ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಥಾಗುಚ್ಛ

“ಚಲುವ” ಸಣ್ಣ ಕಥೆ ಬಿ.ಟಿ.ನಾಯಕ್‌ ಅವರಿಂದ

ಕಥಾ ಸಂಗಾತಿ ಬಿ.ಟಿ.ನಾಯಕ್‌ “ಚಲುವ” ಚೆಲುವಣ್ಣ, ಮಾದಣ್ಣ ಒಳ್ಳೆಯ ಸ್ನೇಹಿತರು.. ಆಗೊಮ್ಮೆ ಈಗೊಮ್ಮೆ ಅವರಿಬ್ಬರೂ ಭೇಟಿ ಮಾಡಿ ಯಾವುದೋ ಸಾಂಧರ್ಭಿಕ ವಿಷಯದ ಬಗ್ಗೆ ಚರ್ಚಿಸಿ ಸಮಸ್ಯೆಗಳನ್ನು ಪರಿಹರಿಸಿ ಕೊಳ್ಳುತ್ತಿದ್ದರು. ಅವರಿಬ್ಬರ ಸ್ನೇಹ ಅಚಲವಾಗಿತ್ತು.  ಒಮ್ಮೆ ಮಾದಣ್ಣ ಯಾವುದೋ ಕೆಲಸದ ಮೇಲೆ ಪರ ಊರಿಗೆ ಹೋದಾಗ, ಅಲ್ಲಿ ಅನಿವಾರ್ಯವಾಗಿ ತಿಂಗಳುಗಟ್ಟಲೆ                                              ಅಲ್ಲಿದ್ದಾಗ ಮರಳಲು ಸಮಯವೇ  ಹಿಡಿಯಿತು. ಇನ್ನೇನು ಚಡಪಡಿಸುತ್ತಿದ್ದ ಮಾದಣ್ಣನಿಗೆ ಹೇಗೋ ಒಂದು ದಿನ ಮರಳಿದ.  ಆಗ ತಕ್ಷಣಕ್ಕೆ ಚೆಲುವನನ್ನು ಭೇಟಿ ಮಾಡುವುದೇ ಆತನ ಪ್ರಥಮ ಆದ್ಯತೆಯಾಗಿ, ಆ ಪ್ರಕಾರ ಚೆಲುವನನ್ನು ಭೇಟಿ ಮಾಡಿ ಆತನನ್ನು ಆಲಂಗಿಸಿಕೊಂಡ ಮತ್ತು ಮಾತಿನಲ್ಲಿ ಚೆಲುವನೇ ಮುಂದಾದ;‘ಪ್ರಯಾಣದಲ್ಲಿ ತೊಂದ್ರೆ  ಆಯ್ತಾ ಮಾದಣ್ಣ?   ಅಲ್ಲಿಯ ಕೆಲಸ ಪೂರ್ತಿ ಆಯ್ತಾಹೇಗೆ ?’ ಎಂದಾಗ;‘ಅಂಥಹ ಘನ ಕೆಲಸ ಅಲ್ಲೇನಿಲ್ಲವಾದರೂ, ನಮ್ಮ ಬೀಗರಿಗೆ ಕೃಷಿ ಕೆಲಸದಲ್ಲಿ ಆಸರೆಯಾಗಿ ಬಂದಿದ್ದೇನೆ ಅಷ್ಟೇ.  ಅಲ್ಲಿಗೆ ಹೋಗಿ ಬಂದದ್ದು ನೆಮ್ಮದಿ ತಂದಿದೆ.  ಇನ್ನೇನು ಒಂದೇ ಕೊರತೆ ಎಂದ್ರೆ, ಸ್ವಂತ ಊರು ಬಿಟ್ಟು ಅಷ್ಟು ದಿನಗಳು ಹೊರಗೆ ಇರೋದು ಶಾನೆ ಕಷ್ಟ ಕಣಣ್ಣ.  ಸರಿ, ನೀನ್ಹೇಗೆ ಇದ್ದೀಯಾ ?’‘ಏನು ಹೇಳ್ಲಿ ಮಾದಣ್ಣ ನನ್ನ ಮಂಡಿಗಳು ಪ್ರಾಣ ಹಿಂಡ್ತಿವೆ.  ಅವು ಯಾಕಾದರೂ ನಂಜೊತೆಗೆ ಇವೆ ಎನ್ನಿಸುತ್ತಿದೆ .  ಈ ಮಂಡಿಗಳ ನೋವು ತಾಳೋದು ಶಾನೇ ಕಷ್ಟ.ನಂಗೆ ನಿಂತ್ರೂ, ಕುಂತ್ರೂ ಸಮಾಧಾನಾನೇ ಇಲ್ಲ.  ಏನ್ ಮಾಡೋದು ಕಣ್ಲಾ, ಇದು ನನ್ನ ಕರ್ಮ ಅಂತ ಅಂದ್ಕೊತೀನಿ.  ಏಕೆಂದರೆ, ಅದ್ರಿಂದ ನಂಗೆ ಅಳೋದು ತಪ್ತಿಲ್ಲ ‘.‘ಅದೇನ್ಲಾ ಮಂಡಿ ನೋವಿಗೀ ಇಷ್ಟು ಹೆದ್ರಿದ್ರೆ ಹೇಗೆ ? ನೀನು ಗಂಡ್ಸು ಕಣ್ಲಾ, ತಡ್ಕೋಬೇಕು.  ನೀನೇನಾದರೂ ಡಾಕ್ಟರ್ ಹತ್ರ ಹೋದ್ರೇ ಮಂಡಿಗಳನ್ನು ಕುಯ್ದೇ ಬಿಡ್ತಾರೆ ಆಟೇಯಾ’.‘ಏನೋ ಅಪ್ರೂಪಕ್ಕೆ ಸಿಕ್ಕ ಸ್ನೇಹಿತಾಂತ ನಿನ್ನತ್ರ ಹೇಳ್ಕೊಂಡ್ರೆ, ಅದೇನ್ಲಾ ಹೆದರಿಸ್ತೀಯಾ. ನಾನು ನಿನ್ನ ಕುಚುಕು ಕಣ್ಲಾ’‘ಕಂಡೀವ್ನಿ ಬಿಡು, ಸ್ವಲ್ಪ ನೋವು ತಡ್ಕೋ ಅಂತ ಹೇಳಿದೆ ಆಟೇಯಾ ‘‘ಅಷ್ಟು ಹೇಳಿದ್ರೆ ಆಯ್ತಾ ನಿನ್ ಕೆಲ್ಸಾ ?  ನೋವು ಕಡಿಮೆ ಮಾಡೋವ್ರು ಯಾರಾದ್ರೂ ಇದ್ರೆ ಹೇಳ್ಬೇಕು ಅಂತ ನನ್ ಬಗ್ಗೆ  ಕಾಳಜಿ ಬೇಡ್ವಾ ? ‘‘ಇದ್ಕೊಂದು ಬೆಳ್ಕು ಕಂಡೀವ್ನಿ ಕಣ್ಲಾ.  ಅದು ನಿಂಗೆ ಒಗ್ತದೋ ಇಲ್ವೋ ತಿಳ್ದಿಲ್ಲ.’  ‘ಅದೇನ್ಲಾ ಆಂಥೋದು, ವಸಿ ಹೇಳ್ಬಿಡು, ನಾನಾದ್ರೋ ಶಾನೇ ಒದ್ದಾಡ್ತಿದ್ದೀನಿ’‘ಸರಿ, ನಾವಿಬ್ರೂ ಎಣ್ಣೆ ಬಾರಿಗೆ ಹೋಗೋಣ, ಅಲ್ಲಿ ಕಂಠ ಪೂರ್ತಿ ಕುಡ್ಕಂಡಾಗ ನೋವೆಲ್ಲಾ  ಮಾಯವಾಗಿ ಹೊಂಟೋಯ್ತದೆ..’‘ಥೂ..ನಿನ್ನ ಜನ್ಮಕ್ಕೆ ಬೆಂಕಿ ಹಾಕ. ಅದೇನೋ ಒಳ್ಳೆಯ ದಾರಿ ತೋರಿಸ್ತೀ ಅಂತ ಅನ್ಕೊಂಡ್ರೆ, ಬಾರಿನ ಕಡೆಗೆ ತೋರಿಸ್ತೀಯಾ.  ಸ್ವಲ್ಪ ಇರು ನಿನ್ನೆಂಡ್ರಿಗೆ ಹೀಂಗೆ ಹೇಳಿ ಬಿಡ್ತೀನಿ,ಆಗ ಆಕೆನಿಂಗೆ ಚೆನ್ನಾಗಿ ಬಜಾಯಿಸ್ತಾಳೆ.  ಆಗ ತಿಳೀತದೆ.’‘ಬುಡು ಕಣಣ್ಣ. ಹಂಗ್ಯೇನಾದ್ರೂ ಆ ಪಾಟಿ ಮಾಡೀಯಾ.  ಇರಲಿ ಇಸ್ಯಕ್ಕೆ ಬರ್ತೀನಿ.  ಏನೋ ಒಬ್ರು ಸಾಬ್ರು ಎಸ್ರು ಕೇಳಿವ್ನೀ..ತಡ್ಕೋ ಗ್ಯಪ್ತಿ ಮಾಡ್ಕೊಂಡು ಹೇಳ್ತೀನಿ’ ಎಂದು ಕೊಂಚ ಹಾಗೆ ಇರಲು ಸನ್ನೆ ಮಾಡಿದ.  ‘ಸರಿ..ಸರಿ ಅದೇನೋ ಅಂತ ಯೋಚಿಸಿ ಹೇಳು’ ಎಂದು ಅವನನ್ನು ಅಲ್ಲಾಡಿಸಿ ಕೇಳಿದ.‘ಸುಮ್ನಿರು ಕಣ್ಲಾ….ನಂಗೆ ಯೋಚಿಸ್ಲಿಕ್ಕೆ ಬಿಡು’‘ಅಯಿತಾಯಿತು..’ ಎಂದು ಚೆಲುವ ಕೊಂಚ ಹೊತ್ತು ಸುಮ್ಮನಾದ.ಆನಂತರ ಮಾದಣ್ಣ ದೊಡ್ಡ ವಿಜ್ಞಾನಿಯ ಹಾಗೆ ಏನೋ ಕಂಡು ಹಿಡಿದವನಂತೆ  ಜೋರಾಗಿ ಕೂಗಿಕೊಂಡ;‘ಚೆಲುವಾss ಅವನು ಸಿಕ್ಕಾ ! ‘‘ಯಾರದೂ ss ? ‘‘ಅದೇ ನೀನು ಕೇಳಿದೆಯಲ್ಲ ಮಂಡಿ ನೋವಿನ  ಡಾಕ್ಟರ್’ !‘ಹೌದಾ.. ಅತ್ನ ಎಸ್ರು ಏನು ಕಂಡ್ಲಾ ? ಆತ ಎಲ್ಲಿರ್ತಾನೆ ?’‘ಆತ್ನ ಏಸ್ರು ಅಸಗರ್ ಸಾಬ ?’‘ಅದೆಂಥಹ ಹೆಸ್ರು ಕಣ್ಲಾ ಆ ಸಾಬಿಯಪ್ಪಂದು ?’‘ಹಾಗ್ಹೇಳ್ಬಾಡ ಕಣ್ಲಾ, ಮಂಡಿ ನೋವಿಗೆ ಆತ ದ್ಯಾವ್ರು ಕಣ್ಲಾ.  ಶಾನೆೇ ದೂರದಿಂದ ಆ ವಯ್ಯನ ಹತ್ರ  ಜನ ಸಾಲ್ಸಾಲಾಗಿ ಬರ್ತಾರೆ ‘‘ಆಯ್ತಾಯ್ತು..ಆತ್ನಲ್ಲಿಗೆ ನನ್ನ ಕರ್ಕೊಂಡು ಹೋಗು, ನಿಂಗೆ ಶಾನೆೇ  ಪುಣ್ಯ ಬರತೈತಿ’‘ಅಷ್ಟು ಪುರಸತ್ತು ನಂಗಿಲ್ಲ ಕಣಣ್ಣ. ಆತನ ಇಳಾಸ ಏಳ್ತಿನೀ , ನೀನೆ ವಸಿ ಹೋಗಿ ಬಾ’‘ಸರಿ.. ಅಷ್ಟಾದ್ರೂ ಮಾಡು. ಆ ವಯ್ಯನ ಇಳಾಸ ಏಳ್ಬಿಡು ‘‘ಚೆಲುವ..ಆ ಯಪ್ಪನ ಮನೆ ‘ಸಾಲಾರ ಮಸೀದಿ’ ಪಕ್ಕಕ್ಕಿದೆಯಂತಾ ಒಮ್ಮೆ ಯಾರೋ  ಹೇಳಿದ್ರು ಕಣ್ಲಾ.’ ಎಂದ.‘ಅಯ್ಯss ..ಇಳಾಸ ಆಟೆನಾ  ?’‘ಆ ವಯ್ಯನ ಹತ್ರ ಶಾನೆೇ ಜನ ಕೇಳ್ಕೊಂಡು ಬರ್ತಾರೆ.  ನೀನು ಅಲ್ಲಿಗೆ ಹೋದ್ರೆ ತಿಳಿತೈತೆ ಕಣ್ಲಾ.  ಆತ ಸಕತ್ತಾಗಿ ಔಷ್ದಿಕೊಡ್ತಾನಂತೆ.  ಹೀಗೆ ಅಂತಾ ಭಾಳೇ ಜನ ಹೇಳ್ತಾರೆ ಕಣ್ಲಾ’  ‘ಆಯಿತು ಬಿಡು..ಅದರ ಎಳೆ ಸಿಕ್ತಲ್ಲಾ.  ನಾನೇ ಕೇಳ್ಕೊಂತಾ ಓಗ್ತೀನಿ. ಥ್ಯಾಂಕ್ಸ್  ಮಾದಣ್ಣ’ ಎಂದ.‘ಥ್ಯಾಂಕ್ಸ್  ಬ್ಯಾಡ ಬುಡು,.ಬರ್ತೀನಿ ಕಣ್ಲಾ’ ಎಂದು ಹೇಳಿ ಮಾದಣ್ಣ ಹೊರಟು ಹೋದ. ಮಾರನೇ ದಿನ ಚೆಲುವ, ಸಾಲಾರ ಓಣಿ ಕಡೆಗೆ ತನ್ನ ಹೆಜ್ಜೆಗಳನ್ನು ಹಾಕಿದ.  ಹಾಗೋ ಹೀಗೋ  ಹೆಜ್ಜೆ ಹೆಜ್ಜೆಗೂ ವಿಚಾರಿಸಿ ಅಲ್ಲಿ ಸಾಗುತ್ತಿದ್ದ. ಆದರೇ, ಆತನ ಕುರುಹು ಕೂಡಾ ಸಿಗಲಿಲ್ಲ. ಅದಕ್ಕೆ ಪ್ರಮುಖ ಕಾರಣವೆಂದರೆ, ಚೆಲುವ ಅರ್ಧ ದಿನ ಕಳೆದಿಲ್ಲ ಅದಾಗಲೇ ಡಾಕ್ಟರನ ಹೆಸರನ್ನು ಮರೆತು ಬಿಟ್ಟಿದ್ದ ಮತ್ತು ಅದೀಗ  ನೆನಪಿಗೆ ಬರುತ್ತಿರಲಿಲ್ಲ. ಆಗ ಏನೋ ಅಲ್ಪ ಸ್ವಲ್ಪ ಬುದ್ಧಿ ಉಪಯೋಗಿಸಿ ಅಲ್ಲಿ  ‘ಎಣ್ಣೆ ಡಾಕ್ಟರ್’  ಎಂದು ವಿಚಾರಿಸಿದಾಗ,ಆ ಹೆಸರಿನವರು ‘ಯಾರಿಲ್ಲ’ ಎಂತಲೇ ಹೇಳುತ್ತಿದ್ದರು.    