ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

 ಹುಟ್ಟುವಾಗ ಕರುಳುಬಳ್ಳಿಯ ಮಾಲೆ ಹೊತ್ತು
 ಧರೆಬಿಟ್ಟು ಹೋಗುವಾಗ ಹೂ ಮಾಲೆಯ ಹೊತ್ತು

 ಹುಟ್ಟುವ ಮುನ್ನ ತಾಯಿ ಗರ್ಭದಿಂದ ಮೌನ
 ಸಾವಿರ ನಂತರ ಭೂಗರ್ಭದಲ್ಲಿ ನೀರವ ಮೌನ

 ಹುಟ್ಟುವಾಗ ತಾಯಿ ಮತ್ತು ಮಗುವಿನ ಅಳಲು
 ಹೋಗುವಾಗ ಬಂಧು ಬಳಗದವರ ತೊಳಲು

 ಇದ್ದಾಗ ಹಾರಾಟ ಕೂಗಾಟ
 ಹೋಗುವಾಗ  ಮೌನದಾಟ

 ಇಳೆಗೆ ಬಂದರೆ ಜನನ
 ಇಳೆಯೋಳೋದರೆ  ಮರಣ

 ಹುಟ್ಟಿದಾಗ ಮಗುವಿಗೆ ತಾಯಿ ಆಸರೆ
 ಮುಪ್ಪಾದಾಗ  ಮಕ್ಕಳಿಗೆ ತಾಯಿಯೇ ಬೇಸರ

 ತಾಯಿ ಮಕ್ಕಳ ಹಠವನ್ನು ಪ್ರೀತಿ ವಿಶ್ವಾಸದಿಂದ ಗೆಲ್ಲುವಳು
 ಆದರೆ ಮಕ್ಕಳು ತಾಯಿಯ ಪ್ರೀತಿಯನ್ನು ಗದರಿಸುವಿಕೆಯಿಂದ ಸೋಲಿಸುವರು

 ತನ್ನ ಉಸಿರಿಗಿಂತ ಮಕ್ಕಳ ಉಸಿರಿಗೆ ಬೆಲೆ ಬೆತ್ತವಳು
 ಆದರೆ ಮಕ್ಕಳು ತಾಯಿಯ ಉಸಿರಿಗೆ ನೆಲೆ ನೀಡದವರು

 ಮಕ್ಕಳ ಕನಸಿಗಾಗಿ ತನ್ನ ಕನಸ ಮಾರಾಟಕ್ಕಿಟ್ಟವಳು
 ನಮ್ಮ ಕನಸಿಗಾಗಿ ತಾಯಿ ಕನಸನ್ನ ಬಂಧಿಸಿದವರು.

 ನಮ್ಮ ಬದುಕಿಗಾಗಿ ನೊಂ ದು ಬೆಂದು ಸುಟ್ಟು ಕರುಕಲಾದವಳು
 ನೊಂದು ಬೆಂದ ಕರಕಲಾದವಳ ಗುರುತಿಸದಾದವೋ

About The Author

13 thoughts on “ಚಿನ್ನಸ್ವಾಮಿ ಎಸ್ ಅವರ ಕವಿತೆ- ಜನನದಿಂದ ಮರಣದವರೆಗು”

    1. ತುಂಬಾ ಅರ್ಥ ಗರ್ಬಿತವಾಗಿ ವಾಸ್ತವ ವಿಷಯಗಳನ್ನು ಕವನದ ಮೂಲಕ ತಿಳಿಸಿರುವ ಶ್ರೀ ಚಿನ್ನಸ್ವಾಮಿ ರವರಿಗೆ ವಂದನೆಗಳು

  1. ತುಂಬಾ ಸೊಗಸಾಗಿದೆ ನಿಮ್ಮ ಈ ಕವಿತೆ
    ಸಾಗಲಿ ನಿಮ್ಮ ಪ್ರಯತ್ನ ನಿರಂತತೆ…

  2. ಅರ್ಥಗರ್ಭಿತ ಸಾಲುಗಳು. ಕವಿತೆ ತುಂಬಾ ಚೆನ್ನಾಗಿದೆ ಸರ್

  3. ತುಂಬಾ ಚೆನ್ನಾಗಿ ಮೂಡಿಬರುತ್ತಿರುವ ನಿಮ್ಮ ಕವನಗಳನ್ನು ಇನ್ನಷ್ಟು ಸುಂದರವಾಗಿಸಿ, ಅಭಿನಂದನೆಗಳು

Leave a Reply

You cannot copy content of this page

Scroll to Top