ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಈ ಜೀವನ ನಾಳೆಗಳ ಗುಣಿತಾಕ್ಷರ
ಕಳೆದ ನಿನ್ನೆಗಳ ನೆನಪುಗಳ ಹಂದರ
ಸುಖ ದುಃಖಗಳ ಸಂಕಲನ ವ್ಯವಕಲನ
ಬೇಕು ಬೇಡಗಳ ಗುಣಾಕಾರ ಭಾಗಾಕಾರದ ಜತನ

ಹೆತ್ತವರು ಸಲಹುವರೆಂಬ ಭರವಸೆಯ ಋಣ ಭಾರ
ಒಡಹುಟ್ಟಿದವರು ಹೆಗಲು ಕೊಡುವರೆಂಬ ಭ್ರಾತೃತ್ವ ಸುಂದರ
ಕೈಹಿಡಿದವರು ಜೊತೆ ಇರುವರೆಂಬ ಬಯಕೆಯ ಮಹಾಪೂರ
ಮಕ್ಕಳು ನೆರಳಾಗುವವರೆಂಬ ಆಸೆಯ ಮಂದ ಮಮಕಾರ

ನೆಂಟರಿಷ್ಟರು ನೆರವಾಗುವರೆಂಬ ಅಂಧ ಆಶೋದ್ಗಾರ
ಗೆಳೆಯರು ಕೈ ಬಿಡರೆಂಬ ವಿಶ್ವಾಸ ಗಗನದೆತ್ತರ
ಎಲ್ಲರಿಗೂ ಬದುಕು ಕಲಿಸುವುದು ನಿತ್ಯದ ಪಾಠ ಪ್ರಕಾರ
ಸೋಲು ಗೆಲುವುಗಳ ಜಿದ್ದಾಜಿದ್ದಿ ಥರಥರ

ಇಲ್ಲಿ ಸಿಗುವುದು ಪ್ರತಿ ಅವಕಾಶವು ನಿಯಮಾನುಸಾರ
ಇರುವುದನು ಪ್ರೀತಿಸಿ ಗೆಲುವಾಗಿಸಬೇಕು ನಿರಂತರ
ಕಳೆದ ದಿನಗಳು ಬಾಳಿಗೆ ಅನುಭವದ ಹಾರ
ನಾಳೆಯೂ ಬಂದರೆ ಅದುವೇ ದೈವದ ವರ


About The Author

3 thoughts on “ಶಾಲಿನಿ ಕೆಮ್ಮಣ್ಣು ಬದುಕೊಂದು ಭರವಸೆಯ ಲೆಕ್ಕಾಚಾರ”

  1. ಹೌದು ಬದುಕೇ ಭರವಸೆಯ ಆಗರ,
    ಭರವಸೆ ಕೆಲವೊಮ್ಮೆ ಹುಸಿಯಾಗಬಹುದು
    ಹಲವು ಬಾರಿ ಖುಷಿ ನೀಡ ಬಹುದು.
    ಭರವಸೆಯೇ ಬದುಕೆಂಬ ಗಾಳಿಪಟಕ್ಕೆ ಇರುವ ಸೂತ್ರ!
    ಚಾಲಕ ನಮ್ಮನ್ನು ಗಮ್ಯಕ್ಕೆ ತಲುಪಿಸುತ್ತಾನೆ ಎಂಬ ಭರವಸೆ ಅದಿಲ್ಲದಿದ್ದರೆ ?
    ಚೆನ್ನಾಗಿದೆ ಕವಿತೆ

Leave a Reply

You cannot copy content of this page

Scroll to Top