ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಇತರೆ

“ಮಹಾ ಮಾನವತಾವಾದಿ ಭಾರತೀಯ ಮೂಲದ ನವಿ ಪಿಳ್ಳೆ ಇವರಿಗೆ 2026 ರ ನೊಬೆಲ್  ಶಾಂತಿ ಪುರಸ್ಕಾರ” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ಸಮ್ಮಾನ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ “ಮಹಾ ಮಾನವತಾವಾದಿ ಭಾರತೀಯ ಮೂಲದ ನವಿ ಪಿಳ್ಳೆ ಇವರಿಗೆ 2026 ರ ನೊಬೆಲ್   ಶಾಂತಿ ಪುರಸ್ಕಾರ” *ಮಹಾ ಮಾನವತಾವಾದಿ ಭಾರತೀಯ ಮೂಲದ ನವಿ ಪಿಳ್ಳೆ ಇವರಿಗೆ 2026 ರ ನೊಬೆಲ್  ಶಾಂತಿ ಪುರಸ್ಕಾರ* ನವನೇತೆಮ್ “ನವಿ” ಪಿಳ್ಳೆ (Navanethem “Navi” Pillay) ಅವರು 85 ವರ್ಷದ  ಭಾರತೀಯ ತಮಿಳು ಮೂಲದ ದಕ್ಷಿಣ ಆಫ್ರಿಕಾದ ಪ್ರಸಿದ್ಧ ನ್ಯಾಯಶಾಸ್ತ್ರಜ್ಞರು ಮತ್ತು ಮಾನವ ಹಕ್ಕುಗಳ ಹೋರಾಟಗಾರ್ತಿ. ಇವರು ಜಾಗತಿಕ ಮಟ್ಟದಲ್ಲಿ ಶಾಂತಿ ಮತ್ತು ಅಂತರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವಲ್ಲಿ ಹಾಗೂ ಮಾನವ ಹಕ್ಕುಗಳ ರಕ್ಷಣೆಗಾಗಿ ಸಲ್ಲಿಸಿದ ಅಪಾರ ಕೊಡುಗೆಗಾಗಿ ಅತ್ಯಂತ ಪ್ರಸ್ತುತವಾಗಿ 2026ರ ಸಾಲಿನ ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರ ಜೀವನ ಮತ್ತು ಸಾಧನೆಗಳ ಮುಖ್ಯ ವಿವರಗಳು ಇಲ್ಲಿವೆ: ವೈಯಕ್ತಿಕ ಹಿನ್ನೆಲೆ • ಜನನ: 23 ಸೆಪ್ಟೆಂಬರ್ 1941 ರಂದು ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ಜನಿಸಿದರು. • ತಂದೆ: ಇವರ ತಂದೆಯ ಹೆಸರು ನಾರಾಯಣಸ್ವಾಮಿ ನಾಯ್ಡು (Narrainsamy Naidoo). ಇವರು ವೃತ್ತಿಯಿಂದ ಬಸ್ ಚಾಲಕರಾಗಿದ್ದರು. ಬಡತನದಲ್ಲಿದ್ದ ಕುಟುಂಬವನ್ನು ಸಲಹಲು ಬಸ್ ಚಾಲನೆಯ ಜೊತೆಗೆ ಮೀನುಗಾರಿಕೆ ಸೇರಿದಂತೆ ಹಲವು ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದರು.• ತಾಯಿ: ಇವರ ತಾಯಿಯ ಹೆಸರು ಶಾಂತಮ್ಮ ನಾಯ್ಡು (Santhama Naidoo). ಇವರು ಗೃಹಿಣಿಯಾಗಿದ್ದು, ಒಟ್ಟು ಎಂಟು ಮಕ್ಕಳಿದ್ದ ದೊಡ್ಡ ಕುಟುಂಬವನ್ನು ನೋಡಿಕೊಳ್ಳುತ್ತಿದ್ದರು. ಪತಿ ಗ್ಯಾಬಿ ಪಿಳ್ಳೆಒಬ್ಬ ಮಗ  ವರ್ಣಭೇದ ನೀತಿಯ ಕಾಲದಲ್ಲಿ ಬದುಕಿದ್ದ ಇವರಿಗೆ ಶಾಲಾ ಶಿಕ್ಷಣದ ಅವಕಾಶ ಸಿಕ್ಕಿರಲಿಲ್ಲ.ಇವರ ಪೋಷಕರು ಭಾರತೀಯ ತಮಿಳು ಮೂಲದವರಾಗಿದ್ದರು.• ಆರಂಭಿಕ ಹೋರಾಟ: ವರ್ಣಭೇದ ನೀತಿಯ (Apartheid) ಕಠಿಣ ಕಾಲದಲ್ಲಿ ಬೆಳೆದ ಇವರು, ಜನಾಂಗೀಯ ತಾರತಮ್ಯದ ವಿರುದ್ಧ ಧ್ವನಿ ಎತ್ತಿ ತಮ್ಮ ವೃತ್ತಿಜೀವನವನ್ನು ರೂಪಿಸಿಕೊಂಡರು. ಪ್ರಮುಖ ಹುದ್ದೆಗಳು ಮತ್ತು ಐತಿಹಾಸಿಕ ಸಾಧನೆಗಳು • ಮೊದಲ ಬಿಳಿಯೇತರ ಮಹಿಳಾ ನ್ಯಾಯಾಧೀಶೆ: 1994 ರಲ್ಲಿ ನೆಲ್ಸನ್ ಮಂಡೇಲಾ ಅವರು ದಕ್ಷಿಣ ಆಫ್ರಿಕಾದ ಅಧ್ಯಕ್ಷರಾದಾಗ, ನವಿ ಪಿಳ್ಳೆ ಅವರನ್ನು ದೇಶದ ಹೈಕೋರ್ಟ್‌ನ ನ್ಯಾಯಾಧೀಶರಾಗಿ ನೇಮಿಸಲಾಯಿತು. ಈ ಮೂಲಕ ದಕ್ಷಿಣ ಆಫ್ರಿಕಾದ ಹೈಕೋರ್ಟ್ ತಲುಪಿದ ಮೊದಲ ಬಿಳಿಯೇತರ ಮಹಿಳೆ ಎಂಬ ಇತಿಹಾಸ ಸೃಷ್ಟಿಸಿದರು.• ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್: ಇವರು 2008 ರಿಂದ 2014 ರವರೆಗೆ ವಿಶ್ವಸಂಸ್ಥೆಯ (UN) ಮಾನವ ಹಕ್ಕುಗಳ ಹೈಕಮಿಷನರ್ ಆಗಿ ಜಾಗತಿಕ ಮಟ್ಟದಲ್ಲಿ ಸೇವೆ ಸಲ್ಲಿಸಿದ್ದಾರೆ.• ರುವಾಂಡಾ ನರಮೇಧ ನ್ಯಾಯಮಂಡಳಿ: ರುವಾಂಡಾ ನರಮೇಧದ ಆರೋಪಿಗಳ ವಿಚಾರಣೆ ನಡೆಸಿದ ಅಂತರಾಷ್ಟ್ರೀಯ ಕ್ರಿಮಿನಲ್ ನ್ಯಾಯಮಂಡಳಿಯ (ICTR) ನ್ಯಾಯಾಧೀಶರಾಗಿ ಮತ್ತು ಅಧ್ಯಕ್ಷರಾಗಿ ಕೆಲಸ ಮಾಡಿದರು. ಈ ಅವಧಿಯಲ್ಲಿ, ಅತ್ಯಾಚಾರವನ್ನು ನರಮೇಧದ ಒಂದು ಕ್ರೂರ ಅಂಗ ಎಂದು ಗುರುತಿಸಿದ ಐತಿಹಾಸಿಕ ತೀರ್ಪಿನಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು.• ಪ್ರಸ್ತುತ ಜವಾಬ್ದಾರಿ: ಸದ್ಯ ಇವರು ಮ್ಯಾನ್ಮಾರ್‌ನಲ್ಲಿ ನಡೆದ ರೋಹಿಂಗ್ಯಾ ನರಮೇಧದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅಂತರಾಷ್ಟ್ರೀಯ ನ್ಯಾಯಾಲಯದ (ICJ) ತದರ್ಥ (Ad hoc) ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2026ರ ನೊಬೆಲ್ ಶಾಂತಿ ಪ್ರಶಸ್ತಿ ಯುದ್ಧ ಅಪರಾಧಗಳು, ಮಾನವೀಯತೆಯ ವಿರುದ್ಧದ ಅಪರಾಧಗಳು ಮತ್ತು ನರಮೇಧಗಳಿಗೆ ಕಾರಣರಾದವರನ್ನು ಕಾನೂನಿನ ಅಡಿಯಲ್ಲಿ ಹೊಣೆಗಾರರನ್ನಾಗಿ ಮಾಡಲು ಅವರು ನಡೆಸಿದ ನಿರಂತರ ಕಾನೂನು ಹೋರಾಟವನ್ನು ಗುರುತಿಸಿ ಓಸ್ಲೋದ ನಾರ್ವೇಜಿಯನ್ ನೊಬೆಲ್ ಸಮಿತಿಯು ಈ ಗೌರವವನ್ನು ನೀಡಿದೆ. ಅಲ್ಬೇನಿಯಾ ಮೂಲದ ಮದರ ಥೆರೇಸಾ ಅವರ ನಂತರ ಭಾರತಕ್ಕೆ ದಕ್ಕಿದ ನೊಬೆಲ್ ಪ್ರಶಸ್ತಿ ಇದಾಗಿದೆ.ನೂರು ವರುಷ ಬಾಳಲಿ ನವಿ ಪಿಳ್ಳೆ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

“ಮಹಾ ಮಾನವತಾವಾದಿ ಭಾರತೀಯ ಮೂಲದ ನವಿ ಪಿಳ್ಳೆ ಇವರಿಗೆ 2026 ರ ನೊಬೆಲ್  ಶಾಂತಿ ಪುರಸ್ಕಾರ” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ Read Post »

ಕಾವ್ಯಯಾನ

ಡಾ. ಲತಾ ಎ.ಆರ್ ಬಾಳೆಹೊನ್ನೂರು ಅವರ ಕವಿತೆ “ಪ್ರೀತಿ”

ಕಾವ್ಯ ಸಂಗಾತಿ ಡಾ. ಲತಾ ಎ.ಆರ್ ಬಾಳೆಹೊನ್ನೂರು “ಪ್ರೀತಿ” ಸುಂದರ ಬದುಕಿಗೆ ಬರೆದು ಮುನ್ನುಡಿಸಾರ್ಥಕತೆಗೆ ಬೇಕಿದೆ ನೆನೆವ ಬೆನ್ನುಡಿಎಲ್ಲರಲಿ ತುಂಬಿರಲಿ ಸಿಹಿಯಾದ ಸವಿನುಡಿಮುನ್ನಡೆಸುವ ಹಾದಿಗೆ ಮುಖ ಮಾಡಿ ಬಾಳಲಿ ಬೇಕಿದೆ ಬಲವಾದ ನಂಬಿಕೆಗಳಿಸಬೇಕು ಅದಕಾಗಿ ಬರದ ಸಡಿಲಿಕೆಬೇಕಿಲ್ಲ ಎಲ್ಲಾ ನನ್ನವರೆಂಬ ಮೂಢನಂಬಿಕೆಸತ್ಯ ನಿಷ್ಠೆ ಕರುಣೆ ಸಾರಿರಿ ಜಗಕೆ ನವ ಬದುಕಲಿ ಸ್ನೇಹವ ಗಳಿಸುಆತ್ಮೀಯತೆಯ ನಗುವನ್ನು ಸಂಪಾದಿಸುನೆನಪಿಡುವ ಕಾರ್ಯದಿ ಏನಾದರೂ ಸಾಧಿಸುಎಲ್ಲರ ಪ್ರೀತಿ ವಿಶ್ವಾಸ ಗಳಿಸು ಅತಿಥಿಗಳು ನಾವು ಬರೀ ಭೂಮಿಗೆಹೋಗಲೇಬೇಕು ಒಂದು ದಿನ ಸಾವಿಗೆಆಗಬೇಕು ಬೂದಿ ಉರಿವ ಚಿತೆಗೆಹೆಜ್ಜೆ ಗುರುತು ಬಿಟ್ಟುಹೋಗು ನಿನ್ನ ನಡೆಗೆ. ಡಾ. ಲತಾ ಎ.ಆರ್ ಬಾಳೆಹೊನ್ನೂರು..

ಡಾ. ಲತಾ ಎ.ಆರ್ ಬಾಳೆಹೊನ್ನೂರು ಅವರ ಕವಿತೆ “ಪ್ರೀತಿ” Read Post »

ಕಾವ್ಯಯಾನ

ವಾಣಿ ಯಡಹಳ್ಳಿಮಠ‌ ಅವರ ಗಜಲ್

ಕಾವ್ಯ ಸಂಗಾತಿ ವಾಣಿ ಯಡಹಳ್ಳಿಮಠ‌ ಗಜಲ್ ಗಜಲ್(ಲಕ್ಷ್ಮಣ್ ಶರೆಗಾರ್ ಸರ್ ಅವರ ಶಾಯರಿಯ ಮಿಸ್ರಾ ಬಳಸಿಕೊಂಡು ಬರೆದದ್ದುನಿನ್ನನು ನೀ ಹಿಡಿದಿಟ್ಟುಕೊಂಡ ಮೇಲೆ ನನ್ನನು ನಾನು ಬಿಡಿಸಿಕೊಂಡಿದ್ದೇನೆ ) ನಿನ್ನನು ನೀನು ಹಿಡಿದಿಟ್ಟುಕೊಂಡ ಮೇಲೆನನ್ನನು ನಾನು ಬಿಡಿಸಿಕೊಂಡಿದ್ದೇನೆನೀ ಮೌನವ ಅಪ್ಪಿಕೊಂಡ ಮೇಲೆ,ನಾ ಮಾತಿನೊಂದಿಗೆ ಅಂತರ ಇರಿಸಿಕೊಂಡಿದ್ದೇನೆ ಅದೆಷ್ಟು ಸಲೀಸಾಗಿ  ನನ್ನನುಕಡೆಗಣಿಸಿ ಮುಂದೆ ಸಾಗಿದೆ ನೀ ನನ್ನನು ಆಯ್ಕೆಯಾಗಿ  ನೋಡಿದ ಮೇಲೆ,ನನ್ನನೇ ನಾ ಆದ್ಯತೆಯನ್ನಾಗಿ ಆರಿಸಿಕೊಂಡಿದ್ದೇನೆ ಮೊಹಬ್ಬತ್ತಿನ ಅದಾಲತ್ತಿನಲಿಮನಸುಗಳೇ ಸಾಕ್ಷಿ ಹೇಳುವವು  ನೀ ಹೃದಯದ ಕರೆಗೆ ಓಗೊಡದಾಗ,ನಾ ನೆನಪುಗಳ ಜೈಲಿನಿಂದ ತಪ್ಪಿಸಿಕೊಂಡಿದ್ದೇನೆ ನಿನ್ನನು ಹಳಸದ ಹೊಂಗನಸಿನಂತೆ  ಸಿಂಗರಿಸಿ ರಾತ್ರಿ ಕಳೆಯುತ್ತಿದ್ದೆನೀ ಮಗ್ಗಲು ಬದಲಿಸಿದ ಮೇಲೆ,ನಾ  ಕಣ್ತುಂಬ ನಿದಿರೆಯನು ಕಟ್ಟಿಟ್ಟುಕೊಂಡಿದ್ದೇನೆ ಹುಸಿ ಕಲ್ಪನೆಯಲಿ ಸುಮ್ ಸುಮ್ಮನೆ ಖರ್ಚಾದಳು ವಾಣಿನೀ ದೂರಾದ ಮೇಲೆ ,ನಾ ಬಾಳಲು ತುಸು ಬದುಕನುಕೂಡಿಟ್ಟುಕೊಂಡಿದ್ದೇನೆ. ವಾಣಿ ಯಡಹಳ್ಳಿಮಠ

ವಾಣಿ ಯಡಹಳ್ಳಿಮಠ‌ ಅವರ ಗಜಲ್ Read Post »

