ಧಾರಾವಾಹಿ ಸಂಗಾತಿ- ಒಂಭತ್ತು ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್ ಚೇತನ ಭಾಗ- ಒಂಬತ್ತುಜಯದೇವಿ ತಾಯಿಯ ಜೀವನ ವೃತ್ತಾಂತ ಜಯದೇವಿ ತಾಯಿಯವರ ಒಂದು ಅಪೂರ್ಣ ಕನಸು ……ನನಸಾಗಿತ್ತು…!!ಕಷ್ಟ ಕಾರ್ಪಣ್ಯಗಳನ್ನು ಮೌನವಾಗಿ ಸಹಿಸುತಮನದಾಳದ ಕಿಚ್ಚಿನಲಿ ಮಂಥನಗೊಂಡು ಉಲ್ಬಣಗೋಳ್ಳುತ್ತಿದ್ದ ಭಾವನೆಗಳನ್ನು ಮೊದಲ ಬಾರಿಗೆ ಕನ್ನಡ ಭಾಷೆಲ್ಲಿ ಬರೆದಾಗ ಆದ ಆನಂದ ಹೇಳತಿರದಾಗಿತ್ತು…..,!!. ಕನ್ನಡ ನುಡಿಗಳು ಅವರಿಗೊಂದು ಹೊಸ ಲೋಕದ ಬಾಗಿಲು ತೆರೆದವು. ವರ್ಷಗಳ ಕಾಲ ಮನದೊಳಗೆ ಸಂಗ್ರಹವಾಗಿದ್ದ ನಿಶ್ಶಬ್ದ ನೋವುಗಳು, ಪ್ರಾರ್ಥನೆಗಳು,ಮಾತನಾಡಲಾಗದ ಮಾತುಗಳು ಪದಗಳಾಗಿ ಹರಿಯಲಾರಂಭೀಸಿದವು….!! ಅವರು ಕನ್ನಡವನ್ನು ಅಪ್ಪಿಕೊಂಡದ್ದು ಕೇವಲ ಕಲಿಕೆಯ ಕಥೆಯಲ್ಲ,ಇದು ಸಾಹಿತ್ಯ ಲೋಕದ ವಿಜಯಗಾಥೆ! ಹೊಸ ಬೆಳಗಿನ ಉದಯ ಗಾಥೆ..!! ಕನ್ನಡ ಭಾಷೆಯನು ಗಾಢವಾಗಿ ಪ್ರೀತಿಸುತ್ತ….ಮುಂದೆ ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಮಹಿಳಾ ಅಧ್ಯಕ್ಷರಾಗಿ ನಡೆದರು ಕರ್ನಾಟಕ ವಿಶ್ವವಿದ್ಯಾಲಯವೇ ಅವರ ಬಳಿ ಬಂದು ಡಾಕ್ಟರೇಟ್ ಪದವಿಯನ್ನು ಕೊಡಮಾಡಿತು. ಸರ್ವಜ್ಞ ನಂತರ ಪ್ರಥಮ ಬಾರಿಗೆ ತ್ರಿಪದಿಯಲ್ಲಿ ಪುರಾಣವನ್ನು ನಿರ್ಮಿಸಿದರು… ಕನ್ನಡ ಸರಸ್ವತ ಲೋಕದ ಅನಘ್ನ ರತ್ನರಾಗಿ ಖ್ಯಾತಿ ಪಡೆದುಕೊಂಡವರು. ಕನ್ನಡ ಭಾಷೆಯನ್ನು ಕಲಿತ ಜಯದೇವಿ ತಾಯಿಯವರು ಅತ್ಯಂತ ವೇದಾವಿ ಭಾಷಣಕಾರ್ತಿಯಾಗಿ ಹೊರಹೊಮ್ಮಿದರು. ನಾಡಿನ ಮೂಲೆ ಮೂಲೆಗಳಿಂದ ಸುತ್ತಮುತ್ತಲು ಹಳ್ಳಿಗಳಿಂದ ಅವರಿಗೆ ಅವ್ಹಾನ ಬರಲು ಆರಂಭಿಸಿತು . ತಮ್ಮ ಮಾತುಗಳಿಂದ ಜನರ ಮನವನ್ನು ಪರಿವರ್ತಿಸಲಾರಂಭಿಸಿದರು. ಜೊತೆ ಜೊತೆಗೆಪತಿ ಮತ್ತು ಅತ್ತೆ ಸಂತಸದಿಂದ ಸಹಕರಿಸಲಾರಂಭಿಸಿದರು. ಸರಸ್ವತಿ ಮಂದಿರ ಸ್ಥಾಪನೆಯೊಂದಿಗೆ ಸ್ತ್ರೀಯರಿಗೆ ಶಿಕ್ಷಣ ಕೊಡಲು ಸೊಲ್ಲಾಪುರದಲ್ಲಿ ಪ್ರಾರಂಭಿಸಿದ್ದು.. ಅದು ಮಂದಗತಿಯಲ್ಲಿ ನಡೆದಿತ್ತು….ಆದರೆ ಜಯದೇವಿ ತಾಯಿಯವರು ಅಧ್ಯಕ್ಷತೆಯನ್ನು ವಹಿಸಿದ ಮೇಲೆ ಮೊದಲು ಸ್ತ್ರೀ ಶಿಕ್ಷಣದ ಅವಶ್ಯಕತೆಯನ್ನು ಹೆಚ್ಚು ಒತ್ತು ಕೊಡಲಾರಂಭಿಸಿದರು. ಅವರ ದೃಷ್ಟಿಯಲ್ಲಿ ಶಿಕ್ಷಣವೆಂದರೆ *ಒಂದೆರಡು ಭಾಷೆಗಳನ್ನು ಮಾತನಾಡಲು ಕಲಿಯುವುದು ಮಾತ್ರವಲ್ಲ ನಿತ್ಯ ಜೀವನದಲ್ಲಿ ಉಪಯೋಗವಾಗುವಂತಹ ಗೃಹ ಜ್ಞಾನ..ಸಾಯನ್ಯಕಲಿಕಯೊಂದಿಗೆ …,ಉಚ್ಚ ಶಿಕ್ಷಣವು ಮಹಿಳೆಗೆ ಸಿಗಬೇಕು. ಇಂಗ್ಲೀಷರು ತಮ್ಮ ಅನುಕುಲಕ್ಕೆ ಹಾಕಿದ ಗಿಳಿ ಪಾಠದ ಪದ್ಧತಿಯ ಶಾಲೆ ಬದಲಾಗಬೇಕು. ಸುಸಂಸ್ಕೃತ ಜೀವನ ನಡೆಸುವಂತಹ ಶಿಕ್ಷಣ ಸಿಗಬೇಕು. ಜೀವನದ ಎಲ್ಲಾ ಹಂತಗಳ ಅಧ಼ಃಪತನಕ್ಕೆ ಕಾರಣವಾದ ಅಜ್ಞಾನವನ್ನು ಹೊಡೆದು ಓಡಿಸಲು …..ಸಾಕ್ಷರತೆಯ ಅಸ್ತ್ರದಿಂದಲೇ ಸಾಧ್ಯ. ಹಸಿರು ಕ್ರಾಂತಿ ಹೊಟ್ಟೆಯ ಹಸಿವನ್ನು ಹಿಂಗಿಸಿದರೆ ಅಕ್ಷರದ ಕ್ರಾಂತಿಯು ಬುದ್ಧಿ ಹಸಿವನ್ನು ಅಡಗಿಸುವದೆಂದು*ಅಭಿಪ್ರಾಯ ಪಡುತ್ತಿದ್ದರು. 1930ರ ಸಮಯದಲ್ಲಿ ಸೊಲ್ಲಾಪುರದ ಕೋರ್ಟ್ ಮಾರ್ಷಲ್ ನಡೆದಿತ್ತು… ಹಲವಾರು ಜನರು ಬ್ರಿಟಿಷರ ಗುಂಡಿಗೆ ಬಲಿಯಾಗಿದ್ದರು. ಇದರಲ್ಲಿ ಮಹಿಳೆಯರು ಸೇರಿದ್ದರು. ಎಲ್ಲಿ ನೋಡಿದರಲ್ಲಿ ಅಸಹಕಾರ ಚಳುವಳಿಗೆ ಸಂಬಂಧಿಸಿದ ಗಲಭೆ ನಡೆದಿದ್ದವು . ಇಬ್ಬರು ಪೊಲೀಸರು ಹತರಾಗಿದ್ದರೆಂದರೆ ಕೇಳಬೇಕೆ.,… ಬ್ರಿಟಿಷರ ಕ್ರೌರ್ಯವೂ ಹೇಳತೀರದಾಗಿತ್ತು . ಧನಶೆಟ್ಟಿ ಹಾಗೂ ಇನ್ನು ಮೂರು ಜನರ ಮೇಲೆ ಮೊಕದಮೆ ಹುಡಿ ಗಲ್ಲಿಗೆರಿಸಲಾಗಿತ್ತು.ಈ ಶಿಕ್ಷೆಯನ್ನು ವಿರೋಧಿಸಿ ಪುಣೆ ಮುಂಬೈ, ಕನ್ನಡ ನಾಡಿನಲ್ಲಿಯೂ ಪ್ರತಿಭಟನೆಗಳು, ಉಪವಾಸ ಸತ್ಯಾಗ್ರಹಗಳು ನಡೆದಿದ್ದವು. ಈ ಹೋರಾಟಗಳಲ್ಲಿ ಜಯದೇವಿ ತಾಯಿಯವರ ತಾಯಿ ಸಂಗವ್ವನ ಜೊತೆ ತಾಯಿಯವರು ಬೆಂಬಲಿಸಿ ಉಗ್ರವಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 1932 ರಲ್ಲಿ ಬ್ರಿಟಿಷ್ ಸೈನಿಕರು ರಾಷ್ಟ್ರಧ್ವಜವನ್ನು ಅಪಮಾನಿಸಿದ್ದರಿಂದ ದ್ವಜ ಸತ್ಯಾಗ್ರಹ ನಡೆದು ಅಲ್ಲಿ ದೇಶದ ವಿವಿಧ ಪ್ರಾಂತಗಳ ಜನರು ಸೇರಿದ್ದರು ಅಲ್ಲಿ ನಡೆದ ಗಲಿಬಿಯಲ್ಲಿ ನೂರಾರು ಜನ ಕನ್ನಡಿಗರು ಬಂದಿತ್ತರಾಗಿದ್ದರು. ಈ ಸಂಘಟನೆಯು ಆರಂಭದಲ್ಲಿ ಹೆಚ್ಚಾಗಿ ಪುರುಷರೇ ಪಾಲ್ಗೊಳ್ಳುತ್ತಿದ್ದು ರಾಷ್ಟ್ರದ ಹಿತಕ್ಕಾಗಿ ಹೋರಾಡುವ ಮಹಿಳೆಯರಿಗೆ ಒಂದು ನಿರ್ದಿಷ್ಟವಾದ ಸಂಘಟನೆ ಇರ್ಲಿಲ್ಲ ನಂತರ ಮಹಿಳೆಯರನ್ನು ಸಂಘಟನೆಯಲ್ಲಿ ಸೇರಿಸಿಕೊಳ್ಳಲು ಜಯದೇವಿತಾಯಿ ಹಾಗೂ ಇನ್ನಿತರರು ರಾಷ್ಟ್ರೀಯ ಚಳುವಳಿ ತರಬೇತಿ ನೀಡುವ ಗುರಿಯನ್ನು ವಿಸ್ತರಿಸಿದರು . 1934ರಲ್ಲಿ ವೀರಶೈವ ಸಾಹಿತ್ಯ ಸಭೆಯ ಅಧ್ಯಕ್ಷಣೆಯಾಗಿ ಹೋದರು. 1939 ರಲ್ಲಿ ಜಯದೇವಿ ತಾಯಿಯವರು ವೀರಶೈವ ಮಹಾಸಭೆಯ ಮಹಿಳಾ ಪರಿಷತ್ತಿನ ಅಧ್ಯಕ್ಷರಾದರು 1938 ರಲ್ಲಿ ಜಯದೇವಿ ತಾಯಿಯವರು ಸೊಲ್ಲಾಪುರ .ಹುಬ್ಬಳ್ಳಿ ಧಾರವಾಡಗಳಲ್ಲಿ ಅಕ್ಕನ ಬಳಗವನ್ನು ಸ್ಥಾಪಿಸಿದರು ಆ ಮೂಲಕ ಶರಣರ ವಿಚಾರಧಾರೆಯನ್ನು ಜನಮನಕ್ಕೆ ಮುಟ್ಟಿಸುವ ಕೆಲಸ ಪ್ರಾರಂಭಿಸಿದರು. ಶರಣರ ಸಾಹಿತ್ಯಕ್ಕೆ ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಾ ಸಮಾಜದವರೊಂದಿಗೆ ಅದನ್ನು ತಿಳಿಹೇಳುತ್ತ ಅನುಭವ ಪಥದಲ್ಲಿ ಸಾಗಿದ್ದರು. ಈ ಹಿನ್ನೆಲೆಯಲ್ಲಿ ಮಹಿಳೆಯರ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲು ಅವರಿಗೆ ರಾಷ್ಟ್ರದ ಆಗು-ಹೋಗುಗಳ ಅರಿವು ಮೂಡಿಸಿ ರಾಷ್ಟ್ರೀಯತೆಯನ್ನು ಉತ್ತೇಜಿಸಲು ಅನೇಕ ಸಂಘ ಸಂಸ್ಥೆಗಳು ಹುಟ್ಟಿಕೊಂಡವು. ಜಯದೇವಿಯವರು ಮಹಿಳೆಯರ ಹೋರಾಟಕ್ಕೆ ಬೆಂಬಲಿಸಲು 1947ರಲ್ಲಿ ತಮ್ಮ ಮನೆಯಾದ ಜಯನಿಕೀತನದಲ್ಲಿ ಸೇವಾ ದಳದ ಪ್ರೌಢ ಶಾಖೆಯನ್ನು ಆರಂಭಿಸಿದರು. ಎರಡನೆ ಮಹಾ ಯುಧ್ಧದ ಸಂದರ್ಭದಲ್ಲಿ ಬ್ರಿಟಿಷರಿಗೆ ಸೈನಿಕರ ಅವಶ್ಯಕತೆ ಎದುರಾದಾಗ ದೇಶದಾದ್ಯಂತ ಬೆಟಾಲಿಯನ್ ಕಟ್ಟಲು ಜನರನ್ನು ಮತ್ತು ಪ್ರಮುಖರನ್ನು ಪ್ರೋತ್ಸಾಹಿಸುತ್ತಿದ್ದರು. ಇದರ ಪರಿಣಾಮವಾಗಿ ವಾರದ ಮಲ್ಲಪ್ಪನವರಿಗೆ ರಾವ್ ಬಹದ್ದೂರ್ ಪದವಿ ಕೊಟ್ಟರೆ….ಮಡಿಕೆ ಚನ್ನಬಸಪ್ಪನವರಿಗೆ ಮ್ಯಾಜಿಸ್ಟ್ರೇಟ್ ಪದವಿಯನ್ನು ಕೊಟ್ಟರು. ಸೊಲ್ಲಾಪುರದಲ್ಲಿ ಲಿಂಗಾಯತರು ಹೆಚ್ಚು ಇರುವುದರಿಂದ ಲಿಂಗಾಯತ ಬೆಟಾಲಿಯನ್ ಕಟ್ಟಲು ಪ್ರೇರೇಪಿಸಿದರು ಬ್ರಿಟಿಷರು .ಅಲ್ಲಿಯ ಸ್ಥಳೀಯ ಮುಖಂಡರಾದ ವಾರದ, ಮಡಕಿ ಲಿಗಾಡೆ,ತಂಬಾಕಿ ಮನೆತನಗಳ ಮೇಲೆ ಒತ್ತಾಯ ಬೀರಲು ಪ್ರಯತ್ನಿಸಿದರು. ಅದೇ ರೀತಿಯಾಗಿ ಲಿಗಾಡೆ ಅವರ ಆಸ್ತಿಯ ಮೇಲೆ ಋಣ ಭಾರ ಹೇರಿದ್ದೇವೆಂದು ಇದಕ್ಕಾಗಿ ಜಯದೇವಿ ತಾಯಿಯವರು ತಮ್ಮ ಕೆಲಸಕ್ಕೆ ಸಹಕರಿಸಬೇಕೆಂದು ಕೇಳಿಕೊಂಡರು.ಅಂದಿನ ದಿನಗಳಲ್ಲಿ ಪ್ರಭಾವಿ ಭಾಷಣ ಕಾರ್ತಿ ,ಪ್ರಸಿದ್ಧಸಮಾಜ ಸೇವೆವಕಿಯಾದ ತಾಯಿಯವರು ಲಿಂಗಾಯತರನ್ನು ಇಂಗ್ಲಿಷ್ ಸೇನಾ ಪಡೆಗೆ ಸೇರಿಸಲು ಹುರಿದುಂಬಿಸುವಂತೆ ಭಾಷಣ ಮಾಡಲು ಕೇಳಿಕೊಂಡರು…… ಬ್ರಿಟಿಷ್ ಸರ್ಕಾರವು ಪತಿ ಚೆನ್ನಮಲ್ಲಪ್ಪ ಲಿಗಾಡೆ ಅವರಿಗೆ ವ್ಯಾಪಾರದ ಋಣಭಾರ ಕಡಿಮೆ ಮಾಡುವುದಾಗಿ ಆಮಿಷೆ ಒಡ್ಡಿತು…. ಪತ್ನಿ ಜಯದೇವಿ ತಾಯಿಯವರು ಲಿಂಗಾಯೆತರನ್ನು ಬ್ರಿಟಿಷ್ ಸೈನ್ಯಕ್ಕೆ ಸೇರುವಂತೆ ಪ್ರಯತ್ನಿಸುವಂತೆ ಕೇಳಿಕೊಂಡರು….. ಕೊನೆಗೆ ಲಿಂಗಾಯೆತರನ್ನು ಸಂಘಟಿಸಲೇಬೇಕೆನ್ನುವ ಆದೇಶವಿತ್ತರು ..!!!! ಚನ್ನಮಲ್ಲಪ್ಪನವರಿಗೆ ಚೆನ್ನಾಗಿ ಗೊತ್ತಿತ್ತು ….. ಬಲಾಡ್ಯ ಬ್ರಿಟಿಷರ ವಿರುದ್ಧ ಹಾಕಿಕೊಳ್ಳುವುದರಲ್ಲಿ ಅರ್ಥವಿಲ್ಲ … ದೇಶಪ್ರೇಮವೆನೋ ನಿಜ…..ದೇಶ ಸ್ವಾಭಿಮಾನ ,ದೇಶಮಾತೆಗಾಗಿ ಬಲಿದಾನ-ತ್ಯಾಗ ಇವೆಲ್ಲ ದುಷ್ಟ ಬ್ರಿಟಿಷರ ಎದುರು ನಿರರ್ಥಕ … ಬ್ರಿಟಿಷರ ಬಲದ ಎದುರು ನಾವು ತೃಣ ಸಮಾನರು ವಿವೇಕತನವೆಂದರೆ ನಮ್ಮ ವ್ಯಾಪಾರವನ್ನು ನಮ್ಮ ಮನೆತನವನ್ನು ಉಳಿಸಿಕೊಳ್ಳುವುದರಲ್ಲಿ ಜಾಣತನವಿರುವದು ಇಲ್ಲದ್ದಿದರೆ ಹೇಳು ಹೆಸರಿಲ್ಲದಂತೆ ನಾಶವಾಗಿ ಹೋಗುವುದು ಖಚಿತ ಅನ್ನೋದು ದೃಢವಾಗಿ ನಂಬಿದವರು….ಹೀಗಾಗಿ ವೈಯಕ್ತಿಕ ಹಿತಾಸಕ್ತಿಯುತರಾಗಿದ್ದರು, ತನ್ನ ವ್ಯಾಪಾರದತ್ತ ಹೆಚ್ಚು ಗಮನವನ್ನು ಕೊಡುತ್ತಿದ್ದರು. ಹಾಗೆ ಜಯದೇವಿತಾಯಿಯವರಿಗೆ ಸೈನ್ಯ ಕಟ್ಟುವುದಕ್ಕಾಗಿ ಕೇಳಿಕೊಂಡಿದ್ದರು ಕೂಡಾ ಪತಿ ಚೆನ್ನಲ್ಲಪ್ಪನವರು. ಬ್ರಿಟಿಷರು ಜಯದೇವಿ ತಾಯಿಯವರಿಗೆ ಕೇಸರಿ-ಇ- ಹಿಂದ್ ಪದವಿಯನ್ನು ಕೊಡುವುದಾಗಿ ಮುಂದೆ ಬಂದರು. ಇದ್ಯಾವದಕ್ಕೂ ಅವರು ವಿಚಲಿತರಾಗಲಿಲ್ಲ. ಅದಕ್ಕಾಗಿ ದೊಡ್ಡ ಮೊತ್ತದ *ವಾರ್ ಫಂಡ*ನ್ನು ಕಟ್ಟಬೇಕಾಯಿತು. ಮನೆಯವರ ಯಾವ ಒತ್ತಡಕ್ಕೂ ಮಣಿಯದ ತಾಯಿಯವರು ರಾಷ್ಟ್ರೀಯ ಪ್ರೇಮ ಅಚಲವಾಗಿತು.. ಬ್ರಿಟಿಷರ ಆಮಿಷದ ಪ್ರಸ್ತಾವನೆ, ಹೊರಗೆ ನೋಡಲು ಗೌರವದ ಹೊದಿಕೆ ಹೊದ್ದಿದ್ದರೂ, ಒಳಗೆ ದೇಶದ ಏಕತೆಯನ್ನು ಕುಗ್ಗಿಸುವ ಕುಯುಕ್ತಿಯೇ ಆಗಿತ್ತು…!!