ಚೆಲುವ ಹಾಗೆಯೇ ತೆವಳುತ್ತಾ ಸಾಗುತ್ತಲೇ ಇದ್ದಾಗ,  ಅಲ್ಲೊಂದು ‘ಏಣ್ಣೆ ಬಾರ್‘ ತಲುಪಿದಾಗ, ಅದರ ಮುಂದೆ ಗಕ್ಕನೆ ನಿಂತ !. ಆತನ ಮನಸ್ಸೀಗ ಹೊಯ್ದಾಡುತ್ತಲೇ  ಇತ್ತು ಮತ್ತು ಆತನಿಗೆ ಹೆಜ್ಜೆ ಸಾಗದಾದವು. ಅದಕ್ಕೆ ಕಾರಣ, ಮನಸ್ಸು ವಿಚಲಿತವಾಗಿ ಕೊಂಚ ಏಣ್ಣೆ ಹಾಕುವ ಆಸೆಯು ಆತನಲ್ಲಿ ಜನಿತವಾಯಿತು.  ಏನೋ ಅಲ್ಪ ಸ್ವಲ್ಪ ಹಾಕಿದರೆ ನಡೀತದೆ ಎಂಬ ಮೊಂಡು ಧೈರ್ಯ ಕೂಡಾ ಮೂಡಿತು.  ಆದರೆ, ಮರು ಕ್ಷಣವೇ, ತಾನು ಡಾಕ್ಟರ್ ಬಳಿ ಹೋಗ್ತಿದ್ದೇನೆ, ನನ್ನ ಪರಿಸ್ಥಿತಿ ನೋಡಿ, ನನ್ನ ಮಂಡಿಗಳನ್ನು ನೋಡದೆ ಆತ ಎರಡು ಬಾರಿಸಿ ಕಳಿಸಿದರೆ ಕಷ್ಟ’ ಎಂದು ತನ್ನಷ್ಟಕ್ಕೆ ತಾನೇ ಎಚ್ಚರಗೊಂಡು ನಿರ್ಧಾರ ಬದಲಿಸಿಕೊಂಡ.  ಅದೇ ಸಮಯದಲ್ಲಿ, ಆತನಿಗೆ ತೀರಾ ಪರಿಚಯವಿದ್ದ ಧರ್ಮಣ್ಣ ಬಾರಿನೊಳಕ್ಕೆ ನುಗ್ಗುತ್ತಿರುವುದು ಕಂಡುಕೊಂಡ. ಬಹುಶಃ ಆತನಿಗೆ   ‘ಎಣ್ಣೆ ಡಾಕ್ಟರ್’ ಬಗ್ಗೆ ತಿಳಿದಿರಬಹುದು ಎಂದುಕೊಂಡು ಅವಸರವಸರದಿಂದ ಆತನನ್ನು ತಡೆಯಲೆತ್ನಿಸಿ ಸಫಲನಾದ;‘ಅಣ್ಣಾ..ಏನಿಲ್ಲೀ ?’ ಎಂದು ಆತನನ್ನು ಕೇಳಿದಾಗ;‘ಅರೆ ! ಚೆಲುವಣ್ಣ..ಅದೇನು ನೀನಿಲ್ಲಿ ?’ಹಾಗೆ ಪರಸ್ಪರ ಒಬ್ಬರಿಗೊಬ್ಬರು ಕೇಳಿಕೊಂಡಾದ ಮೇಲೆ, ಇಬ್ಬರೂ ತಲೆ ಕೆಳಗೆ ಮಾಡಿ, ನಾಚಿಕೆ ಗೊಂಡವರಂತೆ ತಲೆ ಕೆರೆದುಕೊಂಡರು. ಆಗ ಚೆಲುವನೇ ಕೇಳಿದ;‘ಏನ್ ಬೆಳ ಬೆಳಗ್ಗೆ ಬಂದೀಯ.. ಎಣ್ಣೆ ನೆನ್ಪು ಕಾಡಿತಾ ಹೇಗೆ ?’‘ಇಲ್ಲ ಚೆಲುವಣ್ಣ,  ಮನೇಲಿ ಯಾವುದೋ ಕಿರಿ ಕಿರಿ..ಅಲ್ಲಿ ಕಾಲ್ಗಳು ನಿಲ್ಲಿಲ್ಲ . ಹಾಗಾಗಿ, ಇಲ್ಲಿಗೆ ದೌಡಾಯಿಸಿ ಬಂದೆ.  ಇಲ್ಲಿ ನೆಮ್ಮದಿ ಸಿಗ್ತದೆ ಕಣಣ್ಣ’ ಎಂದು  ಧರ್ಮಣ್ಣ ಸಮಜಾಯಿಷಿ ನೀಡಿದ.  ‘ಆಯ್ತು ಬುಡು.. ಈಗ ಇಸ್ಯಕ್ಕೆ ಬರ್ತೀನಿ, ನೀನು ನಂಗೆ ಸಹಾಯ ಮಾಡ್ಬೇಕು ಕಣಣ್ಣ’ ಎಂದು ಚೆಲುವ ಪೀಠಿಕೆ ಹಾಕಿದ.‘ಅದೇನ್ಲಾ ?’‘ಈ ಏರಿಯಾನಾಗೆ ಎಣ್ಣೆ ಡಾಕ್ಟ್ರು ಇದ್ದಾರಂತೆ.  ನಿಂಗೇನಾದ್ರೂ ಗೊತ್ತಾ ?’‘ಅದ್ಯಾವ ಎಣ್ಣೆ ಕಣ್ಲಾ ?’  ಎಣ್ಣೆ ಅಂಗಡಿ ಮುಂದೆ ನಿಂತು ಅದೇನ್ಲಾ ಎಣ್ಣೆ ಬಗ್ಗೆಕೇಳ್ತೀಯಾ ?‘ಏಯ್..ಬುಡು..ಹಾಸ್ಯ ಮಾಡ್ಬೇಡ. ನನಗೆ ಮಂಡಿ ನೋವು ಶಾನೆ ಇದೆ. ಹಾಗಂತಾ, ಆತನ್ನ ಹುಡ್ಕೊಂಡು ಬಂದಿವ್ನಿ’‘ಅದ್ಯಾಕೆ ತಿರುಗಾಡಿ ಮತ್ತೇ ಮಂಡಿ ನೋವು ಹೆಚ್ಚಿಗೆ ಮಾಡ್ಕೊಳ್ತೀಯಾ. ಇಲ್ಲೇ ಬಾರಿನಲ್ಲಿ ಎಣ್ಣೆ ಹೊಡೆದು, ರೆಸ್ಟ್ ಮಾಡಿಬಿಡು, ಎಲ್ಲಾ ಹೊಂಟೋಯ್ತದೆ.’ ಎಂದು ಸಲಹೆ ಮಾಡಿದ.‘ಅದೇನು ಹೇಳ್ತೀ  ಧರ್ಮಣ್ಣ, ನಾನೀಗ ಎಣ್ಣೆ  ಹಾಕ್ತಿಲ್ಲ.  ಯಾಕೆಂದ್ರೆ ಡಾಕ್ಟರ್ ತಾವ ಹೋಗ್ತೇನೆ.  ನಾನು ಎಣ್ಣೆ ಹಾಕ್ಕೊಂಡು  ಅಲ್ಲಿಗ ಹೋದ್ರೆ, ಆತ ಬಾರಿಸಿಬಿಡ್ತಾನೆ.’‘ನಿನಗೆ ಎಣ್ಣೆ ಬೇಡಾಂದ್ರೆ ಬೇಡ.  ನನಗಾದರೂ ಸ್ವಲ್ಪ ಅನುಕೂಲ ಮಾಡಿ ಕೊಡು.  ಆಮೇಲೆ ನಿಂಗೆ ಡಾಕ್ಟರ್ ವಿವರ ತಿಳಿಸ್ತೇನೆ’ ಎಂದ ಧರ್ಮಣ್ಣ.ಸ್ನೇಹಿತ ಹೀಗೆ ಹೇಳಿದ ಕೂಡಲೇ, ಚೆಲುವ ಸಂತೋಷಗೊಂಡು ಒಂದು ಕ್ವಾರ್ಟರ್ ಬಾಟಲಿ ಆತಂಗೆ ಕೊಡಿಸಿಯೇ ಬಿಟ್ಟ. ಅದು ಧರ್ಮಣ್ಣನ ಕೈ ಸೇರುತ್ತಲೇ, ಗಟ ಗಟಾಂತ ಕುಡಿದು ಬರಗೆಟ್ಟವನಂತೆ  ಖಾಲಿ ಮಾಡಿ ಬಿಟ್ಟ. !  ಚೆಲುವನಿಗೆ ದಿಗಿಲಾಯಿತು.  ಇವನು ಬರೀ ಎಣ್ಣೆ ಹಾಕಿದ, ಆದ್ರೆ ಆ ಡಾಕ್ಟರ್ ಬಗ್ಗೆ ಏನೂ ಹೇಳುತ್ತಿಲ್ಲವಲ್ಲ ?  ಚೆಲುವ ಆತನನ್ನು ವಿವರ  ನೀಡಲು  ಪೀಡಿಸಿದಾಗ;‘ಚೆಲುವಣ್ಣ ನೀನು ತುಂಬಾ ಒಳ್ಳೆಯವನು ಕಣ್ಲಾ, ಇನ್ನೊಂದು ಕ್ವಾರ್ಟರ್  ಕೊಡಿಸು,                     ನಾನು ಆಣೆ ಮಾಡಿ ಹೇಳ್ತೇನೆ, ನಿನ್ನನ್ನು ಆ ಎಣ್ಣೆ ಡಾಕ್ಟರ್ ಬಳಿಗೆ ನಾನೇ ಕರ್ಕೊಂಡು ಹೋಗ್ತೇನೆ’ ಎಂದ.‘ಬೇಡ..ಇಷ್ಟೇ ಸಾಕು’‘ಅದೇನು, ನಿಂಗೆ ವಿವರಗಳು ಬೇಕೋ ಬೇಡ್ವೊ ?’‘ಅದ್ಕೆ ಅಂತ್ಲೆ ನಿಂಗೆ ಒಂದು ಕ್ವಾರ್ಟರ್ ಕೊಡಿಸಿದೆ. ನೀನಲ್ಲಿಗೆ ಹೋಗೋದೆನ್ಬೇಡ, ನಂಗೆ ವಿವರ ಕೊಟ್ಬಿಡು.  ನಾನೇ ಅವರನ್ನು ಹುಡ್ಕೊಂಡು ಹೋಗ್ತೇನೆ. ?’‘ಅದ್ಹೇಗೆ  ಸಾಧ್ಯ ?  ನೀನು ನಂಗೆ ಎಣ್ಣೆ ಕೊಡಿಸಲೇ ಬೇಕು ಅಷ್ಟೇ’ ಎಂದ.ಥೂ.!. ಇವನನ್ನು ನಾನೇ ಮೈ ಮೇಲೆ ಎಳೆದುಕೊಂಡ ಹಾಗಾಯ್ತಲ್ಲಾ ಎಂದು ಚೆಲುವ ಪರಿತಪಿಸಿದ. ಈಗ ಚೆಲುವನಿಗೆ ಹೋಗಲೂ ಬಿಡುತ್ತಿಲ್ಲ, ವಿಳಾಸಾನೂ ಕೊಡ್ತಿಲ್ಲ.  ಈಗ ಅನಿವಾರ್ಯತೆ ಮೂಡಿ, ಆತನಿಗೆ ಮತ್ತೊಂದು ಬಾಟಲಿ ಕೊಡಿಸಿದ.  ಅದನ್ನೂ ಕೂಡಾ ತಡ ಮಾಡದೆ ಖಾಲಿ ಮಾಡಿದ ಭೂಪ !. ಅದೇನೋ ಒಮ್ಮೆಲೇ ಅಷ್ಟೆಲ್ಲಾ ಗುಟುಕು ಹಾಕಿದ್ದರಿಂದ ಆತನಿಗೆ ಮಂಪರು ಮೂಡಿದ ಹಾಗೆ ಆಗಿ, ನಿಂತಲ್ಲಿಯೇ  ಕುಸಿದು ಬಿದ್ದು ಅರೆ ಪ್ರಜ್ಞೆಯವನಾದ.  ಚೆಲುವ ಗಾಭರಿಗೊಂಡು, ಆತನನ್ನು ಎತ್ತಿ ಒಂದು ಮೂಲೆಯಲ್ಲಿ ಕುಕ್ಕರಿಸಿ, ತಾನು ಅಲ್ಲಿಂದ ಹೊರಡಲು ಸಿದ್ಧನಾದ.  ಆದರೆ,  ತತ್ ಕ್ಷಣಕ್ಕೆ ಬಹುಶಃ ಕೃತಜ್ಞತೆಯ ಫಲವೋ ಏನೋ ಧರ್ಮಣ್ಣಅಲ್ಪ ಸ್ವಲ್ಪ ಎಚ್ಚರಗೊಂಡು ಚೆಲುವನನ್ನು ಹತ್ತಿರಕ್ಕೆ ಕರೆದು ಕಿವಿಯಲ್ಲಿ ಉಸುರಿದ;‘ಚೆಲುವ  ಥ್ಯಾಂಕ್ಸ್ ಕಣ್ಲಾ.  ನನ್ನಲ್ಲಿ ದುಡ್ಡೇ ಇರಲಿಲ್ಲ. ನಿನ್ನಿಂದ ಹೇಗೋ ಎಣ್ಣೆ ಪಡೆಯುವುದಕ್ಕೆ ಸುಳ್ಳು ಹೇಳಿದೆ.  ನನಗೆ ನಿಜವಾಗಿಯೂ ಯಾವ ಡಾಕ್ಟರ್ ತಿಳಿದಿಲ್ಲ. ನೀನೆ ಪ್ರಯತ್ನ ಮಾಡಿ ತಿಳಿದುಕೋ.  ದೇವ್ರು ನಿಂಗೆ ಒಳ್ಳೇದು ಮಾಡ್ಲಿ’ ಎಂದು ಹೇಳಿ ಧರ್ಮಣ್ಣ ಕೈತೊಳೆದುಕೊಂಡ !  ಚೆಲುವ ಆ ಕ್ಷಣದಲ್ಲಿ ಕೋಪಗೊಂಡರೂ, ತನ್ನ ಖೊಟ್ಟಿ ನಸೀಬಕ್ಕೆ ಶಪಿಸಿದ. ಅಲ್ಲಿಂದ ಹೊರಟು ಬೀದಿಗೆ ಇಳಿದು, ಅತ್ತ ಇತ್ತ ರಸ್ತೆಯಲ್ಲಿ ಗಂಭೀರವಾಗಿ ನೋಡಿದ. ತನಗೆ ಪರಿಚಯದವರ್ಯಾರೂ ಅಲ್ಲಿ ಕಾಣಲಿಲ್ಲ.  ಹಾಗೆಯೇ, ತನ್ನ ಹೆಜ್ಜೆಗಳನ್ನು ಮುಂದುವರೆಸಿ, ಯಾರಲ್ಲಿ ವಿಚಾರಿಸಿದರೆ ತಿಳಿಯಬಹುದು ಎಂದು ಲೆಖ್ಖಚಾರ ಹಾಕಿದ. ಆಗ ಆತನಿಗೊಂದು ವಿಚಾರ ಹೊಳೆಯಿತು. ಆ ಡಾಕ್ಟರ್ ವಿವರ  ಸಾಬ್ರುಗೇನೇ ತಿಳಿದಿರುತ್ತದೆ. ಅವರಲ್ಲಿಯೇ ವಿಚಾರ ಮಾಡಬೇಕು ಎಂದು ಸಿದ್ಧನಾದ. ಆ ನಿಟ್ಟಿನಲ್ಲಿ ಮುಂದಕ್ಕೆ ಸಾಗಿದಾಗ,  ಅದೃಷ್ಠವಾತ್ ಒಬ್ರು  ಸಾಹೇಬರು ರಸ್ತೆಯಲ್ಲಿ ಸಿಕ್ಕಾಗ ಸಂತೋಷಗೊಂಡ.  ಅದೇ ಸಮಯದಲ್ಲಿ ಡಾಕ್ಟರ್ ಹೆಸರು ಅರ್ಧಂಬರ್ಧ ನೆನಪಿಗೆ ಬಂತು. ಅದನ್ನು ನೆನಪಿನಲ್ಲಿ ಇಟ್ಟುಕೊಂಡ. ಅಷ್ಟರಲ್ಲಿ ಸಾಬ್ರು ಎದೆಯ ಮೇಲೆಯೇ ಬಂದಂತಾದಾಗ;  ‘ಅಣ್ಣಾ..ಸಾಹೇಬಣ್ಣ ನಂಗೆ ಸ್ವಲ್ಪ ಸಹಾಯ ಮಾಡು ?’‘ಏನ್ ಭೈ..ಏನ್