ಪುಸ್ತಕ ಸಂಗಾತಿ

ಡಾ.ಪ್ರಕಾಶ್‌ ಖಾಡೆ ಅವರ ಕೃತಿ “ಬಾಳಕುಣ ಪುರಾಣ”ಅವಲೋಕನ ಜಯಶ್ರೀ.ಭ.ಭಂಡಾರಿ

ಕಾವ್ಯ ಸಂಗಾತಿ ಜಯಶ್ರೀ.ಭ.ಭಂಡಾರಿ ಡಾ.ಪ್ರಕಾಶ್‌ ಖಾಡೆ “ಬಾಳಕುಣ ಪುರಾಣ” ಡಾ.ಪ್ರಕಾಶ ಖಾಡೆ ಈ ಹೆಸರು ನಮ್ಮ ಜಿಲ್ಲೆಯಲ್ಲಿ ಸದಾ ಸಂಚಲನದಲ್ಲಿರುವ ಹೆಸರು. ನಡೆಯಂತೆ ನುಡಿ ನುಡಿಯಂತೆ ನಡೆ ಇವರ ಸ್ವಭಾವ. ಆಡು ಮುಟ್ಟದ ಗಿಡವಿಲ್ಲ ಖಾಡೆಸರ್ ಬರೆಯದ ಸಾಹಿತ್ಯವಿಲ್ಲ ಎಂದು ಸರಳವಾಗಿ ಹೇಳಬಹುದು. ಎಲ್ಲರೊಂದಿಗೆ ಬೆರೆಯುವ, ಮಾತನಾಡುವ ಮೃದು ಸ್ವಭಾವದ ಹಮ್ಮು ಬಿಮ್ಮು ಇಲ್ಲದ ವ್ಯಕ್ತಿತ್ವ. ಇವರ ಮಾತು ನಮಸ್ಕಾರ ಸರ್, ನಮಸ್ಕಾರ ಮೇಡಂ ಎಂಬುದರೊಂದಿಗೆ ಪ್ರಾರಂಭವಾಗುತ್ತದೆ ಅದು ಫೋನ್ ಆಗಿರಲಿ ಎದುರಿಗೆ ಇರಲಿ. ಚಿಕ್ಕವರಿರಲಿ ದೊಡ್ಡವರು ಇರಲಿ ಅದೇ ಸರಳತೆ ಅದೇ ನಯವಿನಯತೆ. ಯಾವುದೇ ವೇದಿಕೆಯಲ್ಲಿ ತಮಗೆ ಕೊಟ್ಟ ಕಾರ್ಯ ಉಪನ್ಯಾಸ, ವಿಚಾರ ಸಂಕಿರಣ, ಜಾನಪದ  ಇರಲಿ ಅತ್ಯಂತ ಸುಂದರವಾಗಿ, ಲೀಲಾಜಾಲವಾಗಿ ಮನತಟ್ಟುವಂತೆ ಮಾತನಾಡಿ ಮುಗಿಸುವ ಶೈಲಿ ಅದ್ಭುತ. ಜಾನಪದದಲ್ಲಿ ಇವರ ಹೆಸರು ಮುಂಚೂಣಿಯಲ್ಲಿದೆ. ಕಾರಣ ಅಷ್ಟು ಜಾನಪದದಲ್ಲಿ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ. ಪ್ರಕಾಶ್ ಸರ್ ನಮಗೆ ಆಗಾಗ ಮುಖಾಮುಖಿ ಆಗುತ್ತಲೇ ಇರುತ್ತಾರೆ.              ಅವರ ಬೆಳಕಾಯಿತು ಬಾಗಲಕೋಟೆ ಎಂಬ ಉಪನ್ಯಾಸ ಸರಣಿ ಫೇಸ್ಬುಕ್ ಲೈವ್ ನಲ್ಲಿ ನಾಡಿನ ವಿದ್ವಾಂಸರಿಂದ ಅವಿಭಜಿತ ವಿಜಯಪುರ ಬಾಗಲಕೋಟೆ ಜಿಲ್ಲೆಯ ಸಾಧಕರನ್ನು ಕುರಿತು 140  ಕ್ಕೂಹೆಚ್ಚು ಉಪನ್ಯಾಸಗಳು ಪ್ರಸಾರವಾಗಿವೆ. ಇವುಗಳಲ್ಲಿ ನನ್ನದು ಒಂದು ಉಪನ್ಯಾಸ ಸೇರಿಕೊಂಡಿದೆ ಇವರ ಒಟ್ಟು 51 ಕೃತಿಗಳು ಪ್ರಕಟವಾಗಿವೆ. ಕನ್ನಡ ಸಾಹಿತ್ಯ ಪರಿಷತ್ತಿನ ಮುದ್ದಣ ಕಾವ್ಯ ಪ್ರಶಸ್ತಿ, ಬೇಂದ್ರೆ ಸಾಹಿತ್ಯ ಪ್ರಶಸ್ತಿ ಹುಬ್ಬಳ್ಳಿಯ ಬೊಮ್ಮಾಯಿ ಪ್ರತಿಷ್ಠಾನ ಪ್ರಶಸ್ತಿ ಆಜೂರ ಪ್ರತಿಷ್ಠಾನ ಪ್ರಶಸ್ತಿ ಹೀಗೆ ಒಂದರ ಹಿಂದೆ ಒಂದರಂತೆ ಸಾಲು ಸಾಲು ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದದ್ದು ವಿಶೇಷ. ಇವರ ಲೇಖನಗಳು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ವಿಜಯಪುರದ ಮಹಿಳಾ ವಿಶ್ವವಿದ್ಯಾಲಯ ಹಾಗೂ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯಗಳ ಪದವಿ ತರಗತಿ ವಿದ್ಯಾರ್ಥಿಗಳಿಗೆ ಪಠ್ಯಗಳಾಗಿವೆ. ನಿಜಕ್ಕೂ ಇದು ಬಾಗಲಕೋಟೆ ಜಿಲ್ಲೆಗೆ ಹೆಮ್ಮೆಯ ವಿಷಯವೇ ಸರಿ.     ಇದೇ ವರ್ಷ ಜೂನ್ ತಿಂಗಳಲ್ಲಿ‌ 60 ತುಂಬಿ ವೃತ್ತಿಯಿಂದ ನಿವೃತ್ತಿ ಹೊಂದಿದರು. ಆದರೆ ಪ್ರವೃತ್ತಿಗೆ ಇನ್ನೂ ಹೆಚ್ಚಿನ ಇಂಬು ಸಿಕ್ಕಂತಾಯಿತು. ಅರಳು ಮರಳು ಎನ್ನುವ ವಯಸ್ಸಿನ ಮರುಳತೆ ಇವರಿಗೆ ಇಲ್ಲವೇ ಇಲ್ಲ. ಮರಳಿ ಅರಳುವದು ಎಂದರೆ ಇವರಿಗೆ ಒಪ್ಪುತ್ತದೆ. ಹಾಗೆ ಇನ್ನೂ ಹೆಚ್ಚಿನ ಕ್ರಿಯಾಶೀಲತೆ ಹೊಂದಿ ನಿತ್ಯವೂ ಒಂದಿಲ್ಲ ಒಂದು ಕಾರ್ಯಕ್ರಮಗಳ ಜರ್ನಿ ನಡೆದೇ ಇದೆ. ಮನುಷ್ಯ ಸದಾ ಕ್ರಿಯಾಶೀಲತೆ ಹೊಂದಿದ್ದರೆ ಅವರಿಗೆ ವಯಸ್ಸು ಒಂದು ಲೆಕ್ಕವಷ್ಟೇ. ಉದಾಹರಣೆ ಖಾಡೆ ಸರ್ ಎಂದು ಹೇಳಬಹುದು. ಕಳೆದೆರಡು ದಶಕಗಳಿಂದ ದಣಿವರಿಯದೆ ಬರೆಯುತ್ತಿರುವ ಅವಿಶ್ರಾಂತ ಬರಹಗಾರರು ನಮ್ಮ ಸಾಹಿತ್ಯ ಲೋಕದ ಒಡನಾಡಿ ಪ್ರಕಾಶ್ ಸರ್.     ನಾನು ಅವರ ಬಗ್ಗೆ ಪ್ರಶಂಸೆ ಮಾಡಲು ಹೊರಟಿಲ್ಲ ಹಾಗೆ ಅವರಿಗೆ ಪ್ರಶಂಸೆಯ ಅವಶ್ಯಕತೆ ಇಲ್ಲ. ಹೂ ಯಾರ ಅನತಿಗೂ ಕಾಯದೆ ಅರಳುತ್ತದೆ. ಹಾಗೆ ಪ್ರಕಾಶ್ ಸರ್ ತಮ್ಮನ್ನು ತಾವು ಸಾಹಿತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಕೆಲವು ಪುಸ್ತಕಗಳು ನನ್ನಲ್ಲಿವೆ. ಅದರಲ್ಲಿ ನಾನು ಇಷ್ಟಪಟ್ಟು ಓದಿದ ಹಾಗೂ ಒಂದೇ ಬಾರಿ ಓದಿ ಮುಗಿಸಿದ ಕಥಾ ಸಂಕಲನ ಎಂದರೆ ‘ಬಾಳುಕುನ ಪುರಾಣ’. ನನಗೆ ಕಥೆ ಓದುವುದೆಂದರೆ ತುಂಬಾ ಇಷ್ಟ. ಆದರೆ ನಾನು ಕಥೆಗಳನ್ನು ಬರೆದಿದ್ದು ತುಂಬಾ ಕಡಿಮೆ. ದೊಡ್ಡಮಟ್ಟದ ಕಥೆಗಳನ್ನು ಬರೆದಿಲ್ಲ. ಸಣ್ಣ ಸಣ್ಣ ಕಥೆಗಳನ್ನು ಬರೆದಿರುವೆ. ಆದರೆ ಅವುಗಳನ್ನ ಅಚ್ಚಾಗಿಸಿಲ್ಲ. ಏನಿದ್ದರೂ ನನಗೆ ಕಾವ್ಯವೇ ಪ್ರಧಾನವಾಗಿ ಆರಿಸಿಕೊಂಡವಳು. ಕಾವ್ಯದ ವಿವಿಧ ಪ್ರಕಾರಗಳಲ್ಲಿ ಬರೆಯಬಲ್ಲೆ. ಅದೇಕೋ ಕತೆ ನನಗೆ ಒಲೆಯಲಿಲ್ಲವೋ ಅಥವಾ ನಾನೇ ಮನಸ್ಸು ಮಾಡಲಿಲ್ಲವೋ ಅರ್ಥವಾಗಿಲ್ಲ. ಆದರೆ ಒಂದಂತೂ ಸತ್ಯ ಪ್ರಕಾಶ್ ಸರ್ ಈ ಎರಡನೇ ಕಥಾಸಂಕಲನ ಓದಿದ ಮೇಲೆ ಕಥೆ ಬರೆಯಬೇಕೆಂಬ ಹಂಬಲ ಹುಟ್ಟಿಕೊಂಡಿದೆ.  ಅಷ್ಟು ಈ ಕಥಾಸಂಕಲನ ನನ್ನ ಮೇಲೆ ಜಾದು ಮಾಡಿದೆ.  ಬಾಳುಕುನ ಪುರಾಣ ಕುರಿತು. ಈ ಕಥಾ ಸಂಕಲನದಲ್ಲಿ ಒಟ್ಟು 10 ಕತೆಗಳಿವೆ. ಅನಿಕೇತ ಪ್ರಕಾಶನ ನವನಗರ ಬಾಗಲಕೋಟೆಯಿಂದ ಪ್ರಕಾಶನಗೊಂಡಿದೆ.ಡಾ. ಬಸು ಬೇವಿನಗಿಡದ ಇವರು ಅತ್ಯಂತ ಸೊಗಸಾಗಿ ಮುನ್ನುಡಿ ಬರೆದಿದ್ದಾರೆ. ಮುನ್ನುಡಿ ಓದಿದರೆ ಸಾಕು 10 ಕಥೆಗಳ ಮಾರ್ಮಿಕ ದರ್ಶನ ಸಿಗುತ್ತದೆ. ಬಸ್ಸು ಸರ್ ಬರವಣಿಗೆಯಲ್ಲಿ ಎತ್ತಿದ ಕೈ. ಅವರಿಂದ ಬರೆಸಿಕೊಂಡ ಬಾಳುಕುನ ಪುರಾಣದ ಮುನ್ನುಡಿ ಹೇಗಿರಬೇಕೆಂದು ಊಹಿಸಿಕೊಳ್ಳಿ. ಕಥಾ ಸಂಕಲನದ ಲೇಖಕರು ಕಥಾ ಸಂಕಲನಕ್ಕೆ ಮುನ್ನುಡಿ ಬರೆದವರು ಇಬ್ಬರೂ ಹೆಮ್ಮೆಯ ಬರಹಗಾರರು. ಬೆನ್ನುಡಿ ಬರೆದು ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಿ ಬೆನ್ನು ತಟ್ಟಿದ ನಾಡಿನ ಖ್ಯಾತ ಕಥೆಗಾರರಾದ ಕುಂವೀ ಸರ್ ಕೂಡ ಅತ್ಯಂತ ಹೃದ್ಯವಾಗಿ ಬೆನ್ನುಡಿ ಬರೆದಿದ್ದಾರೆ. ಮುಖಪುಟ ವಿನ್ಯಾಸ ಮಾಡಿದ ಟಿ .