ಆ ಕ್ಷಣದಲ್ಲಿ ಜಯದೇವಿ ತಾಯಿಯವರು ಮೌನವಾಗಿರಲಿಲ್ಲ.ಅವರಲ್ಲಿ ಹೊತ್ತಿ ಉರಿದದ್ದು ರಾಷ್ಟ್ರಪ್ರೇಮದ ಜ್ವಾಲೆ.“ಕೇಸರಿ-ಇ -ಹಿಂದ್” ಎಂಬ ಹೆಸರಿನಲ್ಲಿ ಅವರ ಗುಲಾಮರನ್ನಾಗಿ ಮಾಡಿಕೊಳ್ಳುವ ಹುನ್ನಾರ ಕುತಂತ್ರ ಅರಿತವರಾಗಿದ್ದರು. ದೇಶದ ಧ್ವಜಕ್ಕೆ ತೋರುವ ಆದರವು ತ್ಯಾಗದ ಸಂಕೇತ, ಧೈರ್ಯದ ಪ್ರತೀಕ, ತಾಯ್ನಾಡಿನ ಗೌರವ.ಬ್ರಿಟಿಷರು ಅಧಿಕಾರದ ಸಿಂಹಾಸನವನ್ನು ತೋರಿಸಿದರು,ಸ್ಥಾನಮಾನಗಳ ಸಿಹಿ ಮಾತುಗಳನ್ನು ಹೇಳಿದರೂ ತಾಯಿಯ ಹೃದಯಕ್ಕೆ ಕೇಳಿಸಿಕೊಂಡದ್ದು ಒಂದೇ ಶಬ್ದ —“ಭಾರತಮಾತೆಯ ಹಿತಾಸಕ್ತಿ….“ನನ್ನ ದೇಶದ ಏಕತೆಯನ್ನು ಮಸುಕುಗೊಳಿಸುವ ಯಾವ ಒಪ್ಪಂದಕ್ಕೂ ನಾನು ಸಮ್ಮತಿಸುವುದಿಲ್ಲ,”ಎಂದು ಅವರು ಅಟಲ ಧೈರ್ಯದಿಂದ ಹೇಳಿದರು. ಆ ನಿರಾಕರಣೆ ಸಾಮಾನ್ಯ ಪದವಿರೋಧವಲ್ಲ —ಅದು ಮಣ್ಣಿನ ಮಗಳು ತನ್ನ ತಾಯ್ನಾಡಿಗೆ ಕೊಟ್ಟ ಶಪಥ.ಆ ದಿನ ಅವರು ಆಮಿಷವನ್ನು ತಳ್ಳಿಹಾಕಿದಾಗ,ದೇಶಪ್ರೇಮಿಗಳು ಸಾಕ್ಷಿಯಾಗಿ ನಿಂದರು. ಅವರ ಎತ್ತಿದ ಧ್ವನಿಯಲ್ಲಿ ರಾಷ್ಟ್ರಪ್ರೇಮವು ಘೋಷವಾಗಿ ಪ್ರತಿಧ್ವನಿಸಿತು.ಅವರು ತೋರಿಸಿದ ಧೈರ್ಯ —ನಿಜವಾದ ದೇಶಭಕ್ತಿ ….ಹೃದಯದ ಆಳದಿಂದ ಹೊರಹೊಮ್ಮುವ ನಿಷ್ಠೆ; ಧೇಶಮಾತೆಗೆ ತೋರಿದ ಗೌರವ. . *ಬ್ರಿಟಿಷರ ಇಂಥ ಆಸೆ ಆಮಿಷಕ್ಕೆ ಒಳಗಾಗದೆ ಜಾತಿಯ ಹೆಸರಿನಲ್ಲಿ ಸೇನೆ ಕಟ್ಟುವುದು ದೇಶದ ಅಹಿತಕ್ಕೆ ಕಾರಣವಾಗುವುದೆಂದು…ಯಾವುದೇ ಭೀತಿಗೂ ತಲೆಬಾಗಲಿಲ್ಲ. ಬ್ರಿಟಿಷರ ಪ್ರತ್ತಸ್ಸಾವನೆಯನ್ನು ಖಡಾಖಂಡಿತವಾಗಿ ನಿರಾಕರಿಸಿದರು . *ನಡೆಯಣ್ಣ ಇಡು ಹೆಜ್ಜೆ ಮುಂದೆ ದೃಢತನದಿಂದೆ!! ಕದಳಿಯ ಬನಹೊಕ್ಕು ಚಣ ಮಜಗಜದ ತಾಣಎದುರಿಗೆ ಬರುವದು ಕಾಡಕೋಣ ತೆಗೆಯಲು ಪ್ರಾಣ ಕದಡಿಯ ಎಂಟು ದಿಕ್ಕು ಎಂಟಾನೇಗಳ ಸೊಕ್ಕು ಕಾನನದೊಳಗೆ ಪಕ್ಕು ಮುರಿಯಬೇಕಾದರೆ ಸೊಕ್ಕುಹೀಗೆ ಬ್ರಿಟಿಷರ ಸೊಕ್ಕನ್ನು ಮುರಿಯಬೇಕು ಅನ್ನುವ ಕರೆಯನ್ನು ಸಾರ್ವಜನಿಕರಿಗೆ ಕೊಡುತ್ತಿದ್ದರು *ನಡೆದಾರಿಗೆ ಅಡ್ಡ ಬಂದಿತಣ್ಣ ಹೆಡೆ ತೆಗೆದಾಚಣ ಬಿಡುವದು ತನ್ನು ಕೆಂಪುಗಣ್ಣ ಅದುವೆ ನಾಗಣ್ಣ ನಂಜೀನ ಅಂಜಿಕೆ ಹೊಲ್ಲ ಕೆಂಜೆಡೆಯವನ ಚಲ್ವ ಸಂಜೀವನಿ ಮದ್ದು ಬಲ್ಲ ಹಿಂಜರಿಯುವುದೇಕೆ ಇನ್ನು ಹಸಿದು ಹುಲಿ ಬರುವ ದಲ್ಲಿ ತಾಯಿ, ಪಸರಿಸಿ ಬಾಯಿ ವಸುಧೆ ನಡುಗುವ ಗುಡುಗಿನ ಛಾಯೆ ಅದುವೆ ಮಹಾಮಾಯಿ ಜಯ ಸಿದ್ದರಾಮನ ಸಿದ್ದಿ ಮಂತ್ರದ ಧ್ಯಾನ ಶುದ್ಧ ಮನದಿಂದಲೇ ಸಾಧನ ಇದ್ದುಗೆದೆ ಕದಳಿಯ ಬನ* ಹಸಿದು ಬರುವ ಬ್ರಿಟಿಷರನ್ನು ಬಗ್ಗು ಬಡಿಯಲೆಂದೆ ಅಂಜದೇ ಅಳುಕದೇ ಕೆಂಜಡಿಯವನ ಸಂಜೀವಿನಿ ಮದಿನ ಮೇಲೆ ನಂಬಿಕೆ ಇಟ್ಟು ಮುಂದೆ ನಡೆ ಅಂತ ಜನರಿಗೆ ಕರೆ ಕೊಡುತ್ತಿದ್ದರು. ಭಾರತೀಯ ಸ್ವಾತಂತ್ರ ಹೋರಾಟ ಹಾಗೂ ಇನ್ನಿತರ ಚಳುವಳಿಗಳಲ್ಲಿ ಪುರುಷರೇ ಮುಖ್ಯ ಎದುರಿಸುತ್ತ ಬಂದಿದ್ದರು .ಅವರಿಗೆ ಭೌತಿಕವಾಗಿ ಮಹಿಳೆಯರ ಬೆಂಬಲವೂ ಇದ್ದಿತು. ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಮಹಿಳೆಯರು ಅದಾಗಲೇ ಸಾಮಾಜಿಕ ಸುಧಾರಣೆ ಸ್ವಾತಂತ್ರ ಹೋರಾಟ ಶೈಕ್ಷಣಿಕ ಬೆಳವಣಿಗೆ ಹಾಗೂ ಮಹಿಳಾ ದಿನಾಚರಣೆ ಅಂತ ಕ್ಷೇತ್ರಗಳಲ್ಲಿ ಮುಖ್ಯ ವಾಹಿನಿಯಲ್ಲಿ ಬಂದಿದ್ದರು. ಇದರೊಂದಿಗೆ ಗ್ರಾಮೀಣ ಭಾಗದ ಮಹಿಳೆಯರು ಸಹ ತಮ್ಮ ಮನೆಯ ಪುರುಷರಿಗೆ ರಾಷ್ಟ್ರೀಯ ಹೋರಾಟದಲ್ಲಿ ಪಾಲ್ಗೊಳ್ಳಲು ನೈತಿಕ ಹಾಗೂ ಭೌತಿಕ ಬೆಂಬಲವನ್ನು ನೀಡುತ್ತಿದ್ದರು. ತಮ್ಮ ಮನೆಯವರ ಬೆಂಬಲದಿಂದ ರಾಷ್ಟ್ರೀಯ ಹೋರಾಟದಲ್ಲಿ ನೇರವಾಗಿ ಪಾಲ್ಗೊಂಡಿದ್ದರು .ಸ್ವಾತಂತ್ರ ಹೋರಾಟದಲ್ಲಿ ಎಲ್ಲ ವರ್ಗದ ಜನರು ಪಾಲ್ಗೊಳ್ಳಬೇಕೆಂಬುದೇ ಬಹು ಮುಖ್ಯ ಉದ್ದೇಶ ವಾಗಿತ್ತು..ಪುರುಷರು ಸೆರೆವಾಸವನ್ನು ಅನುಭವಿಸಿದಾಗ ಹೋರಾಟವನ್ನು ಮುಂದುವರಿಸಿಕೊಂಡು ಹೋಗುವ ಹೊಣೆ ಮಹಿಳೆಯರ ಮೇಲಿತ್ತು .ಸತ್ಯಾಗ್ರಹ ರಚನಾತ್ಮಕ ಕಾರ್ಯಕ್ರಮಗಳು…ಚಳುವಳಿಯ ರೂಪರೇಷೆಗಳು ಮಹಿಳೆಯರ ಮನೋಬಲಕ್ಕೆ ಸೂಕ್ತವಾಗಿದ್ದು ಎಂದು ಅವರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಳ್ಳಲು ಸಭೆಗಳನ್ನು ಕರೆಯಲು ಹೇಳುತ್ತಿದ್ದರು .ಅಂತಹ ಸಮಿತಿಗಳಲಿ ಜಯದೇವಿ ತಾಯಿಯವರು ಮುಂಚೂಣಿಯಲ್ಲಿ ಇರುತ್ತಿದ್ದರು ಈ ಚಳುವಳಿಯ ಸಂದರ್ಭದಲ್ಲಿ ಮಹಿಳೆಯರು ಗೋಖಲೆ ,ಮಾರ್ಗರೇಟ್ ಕಸಿನ್ಸ ಹಾಗೂ ಅನಿಬೆಸೆಂಟರ ಪ್ರಭಾವಕ್ಕೆ ಒಳಗಾಗಿದ್ದನ್ನು ನಾವು ಗಮನಿಸಬಹುದಾಗಿದೆ.ಬಹು ವರ್ಷಗಳಿಂದ ಮಹಿಳೆಯರು ತಮ್ಮ ಆರಂಭದ ಹೋರಾಟವನ್ನು ರಚನಾತ್ಮಕ ಕಾರ್ಯಗಳಿಗೆ ಸೀಮಿತಗೊಳಿಸಿಕೊಂಡಿದ್ದರು ನಂತರ ತಮ್ಮ ಕಾರ್ಯ ವ್ಯಾಪ್ತಿಯನ್ನು ಉಪ್ಪಿನ ಸತ್ಯಾಗ್ರಹ ಸ್ವದೇಶಿ ಚಳುವಳಿ ಮಧ್ಯಪಾನ ನಿಷೇಧ ದಂತ ಚಟುವಟಿಕೆ ವಿಸ್ತರಿಸಿದರು. ಕಾನೂನು ಭಂಗ ಚಳುವಳಿಯಲ್ಲಿ ಮಹಿಳೆಯರು ಪಾಲ್ಗೊಳ್ಳದ ಕುರಿತು ರಾಷ್ಟ್ರೀಯ ನಾಯಕ ಯೋಚಿಸುವಂತಾಯಿತು. ಕರ್ನಾಟಕದಲ್ಲಿ ರಾಷ್ಟ್ರೀಯ ಚಳುವಳಿಯಲ್ಲಿ ಪಾಲ್ಗೊಂಡ ಪ್ರಮುಖ ಮಹಿಳೆಯರಲ್ಲಿ ಜಯದೇವಿತಾಯಿ ಲಿಗಾಡೆಯವರು ಒಬ್ಬರು ಇವರೊಂದಿಗೆ ಹಲವು ಮಹಿಳೆಯರು ಪಾಲ್ಗೊಂಡಿದ್ದರು…… ಮುಖ್ಯವಾಗಿ ಕಮಲಾದೇವಿ ಚಟ್ಟೋಪಾಧ್ಯಾಯ, ಉಮಾಬಾಯಿ ಕುಂದಾಪುರ, ಕೃಷ್ಣ ಬಾಯಿ ಪಣಜಿ ಕರ್, ಅವರಂಥ ಮಹಿಳೆಯರು ತಮ್ಮ ಚಟುವಟಿಕೆಗಳನ್ನು ಪ್ರೆಸಿಡೆನ್ಸಿಯಾಚೆ ವ್ಯಾಪಕಗೊಳಿಸಿದರು. ಇದರಿಂದಾಗಿ ಕರ್ನಾಟಕದ ಪ್ರತಿ ಭಾಗಗಳಿಂದಲೂ ಮಹಿಳೆಯರು ಚಳುವಳಿಯಲ್ಲಿ ಭಾಗವಹಿಸಹತ್ತಿದರು ಬಳ್ಳಾರಿ ಸಿದ್ದಮ್ಮ, ನಾಗಮ್ಮ ಪಾಟೀಲ, ಸುಬ್ಬಮ್ಮಾ ಜೋಯಿಸ್, ಟಿ. ಸುನಂದಮ್ಮ, ಯಶೋದಮ್ಮ ದಾಸಪ್ಪ, ನಾಗರತ್ನಮ್ಮ ಹಿರೇಮಠ, ಪದ್ಮಾವತಿ ಬಿದರಿ, ಜಯದೇವಿತಾಯಿ ಲಿಗಾಡಿ ಶಕುಂತಲಾ ಕುರ್ತುಕೋಟಿ, ಚೆನ್ನಮ್ಮ ಹಳ್ಳಿಕೇರಿ ಇನ್ನೂ ಅನೇಕ ಮಹಿಳೆಯರು ರಾಜಕೀಯ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿ
ಡಾ.ಗೀತಾ ದಾನಶೆಟ್ಟಿ ಬಾಗಲಕೋಟೆ ಅವರ ಕವಿತೆ “ಒಲವಿನ ಉಡುಗೊರೆ”
ಕಾವ್ಯ ಸಂಗಾತಿ ಡಾ.ಗೀತಾ ದಾನಶೆಟ್ಟಿ “ಒಲವಿನ ಉಡುಗೊರೆ” ಜೀವನವೆಂಬುದುದೇವರು ಕೊಟ್ಟ ಕೊಡುಗೆಕಳೆಯುವ ಪ್ರತಿಕ್ಷಣವೂ ಒಲವಿನ ಉಡುಗೊರೆ ಹುಟ್ಟಿ ಬಂದ ಈ ಜಗಕೆಕೊಟ್ಟು ಹೋಗುವುದು ಬೆಟ್ಟದಷ್ಟಿದೆಉಣಲು ಮುದ್ದೆ,ನೆಮ್ಮದಿಯ ನಿದ್ದೆಸದ್ಗುಣಗಳಿಂದ ಗೆದ್ದು ಬೀಗಬೇಕು ಮನವೆಂಬ ವನದಲ್ಲಿಪ್ರೀತಿ, ಪ್ರೇಮ,ಪ್ರೇರಣೆಪ್ರಾಮಾಣಿಕತೆ,ಪರಿಶ್ರಮ,ಉತ್ಸಾಹದಬೀಜಗಳ ಬಿತ್ತಿ ಬೆಳೆಯಬೇಕು ಬದುಕಿನ ಪಯಣದಲಿಏರಿಳಿತಗಳನು ಸ್ವೀಕರಿಸಿಸೋಲು,ಗೆಲುವಿನ ಸೋಪಾನದಿಸಾಧನೆ ಶಿಖರವೇರಬೇಕು ಸುಖ-ದುಃಖಗಳನು ಮರೆತುಮಾನವೀಯ ಮೌಲ್ಯಗಳನರಿತುದಿವ್ಯತೆಯ ದಾರಿಯಲಿಭವ್ಯತೆಯ ಬಾಳು ಬೆಳಗಬೇಕು ಪ್ರೀತಿಸುವರೆಷ್ಟೋ,ದ್ವೇಷಿಸುವರೆಷ್ಟೋಕೆಡಿಸಿಕೊಳ್ಳದೆ ಮನದ ಮತಿವಿಶಿಷ್ಟ ವಿಚಾರ,ಆಚಾರಗಳಿಂದಅರೆಕ್ಷಣ ಅರಿತುಕೊಳ್ಳಬೇಕುಡಾ.ಗೀತಾ ದಾನಶೆಟ್ಟಿ ಬಾಗಲಕೋಟೆ
ಡಾ.ಗೀತಾ ದಾನಶೆಟ್ಟಿ ಬಾಗಲಕೋಟೆ ಅವರ ಕವಿತೆ “ಒಲವಿನ ಉಡುಗೊರೆ” Read Post »
ನಿರಂಜನ ನಾಯಕ ಕವಿತೆ “ಹಗೆಯ ಸುಳಿ”
ಕಾವ್ಯ ಸಂಗಾತಿ ನಿರಂಜನ ನಾಯಕ “ಹಗೆಯ ಸುಳಿ” ಮಿತಿಯನು ನಾವು ಮೀರುವುದು ಯಾವಾಗ?ಮಾನವೀಯತೆಯು ಮಣ್ಣಾದಾಗ! ಹಗೆತನಕೆ ಮುಕ್ತಿ ದೊರೆಯುವುದು ಯಾವಾಗ?ನೆತ್ತರು ಹೊಳೆಯಾಗಿ ಹರಿದಾಗ! ಯಾವ ವಿಷವೃಕ್ಷದ ಕಟುಫಲವಿದು?ಒಡಲೊಳು ದ್ವೇಷದ ಬೀಜವೇ ತುಂಬಿಹುದು. ಗಡಿಯ ಗೋಡೆಯ ಒಡೆಯುವ ಹಂಬಲವ ಬಿಟ್ಟು,ಬಂಧನ ಬಿಗಿಯಾಗುತ ಸಾಗಿಹುದು! ಮುಳ್ಳಿನ ನಡುವೆ ನಗುವ ಗುಲಾಬಿಯ,ಕಪಟದ ಒಳಮರ್ಮ ಅರ್ಥವಾಗದಿರದು! ನಿರಂಜನ ನಾಯಕ
ನಿರಂಜನ ನಾಯಕ ಕವಿತೆ “ಹಗೆಯ ಸುಳಿ” Read Post »