“ಚಲುವ” ಸಣ್ಣ ಕಥೆ ಬಿ.ಟಿ.ನಾಯಕ್‌ ಅವರಿಂದ Read Post »

ಇತರೆ

ಹಾಸ್ಯಲೇಖನ “ಮನೆ ಮುಂದೆ ಹೊಗೆಯೂ ಗ್ಯಾರಂಟಿ..!” ಗೊರೂರು ಅನಂತರಾಜು

ಹಾಸ್ಯಸಂಗಾತಿ ಗೊರೂರು ಅನಂತರಾಜು “ಮನೆ ಮುಂದೆ ಹೊಗೆಯೂ ಗ್ಯಾರಂಟಿ..!” ಹಾಸ್ಯ ಮನೆ ಮುಂದೆ ಹೊಗೆಯೂ ಗ್ಯಾರಂಟಿ..! ಗೊರೂರು ಅನಂತರಾಜು, ಹಾಸನ. ಬೆಂಗಳೂರು ಮಹಾ ನಗರದಲ್ಲಿ ಕಬ್ಬನ್ ಪಾರ್ಕ್ ಇತ್ತು. ಈಗಲೂ ಇದೆ. ಅದರ ಎಡಕ್ಕೆ ಒಂದು ಮೈನ್ ರೋಡ್ ಇದೆ. ಅದನ್ನು ಡಬ್ಬಲ್ ರೋಡ್ ಮಾಡುವ ಪ್ಲಾನ್ ಕೂಡ ರೆಡಿ ಇದೆ. ಅಲ್ಲಿ ಒಂದು ಉಡುಪಿ ಹೋಟೆಲ್ ಇತ್ತು. ಈಗಿಲ್ಲವಾ ಎಂದು ಯಾರೂ ಕೇಳಬಾರದು. ಇದು ಕಥೆ ಅಷ್ಟೇ. ಅಲ್ಲಿಗೆ ಬೆಳಗಿನ ವಾಕ್ ಮುಗಿಸಿ ರಾಜು ರೈಟರ್ ಹೋದರು. ಒಂದು ಖಾಲಿ ದೋಸೆಗೆ ಆರ್ಡರ್ ಮಾಡಿದರು.ಹಲೋ ಸಪ್ಲೇಯರ್ ಬನ್ನಿ ಇಲ್ಲಿ. ಏನಿದು ದೋಸೆಯಲ್ಲಿ ಹಸಿ ಕಸ..! ನಿಮ್ಮ ಹೋಟೆಲ್‌ಗೆ ಆರೋಗ್ಯ ಸಚಿವರು ಇನ್ನೂ ಬಂದಿಲ್ಲವಾ..ಇಲ್ಲಾ ಸಾರ್. ಇದು ಸಪ್ಸಿಗೆ ದೋಸೆ. ನಮ್ಮ ಭಟ್ಟರು ದೋಸೆ ಹಿಟ್ಟಿಗೆ ಸಪ್ಸಿಗೆಸೊಪ್ಪು ಬೆರೆಸಿ ಸ್ಪೆಷಲ್ ದೋಸೆ ಮಾಡಿದ್ದರೆ. ಹಿಟ್ಟು ಉಳಿದರೆ ಹುಳಿ ಬರುವುದಲ್ಲಾ.. ಸಿಟ್ಟು ಬೇಡ..ನಗುವನು.ಏನು..ಕಾಮಿಡಿ ರೈಟರ್‌ಗೆ ಕಿಂಡಲ್.. ನೀನು ಹೆಸರೇನು ಇಟ್ಕೊಂಡಿದ್ದಿ..? .ನಮ್ಮಪ್ಪ ಇಟ್ಟಿದ್ದು ಮೆಣಸಿನಕಾಯಿ. ಅಜ್ಜ ಅಪ್ಪನಿಗೆ ಇಟ್ಟಿದ್ದು ಹೀರೆಕಾಯಿ..ನಿನ್ನ ಮಗನಿಗೆ ನೀನು ಬದನೆಕಾಯಿ ಇಡ್ತಿಯಾ..ಅರೇ, ಅದ್ಹೇಗೆ ನಮ್ಮ ಗುಟ್ಟು ನಿಮಗೆ ಗೊತ್ತಾಯ್ತು ಮಾರೆಯರೆ..ನಿಮ್ಮದು ತರಕಾರಿ ವಂಶ ಅಂತ ನಿನ್ನ ಮುಖ ನೋಡಿದ್ರೇ ತಿಳಿಯುತ್ತೆ..ಹೌದಾ..! ನೀವು ಪೇಸ್ ರೀಡ್ ಮಾಡ್ತಿರಾ..ಇಲ್ಲಪ್ಪ, ಬುಕ್ ರೀಡ್ ಮಾಡ್ತಿನಿ.. ಬೇಜಾರಾದ್ರೇ ಬರೀತಿನಿ..ಹೋ.. ನೀವು ರೈಟರ್..! ಏನೆಲ್ಲಾ ಬರೀತೀರಿ ಮಾರೆಯರೇ..?ಕಾಮಿಡಿ ಸ್ಟೋರಿ..ಕಾಮಿಡಿಯಾ.. ಅದೇ ಟಿವಿಯಲ್ಲಿ ಬರುತ್ತಲ್ಲಾ ಕಾಮಿಡಿ ಕಿಲಾಡಿಗಳು..ನನಗೂ ಆ ತರಹ ಹಾಸ್ಯ ಪಾತ್ರಗಳಲ್ಲಿ ನಟಿಸೋ ಆಸೆ ಇದೇ ಸಾರ್. ಅದೇ ಆಸೆಯಲ್ಲಿ ಬಾದಾಮಿ ಬಿಟ್ಟು ಇತ್ತ ಬಂದಿದುAಟು. ನಿಮಗೆ ಯಾರಾದರೂ ಟಿ.ವಿ. ಮಂದಿ ಗೊತ್ತಿದ್ದರೇ ಹೇಳಿ ನನಗೂ ಒಂದು ಚಾನ್ಸ್ ಕೊಡ್ಸಿ..ನೋಡು ಬದನೆಕಾಯಿ..ಇಲ್ಲಾ,.ಅದು ನನ್ನ ಮಗನಿಗೆ ಇಡಬೇಕೆಂದಿರುವ ಹೆಸರು. ನಮ್ಮಪ್ಪ ಇಟ್ಟಿದ್ದು ಮೆಣಸಿನಕಾಯಿ.ಅದು ಹಿಂದೆ ಇಟ್ಟಿದ್ದಾ..ಹೌದು.. ಸ್ವಲ್ಪ ಕಾರ ಜಾಸ್ತಿ..!ನೀನು ಕಾಮಿಡಿಯಾಗಿಯೇ ಮಾತನಾಡ್ತಿಯಾ ನಮ್ಮೂರಲ್ಲಿ ಶಿವು ಅಂತ ಒಬ್ಬ ಇದ್ದ.ಅವನು ಮೇಯರ್ ಮುತ್ತಣ್ಣ ಬೆಂಗಳೂರಿಗೆ ಬಂದ ಹಾಗೇ ಇಲ್ಲಿಗೆ ಬಂದ.. ನಗುವನು.ನಿನಗೆ ನಗೆ. ನನಗೆ ಹೊಗೆ. ಹೋಗಿ ಒಂದು ಬರಕ್ಲೇ ಸಿಗರೇಟು ತಗೊಂಡು ಬಾ. ನಮ್ಮೂರಶಿವು ಕಾಮಿಡಿ ಕಿಲಾಡಿಗಳು ಗೆದ್ದ ಕಥೆ ಹೇಳ್ತಿನಿ.ಓಕೆ ಸಾರ್, ಹಿಂಗೆ ಹೋಗಿ ಹಂಗೆ ರ‍್ತೀನಿ.. ಹೂಂ ಬಂದೆ ಹೇಳಿ ಸಾರ್ ಶಿವು ಕಥೆ..ನೋಡು ಹೀರೇಕಾಯಿ..ಅದು ನಮ್ಮಪ್ಪನ ಹೆಸರು..ತಥ್..! ಮೆಣಸಿನಕಾಯಿ. ನಮ್ಮ ಶಿವು ಇದಾನಲ್ಲಾ ಅವನು ನಮ್ಮೂರು ಡಿಗ್ರಿ ಕಾಲೇಜಿನಲ್ಲಿ ಫಸ್ಟ್ ಬಿ.ಎ. ಓದುತ್ತಿದ್ದಾಗಲೇ ನನ್ನ ನಾಟಕದಲ್ಲಿ ಪಾರ್ಟು ಮಾಡಿದ್ದ. ಅದ್ಯಾವಾಗ ಬೆಂಗಳೂರಿಗೆ ಬಂದನೋ ಗೊತ್ತಿಲ್ಲ.. ಕಾಮಿಡಿ ಕಿಲಾಡಿಗಳು ವಿನ್ನರ್ ಆಗಿಬಿಟ್ಟ. ಈಗ ಪೋನ್ ಮಾಡಿದ್ರು ರಿಸೀವ್ ಮಾಡ್ತಿಲ್ಲಾ..ನೀವು ನಾಟಕದ ಮೇಷ್ಟç..!ನಮ್ಮ ಕಡೆ ಹರ‍್ಮೋನಿಯಂ ಮಾಸ್ಟರಿಗೆ ಹೀಗೆ ಕರೀತ್ತಾರೆ. ಅವರದು ಪೌರಾಣಿಕ ನಾನು ಸಾಮಾಜಿಕ.ನೀವು ಸಮಾಜ ತಿದ್ದುವ ಮೇಷ್ಟುç..! ತುಂಬಾ ಸಂತೋಷ ಸಾರ್. ನಾನು ಚಿಕ್ಕ ವಯಸ್ಸಿನಲ್ಲಿ ನಮ್ಮೂರ ಬನಶಂಕರಿ ಜಾತ್ರೆಲಿ ಕ್ಯಾಂಪ್ ಮಾಡ್ತಿದ್ದ ಕಂಪನಿ ನಾಟಕಗಳನ್ನು ನೋಡ್ತಿದ್ದೆ. ಅದೆಂತಹ ಡಬ್ಬಲ್ ಮೀನಿಂಗ್ ಡೈಲಾಗ್ ಸಾರ್..! ಆಗಲೇ ನನಗೂ ನಟ ಆಗಬೇಕೆಂಬ ಆಸೆ ಹುಟ್ಟಿಬಿಡ್ತು. ಅದಕ್ಕೆ ಈ ಕಡೆ ಬಂದೆ. ನಿಮ್ಮ ನಾಟಕದಲ್ಲಿ ಒಂದು ಚಾನ್ಸ್ ಕೊಡಿ ಸಾರ್. ನಾನು ಒಂದು ಪಾರ್ಟು ಮಾಡಿ ಆ ಅನಂತ್ ತರಹ ನಟ ಆಗ್ತಿನಿ..ತುಂಬಾ ದೊಡ್ಡ ಕನಸು ಕಾಣ್ತ ಇದ್ದಿಯಾ ಮೆಣಸಿನಕಾಯಿ..ನನಗೆ ಕನಸಲೂ ನೀನೇ ಮನಸಲೂ ನೀನೇ.. ಹಾಡು ತುಂಬಾ ಇಷ್ಟ ಸಾರ್. ನೀವು ಯಾವ ನಾಟಕ ಬರೆದಿದ್ದಿರಿ ಸಾರ್..ನಾನು ಮೂವತ್ತು ವರ್ಷದ ಹಿಂದೆ ವೀರಪ್ಪನ್ ಭೂತ ನಾಟಕ ಬರೆದಿದ್ದೆ. ಅದು ತುಂಬಾ ಹಿಟ್ ಆಗಿತ್ತು. ಆ ಕಡೆ ಕಾಡಲ್ಲಿ ವೀರಪ್ಪನ್ ಸತ್ತ, ಈ ಕಡೆ ನಮ್ಮೂರಲ್ಲಿ ನಾಟಕನೂ ಡೆಡ್.,!ಹೋ ಸ್ಯಾಡ್..! ಮತ್ತೇ ನೀವು ಬೇರೆ ಯಾವ ನಾಟಕನೂ ಬರೀಲಿಲ್ವಾ ಸಾರ್..ಬರೆದೆ. ಅದೇ ತೋಳ ಬಂತು ತೋಳ. ಅದ್ರಲ್ಲೇ ಶಿವು ಕಾಮಿಡಿ ರೋಲ್ ಮಾಡಿದ್ದು. ಅದರಲ್ಲಿ ಒಂದು ಲೇಡಿ ರೋಲ್ ಬರುತ್ತೆ. ಆಕೆ ಮಾನಭಂಗ ರಂಗದ ಮೇಲೆ ಆಗುತ್ತೆ. ಮಾಡ್ದೋನು ಮುಂದೆ ಒಳ್ಳೆಯ ರಾಜಕಾರಣಿ ಆಗ್ತಾನೆ..ಅದ್ಹೆಂಗೆ ಸಾರ್, ರಂಗದ ಮೇಲೆ ಮಾನಭಂಗ ಮಾಡ್ದೋನು ಒಳ್ಳೆಯ ರಾಜಕಾರಣಿ ಆಗ್ತಾನೆ..? ನೋಡು ಕಾಮಿಡಿ ಟಾಕ್‌ಗೂ ಒಂದು ಲಿಮಿಟ್ ಇದೆ. ನನಗೆ ಸರ್ಕಾರಿ ಡಾಕ್ಟುç ಎರಡು ಉಚಿತ ಸಲಹೆ ನೀಡಿದ್ದಾರೆ. ರಾತ್ರಿ ಲಿಮಿಟ್‌ನಲ್ಲಿ ಒಂದು ಪೆಗ್ ಹಾಕು. ಬೆಳಿಗ್ಗೆ ಎರಡು ಇಡ್ಲಿ ತಿನ್ನು.. ದಿನ ಇಡ್ಲಿ ತಿಂದು ಬೇಸರ ಆಗಿತ್ತು. ಅದಕ್ಕೆ ಇವತ್ತು ದೋಸೆಗೆ ಆರ್ಡರ್ ಮಾಡಿದ್ದೆ. ಇರಲಿ ಸೊಪ್ಸಿಗೆ ದೋಸೆ ಹೇಗಿದೆ ಟೇಸ್ಟ್ ನೋಡ್ತೀನಿ. ಈಗ ಹೋಗಿ ಅರ್ಧ ಸಕ್ಕರೆ ಇಲ್ಲದ ಕಾಫಿ ತಗೊಂಡು ಬಾ.. (ಕಾಫಿ ತಂದಿಟ್ಟ ನಂತರ) ಇದು ಎಂತದು ಮಾರಾಯಾ ಕಾಫಿ ಬಿಸಿ ಇಲ್ಲ. ನನಗೆ ಸುಡುವ ಕಾಫಿ ಕುಡಿದು ಅಭ್ಯಾಸ. ಕಾಫಿ ಕುಡಿತಾ ಇದ್ರೇ ಬಾಯಿಂದ ಹೊಗೆ ರ‍್ತಾ ಇರಬೇಕು ಗೊತ್ತಾ..ಕತೆಗಾರರೇ ಇದಕ್ಕಿಂತಲೂ ಬಿಸಿ ಕಾಫಿ ಎಂತಾ..! ಈಗ ನೀವು ಇದನ್ನು ಕುಡಿಯಿರಿ. ಆಮೇಲೆ ಬಂದು ನಮ್ಮ ಹೋಟೆಲಿನ ಸೌದೆ ಒಲೆ ಮೇಲೆ ಕುಳಿತುಕೊಳ್ಳಿ. ಆಗ ನಿಮ್ಮ ಹೊಟ್ಟೆಯಲ್ಲಿನ ಕಾಫಿಯೂ ಬಿಸಿ.. ಮನೆ ಮುಂದೆ ಹೊಗೆಯೂ ಗ್ಯಾರಂಟಿ..! ನಗುವನು. ಗೊರೂರು ಅನಂತರಾಜು, ಹಾಸನಮೊ: ೯೪೪೯೪೬೨೮೭೯ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ-೫೭೩೨೦೧.