ಎಫ್. ಹಾದಿಮನಿಯವರಿಗೂ ಹೃತ್ಪೂರ್ವಕ ನಮನಗಳನ್ನ ಹೇಳಲೇಬೇಕು. ಕಥಾ ಸಂಕಲನಕ್ಕೆ ಅಷ್ಟು ಸೊಗಸಾದ ವಿನ್ಯಾಸ ಮಾಡಿದ್ದಾರೆ. ಈ ಹತ್ತು ಕಥೆಗಳಲ್ಲಿ ಬಾದಾಮಿ, ಬಾಗಲಕೋಟೆ, ಜಮಖಂಡಿ, ತೊದಲಬಾಗಿ, ಕೆರೂರ, ಇಳಕಲ್ಲ, ಮಹಾಕೂಟ ಹೀಗೆ ಬಾಗಲಕೋಟ ಜಿಲ್ಲೆಯಲ್ಲಿ ಸುತ್ತುವರಿದು ಕಥೆಗಳನ್ನ ಹುಟ್ಟು ಹಾಕಿದ್ದಾರೆ. ಖಾಡೆ ಸರ್ ನಿಸರ್ಗ ಪ್ರೇಮಿ. ಪರಿಸರದ ಕೂಸಾಗಿ ಪರಿಸರವನ್ನೇ ಹಾಸಿ ಹೊದ್ದು ಕಥೆಗಳ ಚೆಲುವನ್ನು ಓದುಗರಿಗೆ ಉಣಬಡಿಸಿದ್ದಾರೆ. ಇಲ್ಲಿನ ಕಥೆಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಿತ ಕಥೆಗಳಾಗಿವೆ. ಗ್ರಾಮ್ಯ ಭಾಷೆಯ ಸೊಗಡನ್ನು ಕಥೆಗಳಲ್ಲಿ ತೊಡಗಿಸಿದ ತಂತ್ರಗಾರಿಕೆಯನ್ನು ಓದಿಯೇ ಅನುಭವಿಸಬೇಕು. ಎಷ್ಟೊಂದು ಹಳೆಯ ಕನ್ನಡ ಶಬ್ದಗಳು ಇಂದು ನಮ್ಮ ನಿಮ್ಮಲ್ಲಿ ಕಳೆದು ಹೋಗಿವೆ. ಅಂತಹ ಶಬ್ದಗಳು ನಿಮಗೆ ಇಲ್ಲಿ ಆರಾಮವಾಗಿ ಸಿಗುತ್ತವೆ. ಆದರೆ ಕನ್ನಡದ ಗ್ರಾಮ್ಯ ಭಾಷೆಯ ಶಬ್ದಗಳನ್ನ ಅರಿಯಲು ನಾವು ಹರಸಾಹಸ ಪಡಬೇಕು. ಕಾರಣ ಇಂದು ನಾವು ಅವುಗಳನ್ನು ಬಳಸುವುದನ್ನೇ ಬಿಟ್ಟಿದ್ದೇವೆ. ಅಂತಹ ಗ್ರಾಮೀಣ ಭಾಷೆಯನ್ನ ಉಳಿಸಿ ಬೆಳೆಸುವ ಮಹತ್ವಪೂರ್ಣ ಕಾರ್ಯ ಈ ಕಥಾಸಂಕಲನದಲ್ಲಿ ಆಗಿದೆ. ನಮ್ಮ ಮಕ್ಕಳು ಮೊಮ್ಮಕ್ಕಳು ಮುಂದಿನ ಪೀಳಿಗೆಗೆ ಈ ಕಥೆಗಳು ಗ್ರಾಮೀಣ ಸೊಗಡನ್ನು ನೀಡಿ ಮರೆಯದೆ ಉಳಿಸಿ ಬೆಳೆಸಲು ಸಹಾಯವಾಗಿದೆ. ಓದಿನ ಪ್ರೀತಿಯನ್ನ ವಿಸ್ತರಿಸುತ್ತಾ ಸಾಗುವ ಜಾಣ್ಮೆ ನಿಜಕ್ಕೂ ಸ್ವಾಗತಾರ್ಹ  ಜಾನಪದ ತಜ್ಞರಾದ ಖಾಡೆ ಸರ್ ಜಾನಪದ ದಾಟಿಯಲ್ಲಿಯೇ ಹಳ್ಳಿಗರನ್ನ ನಮ್ಮ ಜೊತೆ ಮಾತನಾಡಿಸಿದ್ದಾರೆ. ಇಲ್ಲಿಯ ಪಾತ್ರಗಳು ಕಥೆಗಳನ್ನ ಹೇಳುತ್ತಾ ನಮ್ಮನ್ನು ಅದ್ಯಾವುದೋ ಲೋಕಕ್ಕೆ ಕೊಂಡೊಯ್ಯುತ್ತವೆ. ಇಲ್ಲಿ ನಾನು ಯಾವ ಕಥೆಯ ಬಗ್ಗೆ ಬರೆಯಬೇಕು ಎಂಬುದೇ ಗೊತ್ತಾಗುತ್ತಿಲ್ಲ ಕಾರಣ ಎಲ್ಲವೂ ಮೇಲುಗೈ ಸಾಧಿಸಿದ ಕಥೆಗಳೇ ಆಗಿವೆ. ಓದ್ತಾ ಓದ್ತಾ ಒಮ್ಮೊಮ್ಮೆ ಸಂಕೋಚ, ಒಮ್ಮೊಮ್ಮೆ ಹಾಸ್ಯ, ಒಮ್ಮೊಮ್ಮೆ ವಿಡಂಬನೆ, ಅಯ್ಯೋ ಮುಂದೇನಾಗುತ್ತೋ ಎಂಬ ಪೇಚಿನಲ್ಲಿ ಸಿಕ್ಕಿಸುತ್ತದೆ ಕೂಡಲೇ ಏನು ನಡೆಯಲೇ ಇಲ್ಲ ಎಂಬಂತೆ ನಿರಾಳವೆನಿಸುತ್ತದೆ. ಎಳೆ ಎಳೆಯಾಗಿ ಓದಿಸಿಕೊಂಡು ಮೈಮನವೆಲ್ಲ ಅದೇನೋ ಪ್ರಭಾವಲಯ ಆವರಿಸಿದಂತಾಗುತ್ತದೆ. ಕಥೆಗಳನ್ನು ಹೀಗೂ ಬರೆಯಬಹುದಾ ಎಂಬ ಜಿಜ್ಞಾಸೆ ಹುಟ್ಟಿದ್ದು ಸತ್ಯ. ಇಲ್ಲಿಯ ಪಾತ್ರಗಳು ಕೇವಲ ಪಾತ್ರಗಳಾಗಿಲ್ಲ ಅವುಗಳಲ್ಲಿ ಜೀವಂತಿಕೆ ಇದೆ. ನಮ್ಮನ್ನು ಹಿಡಿದಿಡುವ ಉತ್ಸುಕತೆ ಇದೆ. ಆ ಪಾತ್ರಗಳ ಚಿತ್ರಣ ಇಲ್ಲಿಯೇ ನಮ್ಮ ಮುಂದೆಯೇ ನಡೆದಿದೆ ಏನೋ ಎಂದು ಭಾಸವಾಗುತ್ತದೆ. ಬಹಳ ದಿನಗಳ ನಂತರ ಒಂದು ಒಳ್ಳೆಯ ಪುಸ್ತಕ ಓದಿದ ಖುಷಿ ನನ್ನನ್ನು ಆವರಿಸಿತು.        ಅಕ್ಕರ ತಾಯವ್ವ ಹಾಗೂ ಸಾಲಿ ಝಂಡಾ ಕಥೆಗಳಲ್ಲಿ ನನ್ನ ಅನುಭವಗಳು ಇದರಲ್ಲಿ ಇವೆ ಏನೋ ಎಂದು ನನಗೆ ಭಾಸವಾಯಿತು. ಒಪ್ಪಾರೆ ಮೀಸಿ ಅದೆಷ್ಟು ವಿನೋದ ಒಡ್ಡುತ್ತದೆ ಎಂದರೆ ಒಬ್ಬರೇ ನಗಬಹುದು. ‘ಬುದ್ಧ ಪ್ರಿಯೆ ಶಾಂತಿ ಕಥೆಯು ಗಮನಾರ್ಹವಾಗಿ ಮನಸೆಳೆಯುತ್ತದೆ. ವಾಸ್ತವ ನೆಲಗಟ್ಟಿನ ಇವರ ಎಲ್ಲಾ ಕಥೆಗಳಲ್ಲಿ ಜಾನಪದ ಶೈಲಿಯ ಭಾಷೆಯ ಚೆಲುವು ಎದ್ದು ಕಾಣುತ್ತದೆ. ಬಹಿರೂಪಗಾರರ ತಂಡವು ಊರಿಂದ ಊರಿಗೆ ತಮ್ಮ ನಾಟಕ ಪ್ರದರ್ಶನಗಳನ್ನ ಕೊಡುವುದನ್ನು ನಾನು ಕೂಡ ಚಿಕ್ಕವಳಿದ್ದಾಗ ನೋಡಿರುವೆ. ಕೊರವಂಜಿಯವರು, ಪಿನ್ನು ಪುಗ್ಗ ಮಾರುವವರು, ದುರಗಮುರುಗಿಯವರು ಹೀಗೆ ಎಷ್ಟು ರೀತಿಯ ವೇಷ ಹಾಕಿಕೊಳ್ಳುವವರು ಇಂದು ನಮ್ಮ ನಡುವೆ ಸರಿದು ಹೋಗಿವೆ.  ನಾನು ಪ್ರಾಥಮಿಕ ಶಾಲೆಯಲ್ಲಿದ್ದಾಗ   ಚಪಾತಿ ಪಾಂಡ್ಯ ಎನ್ನುವ ಚಿಕ್ಕ ಚಿಕ್ಕ ಸರ್ಕಸ್ ನಲ್ಲಿ ಶಾಲೆಗೆ ಬರುವ ವೇಷಧಾರಿಗಳಲ್ಲಿ ಅತ್ಯಂತ ಹಾಸ್ಯಮಯವಾದ  ನೆನಪಿನಲ್ಲಿ ಉಳಿಯುವ ಪಾತ್ರ.. ಮುಳುಗದಿರಲಿ ಬದುಕು ಇಲ್ಲಿ ಸ್ಕೂಟಿಯಲ್ಲಿ ಬಂದ ಹುಡುಗಿ ಅವನ ಜೀವನದ ಮಹತ್ವಪೂರ್ಣವಾದ ಎಲ್ಲಾ ಕಾಗದ ಪತ್ರಗಳನ್ನ ತಲುಪಿಸುವಲ್ಲಿ ನಡೆಯುವ ತಳಮಳ ನಾವೇ ಅನುಭವಿಸಿದಂತಾಗುತ್ತದೆ. ನನಗೆ ಬಹಳ ಹಿಡಿಸಿದ ಕಥೆ ಮೊದಲ ಕಥೆ. ಅದುವೇ ಬಾಳಕುನ ಪುರಾಣ.    10 ಕಥೆಗಳ ಬಗ್ಗೆ ಬರೆದರೆ ಮತ್ತೊಂದು ಕತೆಯೇ ಆದೀತು. ಅದಕ್ಕೆ ನಾನು ಹಾಗೆ ಮಾಡಲಾರೆ. ಈಗಾಗಲೇ ಬಹಳ ಜನರ ಕೈ ತಲುಪಿದ ಕಥಾ ಸಂಕಲನ ಮನವನ್ನು ತಟ್ಟಿದೆ. ಅಂದಮೇಲೆ ನಾನೇನು ಹೆಚ್ಚಿಗೆ ಹೇಳಲಾರೆ. ಮತ್ತೆ ಮತ್ತೆ ಓದಿಸಿಕೊಳ್ಳುವ ಜಾದು ಮಾತ್ರ ಇದರಲ್ಲಿ ಅಡಗಿದೆ. ತುಂಬಾ ಬೇಜಾರಾದಾಗ ಡಾ. ಪ್ರಕಾಶ್ ಖಾಡೆಯವರ “ಬಾಳಕುಣ ಪುರಾಣ‌‌” ಕೈಗೆತ್ತಿಕೊಳ್ಳಿ ಸಾಕು. ಬೇಜಾರು ಹೇಳ ಹೆಸರಿಲ್ಲದೆ ಓಡಿ ಹೋಗುತ್ತದೆ ಇಷ್ಟು ಮಾತ್ರ ಹೇಳಬಲ್ಲೆ.  ಖಾಡೆ ಸರ್ ಬಗ್ಗೆ ಮತ್ತೆ ಮತ್ತೆ ಹೇಳಿದರೆ ಅದು ಸೂರ್ಯನನ್ನು ಪರಿಚಯ ಮಾಡಿದಂತಾಗುತ್ತದೆ. ಜಯಶ್ರೀ.ಭ.ಭಂಡಾರಿ. ಮುಖ್ಯಾಧ್ಯಾಪಕಿ  ನೂತನ ಪ್ರೌಢಶಾಲೆ ಜಾಲಿಹಾಳ. ತಾ.ಬಾದಾಮಿ. ಜಿ. ಬಾಗಲಕೋಟೆ.  7022762780