ಧಾರಾವಾಹಿ ಸಂಗಾತಿ-113 ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ಸುಮತಿಯ ಎರಡನೇ ಮಗಳು ತನ್ನ ಬಟ್ಟೆ ಬರೆ ಪುಸ್ತಕಗಳು ಹಾಗೂ ತನಗೆ ಅತ್ಯವಶ್ಯಕವಾಗಿ ಬೇಕಾದ ವಸ್ತುಗಳನ್ನು ತೆಗೆದುಕೊಂಡು ಅನಾಥಾಶ್ರಮಕ್ಕೆ ಹೊರಡಲು ಅನುವಾದಳು. ಸುಮತಿ ಹಾಗೂ ಮೂರನೇ ಮಗಳು ಒಲ್ಲದ ಮನಸ್ಸಿನಿಂದ ಅವಳನ್ನು ಬೀಳ್ಕೊಟ್ಟರು. ಏಕೋ ಮಗಳನ್ನು ಬೀಳ್ಕೊಡುವಾಗ ಸುಮತಿಯ ಮನಸ್ಸು ಬಹಳ ಭಾರವಾಯಿತು. ಏನೋ ಅವ್ಯಕ್ತವಾದ ನೋವೊಂದು ಅವಳ ಹೃದಯವನ್ನು ಹಿಂಡಿತು….”ವಾರಕ್ಕೊಮ್ಮೆ ನಾನು ಬರುತ್ತೇನೆಲ್ಲವೇ ಅಮ್ಮಾ …. ವಾರದಲ್ಲಿ ಒಂದು ದಿನ ನಿಮ್ಮ ಜೊತೆ ಕಳೆಯುತ್ತೇನೆ….ದಯವಿಟ್ಟು ನೊಂದುಕೊಳ್ಳದೆ ನಸುನಗುತ್ತಾ ನನ್ನನ್ನು ಕಳುಹಿಸಿ ಕೊಡು”…. ಎಂದು ಮಗಳು ಹೇಳಿದಾಗ, ಅವಳನ್ನು ಅಪ್ಪಿ, ಹಣೆಗೊಂದು ಹೂಮುತ್ತನ್ನು ಕೊಟ್ಟಳು. ತಂಗಿಯು ಅವಳನ್ನು ಬಿಗಿಯಾಗಿ ಅಪ್ಪಿಕೊಂಡು ಸ್ವಲ್ಪ ಹೊತ್ತು ಹಾಗೇ ನಿಂತು ಬಿಟ್ಟಳು. ಗೇಟಿನ ಬಳಿ ಡ್ರೈವರ್ ಬಂದು….”ಬಾ ಮಗು ಹೊರಡೋಣ”…. ಅಮ್ಮ ಅಲ್ಲಿ ಕಾಯುತ್ತಿದ್ದಾರೆ… ಎಂದು ಹೇಳಲು, ಮಗಳು ಅವರ ಜೊತೆ ಹೊರಟಳು. ಮೆಟ್ಟಿಲುಗಳನ್ನು ಏರುತ್ತಾ ಅಮ್ಮನನ್ನು, ತಂಗಿಯನ್ನು ನೋಡಿ ಕೈಬೀಸಿದಳು. ಮಗಳು ಹೊರಟು ಹೋದ ನಂತರ ಸುಮತಿ ಮನೆ ಒಳಗೆ ಬಂದು ಕೆಲವು ನಿಮಿಷಗಳ ಕಾಲ ಸುಮ್ಮನೆ ಕುಳಿತುಬಿಟ್ಟಳು. ಮೂರನೇ ಮಗಳು ಸುಮತಿಯ ಪಕ್ಕ ಬಂದು ಕುಳಿತು ಹೆಗಲ ಮೇಲೆ ಕೈ ಇಟ್ಟು ತಾಯಿಗೆ ಸಮಾಧಾನ ಮಾಡುವಂತೆ ಹೆಗಲನ್ನು ತಟ್ಟಿದಳು. ದಿನಗಳು ಉರುಳಿದವು. ನಾಲ್ಕನೇ ಮಗಳು ಬೇಸಿಗೆ ರಜೆಯಲ್ಲಿ ಮನೆಗೆ ಬಂದಳು. ಅವಳು ಬಂದ ಮೇಲೆ ಮೂರನೇ ಮಗಳು ಲವಲವಿಕೆಯಿಂದ ಇರುವಂತೆ ಆಯ್ತು. ಸುಮತಿಯ ಜೊತೆ ಇಬ್ಬರೂ ಶಾಲೆಗೆ ಹೋಗುತ್ತಿದ್ದರು. ಶಾಲೆಯ ಕೆಲಸದಲ್ಲಿ ಮತ್ತು ಮನೆಯ ಕೆಲಸಗಳಲ್ಲಿ ಸುಮತಿಗೆ ಸಹಾಯ ಮಾಡುತ್ತಿದ್ದರು. ಇತ್ತೀಚೆಗೆ ಯಾಕೋ ಸುಮತಿ ಇನ್ನೂ ಹೆಚ್ಚು ಬಳಲಿದಂತೆ ತೋರುತ್ತಿದ್ದಳು. ಶನಿವಾರ ಸಂಜೆಯಾದರೆ ಬಸ್ಸು ಬರುವ ವೇಳೆಗೆ ಮಗಳನ್ನು ಕಾಯುತ್ತಾ ಗೇಟಿನ ಬಳಿ ಇರುವ ಕಲ್ಲಿನ ಮೆಟ್ಟಿಲಿನ ಮೇಲೆ ಕುಳಿತುಕೊಳ್ಳುವಳು…. “ಅಮ್ಮಾ….ಅಕ್ಕ ಇಲ್ಲಿಗೇ ಬರುತ್ತಾಳಲ್ಲವೇ?…. ಮತ್ತೇಕೆ ನೀನು ಅಲ್ಲಿ ಗೇಟಿನ ಬಳಿ ಕುಳಿತಿರುವೆ…. ಬಾ ಒಳಗೆ”…. ಎಂದರೂ ಕೇಳದೇ ಸಂಜೆಯ ಬಸ್ಸು ಬರುವುದನ್ನೇ ಕಾಯುತ್ತಾ ಕುಳಿತುಕೊಳ್ಳುವಳು. ಬಸ್ಸು ಬರುವುದು ಕೊಂಚ ತಡವಾದರೂ ಚಡಪಡಿಸುವಳು. ಎಷ್ಟು ಬೇಗ ಮಗಳನ್ನು ನೋಡುವೆನೋ ಎನ್ನುವ ಕಾತರದಲ್ಲಿ ಅವಳ ಕಣ್ಣುಗಳು ಕಾಯುತ್ತಿದ್ದವು. ಬಸ್ಸು ಬಂದು ನಿಂತ ಕೂಡಲೇ ಎದ್ದು ನಿಂತು ಜನರು ಇಳಿಯುದನ್ನೇ ನೋಡುತ್ತಾ, ಮಗಳು ಇಳಿದು ಬಂದ ಕೂಡಲೇ ಅವಳನ್ನು ಅಪ್ಪಿಕೊಂಡು ಅವಳೊಂದಿಗೆ ನಿಧಾನವಾಗಿ ಮೆಟ್ಟಿಲು ಇಳಿಯುವಳು. ಅಕ್ಕ ಬಂದಿದ್ದು ತಿಳಿದುಕೊಡಲೆ ತಂಗಿಯರು ಒಳಗಿನಿಂದ ಓಡೋಡಿ ಬಂದು ಖುಷಿಯಿಂದ ಅಕ್ಕನನ್ನು ಅಪ್ಪಿಕೊಳ್ಳುತ್ತಿದ್ದರು. ಅವಳು ಸಕಲೇಶಪುರದಿಂದ ಬರುವಾಗ ತಂಗಿಯರಿಗಾಗಿ ತಿಂಡಿ ಮತ್ತು ಅಮ್ಮನಿಗೆ ಹಣ್ಣುಗಳನ್ನು ತರುವಳು. ಅವಳು ಬಂದಳೆಂದರೆ ಮನೆಯಲ್ಲಿ ಹಬ್ಬದಂತೆ ಸಂಭ್ರಮ ಪಡುವರು. ರಾತ್ರಿ ಎಲ್ಲಾ ನಿದ್ರೆ ಮಾಡದೆ ನಾಲ್ವರೂ ಕುಳಿತು ಮಾತನಾಡುವರು. ಅವಳ ಕೆಲಸದ ಬಗ್ಗೆ, ಅವಳ ಓದಿನ ಬಗ್ಗೆ ಕೇಳಿ ತಿಳಿದುಕೊಳ್ಳುವರು. ಇವಳು ಕೂಡ ಎಲ್ಲರ ದಿನಚರಿಗಳನ್ನು ಕೇಳಿ ತಿಳಿದುಕೊಳ್ಳುವಳು. ಅಮ್ಮ ಇತ್ತೀಚೆಗೆ ಕ್ಷೀಣಿಸುತ್ತಿರುವುದನ್ನು ಗಮನಿಸಿ….. ಏಕಮ್ಮಾ… ಏನಾಯ್ತು?… ನಾನು ನಾಡಿದ್ದು ಹೊರಡುವಾಗ ನನ್ನ ಜೊತೆ ಬನ್ನಿ…. ನಾನು ಆಸ್ಪತ್ರೆಗೆ ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ…. ಎಂದರೆ, ನನಗೇನೂ ಆಗಿಲ್ಲಪ್ಪಾ…. ಸ್ವಲ್ಪ ಆಯಾಸ ಇದೆ ಅಷ್ಟೇ…, ಎಂದಿನಂತೆ ಪಥ್ಯದಲ್ಲಿದ್ದೇನೆ… ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದೇನೆ…. ನನಗೇನಾಗಿದೆ? ನೀವು ಮೂವರೂ ನನ್ನ ಜೊತೆ ಇದ್ದರೆ ಅದೇ ನನಗೆ ಸ್ವರ್ಗ…. ಅದಕ್ಕಿಂತ ಹೆಚ್ಚಿನದು ನನಗೇನು ಬೇಡ…. ಎನ್ನುವಳು ಸುಮತಿ. ಅವಳ ತಂಗಿ….ಹೌದು ಅಕ್ಕ… ಅಮ್ಮ ಈ ನಡುವೆ ಮೊದಲಿನಂತೆ ಲವಲವಿಕೆಯಿಂದ ಇಲ್ಲ….ಯಾಕೋ ತುಂಬಾ ಆಯಾಸವಾದಂತೆ ಕಾಣಿಸುತ್ತಾರೆ…. ಶಾಲೆಗೆ ಹೋಗುವಾಗಲೂ ಅಷ್ಟೇ, ಇಲ್ಲಿಂದ ಅಷ್ಟು ದೂರ ಹೋಗಬೇಕು…. ನಾವು ಅಲ್ಲೇ ಇದ್ದಿದ್ದರೆ ಚೆನ್ನಾಗಿತ್ತು…. ಅಮ್ಮ ಅಷ್ಟೊಂದು ದೂರ ನಡೆದುಕೊಂಡು ಹೋಗಿ ಬರುವುದು ಕಷ್ಟವಾಗುತ್ತಿದೆ… ಅಲ್ಲಿ ಗುಡ್ಡ ಹತ್ತಿ ಬರುವಾಗ ಉಸಿರಾಡಲು ತುಂಬಾ ಕಷ್ಟಪಡುತ್ತಾರೆ…. ಸ್ವಲ್ಪ ಹೊತ್ತು ಅಲ್ಲಿ ದೇವಸ್ಥಾನದ ಆ ಮಾವಿನ ಮರದ ನೆರಳಲ್ಲಿ ಕುಳಿತು ದಣಿವಾರಿಸಿಕೊಂಡು ನಂತರ ನಿಧಾನವಾಗಿ ಹೆಜ್ಜೆ ಹಾಕುತ್ತಾರೆ”…. ಎಂದು ತಂಗಿ ಹೇಳಿದ್ದನ್ನು ಕೇಳಿ ಅವಳ ಮುಖ ಬಾಡಿತು…. ಇನ್ನೂ ಸ್ವಲ್ಪ ದಿನ ಅಷ್ಟೇ… ನನ್ನ ಓದು ಮುಗಿಯಲಿ ಯಾವುದಾದರೂ ಒಳ್ಳೆಯ ಕೆಲಸಕ್ಕೆ ಸಿಗುತ್ತದೆ…. ಅಮ್ಮನನ್ನು ಕೆಲಸಕ್ಕೆ ಕಳುಹಿಸುವುದು ಬೇಡ….ನಿಮ್ಮೆಲ್ಲರನ್ನು ನಾನು ನೋಡಿಕೊಳ್ಳುತ್ತೇನೆ….. ಎಷ್ಟೊಂದು ವರ್ಷಗಳಿಂದ ಅಮ್ಮ ಕಷ್ಟ ಪಟ್ಟು ದುಡಿದು ನಮ್ಮನ್ನು ಸಾಕುತ್ತಿದ್ದಾರೆ. ಈಗ ನೀನು ಅಮ್ಮನ ಜೊತೆ ಇರುವುದು ನನಗೆ ದೊಡ್ಡ ಸಮಾಧಾನ…. ಅಮ್ಮನ ಸಹಾಯಕ್ಕೆ ಜೊತೆಗೆ ನೀನಿರುತ್ತೀಯ ಎನ್ನುವ ಧೈರ್ಯ….. ಇನ್ನೂ ಒಂದೆರಡು ವರ್ಷಗಳಷ್ಟೇ…. ನನ್ನ ಡಿಗ್ರಿ ಮುಗಿಯಲಿ….. ಸರ್ಕಾರಿ ಕೆಲಸ ಸಿಗಲಿ ಎಂದು ನಾನು ಕಾಯುವುದಿಲ್ಲ…. ಯಾವುದಾದರೂ ಸಣ್ಣ ಸಂಸ್ಥೆಯಲ್ಲಿ ಕಡಿಮೆ ಸಂಬಳ ಸಿಕ್ಕರೂ ಸೇರಿಕೊಳ್ಳುತ್ತೇನೆ…. ನಂತರ ನೀನು ಕಾಲೇಜಿಗೆ ಹೋಗುವೆಯಂತೆ…. ಕೆಲವು ವರ್ಷಗಳಲ್ಲಿ ನೀನೂ ದುಡಿಯಲು ಪ್ರಾರಂಭಿಸುತ್ತೀಯಾ…. ಆಗ ಅಮ್ಮನಿಗೆ ಸಂಪೂರ್ಣ ವಿಶ್ರಾಂತಿ ಸಿಕ್ಕಂತಾಗುತ್ತದೆ….. ಇವಳೂ ಕೂಡ ನವೋದಯ ಶಾಲೆಯಲ್ಲಿ ಪಿಯುಸಿ ಯವರೆಗೂ ವಿದ್ಯಾಭ್ಯಾಸ ಮುಗಿಸಿ ಬಂದರೆ, ನಂತರ ಇವಳ ಮುಂದಿನ ವಿದ್ಯಾಭ್ಯಾಸಕ್ಕೆ ನಾವಿಬ್ಬರೂ ಇರುತ್ತೇವೆ…. ಎಂದು ಮಗಳು ಹೇಳಿದಾಗ, ಸುಮತಿ ಮೂವರು ಮಕ್ಕಳನ್ನು ಅಪ್ಪಿಕೊಂಡು,….”ನೀವಿರುವಾಗ ನನಗೇನು ಚಿಂತೆ ಮಕ್ಕಳೇ….. ನನ್ನ ಕೈಲಿ ಆಗುವರೆಗೂ ನಾನು ದುಡಿಯುತ್ತೇನೆ…. ನಿಮ್ಮ ಈ ಮಾತುಗಳನ್ನು ಕೇಳಿ ನನ್ನ ಹೃದಯ ಹಗುರವಾಯಿತು…. ಇಷ್ಟು ವರ್ಷ ಕಷ್ಟಪಟ್ಟಿದ್ದು ಸಾಕಾಗಿದೆ…. ನಿಮ್ಮ ಕಾಲದಲ್ಲಾದರೂ ಒಂದಿಷ್ಟು ನೆಮ್ಮದಿಯಿಂದ ಕಳೆಯುವಂತಾದರೆ ಸಾಕು…. ಬನ್ನಿ ಎಲ್ಲರೂ ಊಟ ಮಾಡೋಣ…. ನಿಮಗೆಲ್ಲರಿಗೂ ಇಷ್ಟವಾದ ಅಡುಗೆಯನ್ನು ಮಾಡಿದ್ದೇನೆ”…. ಎಂದು ಹೇಳಿ ಸುಮತಿ ಅಡುಗೆ ಮನೆಯ ಕಡೆ ನಡೆದಳು. ಮೂವರು ಹೆಣ್ಣುಮಕ್ಕಳೂ ಅಮ್ಮನನ್ನು ಹಿಂಬಾಲಿಸಿದರು.
ಸಾವಿಲ್ಲದ ಶರಣರು ಮಾಲಿಕೆ “ರಾಜಯೋಗಿ ಶ್ರೀಬೀಳೂರುಗುರುಬಸವ ಸ್ವಾಮಿಗಳು”ಡಾ.ಶಶಿಕಾಂತ್ ಪಟ್ಟಣರಾಮದುರ್ಗ ಪುಣೆ
ಶರಣರ ಸಂಗಾತಿ “ಡಾ.ಶಶಿಕಾಂತ್ ಪಟ್ಟಣರಾಮದುರ್ಗ ಸಾವಿಲ್ಲದ ಶರಣರು ಮಾಲಿಕೆ “ರಾಜಯೋಗಿ ಶ್ರೀಬೀಳೂರುಗುರುಬಸವ ಸ್ವಾಮಿಗಳು ಬಸವೋತ್ತರ ಕಾಲದ ಹತ್ತೊಂಬತ್ತನೆಯ ಶತಮಾನದ ಮಹಾತಪಸ್ವಿ ಶ್ರೀ ಅಥಣಿಯ ಮುರುಗೇಂದ್ರ ಸ್ವಾಮಿಗಳ ಪಡಿನೆರಳು ಅವರ ಕೃಪಾಕಟಾಕ್ಷದಲ್ಲಿ ಲಿಂಗ ಹಸ್ತದ ಆಶೀರ್ವಾದದಿಂದ ಜಗವ ಬೆಳಗುವ ಧೈತ್ಯ ಚೇತನ ರಾಜಯೋಗಿ ಬೀಳೂರು ಗುರುಬಸವ ಸ್ವಾಮಿಗಳು. ಕಲಬುರ್ಗಿ ಸಮೀಪದ ಹತ್ತಿರವಿರುವ ಹಂಗರಗಿ ಎಂಬ ಊರು ಇದೆ ಆ ಊರಿನ ಶ್ರೇಷ್ಠ ಸದ್ಗುಣ ಮಣಿಯಾದ ರಾಮನಗೌಡ ಮತ್ತು ಚೆನ್ನಮ್ಮ ಎಂಬ ಲಿಂಗಾಯತ ಬಣಜಿಗ ದಂಪತಿಗಳ ಉದರದಿಂದ ಜನಿಸಿ ಬಂದ ಶಿಶುವೇ ಶ್ರೀ ಗುರುಬಸವ ಶಿವಯೋಗಿಗಳು.1843ರಲ್ಲಿ ರಾಮನಗೌಡ ಮತ್ತು ಚೆನ್ನಮ್ಮನ ಉದರದಿಂದ ಜನಿಸಿದ ಮಗುವಿನ ಮೊದಲ ಹೆಸರು. ಈ “ಜೀವಪ್ಪ” ಎಂಬ ಮಗು ಬಡ ಕುಟುಂಬದಲ್ಲಿ ನಾಲ್ಕನೆಯವ. ಈ ಮಗು ಅತ್ಯಂತ ಚಿರದ್ರೂಪಿ, ಸುಗುಣ ಚಾಣಾಕ್ಷ ದಷ್ಟ ಪುಷ್ಟ ಚುರುಕಾಗಿದ್ದನು. ನೋಡುವವರ ಕಣ್ಮನಗಳನ್ನು ಸೆಳೆಯುವ ಆಕರ್ಷಕ ಬಾಲಕ ಜೀವಪ್ಪನದು. ಬಾಲ್ಯ ಮತ್ತು ಬಡತನ ——————- ಬಾಲಕ ಜೀವಪ್ಪನು ಉಂಡು ತಿಂದು ಅಡ್ಡಾಡುವ ವಯಸ್ಸಿನಲ್ಲಿ (4-5 ವರ್ಷ) ಹಂಗರಗಿ ಗ್ರಾಮದಲ್ಲಿ ಭೀಕರ ಬರಗಾಲ ಕಾಲಿಟ್ಟಿತು. ಆ ಭಾಗದಲ್ಲಿಯ ಜೀವಿಗಳಿಗೆ ಊಟಕ್ಕೆ ಆಹಾರ ಇಲ್ಲದಾಯಿತು ಕುಡಿಯಲು ನೀರಿಲ್ಲದಾಯಿತು. ಅನ್ನ ನೀರಿಲ್ಲದೆ ಜೀವ ಬಿಡುವ ಪ್ರಸಂಗ ಬಂದೊದಗಿತು. ಆ ಬರಗಾಲ ಅತ್ಯಂತ ಭೀಕರವಾಗಿತ್ತು ಜನತೆಗೆ ಅನ್ನ, ನೀರು ಆಹಾರ ದೊರೆಯದೆ ಕೆಲವರು ಪ್ರಾಣ ಕಳೆದುಕೊಂಡರು,ಹಲವರು ಊರು ಬಿಟ್ಟು ಹೋದರು. ಊರು ಬಿಟ್ಟು ಹೊರಟವರಲ್ಲಿ ರಾಮನಗೌಡರು ಒಬ್ಬರು, ಮಡದಿ ಮಕ್ಕಳನ್ನು ಕರೆದುಕೊಂಡು ಊರೂರ ಅಲೆಯುತ್ತಾ ಅಫ್ಜಲಪುರಕ್ಕೆ ಬಂದು ನೆಲಿಸಿದರು. ಅಲ್ಲಿ ಕೆಲವು ದಿನ ಕಾಲ ಕಳೆದು, ಮತ್ತೆ ಕೆಲಸ ಹುಡುಕುತ್ತ ಹೊಟ್ಟೆ ಪಾಡಿಗಾಗಿ ಮತ್ತೆ ಊರು ಅಲೆಯುತ್ತಾ ಸಿಂದಗಿ ಊರಿಗೆ ಬಂದು ತಲುಪುತ್ತಾರೆ. ಸಿಂದಗಿಯ ವಿರಕ್ತಮಠದ ಅಧಿಪತಿಗಳಾದ ಶ್ರೀ ಷಣ್ಮುಖ ಸ್ವಾಮಿಗಳು ನೀವು ಯಾರು ಏತಕ್ಕಾಗಿ ಬಂದಿರಿ ಎಲ್ಲ ಸಮಾಚಾರವನ್ನು ವಿಚಾರಿಸಿ ತನ್ನಲ್ಲೇ ಕೆಲವು ದಿನ ಉಳಿಯಲು ಹೇಳಿದರು. ಶ್ರೀಗಳ ಆಶ್ರಯ ಪಡೆದ ರಾಮನಗೌಡರು ನಾಲ್ಕಾರು ದಿನ ಇದ್ದು ಜೀವನದ ಮುಂದಿನ ದಾರಿಯನ್ನು ಚಿಂತಿಸುತ್ತಾ ಚೆನ್ನಮ್ಮನಿಗೆ ಹೇಳುತ್ತಾರೆ ಈ ಚಿಕ್ಕ ಮಗ ಜೀವನ ಈ ಅಲೆದಾಟ ಮತ್ತು ಕಷ್ಟದ ಜೀವನವನ್ನು ಹೇಗೆ ಸಹಿಸಿಯಾನು ಆದ್ದರಿಂದ ಅವನನ್ನು ಈ ಮಠದಲ್ಲಿಯೇ ಬಿಟ್ಟು ನಾವು ಮುಂದೆ ಹೋಗೋಣ ಎಂದು ಹೇಳುತ್ತಾರೆ ಆಗ ಒಪ್ಪದ ತಾಯಿ ಕರುಳಿನ ಕುಡಿಯನ್ನು ಬಿಟ್ಟು ಹೋದ ಮಹಾ ಪಾಪಿ ನಾನಾಗುವುದೇ ಎಂದು ಬಿಕ್ಕಿ ಬಿಕ್ಕಿ ಅತ್ತಳು.