ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಓ.ಅವ್ವಾ. ನನ್ನವ್ವಾ..

ಒಂದೊಮ್ಮೆ
ದೊಡ್ಡ ಬೆಟ್ಟದ ತುತ್ತತುದಿಗೆ
ನೇತು ಹಾಕಿದರೂ ನನ್ನ
ಅವ್ವಾ. ನನ್ನವ್ವಾ.
ನನಗೆ ಗೊತ್ತು , ಯಾರ ಪ್ರೀತಿ ಸದಾ
ನನ್ನ ಹಿಂಬಾಲಿಸುವುದೆಂದು
ಅವ್ವಾ, ನನ್ನವ್ವಾ..

ಒಂದೊಮ್ಮೆ
ಆಳಸಾಗರದಡಿಯಲಿ
ಮುಳುಗಿ ಕೆಡವಿದರೂ ನನ್ನ
ಅವ್ವಾ ನನ್ನವ್ವಾ
ನನಗೆ ಗೊತ್ತು , ಯಾರ ಕಣ್ಣೀರು
ನನ್ನಲ್ಲಿಗೆ ಹರಿದು ಬರುವುದೆಂದು
ಅವ್ವಾ, ನನ್ನವ್ವಾ..

 ದೇಹ ಆತ್ಮಗಳೆರಡು
ಬೇರ್ಪಡಿಸಲ್ಪಟ್ಟರೂ
ಅವ್ವಾ ನನ್ನವ್ವಾ, ನನಗೆ ಗೊತ್ತು
ಯಾರ ಪ್ರಾರ್ಥನೆಗಳು ನನ್ನ
ಮತ್ತೆ  ಜೀವಂತಗೊಳಿಸುವೆಂದು.
ಅವ್ವಾ ನನ್ನವ್ವಾ.
ಓ ಅವ್ವಾ, ನನ್ನವ್ವಾ..


About The Author

Leave a Reply

You cannot copy content of this page

Scroll to Top