ಡಾ.ಪ್ರಕಾಶ್‌ ಖಾಡೆ ಅವರ ಕೃತಿ “ಬಾಳಕುಣ ಪುರಾಣ”ಅವಲೋಕನ ಜಯಶ್ರೀ.ಭ.ಭಂಡಾರಿ Read Post »

ಕಾವ್ಯಯಾನ

ನಾಮದೇವ ಕಾಗದಗಾರ ಅವರ “ನೆಲದ ರೋಧನೆ”

ಕಾವ್ಯ ಸಂಗಾತಿ ನಾಮದೇವ ಕಾಗದಗಾರ “ನೆಲದ ರೋಧನೆ” ಜೀವಂತಿಕೆ ಇಲ್ಲದ ಮಣ್ಣು;ಭೂಮಿಯನ್ನು ನಾವೇಕೊಂದು ನೇತು ಹಾಕಿದ್ದೇವೆ   ​***ಕೊಡಲಿಯ ಅಲಗಿನಲಿಮರಗಳ ಒಡಲು:ಭೂಮಿ ಬೆತ್ತಲೆ..! ಬೇಯುತ್ತಿದೆ   ​***ಎಲ್ಲ ಬದಲಾಗಿದೆ;ಊರುಕೇರಿ ಜೊತೆಗೆಮನುಷ್ಯರೂ ಕೂಡಾ   ​***ಸೂರ್ಯ ಸತ್ತು ಕತ್ತಲಾಗಿದೆಜಗತ್ತು ಬೆತ್ತಲು;ನಾವು ಕಪ್ಪು ಚುಕ್ಕಿಗಳು   ​***ಮರಗಳು ಪದೇ-ಪದೇಕೊಡಲಿಗೇ ಓಟು ಹಾಕುತ್ತಿದ್ದವು!ಭೂಮಿ ಬರಡಾಗಿದೆ   ​***ಮೌನದಲಿ ಆರಿದ ದೀಪ,ಹೊಂಬಿಸಲಾಗಿ ಬಾನಿಗೆಲ್ಲ ಹರಡಿದೆಬಣ್ಣಗಳ ಗರಿಬಿಚ್ಚಿ ಭೂಮಿ ಅಪ್ಪಿದೆ   ​***ಗಾಯಗೊಂಡ ಜಾಗೆಯಲ್ಲಿ ರಕ್ತಕಣ್ಣೀರು;ಚಿತ್ರ ಬಿಡಿಸುತ್ತಾ ರೂಪ ಕಳೆದುಕೊಂಡ ಪರಿಸರ,ಭೂಮಿ ರೋಧಿಸುತ್ತಿದೆ!    ನಾಮದೇವ ಕಾಗದಗಾರ

ನಾಮದೇವ ಕಾಗದಗಾರ ಅವರ “ನೆಲದ ರೋಧನೆ” Read Post »

ಕಾವ್ಯಯಾನ, ಗಝಲ್

ವಾಣಿ ಭಂಡಾರಿ ಅವರ ಗಜಲ್

ಕಾವ್ಯ ಸಂಗಾತಿ ವಾಣಿ ಭಂಡಾರಿ ಗಜಲ್ ನನ್ನ ಪ್ರೀತಿ ಗರಿಕೆಯಂತೆ ಆದರೀಗ ನೋಡು ಸೋತು ಶವವಾಗಿದೆ ಈಗಲಾದರೂ ನನ್ನ ದಫನ್ ಗೆ ಬರುವೆಯಾ.ನೋವಿರದ ಊರೆಲ್ಲಿದೆ ಆ ನೋಟ ಆಟವೀಗ ನೋಡು ಜೀವ ಹಣ್ಣಾಗಿದೆ ಈಗಲಾದರೂ ನನ್ನ ದಫನ್ ಗೆ ಬರುವೆಯಾ. ಸಾವಿನ ಊರಿಗೆ ತೆರಿಗೆ ಕಟ್ಟಬೇಕು ಕನಸಿಗಲ್ಲ ಒಲವು ಒಲವಾಗೇ ಮಣ್ಣಾಗುತಿದೆ ನೋಡಿಲ್ಲಿ.ಬದುಕೊಂದು ಪಾಠ ಶಾಲೆ ಮೊಹಬತ್ ಮುದುರಿ ಕುಸಿದಿದೆ ಈಗಲಾದರೂ ನನ್ನ ದಫನ್ ಗೆ ಬರುವೆಯಾ. ನನ್ನ ನಾನು ಅರಿತ ಮೇಲೆ ಯೌವ್ವನಕ್ಕೂ ಮುಪ್ಪು ಅಡರಿ ಹೆಪ್ಪಾಗಿರುವೆ.ವಿಳಾಸವಿರದ ದಾರಿ ನನ್ನದು ನಿನ್ನ ಪ್ರೀತಿಯುಸಿರು ಜನ್ನತ್ ಗೆ ಚಲಿಸಿದೆ ಈಗಲಾದರೂ ನನ್ನ ದಫನ್ ಗೆ ಬರುವೆಯಾ. ಏನಿದ್ದರೇನು ಇಲ್ಲಿ ಎಲ್ಲ ಮಣ್ಣೊಳಗೆ ಸಿಗುವಾಗ ನನ್ನಾಸೆಗೂ ಅಲ್ಲೆ ಮುಕ್ತಿ ಸಿಗಲಿ ಬಿಡುಈಜಲಾಗದ ಪಾಡು ಕಡಲ ಕಣ್ಣೀರು ಬಡಿದಿದೆ ಈಗಲಾದರೂ ನನ್ನ ದಫನ್ ಗೆ ಬರುವೆಯಾ. ಎಂತ ಗೋಳು “ವಾಣಿ” ನಿನ್ನ ಬಾಳು ಗೆಲ್ಲಲಾಗದ ಒಲವೊಂದು ನಗುತಿದೆ ಬಾನಾಡಿ ಚೆಲ್ಲಿ.ಕನಸಿನ ಅರಮನೆ ಮುರಿದು ಉಸಿರು ತಣ್ಣಗಾಗಿದೆ ಈಗಲಾದರೂ ನನ್ನ ದಫನ್ ಗೆ ಬರುವೆಯಾ.  ವಾಣಿ ಭಂಡಾರಿ  ಶಿವಮೊಗ್ಗ           

ವಾಣಿ ಭಂಡಾರಿ ಅವರ ಗಜಲ್ Read Post »

ಕಾವ್ಯಯಾನ

ಅನುರಾಧಾ ರಾಜೀವ್ ಸುರತ್ಕಲ್ ಕವಿತೆ “ಭಾವಗಳ ಹೂರಣ”

ಕಾವ್ಯ ಸಂಗಾತಿ ಅನುರಾಧಾ ರಾಜೀವ್ “ಭಾವಗಳ ಹೂರಣ” ಬರೆದ ಒಲವ ಓಲೆಯ ತುಂಬಾನಿನ್ನುಸಿರ ಬಿಸಿ ಸಿಂಚನಬೆರೆಸಿ ಪ್ರೇಮದ ಪನ್ನೀರ ಹನಿಯುನೀಡಿ ಎನ್ನೆದೆಗೆ ಹೊಸ ಚೇತನ ಪ್ರತೀ ಪದಗಳಲೂ ತುಂಬಿ ತುಳುಕುತಿದೆನಿನ್ನಂತರಂಗದ ಭಾವಗಳ ಹೂರಣಜೊತೆ ಜೊತೆಗೆ ನಡೆವಾಸೆ ಬದುಕಲಿಕಟ್ಟಿರುವೆ ಬಯಕೆ ತೋರಣ ಪುಳಕಗೊಂಡಿದೆ ತನುಮನ ಒಂದಾಗಿಹೃದಯದೊಳು ನವ್ಯ ಮಿಡಿತತಳಮಳವು ಹೆಚ್ಚಿರೆ ಒಂದೊಮ್ಮೆಕಾಣಬೇಕೆಂಬ ತುಡಿತ ತೆರೆದ ಪುಸ್ತಕದಂತೆ  ನಿನ್ನೊಡಲಮಾತಿನ ಸರಣಿ ಮಾಲೆಮರೆತೆ ಮಧುರ ಅನುಭೂತಿಯಲಿಸೆಳೆಯಿತು ಮೋಹದ ಸೆಲೆ ಅನುರಾಧಾ ರಾಜೀವ್ ಸುರತ್ಕಲ್

ಅನುರಾಧಾ ರಾಜೀವ್ ಸುರತ್ಕಲ್ ಕವಿತೆ “ಭಾವಗಳ ಹೂರಣ” Read Post »