ಕೊನೆಗೆ ತನ್ನ ನನ್ನ ಮಗ ಎಲ್ಲಿಯಾದರೂ ಇರಲಿ ಸುಖವಾಗಿರಲಿ ಎಂದು ಗಂಡನ ನಿರ್ಧಾರವನ್ನು ಒಪ್ಪಿ ಮಲಗಿದ ಕಿರಿ ಮಗನನ್ನು ಮಠದಲ್ಲಿ ಬಿಟ್ಟು ಮಕ್ಕಳೊಂದಿಗೆ ಮುಂದೆ ಹೊರಟು ಹೋದರು. ಇತ್ತ ಮರುದಿನ ಜೀವಪ್ಪ ತನ್ನ ಕುಟುಂಬದವರು ತಂದೆ ತಾಯಿ ಕಾಣದಾಗಲು ಹೆದರಿ ಮಠದಲ್ಲಿ ಹುಡುಕುತ್ತಾ ಅಳತೊಡಗಿದನು. ಅಂದಿನ ಮಠದೊಡೆಯರಾದ ಅಧಿಪತಿಗಳು ಶ್ರೀ ಷಣ್ಮುಖ ಸ್ವಾಮಿಗಳು ಸಂತೈಷಿ ಸಮಾಧಾನಪಡಿಸಿ ಕೆಲಸಕ್ಕೆ ಬೇರೆ ಕಡೆಗೆ ಹೋಗಿದ್ದಾರೆ ಎಂಟು ದಿನಗಳಲ್ಲಿ ಬಂದು ನಿನ್ನನ್ನು ಕರೆದುಕೊಂಡು ಹೋಗುತ್ತಾರೆ ಎಂದು ಸಮಾಧಾನ ಪಡಿಸಿ ತಮ್ಮ ಶ್ರೀ ಮಠದಲ್ಲಿ ಇರಿಸಿಕೊಂಡರು. ಕೆಲವು ದಿನ ಕಳೆದ ನಂತರ ಮಗು ಜೀವಪ್ಪ ಗುರುವಿನ ಸೇವೆಯಲ್ಲಿ ತಂದೆ ತಾಯಿಗಳನ್ನು ಮರೆತು ಅಕ್ಷರ ಜ್ಞಾನ ಕಲಿಕೆ ಓದುವಿನಲ್ಲಿ ಕಾಲ ಕಳೆಯುತೊಡಗಿದನು. ಸುಂದರವಾದ ಜೀವಪ್ಪನನ್ನು ಚಿಕ್ಕವನಾಗಿದ್ದ ಕಾರಣ ಅವನ ಪಾಲನೆ ಪೋಷಣೆಗೆಂದು ಗುರುಗಳು ಊರಿನ ಸೆಟ್ಟರ (ಪಟ್ಟಣಶೆಟ್ಟಿ )ಅವರ ಮನೆತನದವರಿಗೆ ಜೀವಪ್ಪನ ಜವಾಬ್ದಾರಿ ಹೊರೆಯನ್ನು ವಹಿಸುತ್ತಾರೆ. ಮುಂದೆ ಜೀವಪ್ಪ ಪಟ್ಟಣಶೆಟ್ಟಿಯವರ ಮನೆಯಲ್ಲಿ ಸುಖದಿಂದ ಬೆಳೆಯುತ್ತಾನೆ. ಮಠಗಳ ಉಸ್ತುವಾರಿ —————- ಜೀವಪ್ಪಾ ದೊಡ್ಡವನಾದನೆಂದು, ಮತ್ತು ಶ್ರೀ ಷಣ್ಮುಖಸ್ವಾಮಿಗಳಿಗೆ ವಯಸ್ಸಾಯಿತು ಎಂದು ತಮ್ಮ ಜೊತೆಗೆ ಜೀವಪ್ಪನನ್ನು ಮಠಗಳ ವ್ಯವಹಾರವನ್ನು ಕೊಡಲು ನಿರ್ಧರಿಸಿದರು. ಜೀವಪ್ಪನನ್ನು ಮುಂದೆ ಇತ್ತು ಕೊಂಡು ಪ್ರಶಸ್ತವಾದ ಹೊಸ ಕಲ್ಮಠದ ಕಟ್ಟಡ ಕೆಲಸ ಸಂಪೂರ್ಣ ಮುಗಿಸುತ್ತಾರೆ. ಕಲ್ಮಠವು ಪೂರ್ಣವಾದ ಮೇಲೆ ಹಲವಾರು ಮಠದ ಕೆಲಸಗಳಿಗೆ ಜೀವಪ್ಪನನ್ನು ಸ್ವಾಮಿಗಳು ಉಸ್ತುವಾರಿಗೆಂದು ನೇಮಿಸುತ್ತಾರೆ. ಗುರುಗಳು ಹೇಳಿದ ಎಲ್ಲಾ ಕೆಲಸಗಳನ್ನು ಅತ್ಯಂತ ನಿಷ್ಠೆಯಿಂದ ಶ್ರದ್ಧೆಯಿಂದ ಜೀವಪ್ಪ ಮಾಡುತ್ತಿದ್ದರು. ಇದನ್ನೆಲ್ಲಾ ನೋಡಿದ ಸಿಂಧಗಿ ಊರಿನ ಭಕ್ತರು ನೀಬ್ಬೆರಗಾಗಿ ಜೀವಪ್ಪನ ಕಾಯಕವನ್ನು ಶ್ಲಾಘಿಸುತ್ತಿದ್ದರು. ಗುರುಬಸವ ನಾಮಕರಣ ——————————- ಜೀವಪ್ಪನ ಗುಣ ಸ್ವಭಾವವನ್ನು ಕಂಡು ಸಂತಸಗೊಂಡ ಪೂಜ್ಯರು ಅವನಲ್ಲಿ ಅತ್ಯಂತ ಪ್ರೀತಿಯ ಅದರ ಭಾವದಿಂದ ಕಾಣಲಾರಂಭಿಸಿದರು. ಈಗ ಜೀವಪ್ಪನಿಗೆ 12 ವರ್ಷ . 12 ವರ್ಷದ ಬಾಲಕನನ್ನು ಗೆಳೆಯ ರಾಚಯ್ಯನ ಜೊತೆಗೆ ಷಣ್ಮುಖ ಸ್ವಾಮಿಗಳು ಸಂಖದ ಗುರುಗಳ ಕಡೆಗೆ ಕಳುಹಿಸಿಕೊಡುತ್ತಾರೆ ಗೆಳೆಯ ರಾಚಯ್ಯನೊಂದಿಗೆ ಬಂದ ಜೀವಪ್ಪನವರು ಇಂದಿನ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಸಂಖ ಗ್ರಾಮದಲ್ಲಿರುವ ವಿರಕ್ತಮಠದಲ್ಲಿ ಗುರುಗಳ ಅಣತಿಯಂತೆ ಗುರು ದಿಕ್ಷೆಯನ್ನು ಪಡೆದು ಗುರು ಸೇವೆಯಲ್ಲಿ ತೊಡಗಿದರು. ಇವರ ಸೇವಾ ಮನೋಭಾವವನ್ನು, ಕಾಯಕ ನಿಷ್ಠೆ ಗುರುಭಕ್ತಿಯನ್ನು ಕಂಡು ಸಂಕದ ಗುರುಗಳು “ಗುರುಬಸವ” ಎಂದು ಹೊಸ ನಾಮಕರಣ ಮಾಡಿದರು. ಮತ್ತು ಮಠದ ಅಧಿಕಾರವನ್ನು ತೆಗೆದುಕೋ ಎಂದು ಗುರುಬಸವರಿಗೆ ಹೇಳಿದರು. ಆಗ ಸ್ವತಃ ಗುರುಬಸವರೇ ಮಠದ ಅಧಿಕಾರವನ್ನು ರಾಚಯ್ಯನಿಗೆ ಕೊಡಿರಿ ಎಂದು ನಸುನಗುತ್ತಾ ಹೇಳಿದರು. ಎಳೆ ಹರಿಯದ ಆ ಗುರುಬಸವ ದೇವರು ತನ್ನ ಗೆಳೆಯನಿಗಾಗಿ ಮಾಡಿದ ಉದಾರತೆಯ ನಿಷ್ಕಾಮ ಭಾವ,ವಿರಕ್ತತೆ , ತ್ಯಾಗದ ವಿಷಯವನ್ನು ಅರಿತ ಸಂಖದ ಊರಿನ ಸಮಸ್ತರು ಆಶ್ಚರ್ಯದಿಂದ ಬೆರಗಾದರು. ಗೆಳೆಯ ರಾಚಯ್ಯನಿಗೆ ಮಠದ ಅಧಿಕಾರವನ್ನು ಒಪ್ಪಿಸಿ ಗುರುಗಳ ಆಜ್ಞೆಯಂತೆ ಮುಚ್ಚಂಡಿ ಮತ್ತು ಬೀಳೂರಿಗೆ ಹೋಗುತ್ತಾರೆ. ಮೊದಲು ಮುಚ್ಚಂಡಿಯಲ್ಲಿ ಕೆಲವು ದಿನ ಇದ್ದು, ಮುಂದೆ ಬೀಳೂರಿಗೆ ಹೋಗುತ್ತಾರೆ. ಬೀಳೂರಿನಲ್ಲಿ ವಿರಕ್ತಮಠ ಹಾಳು ಬಿದ್ದಿರುತ್ತದೆ ಅದಕ್ಕೆಂದೆ ಬೀಳೂರು( ಬಿದ್ದ ಊರು – ಹಾಲು ಬಿದ್ದ ಮಠವೊಂದಿತ್ತು ) ಎಂದು ಹೇಸರು ಬಂದಿರಬಹುದು, ಹಾಳು ಬಿದ್ದ ವಿರಕ್ತ ಮಠವನ್ನು ಅತ್ಯಂತ ಸುಪ್ರಸಿದ್ಧ ಮಾಡುವಲ್ಲಿ ಶ್ರೀ ಗುರುಬಸವ ಸ್ವಾಮಿಗಳು ಹಗಲಿರುಳು ಅತ್ಯಂತ ಪರಿಶ್ರಮ, ಕಷ್ಟಪಟ್ಟು ಕಂತಿ ಭಿಕ್ಷೆ ಬೇಡಿ, ಹೊಲ ಮೇಯುವ ಕೆಲಸ ಮಾಡಿ, ಅಲ್ಲಿಯ ಹಲವಾರು ಶರಣರ, ಶರಣೆಯರ ಸಹಕಾರ ಸಹಾಯದಿಂದ ಒಂದು ಹೆಸರಾಂತ ವಿರಕ್ತಮಠವನ್ನಾಗಿ ಮಾರ್ಪಡಿಸುತ್ತಾರೆ ಶ್ರೀ ಗುರುಬಸವ ಸ್ವಾಮಿಗಳು. ಅಥಣಿಯ ಶ್ರೀ ಮುರುಗೇಂದ್ರ ಶಿವಯೋಗಿಗಳ ಸಂಪರ್ಕದಲ್ಲಿ —————————————————————————- ಅಥಣಿಯ ಶ್ರೀ ಮುರುಗೇಂದ್ರ ಶಿವಯೋಗಿಗಳ ಸಮಕಾಲೀನರಾದ ಶ್ರೀ ಗುರುಬಸವ ಸ್ವಾಮಿಗಳು ಸಮಾಜದ ಏಳಿಗೆಗಾಗಿ ಸಮಾಜದ ಉದ್ಧಾರಕ್ಕಾಗಿ ತಮ್ಮನ್ನು ತಾವು ಸಮಾಜಕ್ಕೆ ಅರ್ಪಿಸಿಕೊಂಡು ಹಲವಾರು ಸಮಾಜಮುಖಿ ಸೇವಾ ಕಾರ್ಯಗಳನ್ನು ಮಾಡುವಲ್ಲಿ ಸೈ ಎನಿಸಿಕೊಂಡ ಶ್ರೀ ಗುರುಬಸವ ಶಿವಯೋಗಿಗಳು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆಗೈಯುವದರ ಮೂಲಕ ಕಾರ್ಯ ಮಾಡುವುದನ್ನು ಕಂಡು ಅವರನ್ನು ಗಚ್ಚಿನ ಮಠಕ್ಕೆ ಬರ ಹೇಳುತ್ತಾರೆ. ಅಂದು ಅಥಣಿಯ ಗಚ್ಚಿನ ಮಠವೆಂದರೆ ಶ್ರೀ ಮುರುಗೇಂದ್ರ ಶಿವಯೋಗಿಗಳ ಸಮ್ಮುಖದಲ್ಲಿ ನಿತ್ಯ ಶಿವಯೋಗ ಅನುಭಾವ ಚಿಂತನಾ ಗೋಷ್ಠಿಗಳು ಜರುಗುತ್ತಿದ್ದವು. ಬಿದರಿ ಶಿವಕುಮಾರಸ್ವಾಮಿಗಳು, ಹುಲ್ಯಾಳ ಶ್ರೀಗಳು, ಧಾರವಾಡದ ಮೃತ್ಯುಂಜಯ ಸ್ವಾಮಿಗಳು, ಅವರ ತಂಡದಲ್ಲಿ ದೊಡ್ಡ ಧಡೂತಿ ಮೈಕಟ್ಟನ್ನು ಹೊಂದಿದ ಶ್ರೀ ಗುರು ಬಸವ ಸ್ವಾಮಿಗಳು ಸೇರಿಕೊಳ್ಳುತ್ತಾರೆ. ಶ್ರೀ ಗುರುಬಸವರ ದೈವಿಕ ಶಕ್ತಿಗೆ ಮಾರುಹೋದ ಭಕ್ತರು ಬೀಳೂರಿನ ಮೂರ ಅಂಕಣದ ಕೋಣೆಯ ಮುಂದೆ ಒಂದು ಮಠವನ್ನು ಕಟ್ಟಿಸುತ್ತಾರೆ. ಇವರ ಪ್ರಭಾವ ಕರ್ನಾಟಕ ಮಹಾರಾಷ್ಟ್ರಗಳಲ್ಲಿ ಬೆಳೆದಂತೆ ಇವರಿಗಾಗಿ ಕಟ್ಟಿಸಿದ ಮಠ ಸಣ್ಣದಾಗುತ್ತದೆ. ಅಥಣಿಯ ಮುರುಗೇಂದ್ರ ಶ್ರೀಗಳ ಮಾರ್ಗದರ್ಶನದ ಮೇರೆಗೆ ಭವ್ಯವಾದ ಮಠವನ್ನು ಕಟ್ಟಿಸುತ್ತಾರೆ. ಜತ್ತ ಮತ್ತು ಉಮರಾಣಿಯ ಸಂಸ್ಥಾನಿಕರು ಹತ್ತಾರು ಎಕರೆ ಭೂಮಿಗಳನ್ನು ಬೀಳೂರು ಮಠಕ್ಕೆ ದತ್ತಿಯಾಗಿ ಕೊಟ್ಟು ಪುನೀತರಾಗುತ್ತಾರೆ . ಅಸೂಹೆಯ ಕಿಚ್ಚು ಆರಿತು ————————————— ಬೀಳೂರು ಶ್ರೀ ಗುರುಬಸವವರ ಸ್ವಾಮಿಗಳ ಸಾಧನೆಯನ್ನು ಕಂಡು ದ್ವೇಷ ಮತ್ಸರದ ವ್ಯಕ್ತಿ ಗಣಪತಿಯೆಂಬುವನು ಶ್ರೀ ಗುರುಬಸವರು ಒಬ್ಬರೇ ಮಠದಲ್ಲಿದ್ದಾಗ ಗುರುಬಸವವರ ಚಾರಿತ್ರ್ಯಕ್ಕೆ ಕುಂದುಂಟು ಮಾಡಲು ಚೆನ್ನವ್ವ ಎಂಬ ವೇಶ್ಯೆಗೆ ಹಣ ಕೊಟ್ಟು ಗುರುಬಸವರಿರುವ ಕೋಣೆಗೆ ಕಳುಹಿಸಿದ. ಆ ವೇಶ್ಯೆಯ ಕೈಗಳ ಬಳೆಯ ಸಪ್ಪಳವನ್ನು ಆಲಿಸಿದ ಶ್ರೀ ಗುರುಬಸವವರು ಯಾರು ತಾಯಿ ಅಲ್ಲಿಯೇ ನಿಲ್ಲು ನಾನೇ ಹೊರಗೆ ಬರುತ್ತೇನೆ ಅವ್ವ ಎಂದರಂತೆ . ವೇಶ್ಯೆಯನ್ನು ತಾಯಿಯಾಗಿ ಸಂಭೋಧಿಸಿದಾಗ ತಾನು ತಪ್ಪು ದಾರಿ ತುಳಿಯುತ್ತಿದ್ದೇನೆ ಎಂದು ಚೆನ್ನವ್ವ ನಿಧಾನವಾಗಿ ಹೆದರಿ ದೈವದ ತೇಜೋವಧೆಗೆ ಹೊರಟಿರುವುದು ತಪ್ಪು ಎಂದು ತಿಳಿದು ಪರಿತಪಿಸಿ ಹಿಂದೆ ಸರಿದಳು. ಮುಂದೆ ವೇಶ್ಯೆಯ ಕಣ್ಣು ಹೋಗಿ ಭಿಕ್ಷೆ ಬೇಡಿ ಬದುಕುವ ಕೆಟ್ಟ ಪರಿಸ್ಥಿತಿ ನಿರ್ಮಾಣವಾಯಿತು. ವೇಶ್ಯೆಯನ್ನು ಕಳಿಸಿದ ಆಗರ್ಭ ಶ್ರೀಮಂತ ಗಣಪತಿಯೆಂಬುವನ ವಂಶವು ನಿರ್ನಾಮವಾಯಿತು. ಗಣಪತಿಯ ಮಕ್ಕಳು ಅವನ ಕಣ್ಣ ಮುಂದೆ ತೀರಿಹೋದರು. ಬ್ರಹ್ಮ ರಾಕ್ಷಸ ಬಡೆದುಕೊಂಡ ಬಾಲಕನಿಂದ ಪಾಠ ಕಲಿತ ಶ್ರೀ ಗುರುಬಸವರು ———————————————————————————————- ಒಂದೊಮ್ಮೆ ಅಥಣಿಯ ಶ್ರೀ ಮುರುಗೇಂದ್ರ ಶಿವಯೋಗಿಗಳು ತಮ್ಮ ಜೊತೆಗೆ ಬಿದರಿ ಶಿವ ಕುಮಾರಶಿವಯೋಗಿಗಳು ಮತ್ತು ರಾಜಯೋಗಿ ಬೀಳೂರು ಶ್ರೀ ಗುರುಬಸವ ಸ್ವಾಮಿಗಳನ್ನು ಕರೆದುಕೊಂಡು ಅಥಣಿಯ ಪಕ್ಕದ ಹಳ್ಳಿಗೆ ಶ್ರಾವಣ ಮಾಸದ ಶಿವಾನುಭವ ಪ್ರವಚನಕ್ಕೆ ಹೋಗಿರುತ್ತಾರೆ. ಪ್ರವಚನ ಮುಗಿಸಿ ಮರಳಿ ಅಥಣಿಗೆ ಬರುವಾಗ ಕೃಷ್ಣಾ ನದಿ ತುಂಬಿ ಹರಿಯುತ್ತಿರುತ್ತದೆ. ಎತ್ತು ಮತ್ತು ಬಂಡಿಯಲ್ಲಿದ್ದ ಸ್ವಾಮಿಗಳು ಕೊಂಚ ದಿಗ್ಭ್ರಾಂತರಾಗುತ್ತಾರೆ . ನದಿ ಹೇಗೆ ದಾಟುವುದು. ಕೆಲ ಹೊತ್ತ ದಡದಲ್ಲಿಯೇ ಕುಳಿತು ಕೊಳ್ಳುತ್ತಾರೆ. ಏನೋ ಅಥಣಿಯ ಶ್ರೀ ಮುರುಗೇಂದ್ರ ಶ್ರೀಗಳು ಚಕ್ಕಡಿಯನ್ನು ಅಲ್ಲಿಯೇ ದಡದಲ್ಲಿ ಬಿಟ್ಟು ನದಿಯನ್ನು ದಾಟೋಣ ಎನ್ನುತ್ತಾರೆ. ಆಗ ಬಿದರಿ ಶ್ರೀಶಿವಕುಮಾರ ಸ್ವಾಮಿಗಳು ಮತ್ತು ಇತರ ಶಿಷ್ಯರು ಅಥಣಿಯ ಶ್ರೀ ಮುರುಗರೇಂದ್ರ ಸ್ವಾಮಿಗಳ ಮಾತಿಗೆ ಸಮ್ಮತಿಸಿ ಅವರ ಹಿಂದೆ ಹೋಗಲು ನಿರ್ಧರಿಸುತ್ತಾರೆ. ಆದರೆ ಮೈತುಂಬ ರೇಷ್ಮೆ ಬಟ್ಟೆ ಪೇಠಾ ಬಂಗಾರ ಹೊಂದಿದ ರಾಜಯೋಗಿ ಶ್ರೀ ಗುರುಬಸವ ಸ್ವಾಮಿಗಳು ಅಥಣಿಯ ಶ್ರೀ ಮುರುಗೇಂದ್ರ ಶಿವಯೋಗಿಗಳ ಜೊತೆಗೆ ಹೋಗುವದಿಲ್ಲ, ಚಕ್ಕಡಿಯ ಮಾಲಕನೊಂದಿಗೆ ದಡದಲ್ಲಿಯೇ ಕುಳಿತು ಮಧ್ಯ ರಾತ್ರಿ ಕೃಷ್ಣ ನದಿಯು ಇಳಿದ ಮೇಲೆ ಅಥಣಿಗೆ ಬಂದು ತಲುಪುತ್ತಾರೆ. ಬೆಳಿಗ್ಗೆ ಎಂದಿನಂತೆ ಎದ್ದು ಶ್ರೀಗಳ ಜೊತೆಗೆ ಕುಶಲೋಪರಿ ಮಾತನಾಡಿ ಬಹಿರ್ದೆಸೆಗೆ ಹೊರಟು ನಿಲ್ಲುತ್ತಾರೆ. ಆಗ ಅಥಣಿಯ ಶ್ರೀ ಮುರುಗೇಂದ್ರ ಶ್ರೀಗಳು ಅಪ್ಪವರೆ ನಿನ್ನೆ ನಿಮಗೆ ಅಸ್ತವ್ಯಸ್ತವಾಗಿದೆ ಬೇಗ ಹೋಗಿ ಬನ್ನಿ,ಸ್ನಾನ ಪೂಜೆ ಮುಗಿಸಿ ಪ್ರಸಾದವನ್ನು ಮಾಡೋಣ ಎನ್ನುತ್ತಾರೆ. ಆಗಲಿ ಎಂದು ಒಬ್ಬ ಸೇವಕನೊಂದಿಗೆ ಊರ ಹೊರಗೆ ಹೊರಟು ನಿಲ್ಲುತ್ತಾರೆ. ದಾರಿಯಲ್ಲಿ ಹೋಗುವಾಗ ಬೆಳಿಗ್ಗೆ ಆರರ ಮುಂಜಾವು ಶ್ರಾವಣದ ತುಂತುರ ಮಳೆ ಹನಿಯ ತಂಪು, ಆಗ ಒಂದು ಬಂಡಿಯಲ್ಲಿ ಹಿಂದೆ ಕುಳಿತಿದ್ದ ಬಾಲಕ ಶ್ರೀ ಬೀಳೂರು ಗುರುಬಸವ ಸ್ವಾಮಿಗಳನ್ನು ನೋಡಿ ಅವಹೇಳನ ಮಾಡುತ್ತಾ ಕಿಸಿಕಿಸಿ ನಗುತ್ತಾನೆ, ಶ್ರೀಗಳು ಹೆಚ್ಚಿನ ಮಹತ್ವವನ್ನು ನೀಡದೆ ಮುಂದೆ ಸಾಗುತ್ತಾರೆ, ಆಗ ಹುಡುಗ ಮತ್ತೆ ಇವರತ್ತ ಕೇಕೆ ಹಾಕಿ ನಗುತ್ತಾನೆ, ಸ್ವಲ್ಪ ಮಟ್ಟಿಗೆ ವಿಚಲಿತರಾದ ಪೂಜ್ಯರು ಅಲ್ಲಿರುವ ಜನರನ್ನು ವಿಚಾರಿಸುತ್ತಾರೆ, ಸಿಟ್ಟಿನ ಗುರುಬಸವ ಸ್ವಾಮಿಗಳು ಜನರು ಅಂಜುತ್ತಲೇ ಅಪ್ಪಾರಾ ಹುಡುಗ ಗಾಳಿ ಶಕ ಆಗೈತಿ, ಬ್ರಹ್ಮ ರಾಕ್ಷಸ ಮೈಯೊಳಗ ಹೊಕ್ಕಾನ ಏನು ಮಾಡಿದರೂ
ವನಜ ಮಹಾಲಿಂಗಯ್ಯ ಅವರ ಕವಿತೆ “ಒಂದಾಗಿಸುವ ಬಣ್ಣ”
ಕಾವ್ಯ ಸಂಗಾತಿ ವನಜ ಮಹಾಲಿಂಗಯ್ಯ “ಒಂದಾಗಿಸುವ ಬಣ್ಣ” ರಂಗುಗಳ ಮಳೆಯಲ್ಲಿಮರೆಯುತ್ತದೆ ಹಳೆಯ ನೋವು ಒಣಗಿದ ದ್ವೇಷದ ಮೇಲೆಪಿಚಕಾರಿ ಚಿಮ್ಮುವ ಸಂತೋಷ ಕೆಂಪು-ಹಸಿರು-ನೀಲಿ ತುಂಬಿಹೃದಯದ ಕಪ್ಪು ಕಳೆಯುತ್ತದೆಹೋಳಿಗೆ ಬಂದವ ಒಡ್ಡಿಕೊಂಡರೆ ಎಲ್ಲರೂ ಒಂದೇ ಒಂದು ಬಣ್ಣಪ್ರೀತಿಯ ಹಬ್ಬದ ಹೆಸರು ಹೋಳಿ ರಂಗುಗಳಲ್ಲಿ ಬರೆಯುವ ಸ್ನೇಹದ ಕಥೆಹಸನ್ಮುಖದ ಈ ಒಂದು ದಿನಕ್ಕೆಜಗತ್ತೆಲ್ಲಾ ಒಂದಾಗುತ್ತದೆ. ವನಜ ಮಹಾಲಿಂಗಯ್ಯ
ವನಜ ಮಹಾಲಿಂಗಯ್ಯ ಅವರ ಕವಿತೆ “ಒಂದಾಗಿಸುವ ಬಣ್ಣ” Read Post »
“ವಾಕ್ಯದಲ್ಲಿ ನಾಡಿ” ಡಾ.ದೇವರಾಜು ಮಹಾರಾಜು ಅವರ ತೆಲುಗು ಕವಿತೆಯ ಕನ್ನಡಾನುವಾದ ರಂಗನಾಥ ರಾಮಚಂದ್ರ ರಾವು
ಅನುವಾದ ಸಂಗಾತಿ ವಾಕ್ಯದಲ್ಲಿ ನಾಡಿ ತೆಲುಗು ಮೂಲ : ಡಾ. ದೇವರಾಜು ಮಹಾರಾಜುಕನ್ನಡಕ್ಕೆ : ರಂಗನಾಥ ರಾಮಚಂದ್ರರಾವು ಸಮುದ್ರದಲ್ಲಿ ಕವನವಿದೆಮಂಜಿನ ಹನಿಯಲ್ಲಿ ಕವನವಿದೆಮಂಜಿನ ಹನಿ ಸಾಗರದಲ್ಲಿ ಅದೃಶ್ಯವಾಗುವುದರಲ್ಲಿಅಮೋಘವಾದ ಕವನವಿದೆ! ಮಣ್ಣಿನಲ್ಲಿ ಕವನವಿದೆಬೀಜದಲ್ಲಿ ಕವನವಿದೆಬೀಜ ಮಣ್ಣಿನಲ್ಲಿ ಅದೃಶ್ಯವಾಗಿಮರದಂತೆ ಬೆಳೆಯುವುದರಲ್ಲಿಅದ್ವಿತೀಯವಾದ ಕವನವಿದೆ! ಸೂರ್ಯೋದಯ –ಸೂರ್ಯಾಸ್ತಮಯಆರಂಭವು-ಅಂತ್ಯಗಳಂತೆಪ್ರಕೃತಿ ಕವನಕ್ಕೆ ಎರಡು ಮುಖ್ಯವಾದ ಚರಣಗಳು! ತೆಗೆಯುತ್ತಿರುವ ಪ್ರತಿಯೊಂದು ಉಸಿರಿನಲ್ಲಿಕವನ ಇರುವುದರಿಂದಲೇನಿನ್ನಲ್ಲಿ ಇನ್ನೂ ಜೀವವಿದೆ ಜೀವವೆಂದರೆ ಕೇವಲ ಚಲನವಲ್ಲಕವನವೆಂದರೆ ಕೇವಲ ವಾಕ್ಯ ವಿನ್ಯಾಸವಲ್ಲವಾಕ್ಯದಲ್ಲಿ ನಾಡಿ ಮಿಡಿಯುವುದು ಕವನಚಲನದಲ್ಲಿ ಸ್ಪೃಹೆ ಧ್ವನಿಸುವುದು ಕವನ! ತೆಲುಗು ಮೂಲ : ಡಾ. ದೇವರಾಜು ಮಹಾರಾಜುಕನ್ನಡಕ್ಕೆ : ರಂಗನಾಥ ರಾಮಚಂದ್ರರಾವು
“ವಾಕ್ಯದಲ್ಲಿ ನಾಡಿ” ಡಾ.ದೇವರಾಜು ಮಹಾರಾಜು ಅವರ ತೆಲುಗು ಕವಿತೆಯ ಕನ್ನಡಾನುವಾದ ರಂಗನಾಥ ರಾಮಚಂದ್ರ ರಾವು Read Post »
ಣಮೋ ಅರಿಹಂತಾಣಂ- ಕನ್ನಡ ಜೈನ ನೋಂಪಿಕಥೆಗಳು:(ಧಾರ್ಮಿಕ ಆಚರಣೆ ಮತ್ತು ನೈತಿಕಬೋಧೆ-ಸಂಶೋಧನಾತ್ಮಕ ಲೇಖನ) ಡಾ. ಯಲ್ಲಮ್ಮ ಕೆ
ಸಂಶೋಧನಾ ಸಂಗಾತಿ ಡಾ.ಯಲ್ಲಮ್ಮ ಕೆ. ಡಾ. ಯಲ್ಲಮ್ಮ ಕೆ ಣಮೋ ಅರಿಹಂತಾಣಂ- ಕನ್ನಡ ಜೈನ ನೋಂಪಿಕಥೆಗಳು: [ಧಾರ್ಮಿಕ ಆಚರಣೆ ಮತ್ತು ನೈತಿಕಬೋಧೆ-ಸಂಶೋಧನಾತ್ಮಕ ಲೇಖನ] ಒಂದಾನೊಂದು ಕಾಲದಲ್ಲಿ.., ಒಂದು ಊರಲ್ಲಿ.., ಬಹಳ ಹಿಂದೆ, ದೂರದ ಒಂದು ಹಳ್ಳಿಯಲ್ಲಿ.., ಹಿಂದೆ ಕಾಲದಲ್ಲಿ ಒಬ್ಬ ರಾಜನಿದ್ದನಂತೆ.., ನಮ್ಮ ಅಜ್ಜ-ಅಜ್ಜಿ ಹೇಳ್ತಿದ್ದ ಕಥೆಯಿದು.., ಪುರಾತನ ಕಾಲದಲ್ಲಿ.., ತ್ರೇತಾಯುಗದಲ್ಲಿ.., ದ್ವಾಪರ ಯುಗದಲ್ಲಿ.., ಈ ಕಲಿಯುಗದ ಆರಂಭದಲ್ಲಿ.., ವೇದ ಪುರಾಣಗಳಲ್ಲಿ ಹೇಳಿದಂತೆ.., ಮಹರ್ಷಿಗಳು ವರ್ಣಿಸಿರುವಂತೆ.., ನಮ್ಮ ಜನಪದ ಅಥವಾ ಪೌರಾಣಿಕ ಕಥೆಗಳು ಆರಂಭಗೊಳ್ಳುವುದೇ ಹೀಗೆ! ಕೇಳುಗಳ [ಶ್ರೋತೃಗಳ] ಗಮನ ಸೆಳೆಯಲು ಕಾಲ ಮತ್ತು ಸ್ಥಳವನ್ನು ಅಸ್ಷಷ್ಟವಾಗಿಟ್ಟು ಕಲ್ಪನೆಗೆ ಅವಕಾಶ ಕೊಡುವಂತೆ; ಪುರಾತನ ಕಾಲದಲ್ಲಿ ಧರ್ಮವೇ ರಾಜ್ಯದ ಆಧಾರವಾಗಿದ್ದ ಯುಗದಲ್ಲಿ, ಒಂದು ಸಮೃದ್ಧ ರಾಜ್ಯವನ್ನು ಆಳುತ್ತಿದ್ದ ಧರ್ಮನಿಷ್ಠ ರಾಜನೊಬ್ಬನಿದ್ದನು.., ಆ ರಾಜನಿಗೆ ಎಲ್ಲವೂ ಇತ್ತು ಆದರೆ.., ಆದರೆ.., ಒಂದು ಚಿಂತೆ ಮಾತ್ರ ಅವನನ್ನು ಬಿಡದೆ ದಹಿಸುತ್ತಿತ್ತು.., ಎನ್ನುತ್ತಿರುವಾಗಲೇ ಇಡೀ ಕಥಾನಕವನ್ನು ನೀವು ಊಹಿಸಿಬಿಡುತ್ತೀರಿ.., ಚಿತ್ರದ ಮೊದಲರ್ಧವನ್ನು ನೋಡುತ್ತಿರುವಾಗಲೇ ನೀವು ಕ್ಲೈಮ್ಯಾಕ್ಸ್ ಅನ್ನು ಹೇಳಿಬಿಡುವಂತೆ.., ಕಥೆಗಳು ಆಗಲ್ಲ ಇಲ್ಲಿನ ಅನಿರೀಕ್ಷಿತ ತಿರುವುಗಳು ಓದುಗರ ಸ್ಮೃತಿಪಟಲದಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಿಬಿಡುತ್ತವೆ. *_ಹಿನ್ನಲೆ:_*ಜೈನಧರ್ಮವು ಭಾರತದ ಅತ್ಯಂತ ಪ್ರಾಚೀನ ಧರ್ಮಗಳಲ್ಲಿ ಒಂದಾಗಿದೆ. ಇದರ ಹುಟ್ಟಿನ ಹಿನ್ನಲೆ ಕಿ.ಪೂ.ಆರನೇ ಶತಮಾನಕ್ಕೆ ಸೇರಿದೆ ಎಂದು ಇತಿಹಾಸಕಾರರು ಅಭಿಪ್ರಾಯ ಪಡುತ್ತಾರೆ. ಜೈನ ಪರಂಪರೆಯ ಪ್ರಕಾರ ಈ ಧರ್ಮವು ಅನಾದಿಕಾಲದಿಂದಲೂ ಅಸ್ತಿತ್ವದಲ್ಲಿದ್ದು ಇಪ್ಪತ್ನಾಲ್ಕು ತೀರ್ಥಂತಕರರ ಮೂಲಕ ಬೆಳೆದುಬಂದಿದ್ದು, ಕೊನೆಯ ತೀರ್ಥಂಕರರಾದ ವರ್ಧಮಾನ ಮಹಾವೀರರು ಜೈನಧರ್ಮಕ್ಕೆ ಸಂಘಟಿತ ರೂಪುನೀಡಿ ಪ್ರಚಾರ ಮತ್ತು ಪ್ರಸಾರ ಮಾಡಿದನೆಂದು ತಿಳಿಯಲಾಗಿದೆ. ವೈದಿಕ ಕಾಲಘಟ್ಟದಲ್ಲಿ ಯಜ್ಷ-ಯಾಗಗಳ ಅಧಿಕ್ಯ, ಪಶುಬಲಿ, ಬ್ರಾಹ್ಮಣರ ಪ್ರಾಬಲ್ಯ ಹಾಗೂ ವರ್ಣವ್ಯವಸ್ಥೆಯ ಕಾಠಿಣ್ಯತೆ ಸಮಾಜದಲ್ಲಿ ಅಸಮಾಧಾನವನ್ನುಂಟು ಮಾಡಿತ್ತು. ಇವುಗಳಿಗೆ ಪ್ರತಿರೋಧದ ಹಿನ್ನಲೆಯಲ್ಲಿ ಬೌದ್ಧ ಮತ್ತು ಜೈನಧರ್ಮಗಳು ಉದಯವಾದವು ಎನ್ನಬಹುದು.ಜೈನಧರ್ಮವು ಸರಳ ಆಚರಣೆ, ನೀತಿಪಾಠಗಳ ಮೂಲಕ ಜೀವನ ಮತ್ತು ಆತ್ಮಶುದ್ಧಿಗೆ ಮಹತ್ವ ನೀಡಿತು. ಸಾಮಾಜಿಕವಾಗಿ ನಗರೀಕರಣ, ವ್ಯಾಪಾರ ಮತ್ತು ವೈಶ್ಯವರ್ಗದ ವೃದ್ಧಿಯೂ ಜೈನಧರ್ಮದ ಬೆಳವಣಿಗೆಗೆ ಕಾರಣವಾಯಿತು. ಅಹಿಂಸೆ, ಅಪರಿಗ್ರಹ, ಅನೇಕಾಂತವಾದ ಹಾಗೂ ತ್ರಿರತ್ನಗಳಾದ ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ ಮತ್ತು ಸಮ್ಯಕ್ ಚಾರಿತ್ಯ್ರ ಜೈನಧರ್ಮದ ಮೂಲ ತತ್ತ್ವಗಳಾಗಿವೆ. ಬೌದ್ಧ ಮತ್ತು ಜೈನಧರ್ಮಗಳೆರೆಡು ಶ್ರಮಣ ಪರಂಪರೆಯಿಂದ ಉದ್ಭಭವಿಸಿದ್ದು, ತಪಸ್ಸು, ಸಂಯಮ ಮತ್ತು ವೈರಾಗ್ಯಕ್ಕೆ ಹೆಚ್ಚಿನ ಮಹತ್ವ ನೀಡಿದವು. ಜೈನಧರ್ಮಕ್ಕೆ ಮಗಧ ಪ್ರದೇಶದ ರಾಜಾಶ್ರಯ ಮತ್ತು ವ್ಯಾಪಾರಿಗಳ ಬೆಂಬಲದಿಂದ ಇದು ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ವ್ಯಾಪಕವಾಗಿ ಹರಡಿತೆನ್ನಬಹುದು.ಈ ರೀತಿಯಾಗಿ ವೈದಿಕ ಧರ್ಮದ ಜಟಿಲ ಆಚರಣೆಗಳಿಗೆ ವಿರುದ್ಧವಾಗಿ ಮಾನವೀಯತೆ, ಅಹಿಂಸೆ ಮತ್ತು ಆತ್ಮಸಾಧನೆಯನ್ನು ಕೇಂದ್ರವಾಗಿಟ್ಟುಕೊಂಡ ಒಂದು ಧರ್ಮವಾಗಿ ಬೆಳೆದು ಬಂದಿತು.ಕೊಲ್ಲದ ಧರ್ಮಕ್ಕೆ ಜಿನಾಗಮವೇ ತೌರುಮನೆಯಾಗಿದೆ:ಕ್ಷಮೆಯೇ ಧರ್ಮ, ಧರ್ಮಕ್ಕೆ ದಯವೇ ಮೂಲ, ದಯವೇ ಅಹಿಂಸೆ, ಅಹಿಂಸೆಯೇ ಶಾಂತಿ, ಶಾಂತಿಯೇ ಸುಖ, ಸುಖದ ಅನುಭವವೇ ಜ್ಞಾನ, ಜ್ಞಾನಿಯೇ ಆತ್ಮ. ಆದುದರಿಂದ ಆತ್ಮನಿರೀಕ್ಷಣೆಗೆ ಮೊದಲು ಕ್ಷಮಾಗುಣವನ್ನು ಹೊಂದಬೇಕು. ಅಧ್ಯಾತ್ಮರಸಾನುಭವಿಯಾಗಲು ಕ್ಷಮಾಗುಣಧಾರಿಯೇ ಆಗಬೇಕು. ಕ್ಷಮಾ ವೀರಸ್ಯ ಭೂಷಣಂ! *ರತ್ನಾಕರ ಕವಿ ಹೇಳಿರುವಂತೆ* : ಕ್ಷಮೆ ಮಾಳ್ಪಂತೆ ವಿರೋಧಮೇಂ ಕೊಡುವುದೇ ಸಂತೋಷಮಂ? ಜೀವನದಲ್ಲಿ ಸಂತೋಷವನ್ನು ಕಾಣಲು ಕ್ಷಮೆಯನ್ನು ತಾಳಬೇಕು ಎಂಬಿತ್ಯಾದಿ ಜೈನಧರ್ಮದ ಉದಾತ್ತ ತ್ತ್ವ ಧ್ಯೇಯಗಳನ್ನು ಪಾಲಿಸಿದರೆ ಪತಿತ ಪಾವನನಾಗಬಲ್ಲ, ಜೀವ ಜೀವನ್ಮುಕ್ತನಾಗಬಲ್ಲ, ನರ ನಾರಾಯಣನಾಗಬಲ್ಲ, ಬುದ್ಧನು ಸಿದ್ಧನು ಸಿದ್ಧನಾಗಬಲ್ಲ ಎಂಬ ವಿಚಾರಗಳಿಗೆ ಮಾರುಹೋಗಿ ಜನ ತಲೆಬಾಗಿ ಜೈನಧರ್ಮವನ್ನು ಶಿರೋಧಾರಣೆ ಮಾಡಿ ಅನುಸರಿಸಲಾರಂಭಿಸಿದರು.