್ನೇ ಆಶ್ರಯಿಸಿಕೊಂಡು ಬದುಕಿದವ. ಹೀಗಾಗಿ ಅವನ ನಿಜ ಹೆಸರು ಮರೆತು, ಊರಿಗೇ ಅವನು “ಮುರಗಾಲೆಪ್ಪ”ನಾಗಿಬಿಟ್ಟಿದ್ದ. ವಯಸ್ಸು ಮಾಗುತ್ತಿದ್ದರೂ ಮದುವೆ ಕೂಡಿ ಬಂದಿರಲಿಲ್ಲ. ಪಾರ್ವತಿಯೂ ಅಂಗವಿಕಲಳೇ. ಆದರೆ ಅದು ಮೊದಲ ನೋಟಕ್ಕೆ ಕಾಣಿಸುವಂತಿರಲಿಲ್ಲ. ಸ್ವಲ್ಪ ಓರೆಯಾಗಿ ನಡೆಯುತ್ತಿದ್ದಳು. ಕಪ್ಪು ಮೈಬಣ್ಣ, ದುಂಡನೆಯ ಮುಖ—ಆಕೆಯ ಸೌಂದರ್ಯ ರೂಪದಲ್ಲಿರಲಿಲ್ಲ; ಆಕೆಯ ಚುರುಕು ಮಾತುಗಳಲ್ಲಿ ಎದ್ದು ಕಾಣುತಿತ್ತು. ಒಂಟಿತನ ಕಾಡದಿರಲೆಂದು ಆಕೆ ಮುರಗಾಲೆಪ್ಪನನ್ನು ವರಿಸಿದ್ದಳು. ಗುಡಿಸಲಿನ ಚಾಪೆಯಡಿಯಲ್ಲಿ ಟೀ ಅಂಗಡಿ, ಮೂರುಗಾಲಿಯ ಗಾಡಿ—ಅಷ್ಟೇ ಮುರಗಾಲೆಪ್ಪನ ಆಸ್ತಿ. ಆದರೆ ಪಾರ್ವತಿ ಬಂದ ಮೇಲೆ ಆ ಚಿಕ್ಕ ಟೀ ಅಂಗಡಿಯೇ ನಿಧಾನವಾಗಿ ಹೊಟೇಲಾಗಿಬಿಟ್ಟಿತ್ತು. ಅಂತವಳು ಇಂದು ರಕ್ತದ ಮಡುವಿನಲ್ಲಿ ಒದ್ದಾಡುತಿದ್ದಳು. ರಾಯಣ್ಣ ಇದ್ದಿದ್ದರೆ ಅದರ ಕಥೆಯೇ ಬೇರೆ ಆಗುತಿತ್ತು. ಹೊಂಚು ಹಾಕಿ ಸಂಚು ಮಾಡಿ ಪಾರ್ವತೀನ ಹೊಡೆದದ್ದು ಊರ ತುಂಬಾ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಗಟ್ಟಿಗಿತ್ತಿ ಪಾರ್ವತಿ ಕೊಲೆ ಆಗೋದಂದ್ರೆ ಏನು,ಎನ್ನುವಂತೆ ಮಾತನಾಡುತಿದ್ದರು. ಆಕೆಯ ದಿಟ್ಟತನದ ವ್ಯಕ್ತಿತ್ವ ನೆನೆಸಿಕೊಳ್ಳುತ್ತಲೇ ಮುರಗಾಲೆಪ್ಪ ಕುಸಿದು ಬಿಟ್ಟ.              ರಾಜವಾಡೆ ಅಂದರೆ ಅದೇನು ರಾಜರಿಂದ ತುಂಬಿ ತುಳುಕುವ ಆಸ್ಥಾನವಾಗಿರಲಿಲ್ಲ. ಕಡುಬಡವರಿಂದ ತುಂಬಿಕೊಂಡ ಸ್ಲಂ ಏರಿಯಾ. ಆವತ್ತು ದುಡಿದು ಆವತ್ತೇ ತಂದು ತಿನ್ನುವ ಜನಾಂಗ. ಇದ್ದರೂ ಇಲ್ಲದಿದ್ದರೂ ರಾಜನಂತೆ ಸದಾ ನೆಮ್ಮದಿಯಿಂದ ಇರುವ ಜನಾಂಗ. ಇವರನ್ನು ನೋಡಿಯೇ ರಾಜವಾಡೆ ಹೆಸರು ಬಂದಿರಬೇಕು ಅನಿಸುತ್ತದೆ. ತಮಗೆ ತಾವೇ ನಿರ್ಮಿಸಿಕೊಂಡ ಮನೆಗಳು. ಜಾತಿಗಿಂತ ಸ್ಲಂ ಏರಿಯಾ ಅನ್ನೋದೇ ಪ್ರಧಾನ. ಸದಾಶಿವ, ಕೆಂಪ, ಭೀಮಣ್ಣ ಸೂರ ಇವರೆಲ್ಲ ಮುಖ್ಯವಾಗಿ ಕಾಣುವಂತಹ ವ್ಯಕ್ತಿಗಳು. ಇದರಲ್ಲಿ ಸದಾಶಿವನ ಸಾಕು ಮಗಳೇ  ನಂದಿನಿ. ಅನಾಥನಿಗೆ ಅನಾಥ ಶಿಶು ಸಿಕ್ಕಿದ್ದರಿಂದ;ಮಗಳಂತೆ ಬೆಳೆಸಿದ.‌  ಅವಳಿಗೆ ಎಂದಿಗೂ ಅನಾಥ ಪ್ರಜ್ಞೆ ಕಾಡಲಿಲ್ಲ. ಅದನ್ನು ಗೊತ್ತೂ ಮಾಡಿರಲಿಲ್ಲ. ಸದಾ ಚುರುಕು ಬುದ್ಧಿಯ ಹುಡುಗಿ ಎಲ್ಲರಿಗೂ ಪ್ರೀತಿಯ ಮಗಳಾಗಿದ್ದಳು. ಹುಟ್ಟಿನಿಂದಲೇ ರಾಜವಾಡೆಯ ಹೆಂಗಸರೆಲ್ಲ ಆಕೆಗೆ ಮೊಲೆ ಹಾಲುಣಿಸಿ ತಾಯಿಯ ಪ್ರೀತಿ ತುಂಬಿದ್ದರು.