ಹಾಸ್ಯಲೇಖನ “ಮನೆ ಮುಂದೆ ಹೊಗೆಯೂ ಗ್ಯಾರಂಟಿ..!” ಗೊರೂರು ಅನಂತರಾಜು Read Post »

ನಿಮ್ಮೊಂದಿಗೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ತಾಯಿ ನೆನೆದು”

ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ತಾಯಿ ನೆನೆದು” ಹಸಿವಾದ ಕರುವೊಂದುಹುಡುಕುತಲಿತ್ತು ತಾಯಿಆಕಳನು ಕೊಂಡೊಯ್ದಹಾಲು ಕರೆಯಲುಸುತ್ತಲೂ ನೋಡಿತು ಮಗುಕಾಣಲಿಲ್ಲದ ಅವ್ವಾಅಂಬಾ ಅಂಬಾ ಒದರಿತುಬರಲಿಲ್ಲ ಉತ್ತರಬೀದಿಯಲಿ ಏಕಾಂಗಿಹಸಿದ ಕರುವಿನ ಯಾತ್ರೆಹುಡುಕುತ ತನ್ನಹಕ್ಕಿನ ಹಾಲುಅಲ್ಲೊಂದು ಮನೆಗೋಡೆಯ ಮೇಲೆತಾಯಿ ಹೋಲುವ ಆಕಳಿನಬಿತ್ತಿ ಚಿತ್ರತುಂಬಿದ ಕೆಚ್ಚಲುನೊರೆ ತುಂಬುವ ಹಾಲುತಡಪಡಿಸಿ ಕೆಚ್ಚಲಿಗೆಬಾಯಿ ಹಾಕಿತು ಮರಿಅದು ಚಿತ್ರದ ರೂಹುಚಿತ್ರದ ಹಾಲುಅರಿಯದಾಯಿತು ಅತ್ತುತಾಯಿ ನೆನೆದು______________________ *ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ*

