ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪಡೆನುಡಿಯಾಗಿ ಬಳಸಲ್ಪಡುವ ಈ ಪದಪುಂಜದ ಅರ್ಥ ಅತಿ ಸರಳ. ದುಡುಕು ಇಲ್ಲವೇ ಅನುಚಿತ ವರ್ತನೆಯ ಮುಂದಣ ಪರಿಣಾಮ ಅಥವಾ ಇಲ್ಲದನ್ನು ತಂದು ಮೈಮೇಲೆ ಹಾಕಿಕೊಳ್ಳುವ ಅನನುಭವ ಇತ್ಯಾದಿ….
ಇದು ಸೂಚ್ಛಾರ್ಥವಾಯಿತು . ವಾಚಾರ್ಥದ ಹಿಂದಿನ ಕಥೆ ನಿಮಗಿಲ್ಲಿ ಇನ್ನೂ ರೋಚಕವೆನಿಸಬಹುದು.
ಕೀಟಗಳು ಆಪತ್ಕಾಲದಲ್ಲಿ ವೈರಿಗಳ ಮೇಲೆ ಬಹುತೇಕ ಯುದ್ಧೋಪಾದಿಯಲ್ಲಿ ದಂಡೆತ್ತಿ ಬರುವುದು ರಕ್ಷಣಾ ತಂತ್ರವು. ಅವು ಎಂದಿಗೂ  ಒಂಟಿ ಹೋರಾಟಕ್ಕಿಳಿಯುವುದೇ ಇಲ್ಲ. ಒಗ್ಗಟ್ಟಿನೊಂದಿಗೆ ಮುನ್ನುಗ್ಗುತ್ತವೆ. ಇದು ಬಲದ ಸಂಕೇತವಾಗಿ ತೋರಿ ಬಂದರೂ ಸಮೂಹ ದಾಳಿಯ ಹಿನ್ನೆಲೆ ಸ್ಪೂರ್ತಿ, ಕಾರಣ ಆಧಾರಗಳು ಅವು ಬೇರೆಯೇ ಇವೆ. ಜೇನುನೊಣ ಕೆಂಚುಟಗಿ ಹುಳಗಳು ಈ ತೆರನಾದ  ಗುಂಪಿಗೆ ಸೇರಿದವುಗಳಾಗಿವೆ.  ಜೇನಹನಿಗೆ ಜೊಲ್ಲು ಸುರಿಸಿಯೋ ಕುಚೋದ್ಯತನಕ್ಕೆ ಇಂಬು ಕೊಟ್ಟು ಕೊಂಡು ದನಗಾಯಿ, ಪಡ್ಡೆ ಹೈಕಳುಗಳು ಆಗಾಗ ಜೇನು ಹುಟ್ಟಿಗೆ ಕೈ ಹಾಕುವ ಕೆಂಜುಟಿಗಿ ತಟ್ಟೆಗೆ ಕಲ್ಲು ತೂರುವ ಉಪದ್ವಾಪದ ಪ್ರವೃತ್ತಿ ಗಿಳಿಯುವುದುಂಟು
ಆ ಕ್ಷಣದಲ್ಲಿ ಗುಂಯ್ .,….ಎಂದೆನುತ ಭುಗಿಲೇಳುವ ಹುಳುಗಳೆಲ್ಲ ಹೊಡೆದವನ ಕೈ ಹಾಕಿದವನ ಬೆನ್ನಟ್ಟಿ ದಾಳಿಗಳಿರುತ್ತವೆ. ಏಕಕಾಲಕ್ಕೆ ನೂರಾರು ನೊಣಗಳು ವಿಷದ ಕೊಂಡಿಯಿಂದ ವೈರಿ ದೇಹವನ್ನು ಚುಚ್ಚಿ ಇರಿದು ಸಾಯಿಸಿ ಬಿಡುವ ಸಂದರ್ಭಗಳು ಉಲ್ಲೇಖಿತ.ಇಂಥ ನೊಣಗಳು ಎಷ್ಟೊಂದು ಅಪಾಯಕಾರಿ ಎಂದರೆ ವೈರಿ ನೀರಿನಲ್ಲಿ ಮುಳುಗಿದ್ದರೂ ಮುಳುಗಿದವ ಮೇಲೇಳುವ ತನಕ ಕಾಯ್ದು ಪ್ರತಿಕಾರ ತೀರಿಸಿಕೊಳ್ಳುತ್ತವೆ.
ಈ ಸಮೂಹ ಮಟ್ಟದ ಹೋರಾಟ ಹೇಗೆ ಸಾಧ್ಯವೆಂಬ ಉತ್ತರವೇ ಇಲ್ಲಿ ಪ್ರಸ್ತುತ.

ಈ ಜೇನುನೊಣ ಅಥವಾ ಕಂಜೂಟಿಗೆ ಚುಚ್ಚಿಕೆ (ಕೊಂಡಿಗಳಲ್ಲಿ) ವಿಶೇಷ ವಾಸನೆ ವಿಶೇಷ ( ಬಾಳೆಹಣ್ಣಿನ) ಗ್ರಂಥಿಗಳಿದ್ದು, ಅವು ಅಪಾಯದ ಕಾಲದಲ್ಲಿ ವೈರಿ ದೇಹಕ್ಕೆ ಚುಚ್ಚಿ ಕೊಂಡಿ ಕಿತ್ತು ಹೋದಾಗ ಬಾಳೆಹಣ್ಣಿನ ವಾಸನೆಯುಕ್ತ ದ್ರವ ಸ್ರವಿಸಿ , ಸುತ್ತಲೂ ಹರಡಿ ಇನ್ನುಳಿದ ತನ್ನ ಸೈನ್ಯ ಪಡೆಗೆಎಚ್ಚರಿಕೆ ಹರಡುತ್ತವೆ. ಆಗ ಮಾತ್ರ ಗೂಡಿನೊಳಗಿನ ಎಲ್ಲ ನೊಣಗಳು ವಾಸನೆ ಬಂದ ದಿಕ್ಕಿನಡೆಗೆ ದಾಳಿ ಇಕ್ಕಲು ಮುನ್ನುಗುತ್ತವೆ.


About The Author

Leave a Reply

You cannot copy content of this page

Scroll to Top