ಪುಸ್ತಕ ಸಂಗಾತಿ

ಸುಧಾರಾಣಿ ನಾಯ್ಕ ಅವರ ಕೃತಿ “ಮನದ ರಿಂಗಣ” ಒಂದು ಓದು ಶಿವಲೀಲಾ ಹುಣಸಗಿ ಯಲ್ಲಾಪುರ

ಪುಸ್ತಕ ಸಂಗಾತಿ ಶಿವಲೀಲಾ ಹುಣಸಗಿ ಯಲ್ಲಾಪುರ ಸುಧಾರಾಣಿ ನಾಯ್ಕ ಅವರ ಕೃತಿ “ಮನದ ರಿಂಗಣ” . ಸುಧಾರಾಣಿ ಉದಯೋನ್ಮುಖ ಹಾಗೂ ಭರವಸೆಯ ಕವಯತ್ರಿ.. ಅವಳ ನೇರ ನಿಲುವು,ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಗಟ್ಟಿಗಿತ್ತಿ.ಅಷ್ಟೇ ಮೃದುವಾಗಿ ಪ್ರೀತಿಗೆ ಕರಗಿ ಹೋಗುವ ಮನಸ್ಸುಳ್ಳವಳು.ಹಾಗಂತ ಅವಳನ್ನು ಹತ್ತಿರದಿಂದ,ದೂರದಿಂದ ಬಲ್ಲವರಿಗೆ’ ಸುಧಾ’ ಅಸಮಾನ್ಯ ಳಂತೂ ಹೌದು.ಕ್ರೀಡಾಪಟು,ನೃತ್ಯಗಾತಿ,ಹಾಡುಗಾರ್ತಿ,ಸಂಘಟಕಿ,ಒಳ್ಳೆಯ ಓದುಗಳು.ಒಟ್ನಲ್ಲಿ ಬಹುಮುಖ ಪ್ರತಿಭೆ ಎಂದರೆ ಅತಿಶಯೋಕ್ತಿಯಲ್ಲ.‘ಸುಧಾ’ ಳ ಚೊಚ್ಚಿಲ ಕವನ ‘ಮನದ ರಿಂಗಣ’ ನನ್ನ ಕೈಗಿತ್ತಾಗ ಸುಧಾ ತನ್ನೆಲ್ಲ ಬವಣೆಗಳ ಹೊತ್ತು ಹೊರಟ ಸಾಮಾನ್ಯ ಮಹಿಳೆಯಂತೆ ಕಾಣುವುದಂತೂ ಸತ್ಯ. ಈ ಕವನಸಂಕಲನದ ಕವಿತೆಗಳನ್ನು ಓದುತ್ತ ಹೊರಟವಳಿಗೆ; ನನ್ನೊಳಗಿನ ಭಾವ ಮೈತಳೆದು ನಿಂತಂತೆ, ಅನುಭವ ಕಟ್ಟಿಕೊಳ್ಳುವತ್ತ ಹೆಜ್ಜೆ ಇಟ್ಟಂತೆ. “ಅವ್ವ” ಕವಿತೆ ಒಂದು ಕ್ಷಣ ಕಣ್ಣತೇವಗೊಳಿಸಿದ್ದು ಗೊತ್ತಾಗಲೇ ಇಲ್ಲ. ಕಣ್ಣೇರಡು ಬತ್ತಿದೆ ಅಪ್ಪನ ಕುಡಿತದ ಅಮಲಿಗೆರಕ್ತ ಅಲ್ಲಲ್ಲಿ ಮರಟಿದೆಎದ್ದ ಬಾಸುಂಡೆಯ ಕುರುಹಾಗಿಆದರೂ ಅವ್ವ ಹಚ್ಚಗೆ ನಗುತ್ತಾಳೆಕಲೆಯ ಮೇಲೆ ಬೆಚ್ಚಗಿನ ಬಟ್ಟೆ ಒತ್ತಿದಂತೆ! ‘ಅವ್ವ’ ಎಂದರೆ ಹಾಗೆ ಅಲ್ಲವಾ? ಎಲ್ಲ ದುಗುಡ ದುಮ್ಮಾನಗಳ ಬದಿಗೊತ್ತಿ ನಗುವ ಛಾತಿ ಹೊತ್ತಿರುವ ಏಕೈಕ ವಿಶ್ವದ ಮಹಿಳೆಯೆಂದರೆ ಅವ್ವ.ಅವಳನ್ನು ಸೋಲಿಸುವುದು ಅಷ್ಟು ಸುಲಭವಿಲ್ಲ.ಆದರೆ ನರಕ ತೋರಿಸುವ ಗಂಡ,ಕೊನೆಗೆ ಇಲ್ಲವಾದಾಗಲೂ ಅವ್ವ ಹೆಬ್ಬಂಡೆಯಂತೆ.ಸುಟ್ಟ ರೊಟ್ಟಿಯಂತೆ ಬೆಂದಾಗಲೂ ಅವ್ವ ನಗುತ್ತಾಳೆ ಎಂದರೆ ಅವಳ ಮೌನ ವ್ಯರ್ಥವಾಗಲು ಬಿಡದ ಛಲಗಾರ್ತಿ ಎಂದರೆ ತಪ್ಪಾಗದು..ಇಂತಹ ವಿಶಿಷ್ಟ ಹಾಗೂ ಸ್ತ್ರೀ ಸಮಾನತೆಯೆಂಬ ಮೌಡ್ಯಗಳು ಒಮ್ಮೆ ಸುಳಿದಾಡಿದ್ದಂತೂ ದಿಟ. ‘ರಂಗೇರಿಸು’ ಎಂಬ ಕವಿತೆ ವಿರಹಿಯಾಗಿ ಕಂಗೆಟ್ಟ ಕನವರಿಕೆಗಳು ಮನತಟ್ಟಿದವು. ನಿನ್ನ ಕನವರಿಕೆಗೆನಿದ್ದೆಗಣ್ಣಲೂ ಕೈ ತಡಕಾಡಿದೆಎದೆಗೊತ್ತಿ ದೂಡಿಮತ್ತೆ ಕಾಡಬೇಡ ಹೋಗೆಂದುಹುಸಿಯಾಗಿ ತಳ್ಳಲು,ಕನಸ ನನಸಾಗಿಸಿ,ಆಲಂಗಿಸುನಮ್ಮ ಮಿಲನಕೆ ಚಂದಿರನುಕೋಟಿ ತಾರೆಯ ಮಧ್ಯೆವಿರಹಿಯಾಗುವಂತೆ!.. ಇದೊಂದು ವಿರಹ ಸಾಕು ಕೋಟಿ ಕಟ್ಟಳೆಗಳ ನಡುವೆಯೂ ಪ್ತೇಮವು ಭಗ್ನಪ್ರೇಮಿಯಂತೆ ರಾರಾಜಿಸುತ್ತಿದೆ..ಸುಧಾಳ ಮನಸ್ಸು ಚಂಚಲವಾಗಿ ಕೊನೆಗೆ ಹಿಡಿದಿಟ್ಟುಕೊಳ್ಳುವ ಕಾರ್ಯ ವೈಖರಿ ಪ್ರೇಮ ಗೆದ್ದಂತೆ ಅನ್ನಿಸದಿರದು. “ಮತ್ತೆ ಆವಿರ್ಭವಿಸು”ಈ ಇದೊಂದು ವಿಶೇಷ ಕವಿತೆ.ವಿಶ್ವಗುರು..ಕ್ರಾಂತಿಕಾರಿ ಬಸವಣ್ಣನವರು ಎಲ್ಲರಿಗೆ ಕಾಯಕವೇ ಕೈಲಾಸ ಎಂದು ಎಲ್ಲರಿಗೂ ಲಿಂಗ ಧಾರಣೆ ಮಾಡಿಸಿ ಸಮಾನತೆಯ ಬೀಜ ಬಿತ್ತಿದ ಮಹಾನ್ ವ್ಯಕ್ತಿಗಳು. ವಚನದೊಂದಿಗೆ ಭವದ ಕಷ್ಟವ ನೂಕಬೇಕು ಎಂಬುದನ್ನು ಸಾರಿದ್ದನ್ನು ಮರೆಯುವಂತ ಸ್ಥಿತಿಗೆ ನಾವೆಲ್ಲ ಬಂದು ನಿಂತಿದ್ದಿವಿ ಎಂದರೆ ವಿಷಾದನೀಯ. ಬದಲಾಗಬೇಕಿದೆ ಮನುಕುಲನೀನೆಣಿಸಿದಂತೆಪ್ರತಿಮೆಯಾಗಿ ಸ್ಥಾವರವಾಗದೇಜಂಗಮವಾಗುಮತ್ತೆ ಅಮರನಾಗು ಅವಿರ್ಭವಿಸು.. ಕವಯತ್ರಿಯ ಅಳಲು ಒಂದೇ ಒಂದು.ಜಾತಿ,ಧರ್ಮ ಮೀರಿ ಮಾರ್ದನಿಸಲಿ ಮಾನವ ಜಾತಿಯೊಂದೆ ಎಂದು ಮತ್ತೆ ಬೋಧಿಸಲಿ ಜಗದ ಚಕ್ಷು ಶುಚಿಯಾಗಲಿ ಎಂಬ ಕಳಕಳಿಗೆ ಮನಸ್ಸು ಮಾಗುವತ್ತ ಸಾಗಿದೆ ಎಂಬುದಕ್ಕೆ ಸಾಕ್ಷಿ.ಪುನಃ ಪುನಃ ಹುಟ್ಟಿ ಬರಬೇಕು ಭಗವಂತನ ಅನುಯಾಯಿಗಳು.. ಎಂಬ ನಿರೀಕ್ಷೆ ಕವಯತ್ರಿಯದು. ನಾನು ಎಂಬ ಕವಿತೆ ಸುಧಾಳ ಒಳಮನಸ್ಸನ್ನು ತಿರುವಿ ಹಾಕಿಬೇಕಿದ್ದನ್ನುಒಮ್ಮೆ ಓದಬೇಕು.‌‍ನಾನು ಎಂದರೆ ಯಾರೆಂಬುದನ್ನು ಮನೋಜ್ಞವಾಗಿ ವಿವರಿಸಿದ್ದಾರೆ.. ಬಾಲ್ಯದಂತೆ ನೋವಾದಾಗಲೆಲ್ಲಸಂತೈಸುವರ ನಿರೀಕ್ಷಸುವಂತಿಲ್ಲಬೊಬ್ವಿಟ್ಟು ಅಳುವಂತಿಲ್ಲಬೆಚ್ಚಿಬಿಟ್ಟೆ ನಾನು ನನ್ನ ಅಸ್ತಿತ್ವ ನೆನದುಸತ್ಯದ ವ್ಯಂಗ್ಯನಗೆಗೆ ಶೂನ್ಯವೆನಿಸಿತುನನಗೆ ‘ನಾನು’ ಎಂಬ ಹೆಗ್ಗಳಿಕೆಗೆ ನಾನು ಎಂಬ ಮರಿಚೀಕೆಯ ಒಳಹೊರಗು ಪ್ರತಿಯೊಬ್ಬರಲ್ಲೂ ನಾನೆಂಬುದು ಹಾಸುಹೊಕ್ಕಾಗಿದೆ.ಕೊನೆಗೆ ವಿಷಾದದ ನಗೆಯಲ್ಲಿ ಜೀವನದಲ್ಲಿ ನಿಂತಿರುವುದು ನಾನೆ ಎಂಬ ಶೂನ್ಯ ಅರಿವಾದಾಗ ನಮ್ಮ ಅಸ್ತಿತ್ವ ಎಷ್ಟು ಬೇರು ಬಿಟ್ಟಿದೆ ಎಂಬುದು ಗೋಚರಿಸುತ್ತದೆ. ಹೀಗೆ ಕವಯತ್ರಿಯ ಪಯಣ ಸುಖ,ದುಃಖ, ನೋವು ನಲಿವು,ಕೋಪ,ಒಂಟಿತನ,ಅಪ್ಪ,ಬುದ್ದನೊಬ್ಬನೇ,ಇಂತಾದರೆ ಉಳಿದಿತೇ ಸ್ವಾತಂತ್ರ್ಯ, ಪೊರಕೆ ಮಾರುವ ಹುಡುಗಿ,ಕೆಣಕಬೇಡಿ, ಒಲವ ಧ್ಯಾನ,ಶಪಥ,ಮಂದಾಗ್ನಿ,ಒಲವ ಪ್ರಣತಿ, ಹೀಗೆ ಒಟ್ಟು 44 ವೈವಿಧ್ಯಮಯ ಕವಿತೆಗಳು ಒಮ್ಮೆ ಪ್ರಕೃತಿಯನ್ನು, ಮತ್ತೊಮ್ಮೆ ಸಂಬಂಧಗಳು,ಇನ್ನೊಂದು ಮತ್ತೆ ಹೆಣ್ಣಾಗಿ ಹುಟ್ಟಬೇಕಿದೆ ಎಂಬ ಭಾವಗಳು ಶವಯಾತ್ರೆಯ ಮುಂದೆ ಸಮಾಧಿ ತನಕ ಸುಧಾಳ ಮನದಲ್ಲಿ ರಿಂಗಣಿಸಿದ ಎಲ್ಲ ಪಾತ್ರಗಳು ಅನಾವರಣಗೊಂಡಿದ್ದು ಕವಯತ್ರಿಯ ಭಾವಯಾನದಲ್ಲಿ ಅಲ್ಲಲ್ಲಿ ಮೈಲುಗಲ್ಲುಗಳನ್ನು ನಿಲ್ಲಿಸಲು ಪ್ರಯತ್ನ ಮಾಡಿರುವುದು ಅಭಿನಂದನಾರ್ಹ. ಒಟ್ಟಾರೆ ಹೇಳುವುದಾದರೆ, ಕವನಸಂಕಲನ ಕರ್ನಾಟಕ ಸರ್ಕಾರ ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಇವರ ಧನಸಹಾಯ ಪಡೆದ ಕೃತಿ ಇದಾಗಿದ್ದು ಉತ್ತಮ ಸಂವಹನ ಹಾಗೂ ಓದುಗನ ಮನದಲ್ಲಿ ಒಂದಿಷ್ಟು ಕವಿತೆಗಳ ಸಾಲುಗಳು ನೆಲೆನಿಲ್ಲುವುದಂತೂ ದಿಟ!.ಹೀಗೆ ಸಾಗಲಿ ಅಕ್ಷರಗಳ ಪ್ರೇಮ,ಶಿಲ್ಪಿಯ ತೆರದಿ ಉಳಿಬಿಳಲಿ ಕವಿತೆಗಳ ಅಂತರಂಗಕೆ,ಅದರ ಸದ್ದುಗಲ್ಲುಗಲ್ಲಿಗೂ ಡಂಗುರ ಸಾರುವಂತಿರಲೆಂದು ಶುಭ ಹಾರೈಸುವೆ…                                          ಶಿವಲೀಲಾ ಹುಣಸಗಿ 