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ತಾಯಿ ನೆನೆದು” Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ-44 ವಿಶ್ವನಾಥ್‌ ಎನ್‌ ನೇರಳೆಕಟ್ಟೆ ಅರ್ಜುನ ಉವಾಚ ಭರತ ಭೂಮಿಗೆ ಬಿದ್ದ ಅಯೋಧ್ಯೆಯಲ್ಲಿ ದೀಕ್ಷಾಬದ್ಧನಾಗಿದ್ದ ರಾಮನಿಗೆ ಚಿಂತೆ ಕಾಡತೊಡಗಿತು. ರಥದಿಂದ ಬಿದ್ದಿದ್ದ ಶತ್ರುಘ್ನನಿಗೆ ಏನಾಗಿದೆ ಎನ್ನುವ ಸಂದೇಶ ಆ ಬಳಿಕ ಅವನನ್ನು ತಲುಪಿರಲಿಲ್ಲ. ಯುದ್ಧಕ್ಕೆ ನಿಂತವರು ಕುಶ ಲವ ಎಂಬ ಬಾಲಕರು ಎನ್ನುವುದೀಗ ಅವನಿಗೆ ತಿಳಿದಿತ್ತು. ಯುದ್ಧಕ್ಕೆ ಅಗಾಧ ಸೇನೆ ಕಟ್ಟಿಕೊಂಡು ಹೋಗಿದ್ದ ಲಕ್ಷö್ಮಣ ಆ ಬಾಲಕರನ್ನು ಸೆರೆಹಿಡಿದನೋ? ಕೊಂದನೋ? ಯುದ್ಧದಲ್ಲಿ ಅವನಿಗೆ ಶ್ರಮವಾಯಿತೋ? ಗೆದ್ದನೋ? ಸೋತನೋ? ಕುದುರೆಯನ್ನು ಬಿಡಿಸಿ ತರುವನೋ? ಎಂಬೆಲ್ಲಾ ಪ್ರಶ್ನೆಗಳು ಮೂಡಿದಾಗ ಕಳವಳಕ್ಕೀಡಾದ ಕೌಸಲ್ಯಾಸುತ.ಲಕ್ಷö್ಮಣ ಕೋಪಗೊಂಡು ಆ ಬಾಲಕರ ಪ್ರಾಣಕ್ಕೆ ಸಂಚಕಾರ ತಂದರೆ! ಎಂಬ ಸಂಶಯ ಮೂಡಿತು ರಾಮಹೃದಯದಲ್ಲಿ. ಅವರಿಬ್ಬರನ್ನೂ ಘಾಸಿಗೊಳಿಸದೆ ಸಮ್ಮೋಹನಾಸ್ತçದಿಂದ ಮರುಳುಗೊಳಿಸಿ ಸೆರೆಹಿಡಿದು ತಂದು ತನಗೊಪ್ಪಿಸಿದರೆ ಅಷ್ಟೇ ಸಾಕು ಎಂದು ತೋರಿತು ಅವನಿಗೆ. ಲಕ್ಷö್ಮಣನಿಗೆ ಅದನ್ನು ತಿಳಿಸುವಂತೆ ಸೇವಕರನ್ನು ಕಳುಹಿಸಿಕೊಟ್ಟ ರಣರಂಗಕ್ಕೆ.ಅಲ್ಲಿಂದ ಬಂದ ಸೇವಕರು ಕುಶನ ಕುಶಲತೆಯನ್ನು ಸಾರಿಹೇಳಿದರು ಶ್ರೀರಾಮನಿಗೆ. “ದೀಕ್ಷೆಯನ್ನು ಬಿಟ್ಟು ಆ ಕುಶನೊಡನೆ ನೀವು ಯುದ್ಧಕ್ಕೆ ಹೋಗುವುದೇ ಒಳ್ಳೆಯದು. ಲವನನ್ನೂ ಮೀರಿದ ವೀರ ಆ ಕುಶ. ಶತ್ರುಘ್ನ ಲಕ್ಷö್ಮಣರ ಜೀವ ಉಳಿದಿದೆಯೋ ಇಲ್ಲವೋ ಎನ್ನುವುದು ತಿಳಿದಿಲ್ಲ. ಸಂದೇಹವಿದೆ. ಅಂದು ಶ್ರೀಕೃಷ್ಣನಿಗೆ ಮೊಲೆಯೂಡಿಸಲು ಹೋದ ಪೂತನಿಯಂತಾಗಿದೆ ನಮ್ಮ ಸೇನೆಯ ಸ್ಥಿತಿ” ಎಂದರು.ತನ್ನ ತಮ್ಮಂದಿರು ಪ್ರಾಣವನ್ನೇ ಕಳೆದುಕೊಂಡರೋ ಏನೋ ಎಂದು ಅತಿಯಾದ ಆಘಾತಕ್ಕೊಳಗಾದ ರಾಮ ಮೂರ್ಛಿತನಾದ. ಭರತನ ಉಪಚಾರವದು ಮರುಪ್ರಜ್ಞೆ ನೀಡಿತು ಮಾರುತಿಯ ಒಡೆಯನಿಗೆ. ತನಗಾಗಿ ಸದಾ ಸೇವೆ ಸಲ್ಲಿಸುತ್ತಿದ್ದ ಲಕ್ಷö್ಮಣ ತೀರಿಹೋದನೇ! ಎಂದು ಮತ್ತೆ ಮತ್ತೆ ರೋಧಿಸಿದ ರಾಮ. ಪರಮ ಪರಾಕ್ರಮಿಗಳೆನಿಸಿಕೊಂಡ ಶತ್ರುಘ್ನ ಲಕ್ಷö್ಮಣರಿಗೆ ಸೋಲುಣಿಸಿದ ಪುಟ್ಟ ಪೋರರ ಶೌರ್ಯ ಅಚ್ಚರಿ ಹುಟ್ಟಿಸಿತ್ತು ರಘುಕುಲತಿಲಕನಲ್ಲಿ. ತನ್ನ ದೇಹದ ಮೇಲಿರುವ ಸೀತೆಯ ವದನದ ಗುರುತು ಆ ಬಾಲಕರ ಮೈಯ್ಯ ಮೇಲೆಯೂ ಇದೆ ಎಂಬ ವಿಚಾರ ತಿಳಿದುಬಂದಿತ್ತು ಅವನಿಗೆ. ಯಾರವರು ಎಂಬ ಕೌತುಕ ಮೂಡಿತ್ತು ಅವನಲ್ಲಿ. ಶತ್ರುಘ್ನ ಲಕ್ಷö್ಮಣರ ಬಗ್ಗೆ ಮತ್ತೆ ಮತ್ತೆ ಹುಟ್ಟುತ್ತಲೇ ಇತ್ತು ಆತಂಕ.“ಕರೆಸು ಮತ್ತೊಮ್ಮೆ ಆ ಸೇವಕರನ್ನು. ಮರಳಿ ಕೇಳುವೆ ನನ್ನ ತಮ್ಮಂದಿರ ಸಮಾಚಾರವನ್ನು” ಎಂದು ಹೇಳಿದ ಭರತನಲ್ಲಿ. ಮತ್ತದೇ ಭೀತಿ ಹುಟ್ಟಿಸುವ ಮಾತುಗಳನ್ನಾಡಿದರು ಸೇವಕರು ರಾಮನ ಎದುರಲ್ಲಿ.ಸಹೋದರನಿಗೆ ಸಮಾಧಾನ ಹೇಳದಿರುವುದು ಸರಿಯಲ್ಲ ಈ ಸಮಯದಲ್ಲಿ ಎಂದು ತೋರಿತು ಸೋದರ ಭರತನಿಗೆ. “ಭಯಕ್ಕೊಳಗಾದ ಈ ಸೇವಕರು ಏನೋ ಗೊತ್ತಿಲ್ಲದೆ ಮಾತನಾಡುತ್ತಿದ್ದಾರಷ್ಟೇ. ಲಕ್ಷö್ಮಣ ಶತ್ರುಘ್ನರು ಯುದ್ಧದ ಆಯಾಸದಿಂದ ಪ್ರಜ್ಞೆ ಕಳೆದುಕೊಂಡಿರಬಹುದು. ಮರಣವನ್ನಂತೂ ಹೊಂದಿರಲಿಕ್ಕಿಲ್ಲ. ಅದು ಖಚಿತ. ಸುಮ್ಮನೆ ಧೈರ್ಯಗೆಡಬೇಡ. ನಾನೇ ಹೋಗುತ್ತೇನೆ ಯುದ್ಧರಂಗಕ್ಕೆ. ಆ ಬಾಲಕರನ್ನು ಎದುರಿಸಿ, ಕುದುರೆಯನ್ನು ಬಿಡಿಸಿ ತರುತ್ತೇನೆ” ಎಂದು ರಾಮನಿಗೆ ಸಾಂತ್ವನ ಹೇಳಿದ.ಸುಷೇಣ, ಅಂಗದ, ಜಾಂಬವ, ಹನುಮಂತ ಮೊದಲಾದ ವೀರರನ್ನು ಕೂಡಿಕೊಂಡು, ಚತುರಂಗ ಸೇನೆಯನ್ನು ಜೊತೆಮಾಡಿಕೊಂಡು, ಗಂಗಾನದಿಯ ತೀರಕ್ಕೆ ಬಂದುನಿAತ ಭರತ. ಯುದ್ಧದ ವೃತ್ತಾಂತವನ್ನು ತಿಳಿದುಬರುವ ಹೊಣೆಯನ್ನು ಹನುಮಂತನಿಗೆ ವಹಿಸಿ ಕಳುಹಿಸಿಕೊಟ್ಟ.ಯುದ್ಧರಂಗಕ್ಕೆ ಬಂದ ಆಂಜನೇಯ. ಪ್ರಾಣ ಕಳೆದುಕೊಂಡು ಬಿದ್ದಿದ್ದ ಅಗಣಿತ ಸಂಖ್ಯೆಯ ಭಟರನ್ನು ಕಂಡ ರಾಮಭಂಟ. ‘ನಮ್ಮ ಅಣ್ಣನಾದ ಆ ರಾಮ ನಿನ್ನ ಸುತೆ ಸೀತೆಯನ್ನು ತೊರೆದಿರುವುದಕ್ಕೆ ಕೋಪಿಸಿಕೊಳ್ಳದಿರು. ಸಹನೆ ವಹಿಸು’ ಎಂದು ಭೂಮಿಯನ್ನು ಸಮಾಧಾನಪಡಿಸುವ ರೀತಿಯಲ್ಲಿ ಮೂರ್ಛೆತಪ್ಪಿ ಧರಣಿಯನ್ನಪ್ಪಿಬಿದ್ದಿದ್ದ ಶತ್ರುಘ್ನ ಲಕ್ಷö್ಮಣರನ್ನು ಕಂಡ.ಅವರಿಬ್ಬರನ್ನೂ ಹೆಗಲಮೇಲೆ ಹೊತ್ತುಕೊಂಡ ಅಂಜನಾಸುತ ಮರಳಿಬಂದ ಭರತನಲ್ಲಿಗೆ. ಭರತ ತನ್ನ ಸಹೋದರರನ್ನು ರಥದಲ್ಲಿ ಕೂರಿಸಿದ. ಕುದುರೆಯನ್ನು ಬಾಳೆಗಿಡಕ್ಕೆ ಕಟ್ಟಿ, ಬಿಲ್ಲು ಬಾಣಗಳನ್ನು ಹಿಡಿದುನಿಂತಿದ್ದ ಶೂರ ಸೋದರರನ್ನು ಎದುರಿಸಲು ಹೊರಟ ಕೈಕೇಯಿಸುತ, ಸೇನೆಸಹಿತ.ಲವ ಕುಶರು ಕಂಡರು ಸೇನೆಯನ್ನು. ಕದನಕ್ಕೆ ಸಿದ್ಧರಾದರು. ಯುದ್ಧಕ್ಕೆ ಬದ್ಧರಾದರು. ಬಾಣಗಳನ್ನು ಪ್ರಯೋಗಿಸಿದರು ಸತತವಾಗಿ. ಬಾಲಕರ ವೀರತ್ವವದು ಮೆಚ್ಚಿಸಿತು ದೇವಾನುದೇವತೆಗಳನ್ನು. ಹೂಮಳೆಗರೆದರು ಸುರರು ಸೀತಾಸುತರ ಮೇಲೆ.ಅವರ ಬಾಣದ ಝೇಂಕಾರವದು ಮೂರೂ ಲೋಕಗಳನ್ನು ವ್ಯಾಪಿಸಿತು. ದಿಗ್ಗಜಗಳು ಕಿವುಡಾದವು. ಪರ್ವತಗಳು ನಡುಗಿದವು. ಬಾಣಗಳೇ ಸಂಪೂರ್ಣ ಆವರಿಸಿತು ಭೂಮಿಯ ಮೇಲ್ಭಾಗವನ್ನು. ಸೂರ್ಯಪ್ರಭೆಯದು ತೋರದಾಯಿತು. ಗಾಢಾಂಧಕಾರಕ್ಕೀಡಾದ ಗೃಹದಂತೆ ತೋರಿತು ಆ ಕದನರಂಗ.ರಾಮಸುತರನ್ನು ಎದುರಿಸಹೊರಟ ಸೈನಿಕರಿಗೆ ಇಲ್ಲದಾಯಿತು ಆರಾಮ, ವಿರಾಮ. ಉಂಟಾದದ್ದು ಬರಿಯ ದೇಹಶ್ರಮ. ಅವರನ್ನು ಗೆಲ್ಲುವ ವೀರರಾರೂ ಇಲ್ಲ ಎಂಬAತಹ ಭಾವನೆಗೊಳಗಾಯಿತು ಸಮಸ್ತ ಸೇನೆ. ಭರತನ ಸೈನಿಕರು ಅದಿರಿದರು. ಅಧೀರರಾದರು.ಆ ಗಳಿಗೆಯಲ್ಲಿಯೇ ಹನುಮಂತ “ಬಾಲಕರ ಕದನದ ರೀತಿಯದು ಆ ರಘುಕುಲತಿಲಕನ ಯುದ್ಧಶೈಲಿಯಂತಿದೆ” ಎಂದು ಯುದ್ಧೋನ್ಮುಖರಾಗಿದ್ದ ಕುಶ ಲವರನ್ನು ತೋರಿಸಿದ ಭರತನಿಗೆ. ಅವನು ಅಚ್ಚರಿಪಟ್ಟ.ಅವರ ಬಳಿಗೇ ಹೋದ. ರಾಮವದನವನ್ನು ಹೋಲುವ ಅವರ ಮೊಗದಾವರೆಗಳನ್ನು ಕಂಡು ರೋಮಾಂಚಿತನಾದ. ಪ್ರೀತಿಯಿಂದ ಮಾತನಾಡಿಸಿದ. “ನಮ್ಮ ಸೈನಿಕರನ್ನು ಕೊಂದಿದ್ದೀರಿ. ನನ್ನ ಸಹೋದರರನ್ನು ಘಾಸಿಗೊಳಿಸಿದ್ದೀರಿ. ಇನ್ನಾದರೂ ಕುದುರೆಯನ್ನು ಬಿಟ್ಟು ಮನೆಗೆ ಹೋಗಿ” ಎಂದು ಅನುನಯದಿಂದ ನುಡಿದ.ಅವನ ಸಾತ್ವಿಕ ನುಡಿಯದು ಹಿಡಿಸಲಿಲ್ಲ ಕದನದ ಸತ್ವಪೂರ್ಣ ಗೆಲುವನ್ನು ಬಯಸಿದ್ದ ವೀರ ಬಾಲಕರಿಗೆ. ಭರತ, ನಳ, ಹನುಮಂತ, ಜಾಂಬವ, ಅಂಗದ, ನೀಲ ಕುಮುದರು, ಸುಷೇಣ ಇವರೆಲ್ಲರೂ ಅನುಕ್ರಮದಲ್ಲಿ ಬಾಣಗಳ ಹೊಡೆತಕ್ಕೆ ಈಡಾಗುತ್ತಲೇ ಹೋದರು.ಚೈತನ್ಯವನ್ನೇ ಕಳೆದುಕೊಂಡ ಭರತ ಪ್ರಜ್ಞೆ ಕಳೆದುಕೊಂಡು ಭೂಮಿಗೆ ಬಿದ್ದ. ಈ ಸುದ್ದಿ ಸಿಡಿಯಿತು ಅಯೋಧ್ಯೆಯೆಡೆಗೆ…ಶ್ರೀರಾಮನಿದ್ದ ಕಡೆಗೆ… ಡಾ.ವಿಶ್ವನಾಥ್‌ ಎನ್‌ ನೇರಳೆಕಟ್ಟೆ

Read Post »

ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ ” ಮಾಯಾ ಜಿಂಕೆಓಡುತಿರು”

ಕಾವ್ಯ ಸಂಗಾತಿ ಮಾಯಾ ಜಿಂಕೆ ಓಡುತಿರು ಡಾ.ಹೆಚ್.ನಟರಾಜ್‌ ಆರ್ಯ ಮಾಯಾ ಜಿಂಕೆ ಓಡುತಿರುಮೈ ಮಿನುಗಿ ಮಿಂಚಿನಂತೆ;ಮನದ ಕಾಡು ದಾಟುತಿರು,ಮೌನದೊಳ ಮಾತಿನoತೆ . ಹೆಜ್ಜೆಯಲಿ ಗಾಳಿಯ ಗೆಜ್ಜೆ,ಕಣ್ಣೊಳ ಕಾಡಿನ ಕನ್ನಡಿ;ಕೊಂಬಲಿ ಚಂದ್ರನ ಬಿಲ್ಲು,ಮೈಮೇಲೆ ಹೊನ್ನಿನ ಹೊಳಪು. ಹಸಿರು ಹಾಸಿಗೆ ತುಳಿದು,ಹೊನ್ನಿನ ನೆರಳು ಸೀಳಿ;ಎಲೆಗಳ ಗುಟ್ಟು ಆಲಿಸಿ,ಮಿಂಚಿಗೇ ದಾರಿ ತೋರಿಸು. ಆ ಹೊಳಪೇ ಕನಸಾಗಿ,ಸೀತೆಯ ಕಣ್ಣನು ಸೆಳೆಯಿತು;ಮಾರೀಚನ ಮೈಯಲಿ ಮಾಯೆ,ಮನದೊಳ ಮೋಹವಾಯಿತು. ರಾಮನ ಹೆಜ್ಜೆ ತಿರುಗಿಲಕ್ಷ್ಮಣರೇಖೆ ನಡುಗಿತು;ಕಾಣುವುದೆಲ್ಲ ಸತ್ಯವಲ್ಲಕನಸಿಗೂ ನೆರಳುಂಟು. ಅಂದೊಂದು ಬಾಣ ಬೆನ್ನಟ್ಟಿತು,ಇಂದೊಂದು ಗುಂಡು ಬೆನ್ನಟ್ಟುತ್ತದೆ;ಕಾಲ ಮಾತ್ರ ಬದಲಾಗಿದೆ,ಬೇಟೆಯ ಕಣ್ಣು ಬದಲಾಗಿಲ್ಲ. ಗಾಳಿಯ ಗುಟ್ಟು ಅರಿತು,ಗುಂಡಿಗಿಂತ ಮುಂಚೆ ಚಿಮ್ಮು;ಹಿಡಿದರೆ ದೂರವಾಗು,ಬಿಗಿದರೆ ಗಾಳಿಯಾಗು. ಪ್ರೀತಿ ಹತ್ತಿರ ಬಂದಾಗ,ನಿಶ್ಶಬ್ದವಾಗಿ ನಿಂತು ನೋಡು;ಭಯ ನೆರಳಾಗಿ ಬಂದರೆ,ಬಯಲಿನ ಎದೆ ದಾಟು. ಬಂಡೆಯ ಅಂಚು ಜಿಗಿದು,ಭೀತಿಯನ್ನು ಹಿಂದೆ ಬಿಟ್ಟು;ಭವಿಷ್ಯದ ಕಡೆಗೆ ಓಡು,ಬದುಕಿನ ಹಠ ಹೊತ್ತು. ನಿನ್ನ ಓಟ ಕೇವಲ ಓಟವಲ್ಲಮುಕ್ತಿಯ ಜೀವಭಾಷೆ;ಮಾಯಾ ಜಿಂಕೆ ಓಡುತಿರು,ಯಾರ ಕೈಗೂ ಸಿಗದಂತೆ….. ಡಾ. ಹೆಚ್. ನಟರಾಜ್ ಆರ್ಯ

