ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬೇಂದ್ರೆಯವರು ತಮ್ಮ ಎಪ್ಪತ್ತನೆಯ ವಯಸ್ಸಿನಲ್ಲಿ ತಮ್ಮ ಬಾಲ್ಯದ ಅನುಭವವನ್ನು ಬರೆದ ಕವಿತೆ ಇದು. ಆದರೆ ಈ ಕವಿತೆಯಲ್ಲಿ ಮೂಡಿಬಂದದ್ದು ಕವಿಯಲ್ಲಿ, ಈ ಇಳಿವಯಸ್ಸಿನಲ್ಲಿಯೂ ಜೀವಂತವಾಗಿರುವ ಲವಲವಿಕೆ. ಮುಪ್ಪಿನಲ್ಲಿ ಗಪ್ಪನೆ ಕಳೆದು ಹೋಗುವ ಬಾಲ್ಯದ ಜೀವಂತಿಕೆ.
ಅನುಭವಿಸಿ, ಅನುಭಾವವಾದ ಅದಮ್ಯ ಕ್ಷಣಗಳು, ಮುಗ್ಧ ಬಾಲ್ಯದಲ್ಲಿ ಸ್ನಿಗ್ಧ ವಾಗಿರುವ ಜೀವನಸಾರ.

ಎಣಿಸಿದರ ಏನೋ ಕನಸ
ಕಂಡ್ಹಾಂಗ ಅನಸ್ತದ
ಕಣ್ಣು । ಆಗ್ತಾವ ಹ್ಯಾಂಗೊ ತೇಲುಮೇಲಾ
ನೆನಪಿನ ಓಣಿಯೊಳಗ
ಮಿಣುಕ್ತಾವ ಎಣ್ಣೀದೀಪ
ಎಲ್ಲೆ | ಹೋದಾವೊ ಗೆಳೆಯಾ ಆ ಕಾಲಾ?

ಕಳೆದು ಹೋದ ಗಳಿಗೆ ಮತ್ತೆ,ಮತ್ತೆ ಮೆಲುಕಾಡಿ, ಅನುಭಾವ ದಲ್ಲಿ,ಸವಿನೆನಪಿನ ಬುತ್ತಿಯನ್ನು ಮತ್ತೆ ಬಿಚ್ಚಿ ಉಣ್ಣುವಂತೆ, ಭೂತಕಾಲದ ಜೊತೆ ಕಾಣದೆ ವರ್ತಮಾನದ ಸವಿಗನಿಸಿನಂತೆ ಹೇಳುವ ಆ ಬೇಂದ್ರೆ ಅಜ್ಜನ ಕವನಗಳೇ ಚಂದ.

ಧಾರವಾಡದ ನಿಸರ್ಗ-ರಮ್ಯ-ವಾತಾವರಣದಲ್ಲಿಯ ಸೋಮೇಶ್ವರನ ದೇವಸ್ಥಾನದ ವರ್ಣನೆಯಿಂದಲೇ ಕವಿತೆ ಪ್ರಾರಂಭವಾಗುತ್ತದೆ:

ಬಂತಣ್ಣ ಸಣ್ಣ ಸೋಮವಾರಾ
ಕಾಣಬೇಕಣ್ಣ ಸೋಮೆಶ್ವರಾ

“ಕಾಣಬೇಕು” ಈ ಕ್ರಿಯಾಪದದ ಕಾಲ, ಕವಿಯ ಜೀವಂತಿಕೆಯ ಲಕ್ಷ್ಮಣ, ಕಳೆದುಹೋದ ಗಳಿಗೆ ಮತ್ತೆ ಹಿಡಿಯುವ ಕಾಣಬೇಕು ಎನ್ನುವ ಕ್ರಿಯಾಶೀಲ ಮನಸ್ಸು. ಎಲ್ಲಿಯೂ ನೋವಿನ ಆಭಾಸವಿರದೇ ಬರೀ ಸುಂದರ ಕಲ್ಪನೆಯ ಪ್ರಭಾಸ.

ಭಜನೀಯ ಮ್ಯಾಳದ ಧನಿ
ಅಲ್ಲಾ ದೂರಾ ಅಲ್ಲಾ ಸನಿ
ತುಳಕ್ಯಾಡತಾವ ದಿಕ್ಕು ದಿಕ್ಕು.
ತಪ್ಪಿ ಉಳಿದ ಕೋಗಿಲಾ ನಡುವೇನಽ ಕೂಗ್ತದ ಶ್ರಾವಣದ ಝಡಿಯೊಳಗ ಸಿಕ್ಕು.
ಹರಹರ ಮಹಾದೇವಾ
ಈಸಾಡತಾವ ಜೀವಾ
ಮಾನಸ-ಸರೋವರ ಹೊಕ್ಕು.

ಈ ಸಾಲುಗಳಲ್ಲಿ ಕವಿತೆಯ ಗತಿ ಲಯಬದ್ಧವಾದದ್ದು. ಜೀವನ ತನಗೆ ಗೊತ್ತಿಲ್ಲದಂತೆ ಅನಭವಿಸುವ ಸುಖ ದುಃಖ ಸಮಪಾಲು ತಕ್ಕಡಿ, ದೂರಾ ಅಲ್ಲ.. ಸನಿ ಅಲ್ಲಾ… ಸನಿಹ ಅಂದರೆ ಹತ್ತಿರ. ಬಾಲ್ಯದಲ್ಲಿ ಹೊಳವಿನಲ್ಲಿ ಜೀವನದ ತಾತ್ವಿಕ ಭಾವದ ದರ್ಶನ ಮಾಡಿಸುವುದು ಸುಲಭವೇ. ಈಸಾಡತಾವ ಮಾನಸ ಸರೋವರ ಹೊಕ್ಕು … ಈ ಸಾಲು ಒಂದು ಕಡೆ ಬಾಲ್ಯದ ನಿರಭ್ರ ಶುದ್ಧ ಮಾನಸಿಕತೆ, ಮ್ಯಾಳದ ನಾದ ಲಯಕ್ಕೆ ಮುಗ್ಧವಾಗಿ ತೂಗುವ ಎಳೆವಯದ ಮನಸ್ಸು… ಒಂದೆಡೆ ಆದರೆ ಇನ್ನೂಂದು ದೇವರು ನಾಮದಲ್ಲಿ ಅಲ್ಲ, ಮನಸ್ಸಿನ ಸರೋವರದಲ್ಲಿ ಒಳ ಹೊರ ಹೊಕ್ಕು ಬದ್ಧಾತ್ಮ ಶುದ್ಧನಾಗಬೇಕು. ಇಂದು ನಮ್ಮ ಬೇಂದ್ರೆ ಅಜ್ಜನ ಜನ್ಮದಿನ.


About The Author

Leave a Reply

You cannot copy content of this page

Scroll to Top