ಕಾವ್ಯ ಸಂಗಾತಿ
ಜಯಶ್ರೀ.ಭ.ಭಂಡಾರಿ ಅವರ ಗಜಲ್


ಹುಸಿ ಕೋಪ ಮರೆತು ಎಲ್ಲರೊಂದಿಗೆ ಬೆರೆಯುವುದೇ ಮಾತು.
ತುಸು ದೂರ ಇದ್ದವರ ಹತ್ತಿರ ಕರೆಯುವುದೇ ಮಾತು.
ಸುಮ್ಮನೇ ಜಗಳ ಮಾಡಿ ದ್ವೇಷ ಸಾಧಿಸುವುದು ಸರಿಯೇ.
ಬಿಮ್ಮನೆ ಮುಖ ಊದಿಸಿದರೆ ಅಗಲಿ ತೊರೆಯುವದೇ ಮಾತು.
ಸಿಹಿಯ ದ್ವನಿ ಕೇಳುಗನ ಮನ ತಣಿಸುವುದು ನೋಡು.
ಕಹಿಯ ಕಂಠ ನೋವ ನೀಡುತ ಕೊರೆಯುವುದೇ ಮಾತು.
ಒಂದಾಗಿ ಚಂದದಿ ಬಾಳುತ ಸಾಗುವುದೇ ರಸಮಯ ಜೀವನ.
ಬಂಧನದಿ ಭುವಿಗೆ ಹೊಂದಿಕೊಳ್ಳದಿರೆ ವಿಷ ಎರೆಯುವುದೇ ಮಾತು
ಹೃದಯ ಪರಸ್ಪರ ಮಿಡಿದರೆ ಒಲವಿನ ಜಯ ಸಿಗುವುದು
ಮಧುರ ಬಾಂಧವ್ಯ ಬೆಸೆದರೆ ಸಂಕಟ ಮರೆಯುವುದೇ ಮಾತು
ಜಯಶ್ರೀ.ಭ.ಭಂಡಾರಿ.