ಡಾ. ಹೆಚ್. ನಟರಾಜ್ ಆರ್ಯ ” ಮಾಯಾ ಜಿಂಕೆಓಡುತಿರು” Read Post »

ಕಾವ್ಯಯಾನ

ಗೊರೂರು ಅನಂತರಾಜು ಅವರ ಹನಿಗವನಗಳು

ಕಾವ್ಯ ಸಂಗಾತಿ ಗೊರೂರು ಅನಂತರಾಜು ಹನಿಗವನಗಳು ಇದು ಸರಿಯೇ..? ಹುಡುಗಿಈ ಭೂಮಿಗೆಗುರುತ್ವಾಕರ್ಷಣಿ ಶಕ್ತಿಇರುವಂತೆ ನಿನ್ನಲ್ಲೂ ಇದೆಇದು ಸರಿಯೇ..? ಹುಡುಗಕೈ ಹಿಡಿಯುವುದಾಗಿ ನಂಬಿಸಿ ನನ್ನ ಬಯಕೆಗಳಿಗೆಬೆಂಕಿ ಸುರಿದು  ಈಗ ಸಾರಿ ಎಂದುತಣ್ಣೀರು ಸುರಿಯುತ್ತಿರುವೆ ಇದು ಸರಿಯೇ..? ಹುಡುಗಿನನ್ನ ಬಾಳೇ ಗಾಳಿಗೋಪುರ ಇನ್ನೂ ನಿನ್ನ ಪ್ರೀತಿಗಾಗಿತಾಜ್ ಗೋಪುರ ಕಟ್ಟಿಸಲುಕೇಳುವೆಯಲ್ಲಾಇದು ಸರಿಯೇ..? ಹುಡುಗನೀನಿದ್ದ ಮನೆಗೆನಮ್ಮಪ್ಪನಿಗೆ ಬಾಡಿಗೆ ನೀಡಿದೆಆದರೆ  ನನ್ನ ಮನದಲ್ಲಿನೆಲೆಸಿದ್ದಕ್ಕೆ ಬಾಡಿಗೆನೀಡದೆ ಓಡಿಹೋದೆಇದು ಸರಿಯೇ..? ಹುಡುಗಿಆ ಶ್ರೀಕೃಷ್ಣ ತನ್ನ ಭಕ್ತನಿಗೆ ಗೋಡೆ ಒಡೆದು ದಶ೯ನ ಭಾಗ್ಯ ಕರುಣಿಸಿದನಿನ್ನ  ಭಕ್ತ ಈ ಕರುಣಾಕರನಿಗೆಮನೆಯ ಕಿಟಕಿ ತೆರೆದುಮುಖ ತೋರದೆ  ಕಾಡಿಸುವೆಯಲ್ಲಾಇದು ಸರಿಯೇ…? ಹುಡುಗಮದುವೆಗೆ ಮೊದಲು ನೀ ನನಗೆ ಗುರಿಯಿಟ್ಟೆಈಗ  ನನ್ನ ದಾರದಬುಗುರಿ ಆಗಿಬಿಟ್ಟೆಯೆಲ್ಲಾಇದು ಸರಿಯೇ…? ಗೊರೂರು ಅನಂತರಾಜು,

ಗೊರೂರು ಅನಂತರಾಜು ಅವರ ಹನಿಗವನಗಳು Read Post »

ಕಾವ್ಯಯಾನ

ಟಿ.ಪಿ.ಉಮೇಶ್‌ ಅವರ “ನೀ ನನ್ನ ಅಪೂರ್ಣ ಕವಿತೆ!”

ಕಾವ್ಯ ಸಂಗಾತಿ ಟಿ.ಪಿ.ಉಮೇಶ್‌ “ನೀ ನನ್ನ ಅಪೂರ್ಣ ಕವಿತೆ!” ನಿನ್ನನ್ನು ನಿನ್ನನ್ನಷ್ಟೇ ಬರೆಯಲುಎಷ್ಟೋ ಕವಿತೆಗಳು ನನ್ನೊಳಗೆ ಕಾಯುತ್ತಿವೆ!ಪ್ರತಿ ಬಾರಿಯುಭಾವನೆಗಳು ಎದೆಯ ತುಂಬಿಕಣ್ಗಳ ಅರಳಿಸಿ ಬೆರಳಿಗೆ ತಾಗಿಅಕ್ಷರಗಳಾಗದೆ ನಿಂತು ಬಿಡುತ್ತವೆ!ನೀನಿಲ್ಲದ ಪ್ರತಿ ದಿನದಮನೆಯ ಒಳಗಿನ ಮೌನದಂತೆ! ನೀನು ದೂರವಾದ ಮೇಲೆಚಂದ್ರನಿದ್ದರೂ ಇರುಳಿಗೆ ಬೆಳಕಿಲ್ಲ!ಮಳೆಯಾದರೂ ಮಣ್ಣಿನ ಪರಿಮಳವಿಲ್ಲ!ಹೂವು ಅರಳಿದರೂ ಸುಗಂಧವಿಲ್ಲ! ನನ್ನ ಮನೆಯ ದಾರಿಯಲ್ಲಿಪ್ರತಿಕ್ಷಣವೂ ಹಾದುಹೋಗುವ ಗಾಳಿನಿನ್ನ ಹೆಜ್ಜೆಗಳ ಸುದ್ದಿಯನ್ನೇ ಹೊತ್ತು ತರಬಹುದೆಂದುಮನಸ್ಸು ಇನ್ನೂ ಕಾಯುತ್ತಾ ಇಣುಕಿ ನೋಡುತ್ತಿದೆ! ವಿರಹನೀನು ಇಲ್ಲದಿರುವುದಕ್ಕಿಂತ!ನೀನು ಇದ್ದ ಮೈಮನ ಈ ಮನೆಯೆಲ್ಲನಿನ್ನ ನೆನಪಿನಿಂದ ತುಂಬಿಹೋಗಿರುವುದು! ಗಾಢ ಮೌನನನ್ನ ಹಗಲು ರಾತ್ರಿಗಳ ಮೇಲೆಇಳಿಯದ ಮಳೆಯ ಮೋಡದಂತೆ!ಮಳೆ ಸುರಿಯದೆ ಆಕಾಶವೆಲ್ಲಭಾರವಾಗಿಯೇ ಉಳಿದಂತೆ! ನಿನ್ನನ್ನು ಮರೆಯಲು ಹೊರಟಪ್ರತಿ ಆಲೋಚನೆಯು ಪ್ರತಿ ನಡೆಯುಮತ್ತೆ ನಿನ್ನ ನೆನಪಿನ ಬಳಿಗೇ ಬಂದು ನಿಲ್ಲಿಸುತ್ತದೆ!ದಾರಿ ತಪ್ಪಿದ ನದಿಯೊಂದು ಹುಚ್ಚು ಕುದುರೆಯಾಗಿಸಮುದ್ರವನ್ನೇ ಹುಡುಕುವಂತೆ! ಒಮ್ಮೆ ನೀನುನನ್ನೆಲ್ಲ ದಿನಗಳ ಬೆಳಗಾಗಿದ್ದೆ!ಈಗ ಅದೇ ದಿನಗಳುಸೂರ್ಯೋದಯವನ್ನೇ ಮರೆತಿರುವದೀರ್ಘ ಸಂಜೆಯಂತಾಗಿ ಸುದೀರ್ಘ ಇರುಳಂತಿವೆ! ನಿನ್ನ ಹೆಸರನ್ನು ಬರೆದಾಗಪೆನ್ನಿನ ಮಸಿ ಮಾತ್ರ ಕಾಗದದ ಮೇಲೆ ಮೂಡುವುದಿಲ್ಲ!ನನ್ನೊಳಗೆ ಮೌನವಾಗಿ ಉಳಿದಿರುವವಿರಹದ ಕಣ್ಣೀರುಸಾಲುಸಾಲುಗಳಾಗಿ ಜಾರಿ ಮನ ಹಗುರಾಗಬೇಕಿದೆ! ನಿನ್ನನ್ನು ಒಂದೇ ಕವಿತೆಯಲ್ಲಿ ಬರೆಯಲು ಸಾಧ್ಯವಿಲ್ಲನೀನು ಕೇವಲ ಒಂದು ನೆನಪಲ್ಲ!ನನ್ನ ಉಸಿರು ಉಸಿರಿನಲ್ಲೂಮತ್ತೆ ಮತ್ತೆ ಹುಟ್ಟುವನನ್ನದೇ ಅಪೂರ್ಣ ಕವಿತೆ! ಟಿ.ಪಿ.ಉಮೇಶ್

ಟಿ.ಪಿ.ಉಮೇಶ್‌ ಅವರ “ನೀ ನನ್ನ ಅಪೂರ್ಣ ಕವಿತೆ!” Read Post »

ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿಮಠ ಅವರ ಗಜಲ್

ಕಾವ್ಯ ಸಂಗಾತಿ ವಾಣಿ ಯಡಹಳ್ಳಿಮಠ ಗಜಲ್ ರೀತಿ, ರಿವಾಜು ಎಂದೆಲ್ಲಾ ಸಂತಸಕೆ ಒಡ್ಡು ಕಟ್ಟಿದವಳು ನಾನುಕನಸುಗಳಿಗೆ ಪರದೆ ಹಾಕಿ ಇರುಳು ಕಳೆದವಳು ನಾನು ಬದುಕಿನ ಇಳಿ ಸಮಯದಿ ನೀ ಅತಿಥಿಯಂತೆ ಬಂದಿರುವಿ ಏನುಸಂಜೆಯ ಸೊಬಗಿಗೆ ಮರುಳಾಗದಿರಲು ಕಿಟಕಿ ಮುಚ್ಚಿದವಳು ನಾನು ಯಾರು ಎಷ್ಟು ಕರೆದರೂ,ತಿರುಗಿ ನೋಡದೆನ್ನ ಜೀವಎದೆಯ ಕದಕೆ ಅಗುಳಿ ಹಾಕಿ , ಬೀಗ ಜಡಿದವಳು ನಾನು ನೀ ಒಲವಿನ ಓಲೆ ಬರೆದು, ಓಲೈಸಿಕೊಳ್ಳುವೆ ಹೇಗೆ ನನ್ನನುಮೊಹಬ್ಬತ್ತಿನ ಶಹರಿನಲಿ ವಿಳಾಸ ಇಲ್ಲದವಳು ನಾನು  ಬಂಡೆಯಂತಹ ವಾಣಿಯನು ಕರಗಿಸುವ ಹಠವು ವ್ಯರ್ಥಯಾವ ಪ್ರೇಮ ಶಿಲ್ಪಿ ಕಟೆದರೂ ಪ್ರೇಯಸಿ ಆಗದವಳು ನಾನುವಾಣಿ ಯಡಹಳ್ಳಿಮಠ

ವಾಣಿ ಯಡಹಳ್ಳಿಮಠ ಅವರ ಗಜಲ್ Read Post »

ಕಾವ್ಯಯಾನ

ಶಾಲಿನಿ ಕೆಮ್ಮಣ್ಣು ಅವರ ಕವಿತೆ “ಭಾವ ತರ್ಪಣ”

ಕಾವ್ಯ ಸಂಗಾತಿ ಶಾಲಿನಿ ಕೆಮ್ಮಣ್ಣು “ಭಾವ ತರ್ಪಣ” ಸಂಜೆ ಮುಗಿಲ ಬಣ್ಣದಿಂದ  ಬಿರಿದ ಇಂದ್ರ ಚಾಪದಂತೆ,ಮೌನರಾಗ ತಂತಿಯಲ್ಲಿ ಮಿಡಿವ ಭಾವ ಶ್ರಾವ್ಯ ನೀನು.ನಾ ಮರೆಯ ಹೊರಟರೂ ಮನಸು ನಿನ್ನೇ ಕರೆದಂತೆ,ಮರೆತ ಕ್ಷಣ ರಾಗವಾಗಿ ಮಿಡಿವೆ ನನ್ನ ಮನದಿ ನೀನು. ಪ್ರತಿ ರಾತ್ರಿ ಕನಸಲಿ ಮನದ ಕದವ ತೆರೆದವನೇ,ನನ್ನ ಪ್ರೇಮ ದೇಗುಲದಿ ಬೆಳಗೋ ದಿವ್ಯ ದೀಪ್ತಿ ನೀ.ಉಸಿರ ಪ್ರತಿ ಸ್ಪಂದನದಲಿ ಮಧುರ ಗೀತೆಯಾದವನೇ,ನನ್ನ ಶೂನ್ಯದಾಗಸದಿ ಮಿನುಗೋ ಚೈತ್ರದ ಚುಕ್ಕಿ ನೀ. ಮಾತು ಮರೆತ ಹೃದಯಕೆ ನಿನ್ನ ಹೆಸರೇ ಪಲ್ಲವಿ,ಕನಸ  ಕಣ್ಣ ನೈದಿಲೆಗೆ ನಿನ್ನ ರೂಪವೇ ಚಂದಿರ.ನನ್ನ ಭಾವ ನಂದನಕೆ ನೀನೆ ಒಲವ ಭೈರವಿ,ನನ್ನ ಉಸಿರ ತಾಳಕೆ ನೀನೇ ಮಧುರ ಸಪ್ತಸ್ವರ. ಬರಿದಾದ ಮನದೊಳಗೆ  ನಿಂತೆ ನೀ ವಸಂತವಾಗಿ,ಹೂವಿನ ದಳದಲಿ ಉಳಿದ ಮಂಜಿನ ಹನಿಯಂತೆ.ಕಳೆದುಹೋದ ಕ್ಷಣಗಳೆಲ್ಲ  ಮರಳಿವೆ ಕಾವ್ಯವಾಗಿ,ಕಣ್ಣಂಚಿನ ಹನಿಯೊಂದು ನಿನ್ನ ಕಥೆಯ ಹೇಳಿದಂತೆ. ಶಾಲಿನಿ ಕೆಮ್ಮಣ್ಣು

