ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನೆರಳು ಬೆಳಕಿನಂತೆ ಆಟ ಆಡಿಸುತಿದೆ  ಬದುಕು
ಮರಳುಗಾಡಿನ ಬೇಗೆಯಂತೆ  ಬಿಡದೆ  ಸುಡುತಿದೆ  ಬದುಕು

ಜನಿಸಿ ಬಂದ ತಪ್ಪಿಗೀ  ಶಿಕ್ಷೆಯೇ  ಖುದಾ
ಕನಸಿನಲೂ  ಕರಾಳ ಚಿತ್ರವನು  ತೋರುತಿದೆ  ಬದುಕು

ಕತ್ತಲ ಕೋಣೆಯಲಿ  ವ್ಯಂಗದಲಿ  ನಗುತಿವೆ  ರಿವಾಜುಗಳು
ಮೌನ  ಭಿತ್ತಿಗಳಲಿ ಮನದಳಲನು  ಮೂಡಿಸುತಿದೆ  ಬದುಕು

ಬೆಳಕಿನ ಕೋಲು  ಬಾಗಿದೆ  ಮಾಳಿಗೆಯ ಬೆಳಕಿಂಡಿಯಿಂದ
ಕಳವಳಿಸಿದ ಉಸಿರಿನಲಿ ದನಿಯನು  ಬಿಗಿಯುತಿದೆ  ಬದುಕು

ಹೊಸ್ತಿಲಿನೊಳಗೆ  ಕಂಬನಿಯ  ಬಿಸುಪು ತಾಗುತಿದೆ  ಬೇಗಂ
ನಿಷ್ಪಾಪ ಹೆಣ್ಣು ಜೀವವನು ಸಣ್ಣಗೆ  ಬೇಯಿಸುತಿದೆ  ಬದುಕು

————-

About The Author

2 thoughts on “ಹಮೀದಾಬೇಗಂ ದೇಸಾಯಿ ಅವರಹೊಸ ಗಜಲ್”

  1. ಹೆಂಗಳೆಯರ ಬದುಕಿನ ಹಲವಾರು ವ್ಯಂಗಗಳನ್ನು ಅರ್ಥ ಪೂರ್ಣವಾಗಿ ನಿಮ್ಮ ಈ ಗಜಲ್ ಬಿಂಬಿಸುತ್ತಿದೆ ಮೇಡಂ..

    1. ಸ್ಪಂದನೆಗೆ ಧನ್ಯವಾದ ತಮಗೆ.

      ಹಮೀದಾಬೇಗಂ ದೇಸಾಯಿ.

Leave a Reply

You cannot copy content of this page

Scroll to Top