‌ ಕಾಲೇಜು ಹಂತಕ್ಕೆ ಬಂದಾಗ ಅವಳ ಸೌಂದರ್ಯ ಕಣ್ಣು ಕುಕ್ಕುವಂತಿತ್ತು. ‘ಸ್ಲಂ ಮಂದಿಯೆಲ್ಲ, ಕಲಿತದ್ದು ಸಾಕು ಸಹದೇವ ಮದುವೆ ಮಾಡೋಣ’ ಅಂದರು. ಸಹದೇವ ಸುತಾರಾಂ ಒಪ್ಪಲಿಲ್ಲ. “ಮಗಳು ಕಲಿಯಲಿ ಏನಾದರೊಂದು ಸಾಧನೆ ಮಾಡಲಿ ಆಮೇಲೆ ನೋಡೋಣ” ಅಂದುಬಿಟ್ಟಿದ್ದ. ನಂದಿನಿಯು ಸಹ ಅಷ್ಟೇ ಚುರುಕಾಗಿ ಉತ್ತರಿಸಿದ್ದಳು. ತನ್ನ ಮದುವೆಯ ತಂಟೆಗೆ ಬರದಂತೆ ಬೇಡಿಕೊಂಡಿದ್ದಳು. ಮೇಲಾಗಿ ಅದೇ ಏರಿಯಾದಲ್ಲೇ ದೊಡ್ಡ ಕಾಲೇಜು ಇದ್ದುದರಿಂದ ತೊಂದರೆ ಅನಿಸಲಿಲ್ಲ. ನಂದಿನಿ ಜಾಣ ವಿದ್ಯಾರ್ಥಿನಿ ಆಗಿದ್ದಳು. ಕಾಲೇಜು ಅಂದಾಗ ಹುಡುಗಾಟಿಕೆ, ರ್ಯಾಗಿಂಗ್ ಮಾಡುವುದು ಇದ್ದದ್ದೇ. ಅದೆಲ್ಲವನ್ನು ಚೆನ್ನಾಗಿ ನಿಭಾಯಿಸುವ ಚುರುಕುತನ ಅವಳಿಗೆ ಇತ್ತು. ಜಾಣ ಹುಡುಗಿಯಾಗಿದ್ದರೂ ತುಸು ಒರಟುತನ, ಗುಂಡಾಗಿರಿ ರೂಢಿಸಿಕೊಂಡಿದ್ದಳು. ಅದು ತನ್ನನ್ನು ತಾನು ರಕ್ಷಿಸಿಕೊಳ್ಳಲು ಬಳಸಿದ ತಂತ್ರವಾಗಿತ್ತು. ಹುಡುಗಿಯರ ಜೊತೆ ಜಾಣ,ಉಡಾಳ ಹುಡುಗರೆಲ್ಲ ಸಹ ಇದ್ದರು. ಸ್ನೇಹದ ವಾತಾವರಣವೇ ಇತ್ತು. ಹಳೆಯ ಸಿನೇಮಾಗಳಂತೆ ವಿಲನ್ ಇರಲಿಲ್ಲ.             ಬಸವರಾಜೇಗೌಡ ಆ ಸಂಸ್ಥೆಯ ಮುಖ್ಯಸ್ಥ.‌ ಆತನಿಗೆ ತುಂಬಾ ಗೌರವ ಇತ್ತು. ಮೂವತ್ತೈದರ ಹರೆಯ ಇರಬಹುದು. ಬಂಗಾರದ ಚಮಚ ಬಾಯಲ್ಲಿ ಇಟ್ಟುಕೊಂಡೇ  ಹುಟ್ಟಿದ್ದರಿಂದ ಸುಖ ಸುಪ್ಪತ್ತಿಗೆಯ ರಾಜವೈಭವ. ಆತನ ಬಗ್ಗೆ ಎಲ್ಲಿಯೂ ನೆಗೆಟಿವ್ ಮಾತುಗಳೇ ಇರಲಿಲ್ಲ. ಸದಾ ಲವಲವಿಕೆಯಿಂದ ಕೆಲಸ ಮಾಡುವವ. ಕಾಲೇಜಿನ ಪ್ರತಿಯೊಂದು ಕಾರ್ಯಗಳನ್ನು ಅಚ್ಚುಕಟ್ಟಾಗಿ ನೆರವೇರಿಸುತಿದ್ದ. ಪ್ರತಿ ವರ್ಷದಂತೆ ಶಾಲೆಯ ವಾರ್ಷಿಕೋತ್ಸವಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ತಯಾರಿ ಜೋರಾಗಿಯೇ ನಡೆದಿತ್ತು. ದ್ವಿತೀಯ ವರ್ಷದ ನಂದಿನಿ ಶಾಲಾ ವಾರ್ಷಿಕೋತ್ಸವದ ನೇತ್ರತ್ವ ವಹಿಸಿದ್ದಳು. ‘ನೋಡಮ್ಮ ಈ ವರ್ಷದ ವಾರ್ಷಿಕೋತ್ಸವ ಬಹಳ ಅದ್ದೂರಿಯಾಗಿ ಮಾಡಬೇಕೆಂದು ಅಧ್ಯಕ್ಷರು ಹೇಳಿದ್ದಾರೆ. ಸಂಸ್ಥೆಗೆ ನೂರರ ಸಂಭ್ರಮ ಅಂತೆ. ನಿನ್ನ ಮೇಲೆ ಬಹಳಷ್ಟು ಜವಾಬ್ದಾರಿ ಇದೆಯೆಂದು’ ಪ್ರಿನ್ಸಿಪಾಲ್ ನಾಗಶೆಟ್ಟಿ ಹೇಳಿದ್ದರು. ನಂದಿನಿ ತನ್ನ ಸ್ನೇಹಿತರ ಸಹಕಾರದಿಂದ ಶ್ರದ್ಧೆಯಿಂದಲೇ ಎಲ್ಲ ಕೆಲಸವನ್ನು ಮಾಡಿದ್ದಳು.  ಸಣ್ಣ ಪುಟ್ಟ ಸಮಸ್ಯೆಗಳನ್ನೆಲ್ಲಾ ಪ್ರಿನ್ಸಿಪಾಲರು ನೀಗಿಸಿದರೆ, ಕೆಲವೊಮ್ಮೆ ಅಧ್ಯಕ್ಷ ಬಸವರಾಜೇಗೌಡರನ್ನು ಭೇಟಿಯಾಗಬೇಕಿತ್ತು.          ‌ವಾರ್ಷಿಕೋತ್ಸವದ ಸಮಾರಂಭ ಮುಗಿದು ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾಗಿದ್ದವು. ನಾಟಕವೊಂದರ ಪಾತ್ರದಲ್ಲಿ ನಂದಿನಿ ಬಿಳಿವಸ್ತ್ರಧಾರಿಯಾಗಿ ವೇದಿಕೆಗೆ ಬಂದಳು.  ಇಡೀ ವೇದಿಕೆ ಅವಳ ಸೌಂದರ್ಯ ಮತ್ತು ನಟನೆಗೆ ಚಪ್ಪಾಳೆ ಹೊಡೆದಿತ್ತು. ಆಕೆಯ ಮೋಹಕ ನಡಿಗೆ, ಮಾತು ಜನಮೆಚ್ಚುಗೆಗೆ ಪಾತ್ರವಾಗಿತ್ತು. ಆ ಸಲದ ಉತ್ತಮ ವಿದ್ಯಾರ್ಥಿನಿ ಪ್ರಶಸ್ತಿಯೂ ಸಹ ಆವಳ ಪಾಲಿಗೆ ಲಭಿಸಿತ್ತು. ರಾಜವಾಡೆಯ ಸ್ಲಂ ಜನರಿಗೆ ರಾಣಿಯೊಬ್ಬಳು ಸಿಕ್ಕಂತೆ ಭಾಸವಾಗಿತ್ತು. ವಾರ್ಷಿಕೋತ್ಸವ ಮುಗಿದಾದ ಮೇಲೆ ಎಲ್ಲ ಗೆಳೆಯರು ತಮ್ಮ ಪಾಲಿನ ಕರ್ತವ್ಯ ಮುಗಿಸಿ ಮನೆಯತ್ತ ಸಾಗಿದರು. ಇಡೀ ಊರು, ಕಾಲೇಜಿನ ಚಟುವಟಿಕೆಗಳನ್ನು, ಬಸವರಾಜೇಗೌಡನನ್ನು, ಹೊಗಳುತಿದ್ದರು. ‌ಪ್ರಿನ್ಸಿಪಾಲ್, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಮೆಚ್ಚುಗೆಯ ಮಾತುಗಳು ಲಭಿಸಿದ್ದವು. ವಾರ್ಷಿಕೋತ್ಸವ ಮುಗಿದಾದ ಮೇಲೆ ಕ್ಲಾಸುಗಳು ನಡೆಯುತ್ತಿರಲಿಲ್ಲ. ಮಾರನೇ ದಿನ  ಬಸವರಾಜೇಗೌಡ ಖುಷಿಯ ಪಾರ್ಟಿ ಇಟ್ಟುಕೊಂಡಿದ್ದನು. ಪಾರ್ಟಿಗೆ ಎಲ್ಲ ವಿದ್ಯಾರ್ಥಿಗಳನ್ನು ಕರೆದಿದ್ದನು. ಕಾಲೇಜ ವಿದ್ಯಾರ್ಥಿಗಳೆಲ್ಲ ಜಮಾಯಿಸಿ ಮತ್ತೇ ಹಾಡು ಹರಟೆಯಲ್ಲಿ ತೊಡಗಿದ್ದರು. ‌ಬಸವರಾಜೇಗೌಡನಿಗೆ ಮುಂದೆ ಎಂ ಎಲ್ ಎಂ ಆಗುವ ಕನಸು ಗರಿಗೆದರಿತ್ತು. ಅದನ್ನು ಎಲ್ಲರಿಗೂ ಹೇಳಿದ್ದ.‌ ತನ್ನ ಪರವಾಗಿ ಪ್ರಚಾರ ಮಾಡುವಂತೆ ಕೇಳಿಕೊಂಡಿದ್ದನು. ಎಲ್ಲರಿಗೂ ಭರ್ಜರಿ ಊಟದ ಔತಣ ಖುಷಿ ನೀಡಿತ್ತು.             ಬೆಳಗಾಗುತಿದ್ದಂತೆ ಬಸವರಾಜೇಗೌಡನ ಕಾರು ರಾಜವಾಡೆಯತ್ತ ಸಾಗಿತು. ಸದಾಶಿವನ ಮನೆಯ ಮುಂದೆ ಕಾರು ನಿಂತಿತು. ಅಕ್ಕ ಪಕ್ಕದ ಜನರೆಲ್ಲರೂ ಕಾತರದಿಂದ ಅತ್ತಲೇ ದೃಷ್ಟಿ ಹಾಯಿಸಿದರು. ನಂದಿನಿ ಗೌಡನಿಗೆ ಜೋರಾಗಿಯೇ ಬೈಯುತ್ತಿದ್ದಳು. ಊರ ಸಾವ್ಕಾರನಿಗೆ ಆ ಹುಡುಗಿ ಬೈಯುವುದು ಕೇಳಿ ಅದರಲ್ಲೂ ಒಳ್ಳೆಯ ಹೆಸರು ಗಳಿಸಿದವ. ಇನ್ನೂ ಎಷ್ಟುದಿನ ಹೀಗೆ ಬ್ಲ್ಯಾಕ್ ಮೇಲ್ ಮಾಡುತ್ತೀರಿ ಎಂದು ಚೀರಾಡುತಿದ್ದಳು.‌ಅಪ್ಪ ಸದಾಶಿವ ತಲೆ ಮೇಲೆ ಕೈ ಹೊತ್ತು ಕುಳಿತುಕೊಂಡಿದ್ದ.