ಸುಧಾರಾಣಿ ನಾಯ್ಕ ಅವರ ಕೃತಿ “ಮನದ ರಿಂಗಣ” ಒಂದು ಓದು ಶಿವಲೀಲಾ ಹುಣಸಗಿ ಯಲ್ಲಾಪುರ Read Post »

ಕಾವ್ಯಯಾನ

ಕಲ್ಪನಾ ಎಸ್ ಪಾಟೀಲ”ನಮ್ಮ ಕನಸಿನ ಮನೆ”

ಕಾವ್ಯ ಸಂಗಾತಿ ಕಲ್ಪನಾ ಎಸ್ ಪಾಟೀಲ “ನಮ್ಮ ಕನಸಿನ ಮನೆ” ಈ ಮನಸು ಕನಸಲ್ಲೆ ಮನೆ ಕಟ್ಟುತಿತ್ತುಒಂದೊಂದಾಗಿ ಕೋಣೆಯ ಅಡಿಪಾಯ ಹಾಕಿಸಿನಮ್ಮ ಕನಸಿನ ಮನೆ*ತ್ತುಇಟ್ಟಿಗೆಗಳ ಒಂದರ ಮೇಲೊಂದು ಏರಿಸಿತ್ತುಪ್ರೀತಿ ಪ್ರೇಮವೆಂಬ ಗಟ್ಟಿತನದ ಸಿಮೆಂಟಿತ್ತು. ಶುದ್ಧ ಗಾಳಿ ಬೆಳಕು ಬರುವಂತೆಮನೆ ಮುಂದೆ ಗಿಡ ನೆಡುವಂತೆನೆರಳಿನಾಸರೆ ಹಕ್ಕಿ ಪಿಕ್ಕಿಗಳು ಪಡೆದಂತೆನಮ್ಮ ತಲೆಯ ಮೇಲೊಂದು ಸೂರಂತೆ. ಒಂದು ಸ್ವಂತಕ್ಕೆ ಮೇಲೊಂದು ಬಾಡಿಗೆಗೆಪುಟ್ಟ ಗ್ರಂಥಾಲಯ ಒಂದು ಒಳಗೆಒಳಾಂಗಣ ಹೊರಾಂಗಣ ಆಟಕೆ ಮಕ್ಕಳಿಗೆವಿಶ್ರಾಂತಿ ಕೋಣೆ ಬಂದ ಅತಿಥಿಗಳಿಗೆ. ಪುಟ್ಟ ಗೂಡಿನ ಕನಸೊಂದ ಕಂಡಿಹೆನುಬ್ಯಾಂಕಲ್ಲಿ ಕೊಡುವರಂತೆ ಕಟ್ಟಲು ಲೋನುಮಳೆರಾಯ ಒಳ ಬಂದು ಸೋಕಿದನುಕನಸಿಂದ ವಾಸ್ತವಕೆ ದೂಡಿದ ಮನವನು. ಕಲ್ಪನಾ ಎಸ್ ಪಾಟೀಲ

ಕಲ್ಪನಾ ಎಸ್ ಪಾಟೀಲ”ನಮ್ಮ ಕನಸಿನ ಮನೆ” Read Post »

