ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹಳೆಯದನ್ನು ಕಳೆದು, ಜೀವನದಲ್ಲಿ ಹೊಸತನ  ಸಮೃದ್ಧಿಯನ್ನು ತರುವಹಬ್ಬ  ಭೋಗಿ ಹಬ್ಬವನ್ನು. ಸಂಕ್ರಾಂತಿ ಹಬ್ಬದ ನಾಲ್ಕು ದಿನಗಳ ಆಚರಣೆಯಲ್ಲಿ ಮೊದಲ ದಿನ ಆಚರಣೆ ಮಾಡಲಾಗುತ್ತದೆ.
ಭೋಗಿ ಹಬ್ಬವು ಮಕರ ಸಂಕ್ರಾಂತಿ, ಪೊಂಗಲ್  ಸುಗ್ಗಿಯ ಹಬ್ಬ.  ಈ ಸಂದರ್ಭದಲ್ಲಿ ರೈತಾಪಿ ಜನ ನೇಗಿಲು ಮತ್ತು ಇತರ ಕೃಷಿ ಉಪಕರಣ ಪೂಜಿಸುತ್ತಾರೆ. ನಿರುಪಯುಕ್ತ ವಸ್ತುಗಳನ್ನು ಬೆಂಕಿಗೆ ಹಾಕುವ ಸಾಂಪ್ರದಾಯ ಒಂದಷ್ಟು ಕಡೆ ಇದೆ. ಇದನ್ನು ಭೋಗಿ ಮಂತಲು’ ಎಂದು ಕರೆಯುತ್ತಾರೆ.ಇದು ಹೊಸತನವನ್ನು ಸ್ವಾಗತಿಸುವ ಸಂಕೇತವಾಗಿದೆ.
ಭೋಗಿಯನ್ನು ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ಪೆಡ್ಡಾ ಪಾಂಡುಗ ಎಂದೂ ಕರೆಯುತ್ತಾರೆ. ಈ ಸುಗ್ಗಿಯ ಹಬ್ಬವನ್ನು ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ವ್ಯಾಪಕವಾಗಿ ಆಚರಿಸಲಾಗುತ್ತದೆ. ಭೋಗಿ ಹಬ್ಬವನ್ನು ಆಚರಿಸಲು, ಜನರು ಪರಸ್ಪರ ಭೋಗಿ ಸಂಕ್ರಾಂತಿ ಶುಭ ಹಾರೈಸುತ್ತಾರೆ. ಅವರು ತಮ್ಮ ಮನೆಯ ಮುಂದೆ ರಂಗೋಲಿ ಬಿಡಿಸುತ್ತಾರೆ. ಜನರು ತಮ್ಮ ಮನೆಗಳಲ್ಲಿ ಮಾಡಿದ ಭಕ್ಷ್ಯಗಳನ್ನು ನೆರೆಹೊರೆಯವರು ಮತ್ತು ಕುಟುಂಬಗಳೊಂದಿಗೆ ಹಂಚಿಕೊಳ್ಳುತ್ತಾರೆ.‌ಈ ದಿನ  ಅಕ್ಕಿ, ಕಬ್ಬುಬೆಲ್ಲ ಸೇರಿಸಿದ ಪಾಯಸ, ಸಜ್ಜಿರೊಟ್ಟಿ ಮಾದಲಿ  ತಯಾರಿಸಿ ಭೂತಾಯಿ , ಪಂಚಭೂತಗಳಿಗೆ ನೈವೇದ್ಯ ಸಮರ್ಪಣೆ ಮಾಡುವರು.  ಗಾಳಿಪಟ ಹಾರಿಸುವುದು, ಪ್ರಾಣಿಗಳ , ಹೋರಾಟ ಈ ದಿನ ಏರ್ಪಡಿಸುವುದು ವಿಶೇಷ.


About The Author

1 thought on “ಭೋಗಿ ಹಬ್ಬ ಬಂದೈತಿ ಹೊಸತನವನ್ನು ತಂದೈತಿ.ಲಲಿತಾ ಕ್ಯಾಸನ್ನವರ, ಅವರ ಲೇಖನ”

Leave a Reply

You cannot copy content of this page

Scroll to Top