ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನನ್ನ ಕಾವ್ಯಕೆ ಬಂತು
ಪ್ರಶಸ್ತಿ ಮುಕುಟ
ಬಯಸದೆ ಬಂದ ಲಿಂಗ ಭೋಗ
ಖುಷಿ ಸಂಭ್ರಮ ಸಂತಸ ಕಿರುನಗೆ
ಪತ್ರಿಕೆ ಮಾಧ್ಯಮಗಳಲ್ಲಿ
ಸುದ್ಧಿ ಫೋಟೋಗಳು
ಊರೆಲ್ಲ ಕುಣಿದು ಕುಪ್ಪಳಿಸಿದೆ
ಎಲ್ಲ ಗೆಳೆಯ ಗೆಳತಿಯರು
ನಿರಂತರ ಶುಭಾಶಯ ಕೋರಿದರು
ಫೋನ್ ಕಿರುಗುಟ್ಟಿದವು
ಮನೆಯೊಡೆಯರಿಗೇಕೋ ಕೋಪ
ಏನು ಎಷ್ಟು ಮಾತು ಫೋನು
ಗುರಾಯಿಸಿದರು ಖುಷಿ ಹತ್ತಿಕ್ಕಿದೆ
ಅಂದು ವೇದಿಕೆಯ ಮೇಲೆ
ಶಾಲು ಸತ್ಕಾರ ಸಂಭ್ರಮ
ಸಾಹಿತಿಗಳ ಸ್ವಾಮಿಗಳ ಹರಕೆ
ಆಶೀರ್ವಚನ ಹಿತ ನುಡಿ
ನಂಗೂ ಮಾತನಾಡಲೂ ಹೇಳಿದರು
ಹೆಣ್ಣು ಅಬಲೆಯಲ್ಲ ಶಕ್ತಿ
ಕಾಳಿ ದುರ್ಗೆ ಚಾಮುಂಡಿ
ಸ್ವಾವಲಂಭನೆ ಸ್ವಾಭಿಮಾನದ
ಬದುಕಿಗೆ ಕರೆ ಕೊಟ್ಟೆ
ಮನೆಯಿಂದ ಫೋನ್ ಬಂತು
ಭಾಷಣ ಮುಗಿಸಿದೆ
ಎಲ್ಲರೂ ಊಟಕ್ಕೆ ಒತ್ತಾಯ ಮಾಡಿದರು
ನಾನೋ ಆಟೋ ಹಿಡಿದು ಮನೆಗೆ
ಯಜಮಾನರು ಬಾಗಿಲಲ್ಲೇ ನಿಂತಿದ್ದರು
ಸೆರಗಿನಲ್ಲಿ ಪ್ರಶಸ್ತಿ ಮುಚ್ಚಿಟ್ಟೆ
ಹಿಂದೆ ಬರೆದ ಕವನ ಸಂಕಲನ
ಹೆಜ್ಜೆ ಗುರುತು ಮುಚ್ಚಿಟ್ಟ ಹಾಗೆ
ಈಗ ಅದಕ್ಕೆ ಪ್ರಶಸ್ತಿ ಬಂದರೂ
ಖುಶಿಯಾಗಿ ಹೇಳುವ ಹಾಗಿಲ್ಲ
ನ ಸ್ತ್ರೀ ಸ್ವಾತಂತ್ರ್ಯ ಅರ್ಹ
ಮನು ಮಹರ್ಷಿ ಮಾತಿಗೆ

ಮುನಿಸಿ ಮೌನವಾದೆ


About The Author

10 thoughts on “ಸುಧಾ ಪಾಟೀಲ ಬೆಳಗಾವಿ ಕವಿತೆ-ಪ್ರಶಸ್ತಿ ಮುಕುಟ”

  1. ಸುಂದರ ವಿಡಂಬನೆ ಕವನ ಮೇಡಂ.
    ನಿಮ್ಮ ಕರ್ಕಿ ಕಾವ್ಯ ಪ್ರಶಸ್ತಿಗೆ ಅಭಿನಂದನೆಗಳು

  2. ಡಾ. ಮೀನಾಕ್ಷಿ ಪಾಟೀಲ್ ವಿಜಯಪುರ

    ವಾಸ್ತವದ ಅಭಿವ್ಯಕ್ತಿ ತುಂಬಾ ಚೆನ್ನಾಗಿ ವ್ಯಕ್ತಪಡಿಸಿದ್ದೀರಿ ಮೇಡಂ ಧನ್ಯವಾದಗಳು ಮತ್ತಷ್ಟು ಇಂಥ ಪ್ರಶಸ್ತಿಗಳು ತಮ್ಮ ಮುಡಿಗೇರಲಿ ಎಂದು ಹಾರೈಸುತ್ತೇನೆ

  3. ಅಭಿನಂದನೆಗಳು ಸುಧಾ ಮೆಡಂಜಿ.ಸಾಹಿತ್ಯ ಅಭಿರುಚಿಯ ತಮ್ಮ ಪಯಣ ಅನವರತ ಸಾಗಲಿ.ಆ ಮೂಲಕ ಮನೆ,ಮನ, ಸಮಾಜ ಬೆಳಗಲಿ.

Leave a Reply

You cannot copy content of this page

Scroll to Top