ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಿತ್ತೋದ ವ್ಯವಸ್ಥೆಯೊಳಗೆ
ಸತ್ತು ಬದುಕಿದವರು ನಾವು
ಇದೊಂದು ದೇಶ
ಇಲ್ಲಿ ಸರ್ವಾಧಿಕಾರಿಗಳ ರಾಜ್ಯ
ಕಳ್ಳರ ಲೂಟಿಕೋರರ ಆಡಳಿತ
ಐದು ವರುಷಕ್ಕೊಮ್ಮೆ ಚುನಾವಣೆ
ಸಾಲಾಗಿ ನಿಂತು ನಮ್ಮ ನಮ್ಮ
ಆಧಾರ ಕಾರ್ಡ್ ತೋರಿಸಿ
ಮತ ಹಾಕ ಬೇಕು ಬಟನ್ ಒತ್ತಬೇಕು
ಮಷೀನ್ ಮಹಾತ್ಮೆ
ಯಾರಿಗಾದರೂ ಒಲಿಯಬಹುದು
ಒದೆಯಬಹುದು
ನಮಗೇನು ಮಾಡುವುದು
ಮತ ಹಾಕುವುದಷ್ಟೇ ನಮ್ಮ ಕೆಲಸ
ಬೆಲೆಗಳು ಗಗನ ದಾಟಿ ಹೋಗಿವೆ
ಎಲ್ಲದರ ಮೇಲೂ ಜಿ ಎಸ ಟಿ ತೆರಿಗೆ
ರಾಮ ರಹಿಮರಿಗೆ ಕದನ ಹಚ್ಚಿದ್ದಾರೆ
ಇಲ್ಲ ಕಾರ್ಯಾಂಗ
ನ್ಯಾಯಾಂಗ ಶಾಸಕಾಂಗ
ಮಾಧ್ಯಮ ಟಿವಿಯವರು
ಮಾರಾಟವಾಗಿದ್ದಾರೆ.
ಹಲವು ಹಗರಣಗಳ ಸರಮಾಲೆ
ಯಾರಿಗೂ ಶಿಕ್ಷೆಯಾಗಿಲ್ಲ
ಓಡಿ ಹೋದ ನೀರವ ಮಲ್ಯ
ಇತರರು ಮರಳಿ ಬರುವದಿಲ್ಲ
ಸಾಲ ಹೊರೆಸಿ ದೇಶ ಮಾರಿದರು
ಇತ್ತ ಕಾರ್ಮಿಕ ರೈತರ ಆತ್ಮ ಹತ್ಯೆ
ಸಹಕಾರಿ ಬ್ಯಾಂಕ್ ದಿವಾಳಿಯಾದವು
ಗ್ರಾಹಕರು ರಸ್ತೆಯ ಮೇಲೆ ಗೋಳಿಟ್ಟರು
ಇವರಿಗೆ ಕಣ್ಣು ಕಿವಿ ಬಾಯಿಯಿಲ್ಲ
ಗಾಂಧಿ ಮುಂದಿನ ಮಂಗಗಳು
ಸತ್ತು ಬದುಕುತ್ತಿದ್ದೇವೆ ನಾನು ನೀವು
ಮೇರಾ ದೇಶ ಮಹಾನ್

ನಿಲ್ಲದ ಘೋಷಣೆ


About The Author

13 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ಕಿತ್ತೋದ ವ್ಯವಸ್ಥೆಯೊಳಗೆ”

  1. ಕಿತ್ತೋದ ವ್ಯವಸ್ಥೆಯೊಳಗೆ ಪ್ರತಿನಿತ್ಯ ಘೋಷಣೆ ಕೂಗುತ್ತಾ ಸತ್ತು ಬದುಕಿದವರು ನಾವು…ಎನ್ನುವ ಸಮಾಜದ ಆಗುಹೋಗುಗಳ ಜಿಡ್ಡುಗಟ್ಟಿದ ಮಾರ್ಮಿಕ ಕವನ ಎಲ್ಲರಿಗೂ ವಿಚಾರ ಮಾಡಲು ಹಚ್ಚುವಂತಿದೆ ಸರ್

    ಸುತೇಜ

  2. ಗೌರಮ್ಮ ಹಾಲಭಾವಿ

    ಏನುಮಾಡುವದು ಸರ್ ಯಾರಾದರು ಬದಲಾವಣೆಯ ವ್ಯವಸ್ಥೆ ತರಬಹುದೆಂಬ ನಂಬಿಕೆ ಇಲ್ಲದಾಗಿದೆ?

  3. ಡಾ ಶರಣಮ್ಮ ಗೋರೆಬಾಳ

    ವಿಡಂಬನಾತ್ಮಕ ಕವನ ಸರ್, ನಿಜವಾಗಿಯೂ ನಾವು ಕಿತ್ತುಹೋದ ವ್ಯವಸ್ಥೆಯೊಳಗೆ ಬದುಕುತ್ತಿದ್ದೇವೆ ಅನಿವಾರ್ಯವಾಗಿ, ಸಮಾಜ ದಲ್ಲಿರುವ ವಸ್ತು ಸ್ಥಿತಿಯನ್ನು ನಿಮ್ಮ ಕವನದಲ್ಲಿ ಚೆನ್ನಾಗಿ ಹಿಡಿದಿಟ್ಟಿದ್ದೀರಿ

  4. Lalita Angadi Mumbai

    ವಿಡಂಬನಾತ್ಮಕ ಕವಿತೆ, ಸರ್, ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎನ್ನುವ ಹಾಗೆ,ಅಧಿಕಾರದ ಮದದಲಿ,ಜನಗಳೆ ಬಲಿಪಶು.
    ಹೊಟ್ಟಾನ ಸಿಟ್ಟು ರಟ್ಟಾಗಿಲ್ಲ ಎನ್ನುವ ಹಾಗೆ,
    ಮೂಕರೋದನ ಬಡವರದು.

  5. ಕಿತ್ತೋದ ವ್ಯವಸ್ಥೆಯಲ್ಲಿ ಸತ್ತು ಬದುಕಿದವರು ನಾವು….ಆಕ್ರೋಶ.. ಬಂಡಾಯದ ಧ್ವನಿ…

Leave a Reply

You cannot copy content of this page

Scroll to Top