ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಭೀಮಾ ತೀರದಲ್ಲಿ ಮೂಳಗಿತು ರಣಕಹಳೆ
ಭಾರತಾಂಬೆಯ ಸ್ವಾತಂತ್ರ್ಯದ ಗಳಿಗೆ
ಬ್ರಿಟಿಷರ ಸದ್ದೆ ಬಡಿಯುವ ಓಕುಳಿ
ರಕ್ತರಕ್ತ ಮಾಡಿತು ರಕ್ತಭೀಜಾಸುರನಂತೆ ಧೂಳಿ

ಸಂಧಾನಕ್ಕೆ ಸಾಗಿದರು ಸಿದ್ದಾಂಕರು ಅಂದು
ಬಲಿಕೊಡುವಾ ಬ್ರಿಟಿಷ್ರರ ಮಾರಮ್ಮನಿಗೆಂದು
ಅಲ್ಲಗಳಿದರು ಪೇಶ್ವೆಯ ರಾಜ ಷಾಹಿಗಳಂದು
ಮಾತು ಮುಗಿಲುಮುಟ್ಟಿ ಯುದ್ದ  ಬಾಗಿಲುತಟ್ಟಿ ಅಂದು

ಹೊತ್ತಿತು ಹೊತ್ತಿತು ತಾಳ್ಮೆಯ ಕಡಲಿನಲ್ಲಿ ಜ್ವಾಲಾಮುಖಿಯೂ
ಆತ್ಮಗೌರವ ಹಕ್ಕಿಗಾಗಿ ಹೋರಾಟವೇ ಗತಿಯೂ
ಸಹನಶಕ್ತಿ ಅಳಿದರಲ್ಲಿಂದಲೇ  ಯುದ್ದವದು ಖಾತ್ರಿ
ಒಮ್ಮೆ ನಡುಗಿತು ಸಿಂಹಘರ್ಜನಗೆ ಧಾತ್ರಿ

ಶಿರೂರಿನಿಂದ ಇಪ್ಪತ್ತೆಳು ಮೈಲು ದೂರವು
ನಡೆದೆ ಬಂದರು ಭೀಮ್ ಕೊರೇಂಗಾವಿಗೆ ಸೈನಿಕರು
ಇಪ್ಪತ್ತೆಂಟು ಸಾವಿರಮಂದಿ ಪೇಶ್ವೇಯ ಯೋಧರು 
ಹನ್ನೆರಡುಗಂಟೆ ಕಾದಾಡಿ ಇತಿಹಾಸ ಸೃಷ್ಟಿಸರು

 ಪೇಶ್ವೆಗಳ ಉತ್ತಾರಾದಾಯಿತ್ವವೇ  ಅಂತ್ಯಕ್ಕೆ ಕಾರಣವು
1818ರ ಜನವರಿ ೧ ಕ್ಕೆ ಮಹಾಸೈನ್ಯವಾ ಸೋಲಿಸಿದರು
ಗೆದ್ದು ವೀರಮರಣ ಹೊಂದಿದವರ ಹೆಸರು ಕೆತ್ತಿಸಿದ ಸ್ತಂಭವು
ಮಣ್ಣಿನ ಕಣ ಕಣವೂ ಸಾಕ್ಷಿ ಹೇಳುತ್ತಿದೆ ಈ ದಿನವು

ತಪ್ಪದೆ ಹೋದರು ಬಾಬಾ ಸಾಹೇಬರು
ವೀರರಿಗೆ ವಂದನೆಯ ಅರ್ಪಿಸಲು
ಸ್ಮಾರಕ ಮಹಾತ್ಮರ  ಶೌರ್ಯದ ಕಥೆಯನ್ನು ಹೇಳುತ್ತಿದೆ ಇಂದಿಗೂ
ಮೆರೆದರು ಸ್ವಾತಂತ್ರ್ಯದ ಸಂಗ್ರಾಮದ ವರೆಗೂ 


About The Author

1 thought on “ಸುವರ್ಣಕುಂಬಾರ ಅವರಕವಿತೆ-ಬೀಮಾ ತೀರದಲ್ಲಿ”

Leave a Reply

You cannot copy content of this page

Scroll to Top