ಶಾಲಿನಿ ಕೆಮ್ಮಣ್ಣು ಅವರ ಕವಿತೆ “ಭಾವ ತರ್ಪಣ” Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಅಂಕಣ ಸಂಗಾತಿ-39 ಸುಜಾತಾ ರವೀಶ್ ವೃತ್ತಿ ವೃತ್ತಾಂತ ಮತ್ತಷ್ಟು ಎರರ್ ಪಟ್ಟಿಗಳು ಈ ಹಿಂದೆಯೇ ಹೇಳಿದಂತೆ ತಪ್ಪುಗಳ ಲಿಸ್ಟ್ ಬಂದಾಗ ಅದನ್ನು ಸರಿಪಡಿಸುವುದು ನನಗೆ ತುಂಬಾ ಖುಷಿಯ ಕೆಲಸ ನಮ್ಮ ಪಾಲಿಸಿ ಸೇವಾ ವಿಭಾಗದಲ್ಲಿ ಸಂಭವಿಸಬಹುದಾದ ತಪ್ಪುಗಳ ಪಟ್ಟಿಗಳನ್ನು ಸರಿಪಡಿಸಿದ್ದಾಗಿತ್ತು ಕೆಲವೊಮ್ಮೆ ಪ್ರೀಮಿಯಂ ಗೆ ಹಣ ಅಡ್ಜಸ್ಟ್ ಮಾಡಲು ಸಾಧ್ಯವಾಗದೆ ಬಂದ ಹಣವನ್ನು ಡೆಪಾಸಿಟ್ ಅಂತ ಯಾವುದಕ್ಕೂ ಅಕೌಂಟ್ ಮಾಡದೆ ಇಟ್ಟು ಬಿಡುವ ವ್ಯವಸ್ಥೆ ಇತ್ತು .ಆ ರೀತಿ ಇಟ್ಟ ಡೆಪಾಸಿಟ್ ಗಳು ನಾನು ಪಾಲಿಸಿ ಸೇವಾ ವಿಭಾಗದಲ್ಲಿದ್ದಾಗ ಸ್ವಲ್ಪ ಹೆಚ್ಚಿನ ಸಂಖ್ಯೆ ಹಾಗೂ ಹೆಚ್ಚಿನ ಮೊತ್ತದಲ್ಲಿಯೇ ಇದ್ದವು. ಅದು ಏಕೆ ಆ ರೀತಿ ಪ್ರೀಮಿಯಂ  ಅಡ್ಜಸ್ಟ್ ಆಗಲಿಲ್ಲ ಎಂಬುದನ್ನು ಕಂಡುಕೊಂಡು, ಬೇಕಾದ ಕಡೆ ಪಾಲಿಸಿ ದಾರರ ಜೊತೆ ಪತ್ರ ವ್ಯವಹಾರ ಅಥವಾ ಫೋನ್ ನಲ್ಲಿ ಹೇಳಿ ಕಡಿಮೆ ಇದ್ದ ಮೊತ್ತ ಕಟ್ಟಿಸಿ ಅದನ್ನು ಸರಿ ಮಾಡಬೇಕಿತ್ತು. ಕೆಲವೊಮ್ಮೆ ಹೆಚ್ಚು ಹಣ ಉಳಿದುಕೊಳ್ಳುತ್ತಲೂ ಇತ್ತು .ಅವುಗಳನ್ನು ಸಹ ವಾಪಸ್ಸು ಮಾಡಬೇಕಿತ್ತು. ಆ ರೀತಿ ಹೆಚ್ಚುವರಿ ಇದ್ದ ಹಣ ನೂರು ರೂಪಾಯಿಗಿಂತ ಹೆಚ್ಚು ಇದ್ದಲ್ಲಿ ಚೆಕ್ ಮೂಲಕ ವಾಪಸ್ಸು ನೂರು ರೂಪಾಯಿಯ ಒಳಗೆ ಇದ್ದಲ್ಲಿ ಮನಿ ಆರ್ಡರ್ ಮೂಲಕ ಹಿಂದಿರುಗಿಸಬೇಕಿತ್ತು. ಒಂದಷ್ಟು ದಿನ ಪಟ್ಟು ಹಿಡಿದು ಆ ಕೆಲಸದ ಬಗ್ಗೆ ಗಮನ ಹರಿಸಿದ್ದರಿಂದ ಎಲ್ಲಾ ಕೇಸ್ ಗಳು ಇತ್ಯರ್ಥವಾಗಿ ಡೆಪಾಸಿಟ್ ಜೀರೋ ಅಂದರೆ ನಿಲ್ ಆಗಿ ಅದಕ್ಕೂ ಸಹ ನಮಗೆ ವಿಭಾಗಿಯ ಕಚೇರಿಯಿಂದ ಒಂದು ಪ್ರಮಾಣ ಪತ್ರ ಬಂದಿತ್ತು. ಮತ್ತೊಂದು ಹೆಚ್ಚು ತಪ್ಪುಗಳಾಗುತ್ತಿದ್ದ ಕ್ಷೇತ್ರ ಎಂದರೆ ಪೆನ್ಷನ್.ಅನ್ಯುಯಿಟಿ ವಿಭಾಗ. ಅಲ್ಲಿ ಪಾಲಿಸಿಗಳ ಮಾಹಿತಿಗಳು ಕೆಲವೊಮ್ಮೆ ತಪ್ಪಾಗಿ ಫೀಡ್ ಆಗಿದ್ದರಿಂದ ಕೆಲವೊಂದು ಕಡೆ ತಾಳೆ ಆಗದೆ ಅವು ಎರರ್ ಪಟ್ಟಿಯಲ್ಲಿ ಬರುತ್ತಿತ್ತು . ಫೈಲ್ಗಳನ್ನು ತರಿಸಿ ಪ್ರೊಪೋಸಲ್ ನಲ್ಲಿ ಇದ್ದ ಹಾಗೆ ಎಲ್ಲಾ ಮಾಹಿತಿಗಳನ್ನು ತಿದ್ದಿ ಮಾಹಿತಿ ಪೂರ ಸರಿಯಾದ ಮೇಲೆ ಪೆನ್ಷನ್ ಸೆಟಲ್ ಮಾಡಲು ಆಗುತ್ತಿತ್ತು .ಆ ರೀತಿ 600ಕ್ಕೂ ಹೆಚ್ಚು  ಎರರ್ ಗಳು ಇದ್ದವು. ಈ ಕೆಲಸ ಪಾಲಿಸಿ ಸೇವಾ ವಿಭಾಗಕ್ಕೆ ಸಂಬಂಧಿಸಿದ್ದಲ್ಲ, ದಾವಾ ವಿಭಾಗಕ್ಕೆ ಸಂಬಂಧಿಸಿದ್ದು. ಆಗ ಆ ವಿಭಾಗದ ಅಧಿಕಾರಿ ಆಗಿದ್ದವರು ಎಸ್ ಆರ್ ಮುರಳಿ. ಈ ಹಿಂದೆ ನಾನು ವಿಭಾಗೀಯ ಕಚೇರಿಯಲ್ಲಿ ಇದ್ದಾಗ ನನ್ನ ಎಚ್ ಜಿ ಎ ಆಗಿದ್ದವರು. ಅವರು ಈ ವಿಷಯದಲ್ಲಿ ನನ್ನ ಸಹಕಾರ ಕೋರಿದಾಗ ನನಗೆ ಇಷ್ಟದ ಕೆಲಸವೂ ಆದ್ದರಿಂದ ಅವರೊಂದಿಗೆ ಸೇರಿ ಆ ಪಟ್ಟಿಯನ್ನು ಸಹ ಪೂರ್ತಿ ಸರಿ ಮಾಡಿದ್ದೆವು. ಈ ಹಂತದಲ್ಲೇ ನಮ್ಮ ನಿಗಮದ ಕೆಲಸಗಳನ್ನು ಡಿಜಿಟೀಕರಣ ಮಾಡುವ ಯೋಜನೆ ಆರಂಭವಾಗಿದ್ದು. ಇದು ಸಹ ಒಂದು ಬೃಹತ್ ಯೋಜನೆ.  ಆದರೆ ಇಡೀ ನಿಗಮದ ಕಾರ್ಯ ವೈಖರಿಯಲ್ಲಿ ಒಂದು ಐತಿಹಾಸಿಕ ಬದಲಾವಣೆ ಆಗಿತ್ತು ಇದರಿಂದ. ​LIC ಯಲ್ಲಿ ದಾಖಲೆಗಳ ಡಿಜಿಟಲೀಕರಣ ಮತ್ತು ಸ್ಕ್ಯಾನಿಂಗ್ ಯೋಜನೆ 2008 – 2010 ರ ಅವಧಿಯಲ್ಲಿ ದೇಶಾದ್ಯಂತ ಹಂತ-ಹಂತವಾಗಿ ಪ್ರಾರಂಭವಾಯಿತು.​ಪಾಲಿಸಿ ದಾಖಲೆಗಳನ್ನು ಕಾಗದದ ರೂಪದಿಂದ ಡಿಜಿಟಲ್ ರೂಪಕ್ಕೆ ಬದಲಾಯಿಸಲು EDMS (Enterprise Document Management System) ಎಂಬ ಯೋಜನೆಯನ್ನು ಜಾರಿಗೆ ತರಲಾಯಿತು. ಮೊದಲನೆಯ ಹಂತ ದಾಖಲೆಗಳ ವರ್ಗಿಕರಣ ಮತ್ತು ಸಿದ್ಧತೆ ಶಾಖೆಗಳಲ್ಲಿ ಇರುವ ಹಳೆಯ ಪಾಲಿಸಿ ಫೈಲ್ ಗಳು ಲೈನ್ ದಾಖಲೆಗಳು ಮತ್ತು ಹೊಸ ಪ್ರಪೋಸಲ್ ಫಾರಂ ಗಳನ್ನು ವರ್ಗೀಕರಿಸಿ ಪಿನ್ ಅಥವಾ ಟ್ಯಾಗ್ ತೆಗೆದು ಸ್ಕ್ಯಾನಿಂಗ್ ಗೆ ಸಿದ್ಧಪಡಿಸಲಾಯಿತು. ಎರಡನೆಯ ಹಂತದಲ್ಲಿ ಇಡಿಎಂಎಸ್(EDMS)   ಪೋರ್ಟಲ್ ಮೂಲಕ ಸ್ಕ್ಯಾನಿಂಗ್ ವಿಶೇಷ ಹಾಯ್ ಸ್ಪೀಡ್ ಡಾಕ್ಯುಮೆಂಟ್ ಸ್ಕ್ಯಾನರ್ ಗಳನ್ನು ಬಳಸಿ ಪಾಲಿಸಿ ಪತ್ರಗಳು ವೈದ್ಯಕೀಯ ವರದಿಗಳು ವಯಸ್ಸಿನ ದಾಖಲೆ ಮತ್ತು ಕೆ ವೈ ಸಿ ಪತ್ರಗಳನ್ನು ಇ ಡಿ ಎಂ ಎಸ್ ತಂತ್ರಾಂಶಕ್ಕೆ ಸ್ಕ್ಯಾನ್ ಮಾಡಲಾಯಿತು. ಮೂರನೆಯ ಹಂತದಲ್ಲಿ ಇಂಡಾಕ್ಸಿಂಗ್ ಮತ್ತು ಪರಿಶೀಲನೆ ಪ್ರತಿ ಸ್ಕ್ಯಾನ್ ಮಾಡಿದ ದಾಖಲೆಗೂ ಸೂಕ್ತ ಪಾಲಿಸಿ ಸಂಖ್ಯೆ ಮತ್ತು ದಾಖಲೆಯ ಪ್ರಕಾರವನ್ನು ಟ್ಯಾಗ್ ಮಾಡಿ ಡೇಟಾ ಸರಿಯಾಗಿದೆಯೇ ಎಂದು ತಾಳೆ ನೋಡಲಾಯಿತು. ನಾಲ್ಕನೆಯ ಹಂತದಲ್ಲಿ ಕೇಂದ್ರೀಕೃತ ಸರ್ವರ್ ನಲ್ಲಿ ಸಂಗ್ರಹಣೆ ಮಾಡಲಾಯಿತು ಆದ ದಾಖಲೆಗಳನ್ನು ನಿಗಮದ ಕೇಂದ್ರೀಕೃತ ಭದ್ರತಾ ಸರ್ವರ್ ನಲ್ಲಿ ಭದ್ರವಾಗಿ ಸಂಗ್ರಹಿಸಲಾಯಿತು ಇದರಿಂದಾಗಿ ಯಾವುದೇ ಶಾಖೆಯಿಂದ ಸಿಬ್ಬಂದಿ ಕ್ಷಣಾರ್ಧದಲ್ಲಿ ದಾಖಲೆಗಳನ್ನು ವೀಕ್ಷಿಸಲು ಸಾಧ್ಯವಾಯಿತು. ಇದರಿಂದಾದ ಮುಖ್ಯ ಪ್ರಯೋಜನಗಳು:​ಸೇವೆಗಳ ವೇಗ: ಪಾಲಿಸಿ ಸಾಲ (Policy Loan), ಸರ್ವಿಸ್ಸಿಂಗ್, ಮತ್ತು ಕ್ಲೈಮ್‌ಗಳ (Claim Settlement) ಪ್ರಕ್ರಿಯೆ ಅತ್ಯಂತ ವೇಗವಾಗಿ ಪೂರ್ಣಗೊಳ್ಳಲು ನೆರವಾಯಿತು.​ದಾಖಲೆಗಳ ಭದ್ರತೆ: ಹಳೆಯ ಕಾಗದದ ಫೈಲ್‌ಗಳು ಹಾಳಾಗುವುದು ಅಥವಾ ಕಳೆದುಹೋಗುವ ಅಪಾಯ ತಪ್ಪಿತು.​Any Branch Servicing: ಗ್ರಾಹಕರು ದೇಶದ ಯಾವುದೇ LIC ಶಾಖೆಗೆ ಹೋದರೂ ಅವರ ಪಾಲಿಸಿ ದಾಖಲೆಗಳನ್ನು ಕಂಪ್ಯೂಟರ್ ಪರದೆಯ ಮೇಲೆ ತಕ್ಷಣ ಪರಿಶೀಲಿಸಲು ಸಾಧ್ಯವಾಯಿತು.