‌ ನಂದಿನಿ ಬಿಕ್ಕಿಬಿಕ್ಕಿ ಅಳುತಿದ್ದಳು. ಬಸವರಾಜೇಗೌಡ ಗಹಗಹಿಸಿ ನಗುತ್ತಾ, ವಿಡಿಯೋ ತೋರಿಸುತಿದ್ದಂತೆ ಹೆದರಿದಳು. ನೀನೊಬ್ಬ ಮೋಸಗಾರ ಅಂತಾ ಊರಿಗೆ ಗೊತ್ತು ಮಾಡುತ್ತೇನೆ ನಿನ್ನ ಮಾನ ಹರಾಜು ಹಾಕುತ್ತೇನೆ ಎಂದು ಹರಿಹಾಯ್ದಳು. ‘ಈ ಬಸವರಾಜೇಗೌಡನಿಗೆ ರಾಜೀಯಾದರೆ ಈ ರಾಜವಾಡೆಗೆ ನೀನೇ ರಾಣಿ’ ಎಂದು ಹೇಳುತಿದ್ದ. “ನಿನ್ನ ರಾಜವಾಡೆಗೂ ನಿನಗೂ ಬೆಂಕಿ ಹಾಕಬೇಕು, ನೀನೊಬ್ಬ ಗೋಮುಖ ವ್ಯಾಘ್ರ” ಎಂದು ಜೋರು ಮಾಡುತಿದ್ದಳು. ‘ಕಿರುಚಬೇಡ ನಂದಿನಿ,  ಇಂದು ರಾತ್ರಿ ಕಾರು ಕಳಿಸುವೆ ಈ ಗೌಡನ ರಾಜವಾಡೆಗೆ ಬರಬೇಕು,ಬರಲೇಬೇಕು,ಬರುತ್ತೀಯಾ’ ಎಂಬ ನಾಟಕದ ಮಾತುಗಳನ್ನಾಡಿ ಹೊರಟು ಹೋದ. ಅತ್ತ ಕಾರು ಹೋಗುತ್ತಿದ್ದಂತೆ ಸದಾಶಿವ ಮಗಳನ್ನು ತರಾಟೆಗೆ ತೆಗೆದುಕೊಂಡನು. ಹೊಡೆಯಲು ಕೈ ಎತ್ತಿದನು ಆದರೆ ಎತ್ತಿದ ಕೈ ಮೇಲೇಳುವ ಮೊದಲೇ ಸೊಟ್ಟಾದವು. ಬೈಯಲು ತಗೆದ ಬಾಯಿ ತಿರುವು ಮುರುವಾಯಿತು. ಬಾಯಿಂದ ಜೊಲ್ಲು ಸುರಿಯಲಾರಂಭಿಸಿತು. ಸದಾಶಿವ ಆಘಾತದ ಸುದ್ದಿಗೆ ಪಾರ್ಶ್ವವಾಯು ಪೀಡಿತನಾಗಿದ್ದ.   ‌‌    “ಅಪ್ಪಾ ನಾನು ತಪ್ಪು ಮಾಡಿಲ್ಲಪ್ಪ ಎಲ್ಲಾ ಮೋಸ ಮಾಡಿದ್ದಾರೆ “ ಎಂದು ಅಪ್ಪನ ಮೇಲೆ ಒರಗಿದಳು. ಬಾಯಿಯಿಂದ ಬುರುಗು ಬುಸುಗುಡುತ್ತಲೇ ಇತ್ತು. “ಅಪ್ಪಾ ಅಂದು ವಾರ್ಷಿಕೋತ್ಸವ ಮುಗಿದಾದ ಮೇಲೆ ಎಲ್ಲರಿಗೂ ಜೂಸ್ ಕೊಟ್ಟರು. ನಾನು ಸಹ ಕುಡಿದೆ ಅಮೇಲೆ ಏನಾಯಿತೋ ಗೊತ್ತಿಲ್ಲ. ನನಗೆ ಎಚ್ಚರವಾದಾಗ ಎಲ್ಲರ ನಡುವೆನೇ ಇದ್ದೆ. ನನಗೆ ಯಾವುದು ಗೊತ್ತಾಗಲಿಲ್ಲ ಸ್ವಲ್ಪ ಸುಸ್ತಾಗಿತ್ತು ಅಷ್ಟೆ.  ಅದು ಏಕೆ ಏನು ಎಂಬುದನ್ನು ಯಾರೂ ಹೇಳಲೇ ಇಲ್ಲ. ನನ್ನ ಜೊತೆ ಇದ್ದವರೆಲ್ಲಾ ಗೊತ್ತಿದ್ದರೂ ನನಗೆ ಮೋಸ ಮಾಡಿದ್ದಾರೆ” ಎಂದು ಅಳಲಿಕ್ಕೆ ಶುರುಮಾಡಿದಳು.  ಮರುದಿನ ನನ್ನನ್ನು ಕರೆಸಿಕೊಂಡು ವಿಡಿಯೋಗಳನ್ನು ತೋರಿಸಿದಾಗ ನಂಬಲಾಗಲಿಲ್ಲ,ಪ್ರತಿಭಟಿಸಿದೆ. ಅವನ ಮೇಲೆ ಏರಿ ಹೋದೆ. ಆ ರಭಸದಲ್ಲಿ ನನ್ನನ್ನು ಮತ್ತೇ ಹಾಳುಮಾಡಿದ. “ಹೀಗೆ ಕೊಸರಾಡಿದರೆ ನಿನ್ನ ಹೆಣ ರಾಜವಾಡೆ ಕಾಲುವೆಯಲ್ಲಿರುತ್ತದೆ. ರಾಜೀಯಾಗದಿದ್ದರೇ ಈ ವಿಡಿಯೋಗಳೆಲ್ಲ ಮಿಡಿಯಾಗಳಲ್ಲಿರುತ್ತವೆ ಎಂದು ಹೆದರಿಸಿದ. ಮತ್ತೇ ಮತ್ತೇ ಭೋಗಿಸಿದ. ಅಪ್ಪ ಈಗ ಹೇಳು ನಂದೇನಾದರೂ ತಪ್ಪೈತಾ ಹೇಳು ಹೇಳು” ಎಂದು ಗದ್ದ ಹಿಡಿದು ಅಲುಗಾಡಿಸಿದಳು. ಸದಾಶಿವ ಶಿವನ ಪಾದ ಸೇರಿಬಿಟ್ಟಿದ್ದ.        ತಾನಿಲ್ಲೇ ಇದ್ದರೇ ಈ ಸಮುದಾಯವೇ ನನ್ನನ್ನು ತಪ್ಪಿತಸ್ಥಳನ್ನಾಗಿ ಮಾಡುತ್ತದೆ ಎಂದು ಹೆದರಿದಳು. ಆತ್ಮಹತ್ಯೆಗೆ ಒಳ ಮನಸ್ಸು ದಾರಿ ತೋರಿಸಿತು. ಆದರೆ ಮತ್ತೊಂದು ಕಡೆ ಎಚ್ಚರಿಸಿತು ಆತ್ಮಹತ್ಯೆ ಮಾಡಿಕೊಂಡರೆ ಪರಿಹಾರ ಸಿಗುತ್ತೇನು? ಎಂದು ಪ್ರಶ್ನಿಸಿತು. ಅಪ್ಪನ ದಿನಕರ್ಮ ಮುಗಿಸಿದ ನಂದಿನಿ ಊರು ಬಿಟ್ಟಳು. ಮನಸ್ಸು ಎಲ್ಲಿಗೆ ಕರೆದೊಯ್ಯುತ್ತೋ ಒಯ್ಯಲಿ ಎಂದು ರೈಲು ನಿಲ್ದಾಣದತ್ತ ನಡೆದಳು. ಚಲಿಸಲು ರೇಡಿಯಾಗಿದ್ದ ರೈಲನ್ನು ಏರಿದಳು.                                                ———-***———-         ರೈಲು ಹತ್ತಿದ ಸ್ವಲ್ಪ ಹೊತ್ತಿಗೆ ಟೀಕೇಟ್ ಕಲೆಕ್ಟರ್ ಬಂದ.‌ ತನ್ನ ಪರಿಸ್ಥಿತಿಯನ್ನು ಅವನಿಗೆ ವಿವರಿಸಿದಳು. ಆತ ಸೀಟು ಕೊಡುತ್ತೇನೆಂದು ಯಾರೂ ಇಲ್ಲದ ಬೋಗಿಗೆ ಕರೆದುಕೊಂಡು ಹೋದ. ತನ್ನ ಅಮಾಯಕತೆಯನ್ನು ದುರುಪಯೋಗ ಪಡಿಸಿಕೊಂಡನು. ಯಾರೂ ಇಲ್ಲದ ಬೋಗಿಯಲ್ಲಿ ಮತ್ತೇ ನನ್ನ ಶೀಲ ಹರಣವಾಗಿತ್ತು. ನನ್ನ ಕೂಗು ಯಾರಿಗೂ ಕೇಳಲೇ ಇಲ್ಲ. ಬೆಳಗಾಗುವ ಹೊತ್ತಿಗೆ ರೈಲು ಜಾಗನೂರ ತಲುಪಿತು. ಅಲ್ಲಿ ರೋಡ ಕ್ರಾಸಿಂಗ್ ಇದ್ದುದರಿಂದ ರೈಲು ನಿಂತಿತ್ತು. ನನ್ನ ಪಕ್ಕದಲ್ಲಿ ಕೂತಿದ್ದ ಟಿಕೇಟ್ ಕಲೆಕ್ಟರ್ ನಿದ್ರೆಗೆ ಜಾರಿದ್ದ. ಕಾಲೇಜಿನಲ್ಲಿ ಕಲಿಸಿದ್ದ ಕರಾಟೆ ಲೇಟಾಗಿ ನೆನಪಿಗೆ ಬಂತು. ಜೋರಾದ ಮುಷ್ಠಿಯೊಂದಿಗೆ ಆತನ ಮುಖಕ್ಕೆ ಗುದ್ದಿದೆ. ಗೊಳಕ್ ಎಂದು ಗೋಣು ಚೆಲ್ಲಿದ. ಆತನ ಕಿಸೆಯಲ್ಲಿದ್ದ ಹಣವನೆಲ್ಲ ಬಾಚಿಕೊಂಡು ರೈಲು ಇಳಿದು ಬರಬರನೇ ನಡೆಯತೊಡಗಿದೆ. ನನ್ನ ನಡೆಯುವ ರಭಸಕ್ಕೆ ಯಾರಿಗಾದರೂ ಏನೂ ಸಂದೇಹ ಬರದಿರಲೆಂದು ನಟಿಸಿದೆ. ಅಲ್ಲೊಬ್ಬ ಟಾಂಗಾವಾಲಾ ಜನರನ್ನು ಕರೆಯುತಿದ್ದ. ‘ಬರ್ತಿಯೇನು ಬೇಟಿ’ ಅಂತಾ ಕೇಳಿದ. ಮೊದಲು ಆ ಊರನ್ನು ದಾಟಬೇಕಿತ್ತು. “ಹುಂ” ಎಂದೆ. ‘ಎಲ್ಲಿಗೆ ಹೋಗಬೇಕು’ ಬೇಟಿ ಅಂದಾ. ನನ್ನ ಜೊತೆ ಕುಳಿತವರು ಮಠಕ್ಕೆ ಹೋಗಬೇಕು ಎಂದು ಹೇಳಿದ್ದು ನೆನಪಾಗಿ “ಮಠ” ಎಂದೆ. ಟಾಂಗಾವಾಲಾ ಮಾತುಗಾರನಾಗಿದ್ದ.‌ ಎಲ್ಲರನ್ನೂ ಮಾತನಾಡಿಸುತ್ತಲೇ ‘ನನ್ನ ಹೆಸರು ರಸೂಲ್  ಟಾಂಗಾವಾಲಾ ಕೆಲಸ ಮಾಡ್ತಿನಿ, ಅವಶ್ಯ ಇದ್ರೆ ಫೋನ್ ಮಾಡ್ರಿ’ ಅಂತಾ ಕಾರ್ಡ್ ಕೊಟ್ಟ.               ಟಾಂಗಾವಾಲಾನ ಕುದುರೆ ಮಠದ ಮುಂದೆ ಬಂದು ನಿಂತಿತು. ದೊಡ್ಡ ಅಕ್ಷರದಲ್ಲಿ “ಬಟಾಬಯಲು  ಮಠಕ್ಕೆ ಸ್ವಾಗತ” ಎಂದು ಬರೆಯಲಾಗಿತ್ತು. ಟಾಂಗಾವಾಲಾನಿಗೆ ಎಲ್ರೂ 50 ರೂ ಕೊಡ್ತಾ ಇದ್ರು. ನಾನೂ ಸಹ ನೂರರ ನೋಟೊಂದನು ಕೊಟ್ಟೆ.  ಬೇಟಿ ಯಾವುದೋ ಸಮಸ್ಯೆ ತುಗೊಂಡು ಬಂದಂಗ ಕಾಣ್ತೀಯ ಬೇಡ ಬೇಟಿ.‌ ಅಂತಾ ಹೇಳಿ ಹೊರಟ. ‘ಏ ಟಾಂಗಾವಾಲಾ ಇದರಾಗ ಏನೂ

ಶ್ರೀಧರ ಗಸ್ತಿ ಅವರ ಸಣ್ಣ ಕಥೆ “ಕುಂಟಲಗಿತ್ತಿ” Read Post »

ಕಾವ್ಯಯಾನ

“ನೇಹ ಬೋರಾ.. ಹೋರಾಟದ ಹೊಸ ರೂಪ” ಟಿ.ದಾದಾಪೀರ್‌ ತರೀಕೆರೆ