ಕರ್ನಾಟಕದಿ ಶ್ರವಣಬೆಳಗೊಳ, ಪುಲಿಗೆರೆ, ಕೊಪ್ಪಳ, ಬ್ರಹ್ಮಪುರಿ, ಬಳ್ಳಿಗಾವೆ, ತಾಲಗುಂದ, ಬನವಾಸಿ, ಐಹೊಳೆ, ಹುಂಚ, ಕಾರ್ಕಳ, ಮೂಡಬಿದ್ರೆ, ಗೇರುಸೊಪ್ಪೆ ಮುಂತಾದ ಕ್ಷೇತ್ರಗಳಲ್ಲಿ ಶಿಕ್ಷಣ ಮತ್ತು ವಿದ್ಯಾಕೇಂದ್ರಗಳಿದ್ದವು. ಕನ್ನಡದ ಆದಿಗ್ರಂಥ ಕವಿರಾಜಮಾರ್ಗಕಾರ, ಆದಿಕವಿ ಪಂಪ, ಪೊನ್ನ, ರನ್ನ, ಜನ್ನ, ಚಾವುಂಡರಾಯ, ಅಗ್ಗಳ, ಸಾಳ್ವ, ನಯಸೇನ, ನೇಮಿಚಂದ್ರ, ರತ್ನಾಕರ, ಆಂಡಯ್ಯ ಪ್ರಮುಖ ಕವಿಗಳು ಹಾಗೂ ಸಮಂತಭದ್ರರು, ಭಟ್ಟಾಕಲಂಕರು, ಪೂಜ್ಯಪಾದರು, ಸಿಂಹನಂದಿಗಳೇ ಮುಂತಾದ ಪ್ರಮುಖ ಆಚರ‍್ಯರುಗಳು ಬರೆದಿರುವ ಮಹಾಕಾವ್ಯಗಳು, ಪುರಾಣಗಳು, ಸಿದ್ಧಾಂತಗಳು ಅಷ್ಟಿಷ್ಟಲ್ಲ, ಹೀಗೆ ಕನ್ನಡ ಸರಸ್ವತಿಯನ್ನು ಜೈನರು ಅನೇಕ ಗ್ರಂಥಗಳಿಂದ ಅಲಂಕರಿಸಿದ್ದಾರೆ. ಧರ್ಮ ಪ್ರಸಾರದೊಂದಿಗೆ ಸಾಹಿತ್ಯ ಸೇವೆ ಗೈದವರಲ್ಲಿ ಜೈನಮಹಿಳೆಯರು ದಾನಚಿಂತಾಮಣಿಗಳೆನಿಸಿದ್ದಾರೆ. ಸಂಗೀತ, ನೃತ್ಯ ಪ್ರವೀಣರೆನಿಸಿ, ವೀರ ರಮಣಿಗಳೆನಿಸಿ, ಸ್ತ್ರೀ ಸಮುದಾಯಕ್ಕೆ ಆದರ್ಶಪ್ರಾಯರಾದ ಅತ್ತಿಮಬ್ಬೆ, ಮಲ್ಲಿಕಬ್ಬೆ, ಜಕ್ಕೆಯಬ್ಬೆ, ರಾಣೀ ಶಾಂತಲಾದೇವಿ ಮುಂತಾದವರು ಜೈನ ನಾರೀರತ್ನಗಳಾಗಿದ್ದಾರೆ..ಜೈನರೇ ಕನ್ನಡ ಭಾಷೆಯ ಆದಿಕವಿಗಳು, ಎಲ್ಲ ಪ್ರಾಚೀನ ಉತ್ತಮ ಕೃತಿಗಳು ಜೈನಕವಿಗಳದ್ದೆ ಆಗಿವೆ. ಕನ್ನಡ ಭಾಷೆಯ ಸೌಂಧರ‍್ಯವೂ, ಕಾಂತಿಯೂ ಹೆಚ್ಚಲು ಜೈನಕವಿಗಳೇ ಕಾರಣ. ಪಂಪ, ರನ್ನ, ಪೊನ್ನರು ಕವಿಗಳಲ್ಲಿ ರತ್ನತ್ರಯರೇ ಆಗಿರುವರು. ಹದಿನಾಲ್ಕನೇ ಶತಮಾನದವರಗೆ ಕನ್ನಡ ಭಾಷೆಯ ಸಹಾಯಕ ಗ್ರಂಥಗಳಾದ ಛಂದಸ್ಸು, ಅಲಂಕಾರ, ವ್ಯಾಕರಣ, ಕೋಶ ಮೊದಲಾದ ಗ್ರಂಥಗಳು ಜೈನರಿಂದಲೇ ರಚಿತವಾದವು ಎಂದು ದಿ. ಆರ್. ನರಸಿಂಹಾಚರ‍್ಯರು ತಮ್ಮ ಕರ್ಣಾಟಕ ಕವಿಚರಿತೆಯಲ್ಲಿ ಬರೆದಿರುವರು; ಇದು ಜೈನರು ಕನ್ನಡ ಭಾಷೆಗೆ ನೀಡಿದ ಮಹತ್ತರ ಕೊಡುಗೆಯನ್ನು ಎತ್ತಿಹಿಡಿಯುತ್ತದೆ.ಕನ್ನಡ ಜೈನ ನೋಂಪಿ[ವ್ರತ]ಕಥೆಗಳು:ಜೈನಧರ್ಮದಲ್ಲಿ ಪರಿಪಾಲಿಸಲ್ಪಡುವ ನೋಂಪಿ[ವ್ರತ-ಉಪವಾಸ]ಗಳು ಮತ್ತು ಅವುಗಳಿಂದ ವ್ಯಕ್ತಿಗೆ ದೊರಕುವ ಆತ್ಮಶುದ್ಧಿ. ಸಂಯಮ ಹಾಗೂ ಕರ್ಮಕ್ಷಯದ ಫಲಗಳನ್ನು ವಿವರಿಸುವ ಧಾರ್ಮಿಕ-ನೈತಿಕ ಕಥಾನಕಗಳಾಗಿವೆ. ಈ ಕಥೆಗಳು ಜೈನಧರ್ಮದ ತಾತ್ವಿಕ ಅಂಶಗಳನ್ನು ಸರಳ ಕಥನರೂಪದಲ್ಲಿ ಜನಸಾಮಾನ್ಯರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿವೆ ಎಂದು ಹೇಳಬಹುದು. ವಿಷಯ, ಪಾತ್ರ ಮತ್ತು ಉದ್ದೆಶಗಳ ಆಧಾರದ ಮೇಲೆ ನೋಂಪಿ ಕಥೆಗಳನ್ನು ಕೆಳಕಂಡ ವಿಧಗಳಲ್ಲಿ ವಿಂಗಡಿಸಬಹುದು:೧. ಪಾತ್ರಾಧಾರಿತ ವಿಂಗಡಣೆ: ಸ್ತ್ರೀ, ಪುರುಷ, ರಾಜ, ಯೋಧ, ವ್ಯಾಪಾರಿ, ಮಕ್ಕಳು ಮುಂತಾದ ಪಾತ್ರಗಳನ್ನು ಕೇಂದ್ರವಾಗಿಟ್ಟುಕೊಂಡ ಕಥೆಗಳು, ಇವುಗಳಲ್ಲಿ ಗೃಹಸ್ಥ ಜೀವನ ಮತ್ತು ಧರ್ಮಾಚರಣೆ ಪ್ರಮುಖವಾಗಿರುತ್ತದೆ.೨. ವಿಷಯಾಧಾರಿತ ವಿಂಗಡಣೆ: ಪಾಪದಿಂದ ಪಶ್ಚಾತ್ತಾಪಕ್ಕೆ ಹೋಗುವ, ದುಃಖದಿಂದ ಧರ್ಮದತ್ತ ಸಾಗುವ, ವೈರಾಗ್ಯ ಮತ್ತು ತ್ಯಾಗದ ಕಥೆಗಳು ಈ ವಿಭಾಗಕ್ಕೆ ಸೇರುತ್ತವೆ.೩. ಫಲಾಪೇಕ್ಷಾಧಾರಿತ ವಿಂಗಡಣೆ: ಐಹಿಕ ಫಲ[ಸಂತಾನ, ಆರೋಗ್ಯ, ಸಂಪತ್ತು] ಪಡೆಯುವ ಉದ್ದೇಶದ ಮತ್ತು ಆತ್ಮಶುದ್ಧಿ-ಮೋಕ್ಷದಂತಹ ಅಧ್ಯಾತ್ಮಿಕ ಫಲವನ್ನು ಗುರಿಯಾಗಿಟ್ಟುಕೊಂಡ ಕಥೆಗಳು. *೪. ಧರ್ಮತತ್ತ್ವಾಧಾರಿತ* *ವಿಂಗಡಣೆ:* ಅಹಿಂಸೆ, ಅಸ್ತೇಯ, ಬ್ರಹ್ಮರ‍್ಯೆ, ಅಪರಿಗ್ರಹ, ಕ್ಷಮೆ ಮುಂತಾದ ಜೈನತತ್ತ್ವಗಳನ್ನು ಬೋಧಿಸುವ ಕಥೆಗಳು.೫ *. ಸಾಹಿತ್ಯಿಕ ಸ್ವರೂಪದ ಆಧಾರಿತ* ವಿಂಗಡಣೆ: ಸರಳ ಜನಪದ ಶೈಲಿ, ಉಪದೇಶಾತ್ಮಕ, ಪುರಾಣಾಧಾರಿತ ಹಾಗೂ ರೂಪಕಾತ್ಮಕ ನೋಂಪಿಕಥೆಗಳು.೬. *ಗುರಿ ವಾಚಕರ ಆಧಾರಿತ* ವಿಂಗಡಣೆ: ಮಕ್ಕಳಿಗಾಗಿ, ಗೃಹಸ್ಥರಿಗಾಗಿ ಮತ್ತು ಸಾಧು-ಸಾಧ್ವಿಗಳಿಗೆ ಉದ್ದೇಶಿಸಿದ ಕಥೆಗಳು.ಈ ರೀತಿ ಜೈನನೋಂಪಿ ಕಥೆಗಳು ಧಾರ್ಮಿಕ ಆಚರಣೆಗೂ ಜೊತೆಗೆ ನೈತಿಕ ಜೀವನದ ಮಾರ್ಗದರ್ಶನ ನೀಡುವ ಕಾರಣದಿಂದ ವಿವಿಧ ವಿಧಗಳಲ್ಲಿ ವಿಂಗಡಿಸಬಹುದಾದ ಸಮೃದ್ಧ ಸಾಹಿತ್ಯ ಪರಂಪರೆಯಾಗಿದೆ ಎಂದು ಹೇಳಬಹುದು.ಕನ್ನಡ ಜೈನಸಾಹಿತ್ಯದಲ್ಲಿ ನೋಂಪಿಕಥೆಗಳು ತೀರ್ಥಂಕಕರರ ಜೀವನ, ಶ್ರಾವಕ-ಶ್ರಾವಿಕೆಯರ ತಪಸ್ಸು, ರಾಜರು ಮತ್ತು ಸಾಮಾನ್ಯ ಜನರು ನೋಂಪಿ ಪಾಲನೆಯ ಮೂಲಕ ಸತ್ಸಂಸ್ಕಾರಗಳಿಸಿದ ಘಟನೆಗಳನ್ನು ಒಳಗೊಂಡಿರುತ್ತವೆ. ವಿಶೇಷವಾಗಿ ಪರ್ಯುಷಣ [ಜೈನಧರ್ಮದ ಅತ್ಯಂತ ಪವಿತ್ರ ಹಾಗೂ ಮಹತ್ವದ ಧಾರ್ಮಿಕ ಆಚರಣೆಯಾಗಿದ್ದು, ಶ್ವೇತಾಂಬರರಲ್ಲಿ ಎಂಟುದಿನ, ದಿಗಂಬರರಲ್ಲಿ ಹತ್ತು ದಿನಗಳ ಕಾಲ – ಉಪವಾಸ, ಏಕಾಸನ, ನಿಯಮಿತ ಆಹಾರ ಆತ್ಮಪರಿಶೀಲನೆಯೊಂದಿಗೆ ಆತ್ಮಶುದ್ಧಿ, ಪಾಪಕ್ಷಮೆ ಯಾಚನೆ, ಸ್ವಯಂ ಸಂಯಮ ಸಾಧಿಸುವುದಾಗಿದೆ], ವರ್ಷೀತಪ [ಜೈನಧರ್ಮದ ಅತ್ಯಂತ ಕಠಿಣ ತಪಸ್ಸುಗಳಲ್ಲಿ ಒಂದಾಗಿದ್ದು, ಸುಮಾರು ಹದಿಮೂರು ತಿಂಗಳು, ಹದಿಮೂರು ದಿನಗಳ ಕಾಲ – ಒಂದು ದಿನ ಉಪವಾಸ ಅದರ ಮುಂದಿನ ದಿನ ಏಕಾಸನಗೈಯುತ್ತ ಕರ್ಮಕ್ಷಯ, ಇಂದ್ರಿಯ ನಿಗ್ರಹ ಹಾಗೂ ಆತ್ಮೋದ್ಧಾರ ಹೊದುವುದು ಮುಖ್ಯ ಉದ್ದೇಶವಾಗಿದೆ], ಏಕಾಸನ [ದಿನಕ್ಕ ಒಂದೇ ಸಮಯ, ಒಂದೇ ಸ್ಥಳದಿ ಆಸನ ಬದಲಿಸದೆ ಮಿತಆಹಾರ ಸೇವಿಸುವುದರೊಂದಿಗೆ ಮನಸ್ಸಿನ ಓಟಕ್ಕೆ ಅಥವಾ ಆಸೆಗೆ ಕಡಿವಾಣ ಹಾಕುವುದು, ಶಿಸ್ತು ಮತ್ತು ಸಂಯಮವನ್ನು ರೂಢಿಸಿಕೊಳ್ಳುವುದು ಮುಖ್ಯ ಉದ್ದೇಶವಾಗಿದೆ], ಉಪವಾಸ[ಆಹಾರ ತ್ಯಾಗ: ಏಕೋಪವಾಸ– ಒಂದುದಿನ, ಅಠ್ಠಮ– ಮೂರುದಿನ, ಮಾಸಾಕ್ಷಣ ಮೂವತ್ತು ದಿನ ಬರೀ ನೀರು ಕುಡಿಯುತ್ತಾ.., ಅದೂ ಇಲ್ಲದೇ ನಡೆಸುವ ವ್ರತಾಚರಣೆಯಾಗಿದ್ದು, ದೇಹಕ್ಕಿಂತ ಆತ್ಮಕ್ಕೆ ಮಹತ್ತು ನೀಡುವುದು, ಕರ್ಮಬಂಧನ ಕಡಿಮೆಮಾಡಿಕೊಳ್ಳುವುದು ಇದರ ಮುಖ್ಯ ಉದ್ದೆಶವಾಗಿದೆ] ಈ ಮೊದಲಾದ ನೋಂಪಿಗಳ ಕಥನಗಳು ಹೆಚ್ಚಾಗಿ ಕಂಡುಬರುತ್ತವೆ.ವೈದಿಕ – ಜೈನ ಪ್ರತಿರೋಧ:ಬಿಡಲಾರದ ನೋಂಪಿ[ವ್ರತ]ಗಳು– ಅಹಿಂಸಾತತ್ತ್ವಪರಿಪಾಲನೆಯಿಂದಲೇ ಮಾನವರಿಗೆ ಮುಕ್ತಿ:ಸೋಮಶರ್ಮಭಟ್ಟ ವೈದಿಕ ಕರ್ಮಗಳನ್ನು ತಪ್ಪದೆ ಆಚರಿಸುತ್ತಿದ್ದ ನಿಷ್ಠಧಾರ್ಮಿಕ ವ್ಯಕ್ತಿ. ಅವನಿಗೆ ಸದ್ಗುಣಸಂಪನ್ನೆಯಾದ ನಾಗಶ್ರೀ ಎಂಬ ಮಗಳಿದ್ದಳು. ಹೀಗೆ ಒಮ್ಮೆ ಆ ಊರಿಗೆ ಸರ‍್ಯಮಿತ್ರಾಚರ‍್ಯರೆಂಬ ಜೈನಮುನಿಗಳು ಬಂದು ಪ್ರತಿದಿನ ಪ್ರವಚನಗಳನ್ನು ನೀಡಿ ಅನೇಕ ಬಗೆಯ ಧರ್ಮೋಪದೇಶಗಳನ್ನು ನೀಡುತ್ತಿದ್ದರು. ಆ ಪ್ರವಚನಗಳನ್ನು ಕೇಳಿದ ನಾಗಶ್ರೀ ಪ್ರಭಾವಿತಳಾಗಿ ಗುರುಗಳಲ್ಲಿ ತನಗೂ ವ್ರತಗಳನ್ನು ನೀಡುವಂತೆ ಕೇಳಿಕೊಂಡಳು; ಚತುರೆ-ಬುದ್ಧಿವಂತೆಯಾದ ನಾಗಶ್ರೀ ವ್ರತಗಳನ್ನು ಪಾಲಿಸಬಲ್ಲಳು ಎಂದೆಣಿಸಿದ ಗುರುಗಳು– ಅಹಿಂಸೆ, ಸತ್ಯ, ಅಸ್ತೇಯ [ಕಳ್ಳತನ ಮಾಡದಿರುವುದು], ಬ್ರಹ್ಮರ‍್ಯ ಮತ್ತು ಅಪರಿಗ್ರಹ [ದುರಾಸೆಯನ್ನು ಮಾಡದಿರುವುದು] ವ್ರತಗಳನಿತ್ತರು. ಭಕ್ತಿ-ಭಾವದಿಂದ ಸ್ವೀಕರಿಸಿದ ನಾಗಶ್ರೀ ಮನೆಗೆ ಬಂದಳು. ವಿಷಯ ತಿಳಿದ ಸೋಮಶರ್ಮಭಟ್ಟ ಮಗಳೇ, ನಾವು ಬ್ರಾಹ್ಮಣರು, ಜಗತ್ತಿನಲ್ಲಿ ಶ್ರೇಷ್ಠರಾದವರು, ನಾವು ಜೈನರ ವ್ರತಗಳನ್ನು ಪರಿಗ್ರಹಿಸಬಾರದು, ವ್ರತಗಳನ್ನು ಮರಳಿಸುವಂತೆ ತಂದೆಯು ಸೂಚಿಸಲು, ನೀವೂ ನನ್ನ ಜೊತೆಬನ್ನಿ ಎಂದು ಮುನಿಗಳ ಬಳಿಗೆ ಕರೆದೊಯ್ಯುವಾಗ ದಾರಿ ಮಧ್ಯೆ ನಡೆದ ಘಟನಾವಳಿಗಳೂ ಕಥೆಗೆ ಮುಖ್ಯತಿರುವನ್ನು ನೀಡುತ್ತವೆ.ಅವು ಇಂತಿವೆ: ಬಂಧಿತ ಕೊಲೆಪಾತಕ–ಅಹಿಂಸಾ ವ್ರತ, ಬಂಧಿತ ಸುಳ್ಳುಗಾರ-ಜನರನ್ನು ವಂಚಿಸುವವ- ಸತ್ಯವ್ರತ, ಬಂಧಿತ ಕಳ್ಳ– ಅಸ್ತೇಯ ವ್ರತ, ಬಂಧಿತ ಮೋವಾಳಿ ಹೆಂಗಸು ಮತ್ತು ನಾಗಸೂರ ವರ್ತಕನ ಮಗ– ವ್ಯಭಿಚಾರ-ಪರಪುರುಷನ ಸ್ನೇಹ ತಪ್ಪು- ಬ್ರಹ್ಮಚರ‍್ಯೆ ವ್ರತ, ಬಂಧಿತ ದುರಾಸೆಯ ವ್ಯಕ್ತಿ– ಅಪರಿಗ್ರಹ ವ್ರತ, ಕೊನೆಗೆ ತಂದೆಯು ಮಗಳ ಎಲ್ಲ ವ್ರತಗಳನ್ನು ಆಚರಿಸಲು ಒಪ್ಪಿದ. ಮಗಳು ಮುನಿಗಳ ಬಳಿಗೆ ಬಂದು ನಡೆದ ವೃತ್ತಾಂತವನ್ನೆಲ್ಲ ಹೇಳಿದಳು; ಆಗ ಮುನಿಗಳು ಬ್ರಾಹ್ಮಣ ಧರ್ಮವಾದರೇನು? ಸೂಕ್ಷ್ಮವಾಗಿ ಅವಲೋಕಿಸಿದರೆ ಸತ್ಯಧರ್ಮವೇ ಧರ್ಮ! ಅಂತಹ ಧರ್ಮ ಆತ್ಮನಿಷ್ಟವಾದದ್ದು, ಧರ್ಮವನ್ನು ಜಾತಿಯಿಂದ ಪರಿಗಣಿಸಿದಾಗ ವ್ಯಕ್ತಿನಿಷ್ಟವಾಗಿ ರಾಗಾದ್ವೇಷಾದಿಗಳು ಉದ್ಭವಿಸುವುವು, ಈ ಪಂಚಾಣುವ್ರತಗಳು ಯಾವ ಧರ್ಮಕ್ಕೆ ತಾನೇ ವಿರೋಧ? ಜಗತ್ತಿನ ಸಕಲ ಜನರೂ ಅನುಸರಿಸಲು ಯೋಗ್ಯವಾದವುಗಳು; ಜಿನಪೂಜೆಗೆ ಅಡ್ಡಿಮಾಡಿದವರು ತಿರುಕರಾಗಿ ಅನ್ನಅನ್ನ ಎಂದು ಬಾಯಿ ಬಿಡಬೇಕಾಗುವುದು, ಜಿನಧರ್ಮವನ್ನು ದೂಷಿಸುವವರು ಕುಷ್ಠರೋಗಕ್ಕೆ ತುತ್ತಾಗುವರು, ಅನ್ನದಾನಕ್ಕೆ ಅಡ್ಡಿಮಾಡಿದವರು ಹಸಿವಿನಿಂದ ಕಂಗಾಲಾಗುವರು; ಬಡವನ ಸುಖ, ಹೇಡಿಯ ಕೋಪ, ಮುಗಿಲ ನೆಳಲು, ಪ್ರಿಯರ ಮುನಿಸು, ಮಹಾಮೂರ್ಖರ ತಪಸ್ಸು ಇವಾವೂ ಸ್ಥಿರವಲ್ಲ; ಶ್ರೀಶೇಣನು ದಾನಮಾಡಿದ ಮಹಾಪುಣ್ಯದಿಂದಲೇ ಮುಂದೆ ಶಾಂತಿನಾಥ ತೀರ್ಥಂಕರ ನಾಗಲಿಲ್ಲವೇ? ಆಹಾರ, ಅಭಯ, ಔಷಧಿ ಮತ್ತು ಶಾಸ್ತ್ರದಾನಗಳು ಗೃಹಸ್ಥರಿಗೆ ಅನಂತ ಸಿರಿಯ ವ್ಯವಸಾಯದಲ್ಲಿ ಬಿತ್ತಬೇಕಾದ ಗಟ್ಟಿ ಬೀಜಗಳಾಗಿವೆ ಎಂದು ಅನೇಕ ವಿಧದಿಂದ ಬೋಧಿಸಿದರು.