​ಪ್ರಸ್ತುತ ಹೊಸ ಪ್ರಪೋಸಲ್ ಫಾರ್ಮ್‌ಗಳು ಮತ್ತು ದಾಖಲೆಗಳನ್ನು e-KYC ಹಾಗೂ ಆನ್‌ಲೈನ್ ಡಿಜಿಟಲ್ ವ್ಯವಸ್ಥೆಯ ಮೂಲಕ ನೇರವಾಗಿ ಡಿಜಿಟಲ್ ರೂಪದಲ್ಲೇ ಅಪ್‌ಲೋಡ್ ಮಾಡಲಾಗುತ್ತದೆ. ಇದೊಂದು ಬೃಹತ್ ಯೋಜನೆ ಎಂದು ಮೊದಲೇ ಹೇಳಿದ್ದೆ. ಸಾವಿರಗಳ ಗಟ್ಟಲೆ ಕೆಲವೊಂದು ದೊಡ್ಡ ಶಾಖೆಗಳಲ್ಲಿ ಲಕ್ಷಗಟ್ಟಲೆ ಇರುವ ದಾಖಲೆಗಳನ್ನು ಈ ರೀತಿ ಸ್ಕ್ಯಾನಿಂಗ್ ಗೆ ಸಿದ್ಧ ಮಾಡುವ ಕೆಲಸ ಶಾಖೆಗಳಿಗೆ. ಆದರೆ ಅದಕ್ಕೆಂದು ಹೆಚ್ಚುವರಿ ಸಿಬ್ಬಂದಿಯನ್ನೇನು ಕೊಟ್ಟಿರಲಿಲ್ಲ. ಇರುವ ಸಿಬ್ಬಂದಿಗಳನ್ನೇ ಪಾನಲ್ ತರಹ ಮಾಡಿ ಕೆಲಸಕ್ಕೆ ನಿಯೋಜಿಸಿ ತುಂಬಾ ಯಶಸ್ವಿಯಾಗಿ ಈ ಕಾರ್ಯವನ್ನು ನಿರ್ವಹಿಸಲಾಯಿತು. ಈ ಸಮಯದಲ್ಲಿ ನಮಗೆ ಇದ್ದ ಅಧಿಕಾರಿ ಹಂಸಿನಿ ಎನ್ನುವವರು.  ಇದನ್ನು ತುಂಬಾ ಸಮರ್ಥವಾಗಿ ನಿಭಾಯಿಸಿದರು ಎಂದೇ ಹೇಳಬಹುದು. ಆದರೆ ಮೊದ-ಮೊದಲು ಆರಂಭಿಕ ತೊಂದರೆಗಳು ಬಹಳಷ್ಟು ಬಂದವು ಕೆಲವೊಂದು ಡಾಕೆಟ್ ಗಳು ಸಿಗುತ್ತಿರಲಿಲ್ಲ.  ಇಡಿಎಂಎಸ್ ಇಮೇಜ್ ಸಹ ಇರುತ್ತಿರಲಿಲ್ಲ. ಪಾಲಿಸಿ ಸೇವೆಗಾಗಿ ಬಂದ ಪಾಲಿಸಿದಾರರಿಗೆ ಸಮರ್ಪಕ ಕಾರಣ ನೀಡಲು ಆಗುತ್ತಿರಲಿಲ್ಲ ಆದರೆ ಇವೆಲ್ಲ ಕೆಲ ದಿನಗಳು ಮಾತ್ರ. ನಂತರ ಇದು ತುಂಬಾ ಪ್ರಾಯೋಗಿಕವಾಗಿ ಅನುಕೂಲಕ್ಕೆ ಬಂತು. ಈಗಂತೂ ದೇಶದ ಯಾವ ಮೂಲೆಯಲ್ಲಿ ಪಾಲಿಸಿ ಸೇವೆ ನಡೆಯುತ್ತಿದ್ದರೂ ಬೇರೆ ಯಾವುದೇ ಶಾಖೆಯಲ್ಲಿ ಪ್ರೀಮಿಯಂ ಕಟ್ಟುವುದು ಸಾಲ ತೆಗೆದುಕೊಳ್ಳುವುದು ನಾಮಿನಿ ಬದಲಾಯಿಸುವುದು ಕೆಲವೊಂದು ಸೀಮಿತ ಪಾಲಿಸಿಗಳಿಗೆ ದಾವಾ ಮೊತ್ತವನ್ನು ಪಡೆಯುವುದು ಸಹ ಸಾಧ್ಯವಾಗುತ್ತಿದೆ. ಇದಿಷ್ಟು ಕಚೇರಿಯ ಒಳಗಿನ ವಿಷಯಗಳು. ಆದರೆ ಇದೇ ಅವಧಿಯಲ್ಲಿ ನಾನು ಮತ್ತೊಮ್ಮೆ ಹೈದರಾಬಾದ್ ನ ತರಬೇತಿಗೆ ಹೋಗಿ ಬಂದಿದ್ದು. ವಿಭಾಗಿಯ ಕಚೇರಿಯ ನಮ್ಮದೇ ಕಾರ್ಮಿಕ ಸಂಘದ ಮಂಜುಳಾ ಮತ್ತು ಇನ್ನೊಬ್ಬ  ಸ್ಟೆನೋಗ್ರಾಫರ್ ಮಂಜುಳಾ ಜೊತೆಗೆ ನನ್ನನ್ನು ತರಬೇತಿಗೆ ಹಾಕಿದ್ದರು. ಒಳ್ಳೆಯ ಕಂಪನಿ ತುಂಬಾ ಚೆನ್ನಾಗಿ ಇತ್ತು. ಈ ವೇಳೆಗೆ ತರಬೇತಿಯ ಅವಧಿಯನ್ನು ಮೂರು ದಿನಗಳಿಗೆ ಇಳಿಸಿದ್ದರು.  ಆಗ ಮೈಸೂರಿನಿಂದ ನೇರ ರೈಲು ಇರಲಿಲ್ಲ ಸಂಜೆ 6:00 ಗಂಟೆಗೆ ಬೆಂಗಳೂರಿನಿಂದ ಇದ್ದದ್ದು ಬೆಳಿಗ್ಗೆ ಹನ್ನೆರಡು ಗಂಟೆಗೆ ಹೊರಟು ಬೆಂಗಳೂರಿಗೆ ಬಸ್ ನಲ್ಲಿ ಹೋಗಿ ಅಲ್ಲಿ ರಾಮಕೃಷ್ಣ ಹೋಟೆಲ್ ನಲ್ಲಿ ಊಟ ಮಾಡಿ ಯಾವುದೋ ಒಂದು ಪುಟ್ಟ ಮಾಲ್ ನಲ್ಲಿ ಸುತ್ತಾಡಿ ನಂತರ ರೈಲ್ವೆ ನಿಲ್ದಾಣಕ್ಕೆ ಹೋಗಿದ್ದೆವು. ಅಲ್ಲದೆ ಒಂದು ದಿನ ಮುಂಚೆ ಹೋಗುವ ಅನುಕೂಲ ಇರಲಿಲ್ಲ. ಬೆಳಗ್ಗೆ ಹೋದ ತಕ್ಷಣವೇ ತರಬೇತಿ ಆರಂಭವಾಗಿತ್ತು ಹಾಗೂ ನಾಲ್ಕನೆಯ ದಿನ ತರಬೇತಿ ಮುಗಿದ ತಕ್ಷಣವೇ ಮೈಸೂರಿನ ರೈಲು ಹತ್ತಬೇಕಿತ್ತು ಹಾಗಾಗಿ ಬಹಳಷ್ಟು ಜಾಗಗಳನ್ನು ನೋಡಲಿಲ್ಲ. ಬೆಳಿಗ್ಗೆ ಬೇಗ ಎದ್ದು ತರಬೇತಿ ಆರಂಭವಾಗುವ ಮೊದಲೇ ಬಿರ್ಲಾ ಮಂದಿರ ಅನ್ನು ನೋಡಿಕೊಂಡು ಬಂದಿದ್ದೆವು. ಇನ್ನುಳಿದ ಮೂರು ದಿನ ಬೇಗಂ ಪೇಟ್ ಚಾರ್ಮಿನಾರ್ ಇಲ್ಲೆಲ್ಲ ಸುತ್ತಿ ಒಂದಷ್ಟು ಶಾಪಿಂಗ್ ಮಾಡಿದ್ದು ಅಷ್ಟೇ. ಆ ಬಾರಿ ನಾನೇನು ಹೆಚ್ಚು ಖರೀದಿಸಲಿಲ್ಲ ಯಾಕೋ ಏನೋ ಬೇಡ ಎನಿಸಿತ್ತು ಆಗ. ಮತ್ತೊಂದು ಮುಖ್ಯವಾದ ಘಟನೆ ನಡೆದದ್ದು ಅಂದರೆ ಆಫೀಸಿನ ಪಕ್ಕದ ಬೀದಿಯಲ್ಲಿ ಒಂದು ಸಂಗೀತ ಶಾಲೆ ಆರಂಭವಾದ್ದು. ಒಂದು ದಿನ ಬೋರ್ಡ್ ನೋಡಿದ್ದೆ. ಅಲ್ಲಿ ಹೋಗಿ ದೇವರನಾಮ ಕಲಿಯುವ ಆಸೆ ನನಗೆ ಗೆಳತಿಯರಿಗೆ ಹೇಳಿದಾಗ ಒಂದು ಐದು ಜನ ತಾವೂ ಕಲಿಯಲು ಸಿದ್ದರಾದರು. ವಾರದಲ್ಲಿ ಎರಡು ದಿನ ಸಂಜೆ ಆಫೀಸ್ ಮುಗಿದ ನಂತರ ಅಲ್ಲಿ ಹೋಗಿ ಹೇಳಿಸಿಕೊಂಡು ಹೋಗುವುದು ಎಂದು ನಿರ್ಧಾರವಾಯಿತು. ಒಂದಷ್ಟು ಹಾಡುಗಳನ್ನು ಕಲಿತೂ ಆಯಿತು. ಅಷ್ಟರಲ್ಲಿ ನನ್ನ ಸಂಗೀತ ಕಲಿಯುವ ಚಿಕ್ಕಂದಿನ ಆಸೆಗೆ ಕೊಂಬು ಬಂದಿತ್ತು. ಸಂಗೀತ ಟೀಚರ್ ಅಂಬಿಕಾ ಅವರು ಈಗಲೂ ಕಲಿಯಬಹುದು ಎಂದು ಪ್ರೋತ್ಸಾಹ ಕೊಟ್ಟಿದ್ದರಿಂದ ಶಾಸ್ತ್ರೀಯ ಸಂಗೀತ ಕ್ಲಾಸಿಗೆ ನಾನು ಮತ್ತು ಗೆಳತಿ ವೈದೇಹಿ ಸೇರಿಕೊಂಡೆವು. ಅದೆಷ್ಟುಓ ದಿನ ಆದ್ಮೇಲೆ ಗೆಳತಿಯರು ಬಿಟ್ಟು ದೇವರನಾಮದ ಕ್ಲಾಸ್ ಕಥೆ ಮುಗಿಯಿತು. ಆದರೆ ನಾನು ಮತ್ತು ವೈದೇಹಿ ಶಾಸ್ತ್ರೀಯ ಸಂಗೀತದ ಕ್ಲಾಸ್ಗೆ ನಿಯಮಿತವಾಗಿ ಹೋಗುತ್ತಿದ್ದೆವು. ಈ ನಡುವೆ ಮೈಸೂರು ಸಿಲ್ಕ್ ಫ್ಯಾಕ್ಟರಿಯವರು ಹಾಗೂ ಚಾಮುಂಡಿ ಸಿಲ್ಕ್ ಫ್ಯಾಕ್ಟರಿ ಅವರು ನಮ್ಮ ಶಾಖೆಯ ಆವರಣದಲ್ಲಿ ಸ್ಟಾಲ್ ಹಾಕಿದ್ದು ಮತ್ತು ಕಂತಿನಲ್ಲಿ ಸೀರೆ ಕೊಳ್ಳಲು ಅನುವು ಮಾಡಿ ಕೊಟ್ಟಿದ್ದು ಒಂದು ವಿಶೇಷ ಸಂಗತಿ. ನಮ್ಮದೇ ಕಟ್ಟಡದಲ್ಲಿ ಕೆಳಗಡೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ವಲಯ ಕಛೇರಿ ಇತ್ತು ಹಾಗೂ ನಮ್ಮ ಮೇಲಿನ ಎರಡನೆಯ ಫ್ಲೋರ್ ನಲ್ಲಿ ರಾಜ್ಯ ವಿಮಾ ಘಟಕ ಹಾಗೂ ಹಿಂದುಳಿದ ವರ್ಗದವರ ಕಚೇರಿ ಇತ್ತು ಎಲ್ಲಾ ಸಿಬ್ಬಂದಿಗಳಿಗೂ ಇದರಿಂದ ಅನುಕೂಲವಾಯಿತು. ಆ ಸಂಸ್ಥೆಗಳವರ ಸೇಲ್ ಸಹ ಚೆನ್ನಾಗಿ ಆಯಿತು . ಹಾಗೆಲ್ಲ ಕರೆದು ಕರೆದು ಕಂತಿನಲ್ಲಿ ಕೊಟ್ಟು ನಮ್ಮ ಕಚೇರಿಗೆ ಬಂದು ಸ್ಟಾಲ್ ಹಾಕುತ್ತಿದ್ದ ಮೈಸೂರು ಸಿಲ್ಕ್ ನ ಉತ್ಪಾದನೆ ಈಗ ಬಾರಿ ಇಳಿಮುಖವಾಗಿದ್ದು ಕೊಳ್ಳುತ್ತೇನೆ ಎಂದರೂ ಸಹ ಸೀರೆಗಳು ಸಿಗುತ್ತಿಲ್ಲ .ಎಂತಹ ವಿಪರ್ಯಾಸ ನೋಡಿ. ಅದರ ಬೆಲೆಗಳು ಮುಗಿಲೆತ್ತರ ಆದರೂ ಕೊಳ್ಳಲು ಜನ ಮುಗಿ ಬೀಳುತ್ತಾರೆ. ಆದರೆ ಸಮರ್ಪಕವಾದ ವ್ಯವಸ್ಥೆಯೇ ಇಲ್ಲ.     ಅಷ್ಟರಲ್ಲಿ ಮತ್ತೊಂದು ಕುತೂಹಲಕಾರಿ ಕೆಲಸ ನನ್ನ ಪಾಲಿಗೆ. ಏನದು? ಮುಂದಿನ ವಾರ ತಿಳಿದುಕೊಳ್ಳೋಣ.       ಸುಜಾತಾ ರವೀಶ್

Read Post »

You cannot copy content of this page

Scroll to Top