ಕಾವ್ಯ ಸಂಗಾತಿ ಟಿ.ದಾದಾಪೀರ್‌ ತರೀಕೆರೆ “ನೇಹ ಬೋರಾ.. ಹೋರಾಟದ ಹೊಸ ರೂಪ” ನೇಹ ಬೋರಾ..ಸ್ತ್ರೀ ಹೋರಾಟದ ಹೊಸ ರೂಪ ಪ್ರಸಿದ್ಧಿಗಾಗಿ ರ್ಯಾಂಪ್ ಗಳ ಮೇಲೆ ಕ್ಯಾಟ್ ವಾಕ್ ಹೆಜ್ಜೆಗಳ ಹಾಕಿದಸುಂದರಿ ಲಾರ, ಸುಷ್ಮೀತ, ಐಶ್ವರ್ಯ ವಜ್ರದ ಕಿರೀಟ ಧರಿಸಿಭುವನ ಸುಂದರಿಯಾದರು ನೇಹ…..ನೀನು ಮಣ್ಣಲ್ಲಿ ಅರಳಿ, ಬೀದಿಯಲ್ಲಿ ತೆವಳಿ ಸೌಂದರ್ಯದ ಹೊಸ ಭಾಷ್ಯಬರೆದವಳು ಅನ್ಯಾಯದ ವಿರುದ್ಧ ಸಿಡಿದವಳುಅದುಮಿದಷ್ಟುಚೆಂಡಿನಂತೆ ಪುಟಿಯುವವಳುಬಭ೯ರತೆ, ಕ್ರೂರತೆಯ ಎದುರುಶಾಂತಿಯ ಮಾತಾಡಿದವಳು ನೀರಜಾ , ಥೆರೆಸಾ, ಝಾನ್ಸಿ ,  ಚೆನ್ನಮ್ಮ, ಅಕ್ಕಳ ನಂತರ ನೀನೆ ಇರಬೇಕುಭಗತ್, ಸುಭಾಷ್, ಬಿಸ್ಮಿಲ್ನಿನ್ನ ಅವತಾರ ಎತ್ತಿದಂತಿದೆ ‘ ಸಹನೆ ಸುಟ್ಟ ಕಿಡಿ,  ಕತ್ತಲೆ ಸೀಳಿದ  ಬೆಳಕು ನೀನು ‘ಲತೆ, ಕೋಮಲೆ ಅವರೆಲ್ಲ ಬೇರೆನೀನು ಸುಡುವಾಗ್ನಿ, ಬೋಗ೯ರೆವ ಶರಧಿತಲೆ ಮೇಲೆ ಮುಳ್ಳಿನ ಕಿರೀಟ ಧರಿಸಿದ  ‘ ಭುವನ ಸುಂದರಿ’ ಟಿ ದಾದಾಪೀರ್ ತರೀಕೆರೆ

“ನೇಹ ಬೋರಾ.. ಹೋರಾಟದ ಹೊಸ ರೂಪ” ಟಿ.ದಾದಾಪೀರ್‌ ತರೀಕೆರೆ Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ-46 ಡಾ.ವಿಶ್ವನಾಥ್‌ ಎನ್‌ ನೇರಳೆಕಟ್ಟೆ ಅರ್ಜುನ ಉವಾಚ ಬಭ್ರುವಾಹನ ಬಲದೆದುರು ಅನುಸಾಲ್ವನ ಆಕ್ರೋಶ ಯುದ್ಧರಥವನ್ನೇ ವಾಹನವನ್ನಾಗಿಸಿಕೊಂಡು ನನ್ನೆದುರಿನ ಕದನಕ್ಕೆ ಕೆರಳಿ ಕೆರಳುತ್ತಾ ಬಂದ ಬಭ್ರುವಾಹನ. ಅವನ ನೇತೃತ್ವದ ಚತುರ್ಬಲವದು ಸಮಸ್ತ ಭೂಮಿಯನ್ನು ವ್ಯಾಪಿಸಿದಂತೆ ತೋರುತ್ತಿತ್ತು. ಧ್ವಜ ಛತ್ರ ಚಾಮರಗಳು ದೇವಲೋಕವನ್ನೇ ಆವರಿಸಿಕೊಂಡAತೆ ಕಾಣುತ್ತಿದ್ದವು. ಎದ್ದ ಧೂಳು ಸೂರ್ಯಮಂಡಲವನ್ನು ಸೂರೆಗೊಂಡAತೆ ತೋರುತ್ತಿತ್ತು.ಈಗ ನನ್ನೆದುರಿಗೆ ಬಂದುನಿAತ ಬಭ್ರುವಾಹನ ದೊಡ್ಡ ಸೈನ್ಯವನ್ನೇ ಜೊತೆಗೂಡಿಸಿಕೊಂಡು ಬಂದಿದ್ದ. ಆನೆಗಳಿದ್ದವು ಕೋಟಿಯೆಣಿಕೆಯಲ್ಲಿ. ರಥಗಳ ಸಂಖ್ಯೆಯದು ಹತ್ತು ಕೋಟಿ. ಎರಡು ಕೋಟಿಗಳಷ್ಟು ಕುದುರೆಗಳು. ಸೈನಿಕರಿದ್ದರು ಮೂರು ಕೋಟಿಗಳಷ್ಟು. ಬ್ರಹ್ಮನ ಸೃಷ್ಟಿಯಲ್ಲಿಯೇ ಅದ್ಭುತವಿದು ಎನ್ನುವಂತೆ ಬಭ್ರುವಾಹನ ಪಡೆ ಗೋಚರಿಸುತ್ತಿದ್ದದ್ದಂತೂ ನಿಜ.ಚಿತ್ರಾಂಗದೆಯ ಮಗ ಕುಳಿತಿದ್ದ ಚಿತ್ರಾಲಂಕಾರಗಳಿAದ ಶೋಭಿಸುವ ರಥದಲ್ಲಿ. ಮಣಿಮಯವಾದ ತೇರಿನಲ್ಲಿ ಕುಳಿತಿದ್ದ ಮಣಿಪುರದ ಅರಸ.ಎರಡೂ ಕಡೆಯ ಸೈನಿಕರು ಯುದ್ಧಮುಖಿಗಳಾದರು. ಶತ್ರುಭಾವವನ್ನು ತೋರಿಸುತ್ತಾ ಯುದ್ಧ ಹೂಡಿದರು ಅತಿಶಯವಾಗಿ. ರಥದ ಗಾಲಿಗಳ ಸದ್ದು, ಕುದುರೆ- ಆನೆಗಳ ಕೂಗಿನ ಧ್ವನಿ, ಸೈನಿಕರ ಅಬ್ಬರದ ಬೊಬ್ಬೆ, ಯುದ್ಧವಾದ್ಯಗಳ ಘನರವ ಇವೆಲ್ಲವೂ ಸೇರಿಕೊಂಡು ಕರ್ಣಕಠೋರವೆನಿಸುವ ಶಬ್ದ ಹೊಮ್ಮತೊಡಗಿತು.