ಪೂರ್ವಭವದ ಸ್ಮರಣೆ – ಜನ್ಮಾಂತರಗಳ ಕಥೆ:ಭಗವಾನ್ ಮಹಾವೀರ ತೀರ್ಥಂಕರರ ವಿಹಾರ ಮಗಧ ದೇಶದಲ್ಲಿ ನಡದಿತ್ತು, ರಾಜಗೃಹ ಅದರ ರಾಜಧಾನಿಯಾಗಿದ್ದು, ಶ್ರೇಣುಕನೆಂಬ ಮಹಾರಜ ರಾಜ್ಯಭಾರ ಮಾಡುತ್ತಿದ್ದನು. ಅದೇ ನಗರದಲ್ಲಿ ನಾಗದತ್ತನೆಂಬ ಧನಿಕ ಆತನ ಹೆಂಡತಿ ಭವದತ್ತೆ ದಂಪತಿಗಳಿಬ್ಬರೂ ಧರ್ಮಮಾರ್ಗದಲ್ಲೇ ನಡೆಯುತ್ತಿದ್ದರು. ಆದರೆ ಕಾಲಗರ್ಭದಲ್ಲಿ ಏನ್ ಅಡಗಿದೆಯೋ ಬಲ್ಲವರಾರು? ನಾಗದತ್ತ ಅಕಾಲಿಕ ಮರಣಕ್ಕೆ ತುತ್ತಾದ, ಹೆಂಡತಿಯ ಮೇಲಿನ ವ್ಯಾಮೋಹದಿಂದ ಮೃತ್ಯುವಶನಾದ ನಾಗದತ್ತ ಮರುಜನ್ಮದಿ ಕಪ್ಪೆಯಾಗಿ ಹುಟ್ಟಿದ. ತನ್ನ ಮನೆಯ ಹಿತ್ತಲಿನ ಬಾವಿಯೇ ಆವಾಸಸ್ಥಾನವಾಗಿತ್ತು. ದಿನದಿನವೂ ಸೊರಗುತ್ತಿತ್ತು, ಆ ಬಾವಿಯಿಂದ ಹೊರಬರಲಾರದೆ ತಳಮಳಿಸುತ್ತಿತ್ತು.ಒಂದು ದಿನ ಅಚಾನಕ್ಕಾಗಿ ಬಾವಿಯಿಂದ ನೀರು ಸೇದುವಾಗ ಬಿಂದಿಗೆಯೊಳಕ್ಕೆ ತೂರಿ ಹೊರಕ್ಕೆ ಬಂದುಬಿಟ್ಟಿತು.., ಕುಪ್ಪಳಿಸುತ್ತಾ ಕುಪ್ಪಳಿಸುತ್ತಾ ಮನೆಯೊಳಕ್ಕೆ ಸೇರಿಕೊಂಡಿತು, ಹೆಂಡತಿ ಭವದತ್ತೆಯನ್ನು ಕಂಡಕೂಡಲೇ ಪ್ರೀತಿಯಿಂದ ಆಕೆಯ ಮೇಲೆ ಜಿಗಿಯುತ್ತ ಜಿಗಿಯುತ್ತಾ ಹೋಯಿತು ಹೆದರಿದ ಆಕೆಯ ಮನೆಯಿಂದ
ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಮರುಕಳಿಸುತಿದೆ”
ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಮರುಕಳಿಸುತಿದೆ” ಇತಿಹಾಸ ಮತ್ತೆಮರುಕಳಿಸುತ್ತಿದೆಯುದ್ಧವೆಂದರೆಕೇವಲ ಸಾವು ನೋವಿನಲೆಕ್ಕವಲ್ಲಭೂಮಿ ಆಕ್ರಮಣವಲ್ಲಬಲಿಷ್ಟರನ್ನು ಬಗ್ಗು ಬಡಿದುಗುಲಾಮರನ್ನಾಗಿ ಮಾಡುವುದಲ್ಲ ಮನುಷ್ಯ ಮನುಷ್ಯರ ಮಧ್ಯೆಹಗೆತನದ ಗೋಡೆ ನಿರ್ಮಾಣಒಂದಾಗದ ಜನರ ಕಿಚ್ಚುಬೂದಿಯಾಗುವುದು ಭೂಮಿಸುತ್ತಲೂ ಬಾಂಬ್ ಸಪ್ಪಳಕ್ಷಿಪಣಿಗಳ ಹಾರಾಟಎಳೆಯ ಮಕ್ಕಳು ಕುಳಿತಲ್ಲಿಯೇಜೀವ ಬಿಟ್ಟಿದ್ದಾರೆನಾಗಾಸಾಕಿ ಹಿರೋಶಿಮಾದಕುರುಡು ಕೆಪ್ಪರ ಭೀತಿರಾತ್ರಿ ಈಸ್ಟರ್ ನ ಭರ್ಜರಿ ಭೋಜನಬೆಳಿಗ್ಗೆ ರಕ್ತ ಕಾರಿ ಸತ್ತರುಗಡಿವಲಯದ ಗ್ರಾಮಗಳುಶೆಲ್ ದಾಳಿಗೆ ಸುಟ್ಟು ಕರಕಲುಮಕ್ಕಳ ಮಹಿಳೆಯರ ಅರಚಾಟಫೋನಿನ್ ಗಂಟೆ ಬಾರಿಸಿದಾಗಲೆಲ್ಲಹೆದರುತ್ತಾರೆ ಮಡದಿ ಮಕ್ಕಳುಮಸಣದ ಗುಂಡಿಗಳ ನೆನಪುದಾರಿಯುದ್ದಕ್ಕೂ ಬಿದ್ದಿವೆಎಲವು ಡೌವುಗಿಗಳುಕೊಂದವರ ಅಟ್ಟಹಾಸಸತ್ತವರ ಶೋಕ ಸಭೆ ಪ್ರತಿಭಟನೆ. ಒಮ್ಮೆ ಕೇಳಬೇಕಿದೆಕಳಿಂಗ ಗೆದ್ದ ಮೇಲೂವಿರಕ್ತನದ ಅಶೋಕನನ್ನುಜಗವೇ ಗೆಲ್ಲಲು ಹೋಗಿಹೆಣದ ಪೆಟ್ಟಿಗೆಯಲ್ಲಿ ಮಲಗಿದಅಲೆಕ್ಸಾಂಡರ್ ಚಕ್ರವರ್ತಿಯನ್ನುಗುಲಗಂಚಿ ಕಣ್ಣಿನ ಜಗದಂಬೆಯನ್ನುಏಕೆ ಈ ಯುದ್ಧ ?ಯಾವ ಸಾಹಸ ಸ್ವಾರ್ಥಕೆಪ್ರಾಣಿ ಪಶು ಪಕ್ಷಿಗಳುಒಂದಾಗುವ ಸಮಯದಲ್ಲಿಮನುಷ್ಯ ಮನುಷ್ಯರ ಕೊಲ್ಲುವಯುದ್ಧ ರಣ ನೀತಿಕೇಳ ಬೇಕಿದೆ ಒಮ್ಮೆಬುದ್ಧ ಬಸವ ಏಸು ಮಹಮ್ಮದರನ್ನುಗೆದ್ದು ಬೀಗಿದವರನ್ನುಸೋತು ಸತ್ತವರನ್ನುವಿಶ್ವ ಯುದ್ಧಕ್ಕೆ ಸಿದ್ಧರಾದವರನ್ನುಏಕೆ ಬೇಕು ಈ ಯುದ್ಧ?ಮತ್ತೆ ಮತ್ತೆ ಇತಿಹಾಸಮರುಕಳಿಸಬಹುದುಕನಸುಗಳು ಪುಡಿಯಾಗುವವುಹಿಟ್ಲರ್ ಬೈಬಲ್ ಓದುತ್ತಿರುವವನುನಾಳೆ ಏನಾಗುವುದೋ ಗೊತ್ತಿಲ್ಲಇಂದು ಮಲಗೋಣಬದುಕುಳಿದರೆ ನಾಳೆ ಇರೋಣಇಲ್ಲಾ ಇಂದೇ ಆಲ್ ವಿದಾ ಚರಮಗೀತೆ ಹಾಡೋಣ ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಮರುಕಳಿಸುತಿದೆ” Read Post »
“ಬಣ್ಣಗಳ ಹಬ್ಬ…. ಹೋಳಿ” ವಿಶೇಷ ಲೇಖನ ವೀಣಾ ಹೇಮಂತ್ ಗೌಡಪಾಟೀಲ್
ಬಣ್ಣದ ಸಂಗಾತಿ ವೀಣಾ ಹೇಮಂತ್ ಗೌಡಪಾಟೀಲ್ “ಬಣ್ಣಗಳ ಹಬ್ಬ…. ಹೋಳಿ” ಒಂದು ಕ್ಷಣ ಕಣ್ಣು ಮುಚ್ಚಿಕೊಂಡು ಈ ಜಗತ್ತನ್ನು ಕಲ್ಪನೆ ಮಾಡಿಕೊಳ್ಳಿ ಎಲ್ಲವೂ ಕೇವಲ ಬಿಳಿ ಇಲ್ಲವೇ ಕೇವಲ ಕಪ್ಪು ಬಣ್ಣವನ್ನು ಹೊಂದಿದ್ದರೆ ಹೇಗಿರುತ್ತದೆ ಎಂದು???. ಬೆಳ್ಳನೆಯ ಮೋಡ, ಬೆಳ್ಳನೆಯ ವಿಶಾಲ ಸಮುದ್ರ, ಬೆಳ್ಳನೆಯ ಗಿಡ ಮರಗಳು, ಬೆಳ್ಳನೆಯ ರಸ್ತೆಗಳು, ಬೆಳ್ಳನೆಯ ದೇಹದ ಆಕೃತಿಗಳು ಅಬ್ಬಬ್ಬಾ ಯಾವುದೂ ಚೆನ್ನಾಗಿರುವುದಿಲ್ಲ. ಅಷ್ಟರಲ್ಲಿಯೇ ಕಪ್ಪು ಮತ್ತು ಬಿಳಿ ಎರಡು ಬಣ್ಣಗಳನ್ನು ಕೂಡಿಸಿದ ಬಣ್ಣ ತುಸು ಹೆಚ್ಚೇ ಮನಮೋಹಕ ಎನಿಸುತ್ತದೆ.ಆದರೆ ಹಲವಾರು ಬಣ್ಣಗಳನ್ನು ಹೊಂದಿರುವ ಈ ಪ್ರಕೃತಿ ಅತ್ಯಂತ ಸುಂದರ, ನಯನ ಮನೋಹರವಾಗಿರುತ್ತದೆ. ಬಣ್ಣವಿಲ್ಲದ ಬದುಕು ಬರಡು ಎನಿಸುತ್ತದೆ. ಆಕಾಶದಲ್ಲಿ ತಿಳಿ ನೀಲಿ ಮೋಡಗಳು ಮತ್ತು ಕಪ್ಪು ಮೋಡಗಳು, ಹಸಿರು ಹಾಸಿದ ಗಿಡಮರಗಳು, ಆಕಾಶದ ನೀಲಿಯನ್ನೇ ಹೊದ್ದ ತಿಳಿ ನೀಲ ಸಾಗರ, ಕಪ್ಪನೆಯ ಟಾರು ರಸ್ತೆಗಳು, ಬೆಳ್ಳನೆಯ ಬೆಳ್ಳಕ್ಕಿಗಳು, ವಿಧವಿಧ ಬಣ್ಣದ ಪಕ್ಷಿಗಳು, ಪ್ರಾಣಿಗಳು ಹೀಗೆ ಬಣ್ಣಮಯ ಲೋಕ ನಮ್ಮದು. ಈ ಬಣ್ಣ ಬಣ್ಣದ ಲೋಕವನ್ನು ಬಣ್ಣಿಸಲು ಪದಗಳು ಸಾಲದಾಗುತ್ತವೆ ಎಂದರೆ ಅದು ಅತಿಶಯೋಕ್ತಿಯೇನಲ್ಲ!! ಬಣ್ಣಗಳು ಕೂಡ ನಮ್ಮ ಮನಸ್ಸಿನ ಭಾವಗಳನ್ನು ಸೂಚಿಸುತ್ತವೆ. ನಮ್ಮ ಮನಸ್ಸು ಅತ್ಯಂತ ಉದಾಸ ಸ್ಥಿತಿಯಲ್ಲಿದ್ದಾಗ ಊದಾ ಬಣ್ಣದ ಗೋಡೆಗಳು ಇಷ್ಟವಾದರೆ ತಿಳಿ ನೀಲಿ ಮತ್ತು ತಿಳಿ ಹಸಿರು ಬಣ್ಣ ಕಣ್ಣಿಗೆ ಮತ್ತು ಮನಸ್ಸಿಗೆ ಹಿತವನ್ನು ನೀಡುತ್ತವೆ. ಕೆಂಪು ಗುಲಾಬಿಯ ಬಣ್ಣ ಪ್ರೀತಿಯ ದೋತಕವಾದರೆ ಬಿಳಿ ಶಾಂತಿಯ ಸೂಚಕ. ಹಳದಿ ಬಣ್ಣ ಸ್ನೇಹವನ್ನು ಸೂಚಿಸಿದರೆ ಹಸಿರು ಸಮೃದ್ಧಿಯ ಸಂಕೇತ. ಹಲವಿಧದ ಬಣ್ಣಗಳನ್ನು ತನ್ನ ಗರಿಗಳಲ್ಲಿ ಅಡಗಿಸಿಕೊಂಡಿರುವ ನವಿಲು ನಮ್ಮ ರಾಷ್ಟ್ರ ಪಕ್ಷಿ. ಬಣ್ಣಗಳು ಭಾವನೆಗಳನ್ನು ಅರಳಿಸುತ್ತವೆ…. ಅಂತೆಯೇ ಬಣ್ಣದ ಹಬ್ಬವು ಕೂಡ. ಕೆಲ ಹಬ್ಬಗಳಲ್ಲಿ ಧಾರ್ಮಿಕ ವಿಧಿ ವಿಧಾನಗಳು ಪ್ರಮುಖ ಪಾತ್ರವನ್ನು ವಹಿಸಿದರೆ ಮತ್ತೆ ಕೆಲ ಹಬ್ಬಗಳಲ್ಲಿ ನಮ್ಮಲ್ಲಿ ಅಡಗಿ ಕುಳಿತಿರುವ ತುಂಟತನ, ಪೋಲಿತನಗಳನ್ನು ಹೊರ ಹಾಕುವ ಹಬ್ಬವಾಗಿರುತ್ತದೆ.ಪ್ರತಿ ವರ್ಷ ಹೋಳಿ ಹುಣ್ಣಿಮೆಯ ಆಸುಪಾಸಿನಲ್ಲಿ ಜರುಗುವ ಈ ಬಣ್ಣದ ಹಬ್ಬ ನಮ್ಮ ಬದುಕಿಗೆ ನವ ಚೈತನ್ಯವನ್ನು ತರುತ್ತದೆ ಎಂದರೇ ಅಚ್ಚರಿಯೇನಲ್ಲ. ಪೌರಾಣಿಕ ಐತಿಹ್ಯಗಳ ಪ್ರಕಾರ ಶಿವನ ಪತ್ನಿಯಾದ ಸತಿ ದೇವಿಯು ತನ್ನ ತಂದೆ ದಕ್ಷ ರಾಜನು ನಡೆಸುತ್ತಿದ್ದ ಯಜ್ಞಕ್ಕೆ ಆಹ್ವಾನವಿಲ್ಲದೆ ಹೋಗುವುದು ಬೇಡ ಎಂಬ ಗಂಡನ ಆಣತಿಯನ್ನು ಮೀರಿ ತವರು ಮನೆಯ ಕಾರ್ಯಕ್ರಮವೆಂದು ಹೋಗಿ ಅಲ್ಲಿ ತನ್ನ ತಂದೆಯಿಂದಲೇ ಅವಮಾನಿತಳಾಗಿ ಯಜ್ಞ ಕುಂಡದಲ್ಲಿ ಹಾರಿ ಪ್ರಾಣ ಬಿಡುತ್ತಾಳೆ. ಪತ್ನಿಯನ್ನು ಕಳೆದುಕೊಂಡ ಮಹಾದೇವ ರೌದ್ರಾವೇಶದಿಂದ ಆಕೆಯ ದೇಹವನ್ನು ಹೊತ್ತು ತಿರುಗುತ್ತಿದ್ದಾಗ ಆತನ ಆವೇಶಕ್ಕೆ ಇಡೀ ಪ್ರಪಂಚ ನಡುಗುತ್ತಿತ್ತು. ಶಿವನ ಕೋಪವು ವೈಪರೀತ್ಯಕ್ಕೆ ತಿರುಗಬಾರದು ಎಂಬ ಕಾರಣದಿಂದ ಮಹಾವಿಷ್ಣು ತನ್ನ ಸುದರ್ಶನ ಚಕ್ರವನ್ನು ಬಳಸಿ ಸತಿ ದೇವಿಯ ದೇಹವನ್ನು ಚಿದ್ರಗೊಳಿಸಿದನು. ಈಗಾಗಲೇ ಸುಟ್ಟು ಹೋದ ಆಕೆಯ ದೇಹದ ಭಾಗಗಳು ಅಖಂಡ ಭಾರತದ 54 ಸ್ಥಳಗಳಲ್ಲಿ ಬೀಳಲ್ಪಟ್ಟು 54 ಶಕ್ತಿ ಪೀಠಗಳುಆವಿರ್ಭವಿಸಿದವು. ಮಹಾವಿಷ್ಣು ಶಿವನನ್ನು ಶಾಂತಗೊಳಿಸಿದ ನಂತರ ಇವನು ಉಗ್ರ ತಪಸ್ಸನ್ನು ಆಚರಿಸಲು ಹೊರಟು ಹೋದನು. ಅದಕ್ಕೂ ಮುನ್ನ ತಾರಕಾಸುರನು ಭೋಲಾಶಂಕರನ ಏಳು ದಿನದ ಮಗುವಿನಿಂದ ಮಾತ್ರ ತನಗೆ ಮರಣ ಬರಲಿ ಎಂದು ಬ್ರಹ್ಮದೇವನಿಂದ ವರ ಪಡೆದಿದ್ದನು. ಭಕ್ತ ಪ್ರಿಯ ಬ್ರಹ್ಮನು ತಥಾಸ್ತು ಎಂದು ಹೇಳಿಯೂ ಆಗಿತ್ತು. ನಂತರ ತಾರಕಾಸುರನ ಕೋಟಲೆಗಳು ಒಂದಲ್ಲ ಎರಡಲ್ಲ ಇಡೀ ಪೃಥ್ವಿಯ ಜನರನ್ನು ಆತ ಅತ್ಯಂತ ಕ್ರೂರವಾಗಿ ಕಾಡಲಾರಂಭಿಸಿದನು. ದೇವತೆಗಳಿಗೂ ಆತನ ಕಾಟದ ಬಿಸಿ ತಗುಲಿದಾಗ ಅವರೆಲ್ಲರೂ ಸೇರಿ ಬ್ರಹ್ಮ ಮತ್ತು ವಿಷ್ಣುವನ್ನು ಭೇಟಿಯಾಗಿ ತಮ್ಮ ಸಂಕಷ್ಟವನ್ನು ಹೇಳಿಕೊಂಡರು.