ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅವಳು
ಮಾತನಾಡುತ್ತಿದ್ದಳು…

ನಾನೂ
ಮಾತನಾಡುತ್ತಲೇ ಇದ್ದೇ…

ಅವಳ ಮಾತಿನಲ್ಲಿ
ಹಾವಭಾವ ಭಿನ್ನಾಣದ
ವೈಯಾರವಿತ್ತು,,
ಶಬ್ದಗಳಿಗೆ
ಪದಗಳ ಕಂಠದ
ಮಧುರ ಧ್ವನಿ ಇತ್ತು..
ಮಾತುಗಳು ನಿಲ್ಲುವ
ನಿಲ್ದಾಣವೇ ಸಿಗಲಿಲ್ಲ..

ನನ್ನ ಮಾತುಗಳೋ
ಅವಳ
ಕಂಗಳಿಗೆ ಧ್ವನಿಯಾಗಿತ್ತು.
ಲಾಸ್ಯಕ್ಕೆ ಹಾಸ್ಯ ಬೆರೆಸಿ
ಹೃದಯದ ದಾಸ್ಯ ಬೇಡಿತ್ತು
ಕರುಳಿಗೆ ಬೆಸುಗೆಯ
ಅಪ್ಪುಗೆಯ ಒಪ್ಪಿಗೆಯ
ಒಲವ ಒಸಗೆಯಾಗಿತ್ತು..

ಅವಳ
ತುಟಿಯಂಚಿನ ನಗು
ಅದೆಷ್ಟು ಭಾವಗಳನ್ನು
ಬಿತ್ತಿತ್ತು..
ಕುಡಿಹುಬ್ಬಿನ ಕೇಶಗಳು
ನಾಟ್ಯದ ನಾಚಿಕೆಯ
ನವೀರತೆಯ ಹೊತ್ತಿತ್ತು.
ಕಣ್ಣೊಳಗಿನ ಕಪ್ಪು
ಪ್ರೇಮಕಾರಣ್ಯದಿ
ಹೆಪ್ಪುಗಟ್ಟಿತ್ತು..

ಅವಳ ಮಾತುಗಳು
ಮುಗಿಯದ ರೈಲು ಮಾರ್ಗ
ಅದರೊಳಗೆ
ಬೆಸೆದ
ಒಲುಮೆಯ ಬಿಸಿಯಾದ
ಹಿತಮಿತಸ್ಮಿತ ಸಂಸರ್ಗ.

ಅವಳ….
ಮಾತಿಗೊಮ್ಮೆ
ಕಣ್ರೆಪ್ಪೆಗಳು
ಅರಳಿ ಮುದುಡಿ
ಮದನೀಡಿದ್ದವು
ಕತ್ತಲೆಬೆಳಕಿಗೆ
ಚಕ್ಕಂದವಾಡಿದ್ದವು.

ನಾನು ಅವಳ
ಮಾತುಗಳ ಕೇಳುತ್ತಾ
ಮಾತನಾಡುವುದನ್ನೇ
ಮರೆತೆ ಮುದದಂದದಿ
ಮಾತನಾಡಲು
ಪದಗಳೇ ಮಾಯವಾಗಿ
ಮೌನದಿ ಏಕಾಂತ
ಕಾಂತತ್ವಕ್ಕೆ ಬಲಿಯಾಗಿದ್ದವು

ಅವಳ
ಅದೆಷ್ಟೋ ಮಾತುಗಳು
ಮುಂಗಾರಿನ ಅರ್ಭಟ
ಭಯಂಕರ,ಭೀಕರ .
ಮುಂಗಾರು ಧೋ ಧೋ
ಮಳೆಗರೆದಾಗ
ಹೃದಯಕ್ಕೆ ಇಂಪಾದ
ತಂಪಾದ ವಾದ್ಯಮೇಳಗಳ
ಸರಿಗಮಪ,ನಿಸಗಮಪ


About The Author

19 thoughts on “ತಾತಪ್ಪ.ಕೆ‌ ಅವರ ಕವಿತೆ-ಅವಳ ಮಾತು..”

  1. ಅವಳ ಮಾತಿನ ಗದ್ದಲದಾಗ
    ನೀ ಆಗಾಗ ಮೌನ
    ನಿಂಗಾಗೇ ಜೊತೆಯಾದ ಯಾನಿ

  2. ಅವಳ ಮಾತು ಎಂಬ ಕವಿತೆಯು ಒಂದು ಅದ್ಬುತವಾದ ಕವಿತೆಯಾಗಿದೆ…..wondarful and super sir❤️

  3. ಅಂತರಾಳವ ಬಲ್ಲ ಅಭಿಮಾನಿಗೆ ಹೊಸತೇ..
    ಹೊಳೆಯುವುದು ಇಂತಹ ಕವಿತೆ…

Leave a Reply

You cannot copy content of this page

Scroll to Top