ಬಭ್ರುವಾಹನನ ಬಿಲ್ಲಿನ ಠೇಂಕಾರವದು ಸಿಡಿಲ ಆರ್ಭಟದಂತೆ ಕೇಳಿಸಿತು. ಅವನ ಚಿನ್ನದ ರಥವದು ಹೊಳೆಯುತ್ತಿತ್ತು ಮಿಂಚಿನAತೆ. ಬಾಣಗಳ ಮಳೆಯನ್ನೇ ಸುರಿಸುತ್ತಾ ನನ್ನ ಸನಿಹಕ್ಕೆ ಬಂದ ಬಭ್ರುವಾಹನ. ತಂದೆಯೆAದು ಪ್ರೀತಿಯಿಂದ ನನ್ನ ಬಳಿಗೆ ಅವನು ಮಣಿದುಬಂದಾಗ ನಾನವನನ್ನು ಮಗನೆಂದು ಒಪ್ಪಿಕೊಳ್ಳಲಿಲ್ಲ ಎಂಬ ಆಕ್ರೋಶ ಕಾಣಿಸುತ್ತಿದ್ದದ್ದು ಅವನ ಕಣ್ಣುಗಳಲ್ಲಿ.“ತಂದೆಯೊಡನೆ ಯುದ್ಧ ಬೇಡವೆಂದು ನಾನು ಒಲವಿನಿಂದ ನಿನ್ನ ಬಳಿಗೆ ಬಂದು ಪಾದಕ್ಕೆ ಎರಗಿದೆ. ಆದರೆ ನೀನು ನನ್ನನ್ನು ನಿಂದಿಸಿದೆ ಹೀನಾಯವಾಗಿ. ಏನೇ ಆದರೂ ನಿನ್ನನ್ನು ನಾನು ಜಯಿಸದೇ ಹೋದರೆ ನಾನು ನಿನ್ನ ಮಗನೇ ಅಲ್ಲ” ಎಂದು ಘರ್ಜಿಸಿದ.ಅಂದರೆ, ಅವನಿಗೆ ಯುದ್ಧ ಬೇಕಾಗಿದ್ದದ್ದು ನನ್ನ ಮಗ ಎನ್ನುವುದನ್ನು ಸಾಬೀತುಪಡಿಸಲಿಕ್ಕಾಗಿ. ಅವನು ಕದನದ ಗೆಲುವನ್ನು ಬಯಸುತ್ತಿದ್ದದ್ದು ನಾನವನ ತಂದೆ ಎನ್ನುವುದನ್ನು ರುಜುವಾತುಪಡಿಸಿಕೊಳ್ಳುವುದಕ್ಕಾಗಿ. ಈ ಯುದ್ಧ ಎನ್ನುವುದು ತನಗೆ ಅರ್ಜುನನ ಮಗ ಎಂಬ ಗುರುತಿಸುವಿಕೆಯೊಂದನ್ನು ತಂದುಕೊಡಲಿ ಎಂಬ ಭಾವ ಅವನಲ್ಲಿ ಬಲವಾಗಿದ್ದಂತೆ ತೋರಿತು. ಏನೆಂದರೂ ಅದಕ್ಕೆ ಅವಕಾಶ ಕೊಡಲಾರೆ ಎಂಬ ಹಠ ಮೂಡಿತು ನನ್ನಲ್ಲಿ.ಅಷ್ಟರಲ್ಲಿಯೇ ಬಭ್ರುವಾಹನನನ್ನು ಎದುರುಹಾಕಿಕೊಳ್ಳುವ ದಿಟ್ಟತನವನ್ನು ತೋರಿಸಿದ ಅನುಸಾಲ್ವ. “ಸತ್ತವರ ಪಂಥ ಇದಲ್ಲವೆಂದು ನಿರೂಪಿಸಲು ನೀನು ವೃಥಾ ಪುರುಷಾರ್ಥವನ್ನು ತೋರಿಸುತ್ತಿರುವಂತಿದೆ. ನಿನ್ನ ಪೌರುಷಕ್ಕೆ ಅಂಜುವವನು ನಾನಲ್ಲ. ನಿನ್ನೊಡನೆ ಹೋರಾಡಿದರೆ ಎದುರಾಗುವ ಅಪಕೀರ್ತಿಗೆ ಅಳುಕುವವನು ನಾನಲ್ಲ. ತಂದೆಯನ್ನೇ ಹೀಯಾಳಿಸುವ ಧೂರ್ತ ನೀನು” ಎಂದು ನಸುನಗೆಯಿಂದಲೇ ಖಾರನುಡಿಯನ್ನಾಡಿದ ಅನುಸಾಲ್ವ.ಒಂಭತ್ತು ಬಾಣಗಳು ಒಮ್ಮೆಲೇ ಚಿಮ್ಮಿದವು ಬಭ್ರುವಾಹನನೆಡೆಗೆ, ಅನುಸಾಲ್ವನ ಕಡೆಯಿಂದ. ಪ್ರತ್ಯುತ್ತರವಾಗಿ ನೂರು ಬಾಣಗಳನ್ನು ಸಿಡಿಸಿದ ಬಭ್ರುವಾಹನ. ಬಾಣಗಳು ಚಿಮ್ಮುತ್ತಲೇ ಹೋದವು. ಅಂತೆಯೇ ಚಿಮ್ಮಿತು ಕೆನ್ನೆತ್ತರು ಇಬ್ಬರ ಶರೀರದಿಂದಲೂ. ದೇಹದ ಅಲ್ಲಲ್ಲಿ ಗಾಯ. ಬಾಣಗಳು ಇಬ್ಬರ ಶರೀರದ ಒಳಹೋಗಿದ್ದವು. ಬಿಲ್ಲು ಬಾಣಗಳ ಪ್ರಯೋಗದಲ್ಲಿ, ಪರಾಕ್ರಮದ ಪ್ರದರ್ಶನದಲ್ಲಿ ಸಮನಾರಿಲ್ಲ ತಮಗೆ ಎಂಬAತೆ ಹೋರಾಡಿದರು ಅವರಿಬ್ಬರು.