ಇದೀಗ ಬ್ರಹ್ಮ ವಿಷ್ಣು ಮತ್ತು ದೇವತೆಗಳು ಸೇರಿ ಭೋಗ ತಪಸ್ಸಿನಲ್ಲಿ ನಿರತನಾದ ಶಿವನ ವಿವಾಹವನ್ನು ಹಿಮವಂತ ಮತ್ತು ಮೇನಾ ದೇವಿಯರ ಪುತ್ರಿ ಗಿರಿಜಾದೇವಿಯೊಂದಿಗೆ ಮಾಡುವ ಆಶಯಕ್ಕೆ ಬೆಂಬಲವಾಗಿ ಶಿವನನ್ನು ಎಚ್ಚರಿಸುವ ಮಹಾ ಕಾರ್ಯಕ್ಕೆ ಕಾಮದ ಅಧಿದೇವತೆಯಾದ ಮನ್ಮಥನಿಗೆ ಒಪ್ಪಿಸಿದರು. ಶಿವನನ್ನು ಎಚ್ಚರಗೊಳಿಸುವ ಈ ಮಹಾಮಣಿಹದಲ್ಲಿ ತನ್ನ ಪ್ರಾಣ ಹೋಗುವದೆಂಬ ಅರಿವಿದ್ದರೂ ಕೂಡ ಲೋಕ ಕಲ್ಯಾಣಕ್ಕಾಗಿ ಈ ಕಾರ್ಯವನ್ನು ಒಪ್ಪಿಕೊಂಡ ಕಾಮದೇವನು ತನ್ನ ಪತ್ನಿ ರತಿದೇವಿಯೊಂದಿಗೆ ಶಿವನು ತಪಸ್ಸು ಮಾಡುತ್ತಿದ್ದ ಸ್ಥಳಕ್ಕೆ ಬಂದು ಅಲ್ಲೊಂದು ಸುಂದರ ಲೋಕವನ್ನು ಸೃಷ್ಟಿಸಿ ಪತ್ನಿಯೊಂದಿಗೆ ಮೋಹಕವಾಗಿ ನೃತ್ಯ ಮಾಡಿ ಶಿವನ ಮನಸ್ಸನ್ನು ತಣಿಸಲು ಪ್ರಯತ್ನಿಸಿದನು. ಕಾಮದೇವ ಮತ್ತು ರತಿದೇವಿಯರ ಸಾಕಷ್ಟು ಪ್ರಯತ್ನದ ನಂತರ ಕೂಡ ಶಿವ ಎಚ್ಚರಗೊಳ್ಳದೆ ಹೋದಾಗ ಅಂತಿಮ ಪ್ರಯತ್ನವಾಗಿ ಕಾಮದೇವನು ಪುಷ್ಪ ಬಾಣವನ್ನು ಶಿವನೆಡೆಗೆ ಬಿಟ್ಟನು. ಪುಷ್ಪಬಾಣ ಸೋಕಿದ ಶಿವನು ಎಚ್ಚರಗೊಂಡು ತನ್ನ ತಪಸ್ಸನ್ನು ಕೆಡಿಸಲು ಯತ್ನಿಸಿದ ಕಾಮದೇವನನ್ನು ತನ್ನ ಮೂರನೇ ಕಣ್ಣ ತೆರೆದು ಸುಟ್ಟುಬಿಟ್ಟನು. ಆಗ ಅಲ್ಲಿಯೇ ಇದ್ದ ರತಿ ದೇವಿಯು ಲೋಕ ಕಲ್ಯಾಣಕ್ಕಾಗಿ ದೇವತೆಗಳ ಆಗ್ರಹದ ಮೇರೆಗೆ ತನ್ನ ಪತಿ ಈ ಕಾರ್ಯಕ್ಕೆ ಎಳಸಿದನೆಂದು ತನಗೆ ಪತಿ ಭಿಕ್ಷೆ ನೀಡಬೇಕೆಂದು ಶಿವನನ್ನು ಕೇಳಿಕೊಂಡಳು. ಆಗ ಶಿವನು ಕಾಮದೇವನು ಆಕೆಯ ಕಣ್ಣಿಗೆ ಮಾತ್ರ ಕಾಣುವಂತೆ ವರ ನೀಡಿ ಇಡೀ ಲೋಕದ ಪಾಲಿಗೆ ಮನ್ಮಥನು ಅನಂಗನಾಗಿ ಇರುವಂತೆ ವರ ನೀಡಿದನು. ಈ ಆನಂಗ ವ್ಯಕ್ತಿತ್ವವೇ ನಮ್ಮ ನಿಮ್ಮೊಳಗಿರುವ ಕಾಮ. ಕಾಮ ಎಂದರೆ ಕೇವಲ ದೈಹಿಕ ಲಾಲಸೆಯಲ್ಲ ಅದು ನಮ್ಮನಿಮ್ಮೊಳಗೆ ಅಡಗಿರುವ ಆಸೆಯ ಮೂರ್ತ ರೂಪ. ಅರಿಷಡ್ವರ್ಗಗಳಲ್ಲಿ ಒಂದಾಗಿರುವ ಈ ಕಾಮ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಇರುತ್ತದೆ. ಅಂತಹ ಕಾಮದ ಕೆಟ್ಟತನವನ್ನು, ಅತಿ ಆಸೆಯನ್ನು ಪ್ರತಿವರ್ಷ ಶಿಶಿರ ಮಾಸದ ಹುಣ್ಣಿಮೆಯ ದಿನದಂದು ಕಟ್ಟಿಗೆಯ ರೂಪದಲ್ಲಿ ಸುಟ್ಟು ಹಾಕುವ ಮೂಲಕ ಕಾಮದಹನವನ್ನು ನಾವು ಆಚರಿಸುತ್ತೇವೆ. ಈ ಸಮಯದಲ್ಲಿ ಕೆಟ್ಟ ಕೆಟ್ಟ ಬೈಗುಳಗಳು, ಪೋಲಿ ಮಾತುಗಳನ್ನು ಕೂಡ ಆಡಿ ತೀಟೆ ತೀರಿಸಿಕೊಳ್ಳುವ ಸಂಪ್ರದಾಯ ಇದೆ. ಲಬೋ ಎಂದು ಬಾಯಿಗೆ ಕೈಯಿಟ್ಟು ಬಾಯಿ ಬಡೆದುಕೊಳ್ಳುವ ಆ ಮೂಲಕ ಕಾಮದಹನವನ್ನು ಆಚರಿಸುವ ಪ್ರಕ್ರಿಯೆ ನಮ್ಮ ಉತ್ತರ ಕರ್ನಾಟಕದ ಭಾಗದಲ್ಲಿ ಪ್ರಚಲಿತವಾಗಿದೆ. ನಾವು ಚಿಕ್ಕವರಿದ್ದಾಗ ನನ್ನ ಅಣ್ಣಂದಿರು ತಮ್ಮದೇ ಒಂದು ತಂಡ ಕಟ್ಟಿಕೊಂಡು ಮನೆ ಮನೆಯಲ್ಲಿ ಕಾಮಣ್ಣನ ಪಟ್ಟಿಯನ್ನು ಸಂಗ್ರಹಿಸಿ ಅದರ ಜೊತೆಗೆ ಉರುವಲುಗಳನ್ನು ಕೂಡ ಮನೆ ಮನೆಗಳಿಂದ ಪಡೆಯುತ್ತಿದ್ದರು. ಅವರೊಂದಿಗೆ ನಾವು ಚಿಕ್ಕ ಹೆಣ್ಣು ಮಕ್ಕಳು ಕೂಡ ಜೊತೆಗೂಡುತ್ತಿದ್ದೆವು. ಇದರ ಜೊತೆಗೆ ಮನೆಯ ಹಿತ್ತಲಿನಲ್ಲಿ ಇರುತ್ತಿದ್ದ ಸಣ್ಣ ಪುಟ್ಟ ಮರದ ನಿರುಪಯುಕ್ತ ಪೀಠೋಪಕರಣಗಳ ತುಂಡುಗಳನ್ನು, ರಟ್ಟಿನ ಡಬ್ಬಿಗಳನ್ನು ಮತ್ತಿತರ ಉರುವಲು ಸಾಮಗ್ರಿಗಳನ್ನು ಕದ್ದು ಈ ಕಾಮ ದಹನದ ಕಾರ್ಯಕ್ಕೆ ಬಳಸುತ್ತಿದ್ದೆವು. ಹೀಗೆ ತಂದ ವಸ್ತುಗಳನ್ನು ಕಾಮದಹನಕ್ಕೆ ಸಜ್ಜಾಗಿದ ಅಂಗಳದಲ್ಲಿ ಸೇರಿಸಿ ಅದರ ಮೇಲೆ ತೆಂಗಿನ ಗರಿಗಳನ್ನು ಉದ್ದಕ್ಕೆ ಸೇರಿಸಿ ಮುಚ್ಚಿ ಬಿಡುತ್ತಿದ್ದೆವು. ಹುಣ್ಣಿಮೆಯ ದಿನ ರಾತ್ರಿ ಕಾಮನ ಪೂಜೆಯನ್ನು ಮಕ್ಕಳಲ್ಲಿ ಒಬ್ಬರು ಶಾಸ್ತ್ರೋಕ್ತವಾಗಿ ಮಾಡಿ ತಮಟೆಯ ಸದ್ದಿನ ನಡುವೆ ಕಾಮಣ್ಣನನ್ನು ಸುಡುವ ಮೂಲಕ ಆಚರಿಸುತ್ತಿದ್ದೆವು. ಮರುದಿನ ಮುಂಜಾನೆ ಈ ಕಾಮನನ್ನು ಸುಟ್ಟ ಕೆಂಡದಿಂದಲೇ ಪ್ರತಿ ಮನೆಯಲ್ಲಿಯೂ ಒಲೆ ಹಚ್ಚಿ ಅಡುಗೆ ಮಾಡುತ್ತಾರೆ ಹಾಗೆ ಒಲೆ ಇಲ್ಲದವರು ಕಾಮಣ್ಣನನ್ನು ಸುಡಲು ಬಳಸಿದ ಕಟ್ಟಿಗೆಯ ಕೆಂಡವನ್ನು ತಂದು ನೀರು ಕಾಯಿಸುವ ಒಲೆಗೆ ಹಾಕಿ ನೀರು ಕಾಯಿಸಿ ಆ ನೀರಿನಲ್ಲಿ ಸ್ನಾನ ಮಾಡುತ್ತಾರೆ. ಈ ಕೆಲಸವನ್ನು ಮನೆಯ ಅಮ್ಮ,ಅಜ್ಜಿಯಂದಿರು ಮಾಡಿದರೆ… ಅಪ್ಪ ಹಿಂದಿನ ದಿನವೇ ಅಂಗಡಿಯಿಂದ ತಂದ ಬೇರೆ ಬೇರೆ ಬಣ್ಣಗಳನ್ನು ಬೇರೆ ಬೇರೆಯಾಗಿಯೇ ಬಕೀಟುಗಳಲ್ಲಿ ಕಲಸಿ ವಿವಿಧ ಬಾಟಲಿಗಳಿಗೆ ತುಂಬಿ ಕೊಡುತ್ತಿದ್ದರು. ತುಸು ಹಳೆಯದಾದ ಬಟ್ಟೆಗಳನ್ನು ತೊಟ್ಟ ಮಕ್ಕಳು ಬಣ್ಣದ ಬಾಟಲಿಗಳನ್ನು,ಪಿಚಕಾರಿಗಳನ್ನು ಹಿಡಿದುಕೊಂಡು ಬೇರೆಯವರ ಮೇಲೆ ಬಣ್ಣವನ್ನು ಎರಚುತ್ತಾ ಖುಷಿಯಿಂದ ಕೇಕೆ ಹಾಕುತ್ತಾ ಮನೆಯ ಸುತ್ತ ಬೇರೆ ಬೇರೆ ಓಣಿಗಳಲ್ಲಿ ಓಡಾಡಿ ಬಣ್ಣ ಎರಚಿ ಸಂಭ್ರಮಿಸುತಿದ್ದರು. ಇನ್ನು ತುಸು ದೊಡ್ಡವರು ಬಣ್ಣದ ಒಣ ಪುಡಿಗಳನ್ನು ಜೇಬಿನಲ್ಲಿ ಇಟ್ಟುಕೊಂಡು ಸ್ನೇಹಿತರಿಗೆ ಮತ್ತು ಪರಿಚಿತರಿಗೆ ಬಣ್ಣವನ್ನು ಹಚ್ಚಿ ಖುಷಿಪಡುತ್ತಿದ್ದರು ಕೆಲವೊಮ್ಮೆ ಜಗಳವಾಡಿ ಮಾತು ಬಿಟ್ಟ ಸ್ನೇಹಿತರು ಕೂಡ ಹೋಳಿ ಹಬ್ಬದ ಈ ಸಮಯದಲ್ಲಿ ಒಬ್ಬರಿಗೊಬ್ಬರು ಬಣ್ಣ ಹಚ್ಚುವ ಮೂಲಕ ಮತ್ತೆ ಒಂದಾಗುತ್ತಿದ್ದರು. ಮಧ್ಯಾಹ್ನದವರಿಗೂ ಬಣ್ಣದ ಆಟವನ್ನು ಆಡಿ ಮನೆಗೆ ಬರುತ್ತಿದ್ದ ಮಕ್ಕಳಿಗೆ ಎಣ್ಣೆ ಹಚ್ಚಿ ಬಣ್ಣ ಹೋಗುವಂತೆ ತಿಕ್ಕಿ ಸ್ನಾನ ಮಾಡಲು ಹೇಳಿದರೆ ದೊಡ್ಡ ಮಕ್ಕಳು ಹತ್ತಿರದ ಹೊಳೆ ಹಳ್ಳಗಳಿಗೆ ಬಟ್ಟೆ ತೆಗೆದುಕೊಂಡು ಸ್ನಾನಕ್ಕೆ ಹೋಗುತ್ತಾರೆ. ಹೊಯ್ಕೊಂಡ ಬಾಯಿಗೆ ಹೋಳಗಿ ತುಪ್ಪ ಎಂಬಂತೆ ತಾಯಂದಿರು ಹೋಳಿಗೆಯನ್ನು ಮಾಡಿ ಮಿಂದು ಬಂದ ಮಕ್ಕಳಿಗೆ ಉಣಬಡಿಸುತ್ತಾರೆ. ಬದಲಾದ ಇಂದಿನ ಕಾಲಘಟ್ಟದಲ್ಲಿ ಹೋಳಿ ಹುಣ್ಣಿಮೆಯ ಸಂಭ್ರಮ ಮರೆಯಾಗಿದ್ದರೂ ಬಣ್ಣದ ಹಬ್ಬ ತನ್ನ ರಂಗನ್ನು ಉಳಿಸಿಕೊಂಡಿದೆ. ಆಧುನಿಕ ಯುಗದಲ್ಲಿ ಅನೇಕ ರೀತಿಯ ಬಣ್ಣದ ಪಿಚಕಾರಿಗಳು ಬಂದಿದ್ದು ಮಕ್ಕಳು ವಿವಿಧ ರಂಗುಗಳನ್ನು ಪರಸ್ಪರ ಎರಚಿ ಸಂತಸ ಪಡುತ್ತಾರೆ. ಉತ್ತರ ಭಾರತದಲ್ಲಿ ಹೋಳಿ ಹಬ್ಬವನ್ನು ಹೋಲಿಕಾದಹನ ಮಾಡುವ ಮೂಲಕ ಆಚರಿಸುತ್ತಾರೆ ಅವರ ಪ್ರಕಾರ ರಾಕ್ಷಸ ಹಿರಣ್ಯಕಶಿಪುವಿನ ಮಗ ಪ್ರಹ್ಲಾದನು ಹರಿಯೇ ಸರ್ವೋತ್ತಮ, ಹರಿಯೇ ಜಗದೋದ್ಧಾರಕ ಎಂದು ತನ್ನ ತಂದೆಯ ಆಜನ್ಮ ವೈರಿ ಹರಿಯನ್ನು ಪೂಜಿಸುವುದನ್ನು ಕಂಡು ಕೋಪದಿಂದ ತನ್ನ ಮಗನನ್ನು ಸಾಯಿಸಲು ಹಲವಾರು ಬಾರಿ ಪ್ರಯತ್ನಿಸಿದನು. ಅಂತಹ ಒಂದು ಪ್ರಯತ್ನದ ಅಂಗವಾಗಿ ತನ್ನ ಸೋದರಿ ಹೋಲಿಕಾಳಿಗೆ ವರವಾಗಿ ದೊರೆತ ಸುಡದ ಅಂಗವಸ್ತ್ರವನ್ನು ಧರಿಸಿ ಪ್ರಹ್ಲಾದನನ್ನು ಬೆಂಕಿಯ ಬಾಯಿಯಲ್ಲಿ ದೂಡಲು ಆಕೆಗೆ ಕೇಳಿಕೊಂಡನು. ಅಣ್ಣನ ಮಾತನ್ನು ಮೀರದ ಹೋಲಿಕ ತನ್ನ ಅಂಗವಸ್ತ್ರವನ್ನು ಧರಿಸಿ ಪುಟ್ಟ ಪ್ರಹ್ಲಾದನನ್ನು ಎತ್ತಿಕೊಂಡು ಬೆಂಕಿಯಲ್ಲಿ ಪ್ರವೇಶಿಸಿದಳು. ಆದರೆ ಯಾವ ಮಾಯದಲ್ಲಿಯೋ ಆಕೆಯ ಅಂಗವಸ್ತ್ರವು ಆಕೆಯ ದೇಹದಿಂದ ಬಿದ್ದು ಹೋಗಿ ಆಕೆ ಸಜೀವವಾಗಿ ದಹನಗೊಂಡಳು, ಆದರೆ ಪುಟ್ಟ ಮಗು ಪ್ರಹ್ಲಾದ ಸೋಜಿಗವೆಂಬಂತೆ ಪಾರಾದನು. ಈ ದಿನ ಹೋಲಿಕ ಎಂಬ ಕಾಮನೆಯನ್ನು ಸುಟ್ಟು ಹಾಕುವ ಆಚರಣೆಯನ್ನು ಉತ್ತರ ಭಾರತೀಯರು ಮಾಡುತ್ತಾರೆ. ಹೋಲಿ ಹಬ್ಬ ಉತ್ತರ ಭಾರತೀಯರ ಪಾಲಿಗೆ ಅತಿ ದೊಡ್ಡ ಹಬ್ಬವಾಗಿದ್ದು ಹಾಡು, ಕುಣಿತ, ನೃತ್ಯ ಸಂಗೀತಗಳ ಜೊತೆ ಜೊತೆಗೆ ಭಾಂಗ್ ಎಂಬ ನಶೆಯ ಪೇಯವನ್ನು ಕೂಡ ಅವರು ಸೇವಿಸಿ ಮತ್ತರಾಗುತ್ತಾರೆ. ಇತ್ತೀಚಿಗಿನ ದಿನಗಳಲ್ಲಿ ಬಾಲಿವುಡ್ ನಲ್ಲಿ ಹೋಲಿ ಪಾರ್ಟಿ ಎಂದು ಚಿತ್ರರಂಗದ ಎಲ್ಲರನ್ನೂ ಆಮಂತ್ರಿಸಿ ದೊಡ್ಡ ರೀತಿಯಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ. ಇನ್ನು ನರಸಿಂಹದೇವರ ದೇವಸ್ಥಾನವಿರುವ ಕಡೆಗಳಲ್ಲಿ ಹೋಳಿಹಬ್ಬವನ್ನು ಆಚರಿಸುವುದಿಲ್ಲ. ನರಸಿಂಹದೇವರ ದೇವಸ್ಥಾನವಿರುವ ಸುತ್ತಲ ಏಳು ಹಳ್ಳಿಗಳಲ್ಲಿ ಕಾಮದಹನ,ಬಾಯಿ ಬಡಿದುಕೊಳ್ಳುವ, ಕೆಟ್ಟ ಮಾತುಗಳನ್ನು ಹೇಳುವ ಯಾವುದೇ ಆಚರಣೆಗಳು ಇಲ್ಲ. ಜೊತೆಗೆ ಬಣ್ಣದ ಹಬ್ಬವು ಇಲ್ಲ. ಅದೆಷ್ಟೇ ಆಕರ್ಷಣೀಯವಾದರೂ ಬಣ್ಣದ ಈ ಹಬ್ಬವನ್ನು ಈ ಭಾಗಗಳಲ್ಲಿ ಆಚರಿಸುವುದಿಲ್ಲ. ಅಷ್ಟಾಗಿಯೂ ಆಚರಿಸಬೇಕೆಂಬ ಆಸಕ್ತಿಯುಳ್ಳವರು ತಮ್ಮ ಊರನ್ನು ಬಿಟ್ಟು ಬೇರೆ ಊರುಗಳಿಗೆ ಬಣ್ಣದ ಆಟ ಆಡಲು ತೆರಳುತ್ತಾರೆ. ಇನ್ನು ಕೆಲ ಪ್ರದೇಶಗಳಲ್ಲಿ ಹೋಳಿ ಹುಣ್ಣಿಮೆಯ ದಿನ ಕಾಮ ಮತ್ತು ರತಿದೇವಿಯರನ್ನು ವಿದ್ಯುಕ್ತವಾಗಿ ಪ್ರತಿಷ್ಠಾಪಿಸಿ ಪೂಜಿಸುತ್ತಾರೆ. ನಾಲ್ಕು ದಿನಗಳ ಕಾಲ ಕಾಮ ರತಿದೇವಿಯರನ್ನು ಪೂಜಿಸಿ 4ನೇ ದಿನ ರಾತ್ರಿ ಕಾಮದಹನವನ್ನು ಮಾಡುತ್ತಾರೆ. ಐದನೆಯ ದಿನ ಬಣ್ಣದ ಹಬ್ಬವನ್ನು ರಂಗ ಪಂಚಮಿ ಎಂದು ಆಚರಿಸುತ್ತಾರೆ. ಜೀವಂತ ಕಾಮದೇವ ಮತ್ತು ರತಿದೇವಿಯರನ್ನು ಕೂಡ ಉತ್ತರ ಕರ್ನಾಟಕದ ಕೆಲ ಭಾಗಗಳಲ್ಲಿ ನೋಡಬಹುದು. ಕಣ್ಣು ಪಿಳುಕಿಸದೆ ಯಾವುದೇ ರೀತಿಯ ಚಟುವಟಿಕೆಗಳನ್ನು ಮಾಡದೆ ಅಲಂಕಾರಗೊಂಡ
“ಬಣ್ಣಗಳ ಹಬ್ಬ…. ಹೋಳಿ” ವಿಶೇಷ ಲೇಖನ ವೀಣಾ ಹೇಮಂತ್ ಗೌಡಪಾಟೀಲ್ Read Post »