ಇತರೆ

“ಟೆಂಟ್ ಸಿನಿಮಾದಿಂದ ಸಿನಿಮಾ ರಂಗಕ್ಕೆ ಆಟೋ ನಾಗರಾಜ್.” ಗೊರೂರು ಅನಂತರಾಜು

ವ್ಯಕ್ತಿ ಸಂಗಾತಿ ಗೊರೂರು ಅನಂತರಾಜು “ಟೆಂಟ್ ಸಿನಿಮಾದಿಂದ ಸಿನಿಮಾ ರಂಗಕ್ಕೆ ಆಟೋ ನಾಗರಾಜ್.” ಬಂಗಾರದ ಮನುಷ್ಯ ಚಿತ್ರದಿಂದ ಡಾ. ರಾಜ್ ಕುಮಾರ್ ಹಳ್ಳಿಯಲ್ಲೇ ಜೀವಿಸಿ ವ್ಯವಸಾಯ ಮಾಡುವ ರೈತರಿಗೆ ರೋಲ್ ಮಾಡಲ್ ಆದರು. ಆಟೋರಾಜ ಸಿನಿಮಾದಿಂದ ಆಟೋ ಚಾಲಕರಿಗೆ ರೋಲ್ ಮಾಡೆಲ್ ಆದವರು ಶಂಕರ್ ನಾಗ್. ನಾನೀಗ ಬರೆಯ ಹೊರಟಿದ್ದು ಆಟೋ ನಾಗರಾಜ್ ಕಥೆ. ಇವರು ಮೂಲತ; ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂ ಕಿನ ಮೇಗಲಪುರದವರು. ವಿದ್ಯಾರ್ಥಿ ಜೀವನದಲ್ಲಿ ಎಸ್.ಎಸ್.ಎಲ್.ಸಿ. ಒಂದು ಪ್ರಮುಖ ಘಟ್ಟ. ಇಲ್ಲಿ ಫೇಲಾದವರು ಮುಂದೆ ಓದುವ ಆಸಕ್ತಿ ಕಳೆದುಕೊಳ್ಳುವರು. ಓದು ಬಿಟ್ಟು ಕೆಲಸ ಹುಡುಕುವರು. ಅಂತೆಯೇ ನಾಗರಾಜ್ ಹೆಚ್.ಐ,ಎಸ್, ಎಂಬ ಸಿನಿಮಾ ಟೆಂಟಿನÀಲ್ಲಿ ಟಿಕೇಟ್ ಹರಿದುಕೊಡುವ ಕೆಲಸ ಹುಡುಕಿಕೊಂಡರು. ನಂತರ ಹಲಗೂರು ದೊಡ್ಡಿ ಮಂಡ್ಯ ಸುತ್ತುವ ಖಾಸಗಿ ಬಸ್ಸಿನಲ್ಲಿ ಕಂಡಕ್ಟರ್ ಕಮ್ ಕ್ಲೀನರ್ ಆದರು. ಸಿನಿಮಾದಲ್ಲಿ ನಟನಾಗಬೇಕೆಂಬ ಆಸೆ ಸಿನಿಮಾ ಟೆಂಟ್‌ನಲ್ಲಿ ಟಿಕೇಟ್ ಕೊಡುವಾಗಲೇ ತಲೆಯಲ್ಲಿ ಬೇರೂರಿದೆ. ಬಸ್ ಟಿಕೇಟ್ ಕೊಟ್ಟು ಡ್ರೆöÊವರ್‌ಗೆ ರೈಟ್ ಹೇಳಿ ನೈಟೆಲ್ಲಾ ನಟನೆಯ ಕನಸು ಕಾಣುತ್ತಾರೆ. ಸಿನಿಮಾ ಗುಂಗಿನಲ್ಲೇ ಬೆಂಗಳೂರಿಗೆ ಬರುತ್ತಾರೆ. ಆಟೋ ಸ್ಟಾö್ಯಂಡ್‌ನಲ್ಲಿ ಆಟೋ ತೊಳೆಯುತ್ತಾ ಆಟೋ ಡ್ರೆöÊವರ್ ಆಗುತ್ತಾರೆ. ತುಮಕೂರು ಮಹಾದೇವಯ್ಯ ಆಟೋ ಖರೀದಿಸಲು ನೆರವಾಗುತ್ತಾರೆ. ರಿಕ್ಷಾ ಓಡಿಸಿದ್ರೂ ಚಿನ್ನಾ ರಿಚ್ ಆಗಿ ಸಾಕ್ತೀನಿ ನಿನ್ನಾ..ಎಂದು ಆಟೋ ಹಿಂದೆ ಬರೆಸಿ ಐದು ವರ್ಷ ಯಾವುದೇ ಸಿನಿಮಾದಲ್ಲಿ ಅವಕಾಶ ಸಿಕ್ಕದೇ ಆಟೋ ಓಡಿಸಿ ಜೀವನ ನಡೆಸುತ್ತಾರೆ. ಹೀಗಿರಲು ಒಮ್ಮೆ ಇವರು ಕಂಠೀರವ ಸ್ಟುಡಿಯೋಗೆ ಬಾಡಿಗೆಗೆ ಹೋಗಿ ಅಲ್ಲಿ ನಡೆಯುತ್ತಿದ್ದ ಶೂಟಿಂಗ್ ನೋಡುತ್ತಾ ನಿಲ್ಲುತ್ತಾರೆ. ನಿರ್ದೇಶಕರು ಓಂ ಸಾಯಿ ಪ್ರಕಾಶ್ ಜನರನ್ನು ಹಿಂದೆ ಕಳಿಸಲು ಸಹಾಯಕರಿಗೆ ತಿಳಿಸಲು ಈ ತಳ್ಳಾಟದಲ್ಲಿ ನಾಗರಾಜ್ ಕೆಳಗೆ ಬೀಳುತ್ತಾರೆ. ಅಂದು ಕೆಳಗೆ ಬಿದ್ದವ ಮತ್ತೇ ಮೇಲೆದ್ದು ಇದೇ ಓಂ ಸಾಯಿ ಪ್ರಕಾಶ್ ಮಾರ್ಗದರ್ಶನದಂತೆ ಆಟೋಗಳಿಗೆ ಸಿನಿಮಾ ಪೋಸ್ಟರ್ ಅಂಟಿಸಿ ಪ್ರಚಾರ ಮಾಡುವ ಮೂಲಕ ಸಿನಿಮಾ ರಂಗದ ಸಂಪರ್ಕ ಸಾಧಿಸಿ ಪೋಷಕ ನಟರಾಗಿ ಅವಕಾಶ ಗಿಟ್ಟಿಸುತ್ತಾರೆ. ಇವರ ೨೦ ವರ್ಷಗಳ ಗತ ಇತಿಹಾಸದಲ್ಲಿ ೬೦ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದಾರೆ. ದರ್ಶನ್ ಅಭಿನಯದ ಸಾರಥಿ ಸಿನಿಮಾದಲ್ಲಿ ತೂಗುದೀಪ ದಿನಕರ್ ನಟನೆಗೆ ಅವಕಾಶ ನೀಡಿ ಈ ಸಿನಿಮಾದ ಹಾಡಿಗೆ ೪೦೦ ಆಟೋಗಳು ಬೇಕಾಗಿ ಇಷ್ಟೂ ಆಟೋ ಸರಬರಾಜು ಮಾಡಿದ ಸಂಘಟಕರು ಈ ಆಟೋ ನಾಗರಾಜ್.ಈ ಪಾದ ಪುಣ್ಯಪಾದ ಹಾಗೂ ಸರ್ವಾಂತರ್ಯಾಮಿ ಚಿತ್ರಗಳಲ್ಲಿ ಇವರದು ಮುಖ್ಯ ಪಾತ್ರ. ಕಳೆದ ವರ್ಷ ಮೈಸೂರು ದಸರಾ ಫಿಲಂ ಫೆಸ್ಟಿವೆಲ್‌ನಲ್ಲಿ ಈ ಪಾದ ಪುಣ್ಯಪಾದ ಸಿನಿಮಾ ಪ್ರದರ್ಶನ ಮಾಲ್ ಆಫ್ ಮೈಸೂರು ಶಾಪಿಂಗ್ ಕಾಂಪ್ಲೆಕ್ಸ್ನ ಐನಾಕ್ಸ್ನಲ್ಲಿ ಇತ್ತು. ಇದೊಂದು ಆನೆಕಾಲು ರೋಗಿಯ ಕಥೆ. ಈ ಸಿನಿಮಾ ಪ್ರೇಕ್ಷಕನಿಗೆ ಹೊಸ ಆಯಾಮದಲ್ಲಿ ಪರಿಣಾಮ ಬೀರುತ್ತದೆ. ಮನುಷ್ಯನಿಗೆ ಒಂದಲ್ಲ ಒಂದು ರೀತಿಯ ಕಾಯಿಲೆಗಳು ಬರುತ್ತವೆ. ರೋಗ ಬಂದಾಗ ರೋಗಕ್ಕಿಂತ ಮಾನಸಿಕ ಯಾತನೆಯೇ ಜಾಸ್ತಿ. ಅಂತಹ ವೇಳೆ ಎದೆಗುಂದದೆ ತಾಳ್ಮೆಯಿಂದ ಎದುರಿಸಬೇಕೆಂಬ ಸಂದೇಶ ನೀಡುವ ಚಿತ್ರದ ನಿರ್ದೇಶಕ ಸಿದ್ಧು ಪೂರ್ಣಚಂದ್ರ. ಇವರ ನಿರ್ದೇಶನದ ದಾರಿ ಯಾವುದಯ್ಯ ವೈಕುಂಠಕ್ಕೆ ಸಿನಿಮಾಕ್ಕೆ ನೂರಕ್ಕೂ ಹೆಚ್ಚು ರಾಷ್ಟಿçÃಯ, ಅಂತಾರಾಷ್ಟಿçÃಯ ಪ್ರಶಸ್ತಿ ಬಂದಿವೆ. ಸಿದ್ದು ಈ ಮೊದಲೇ ನನಗೆ ಪರಿಚಿತರಾಗಿದ್ದರು. ಇವರ ಕರೆಯ ಮೇರೆಗೆ ಅಂದು ಮೈಸೂರಿಗೆ ಹೋಗಿದ್ದ ನಾನು ಸಿನಿಮಾ ನೋಡಿ ವಿಮರ್ಶೆ ಬರೆದಿದ್ದೆ. ಮಾರನೇ ದಿನ ಬೆಳಿಗ್ಗೆಯೇ ಆಟೋ ನಾಗರಾಜು ಪೋನ್ ಮಾಡಿ ಥ್ಯಾಂಕ್ಸ್ ಹೇಳಿ ಖುಷಿ ಹಂಚಿಕೊAಡಿದ್ದರು. ಇವರ ಮುಖ್ಯ ಪಾತ್ರದ ಸರ್ವಾಂತರ್ಯಾಮಿ ಚಿತ್ರ ಬಿಡುಗಡೆಯಾಗಿದೆ. ಸರ್ವಾಂತರ್ಯಾಮಿ ಪದದ ಅರ್ಥ ಎಲ್ಲರ ಮನಸ್ಸಿನಲ್ಲಿ ಇರುವವ ಮತ್ತು ಎಲ್ಲರ ಮನದ ಮಾತನ್ನು ತಿಳಿದುಕೊಂಡಿರುವವ ಎಂದರ್ಥ. ಮೊಬೈಲ್ ಪೋನ್ ದುರುಪಯೋಗದ ದುರಂತ ಕಥೆ ಹೇಳುವ ಈ ಸಿನಿಮಾದ ನಿರ್ದೇಶಕರು ರಂಗಸ್ವಾಮಿ ಕಪನಿಪಾಳ್ಯ. ಇವರು ಈ ಮೊದಲು ಕೃಷ್ಣ ಲೀಲಾ, ಅಮ್ಮ ಐ ಲವ್ ಯು, ಶಿವಾಜಿನಗರ, ತಾಯಿಗೆ ತಕ್ಕ ಮಗ ಇರುವುದೆಲ್ಲವ ಬಿಟ್ಟು, ಕಾಟೇರ ರಾರ‍್ಟ್ ದೃಶ್ಯ, ರಸ್ತುಂ ಮೊದಲಾದ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಯದರ‍್ಗಿ, ಗುಡ್ಡದ ಭೂತ, ವಿಚಾರಣೆ, ಬಸ್ ಕಂಡಕ್ಟರ್ ಮೈಸೂರ್ ಡಾನ್ ಇವು ಇವರ ಮುಂಬರುವ ಚಿತ್ರಗಳು. ಚಿತ್ರರಂಗದಕ್ಕೆ ಬಂದು ನಟನಾಗಿ ಗರ‍್ತಿಸಿಕೊಂಡಿದ್ದರು ನಾಗರಾಜ್ ಮುಂದೆ ಆಟೋ ಪದವನ್ನು ಬಿಟ್ಟಿಲ್ಲ. ಇದು ಬದುಕಿನ ಪಾಠ. ಗೊರೂರು ಅನಂತರಾಜು, ಹಾಸನ.ಮೊ: ೯೪೪೯೪೬೨೮೭೯.ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ-೫೭೩೨೦೧.

“ಟೆಂಟ್ ಸಿನಿಮಾದಿಂದ ಸಿನಿಮಾ ರಂಗಕ್ಕೆ ಆಟೋ ನಾಗರಾಜ್.” ಗೊರೂರು ಅನಂತರಾಜು Read Post »

You cannot copy content of this page

Scroll to Top