ತನಗೆ ಸಮನಾಗಿ ಸಾಹಸ ತೋರುವ ಬಭ್ರುವಾಹನನ ರೀತಿಯದು ಕ್ರೋಧ ಹುಟ್ಟಿಸಿತು ಅನುಸಾಲ್ವನಿಗೆ. ಏಳು ಬಾಣಗಳಿಂದ ಬಭ್ರುವಾಹನನ ಬತ್ತಳಿಕೆಯನ್ನು ನಾಶಮಾಡಿದ. ಎಂಟನೆಯ ಬಾಣದ ಏಟಿಗೆ ಅವನ ಧ್ವಜ ಹರಿದುಹೋಯಿತು. ಇನ್ನೊಂದು ಬಾಣದಿಂದ ಅವನ ಬಿಲ್ಲನ್ನೇ ಪುಡಿಗಟ್ಟಿದ. ಬಭ್ರುವಾಹನ ಆಘಾತಕ್ಕೆ ಒಳಗಾದವನಂತೆ ನೋಡುತ್ತಿದ್ದಾಗಲೇ ಅವನ ಕವಚವನ್ನು ಸೀಳಿ ಕೆಳಕ್ಕೆ ಬೀಳಿಸಿತು ಅನುಸಾಲ್ವ ಪ್ರಯೋಗಿತ ಅಮೋಘ ಬಾಣ. ಸಾವಿರ ಬಾಣಗಳನ್ನು ಒಂದೇ ಸಲಕ್ಕೆ ಚಿಮ್ಮಿಸಿದ ಅನುಸಾಲ್ವ. ಬಭ್ರುವಾಹನನ ರಥದ ಕುದುರೆಗಳು ಪ್ರಾಣ ಕಳೆದುಕೊಂಡವು. ರಥ ಛಿದ್ರವಾಯಿತು. ಸಾರಥಿ ಸಾವನ್ನಪ್ಪಿದ.ಅನುಸಾಲ್ವನ ಅಮಿತ ಸಾಮರ್ಥ್ಯ ನನಗೆ ಮೆಚ್ಚುಗೆಯಾಯಿತು. ಇನ್ನೇನು ಬಭ್ರುವಾಹನನೂ ಪ್ರಾಣ ಕಳೆದುಕೊಳ್ಳುತ್ತಾನೆ ಎಂದುಕೊAಡೆ.ಆದರೆ ಬಡಪೆಟ್ಟಿಗೆ ಬಸವಳಿಯುವವನಾಗಿರಲಿಲ್ಲ ಮಣಿಪುರದ ಒಡೆಯ. ತಕ್ಷಣವೇ ಇನ್ನೊಂದು ರಥವನ್ನು ಏರಿನಿಂತ. ತನ್ನ ರಥವನ್ನು ಪುಡಿಗಟ್ಟಿದ್ದ ಅನುಸಾಲ್ವನ ರಥವನ್ನೇ ಇನ್ನಿಲ್ಲವಾಗಿಸಿದ.ರಥವಿಲ್ಲದವನಾದ ಅನುಸಾಲ್ವ ಈಗ ಬಭ್ರುವಾಹನನ ಮೇಲೆ ಬಾಣ ಪ್ರಯೋಗಿಸುವುದು ಕಷ್ಟವಿತ್ತು. ತಕ್ಷಣವೇ ಅನುಸಾಲ್ವ ಕೈಗೆತ್ತಿಕೊಂಡದ್ದು ದೈತ್ಯ ಗದೆಯನ್ನು. ಬಭ್ರುವಾಹನನ ಕಡೆಗೆ ಮುನ್ನುಗ್ಗಿಹೋದ. ಇನ್ನೇನು ಅಪ್ಪಳಿಸಿಯೇ ಬಿಡುತ್ತಾನೆ ಅನುಸಾಲ್ವ ಆ ವಿಸ್ತೃತ ಗದೆಯನ್ನು ಬಭ್ರುವಾಹನನ ಮುಖದ ಮೇಲೆ ಎಂದು ತೋರಿತು ನನಗೆ. ಆ ಬಗೆಯಲ್ಲಿತ್ತು ಅನುಸಾಲ್ವನ ಆಕ್ರೋಶ.ಬಭ್ರುವಾಹನ ಬಾಣಗಳನ್ನು ಸತತವಾಗಿ ಪ್ರಯೋಗಿಸಿದ. ಅವನ ಗುರಿ ತಪ್ಪಲಿಲ್ಲ. ಬಾಣಗಳೆಲ್ಲವೂ ಅನುಸಾಲ್ವನ ಶರೀರಕ್ಕೆ ಆಳವಾದ ಆಘಾತವನ್ನು ಉಂಟುಮಾಡಿದವು. ಅನುಸಾಲ್ವ ಅತೀವ ಆಯಾಸಕ್ಕೆ ಒಳಗಾದಂತೆ ಕಂಡುಬAದ. ಅವನ ದೇಹಶಕ್ತಿ ಅಳಿದುಹೋಗಿತ್ತು. ನೋಡನೋಡುತ್ತಲೇ ನೆಲದ ಮೇಲೆ ಬಿದ್ದ ಅನುಸಾಲ್ವ. ಅವನೀಗ ಪ್ರಜ್ಞೆ ಕಳೆದುಕೊಂಡಿದ್ದ.ಆ ಕ್ಷಣದಲ್ಲಿ ಬಭ್ರುವಾಹನನನ್ನು ಸಮರ್ಥವಾಗಿ ಎದುರಿಸುವವರೊಬ್ಬರು ಬೇಕಿತ್ತು. ಯಾರವರು ನನ್ನ ಕಡೆಯವರು, ಬಭ್ರುವಾಹನನ ಶೌರ್ಯವನ್ನು ಮೆಟ್ಟಿ ನಿಲ್ಲುವವರು ಎಂದು ಸುತ್ತಮುತ್ತ ಕಣ್ಣಾಡಿಸತೊಡಗಿದೆ ನಾನು. ಅಷ್ಟರಲ್ಲಿಯೇ ಶ್ರೀಕೃಷ್ಣಸುತ ಪ್ರದ್ಯುಮ್ನ ಬಭ್ರುವಾಹನನ ಎದುರು ಹೋಗಿ ನಿಂತಾಗಿತ್ತು. ಡಾ.ವಿಶ್ವನಾಥ್‌ ಎನ್‌ ನೇರಳೆಕಟ್ಟೆ

Read Post »

You cannot copy content of this page

Scroll to Top