ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮನ್ವಂತರಗಳು ಉರುಳಿ
ನವ ನವ ವೈದ್ಯ ವಿಧಾನಗಳು ಅವತರಿಸಿ
ನವ್ಯಾತಿನವ್ಯ ಶಸ್ತ್ರ ಗಳು
ಅಸ್ತ್ರಗಳು ತೂಣೀರದೊಳಗಿದ್ದೂ
ವೈದ್ಯನೀಗ ಶಾಪಗ್ರಸ್ತ!

ಮುಂದಡಿಯಿಡೆ
ಸಹಾಯ ಬೇಡಿದ ರೋಗಿ
ತಾನಾಗಿ ಗ್ರಾಹಕ, ಹೊಸ ಹೊಸ
ಕಾನೂನು ಕಲಂ ಗಳ ಅಡಿಯಲ್ಲಿ
ರಕ್ತ ಪಿಪಾಸು!

ಹೊರಳಿ ನೋಡಿದರೆ ವೈದ್ಯ
ವಿಷಣ್ಣ ವದನ
ಕರ್ತವ್ಯವಿಮೂಢ

ಸಂವತ್ಸರಗಳ ಮುಗಿಯದ
ಅಧ್ಯಯನ ಮುಗಿಸಿದ
ಮಾನವ ಸೇವೆಯ ಹಂಬಲದಿಂದ ಬಂದ ವೈದ್ಯ
ನಿಂತಿದ್ದು ಸೀಳು ದಾರಿಯಲ್ಲಿ
ಅರಿವು ಬರುವ ಮುನ್ನವೇ
ಪ್ರಪಂಚ ಕೊಟ್ಟ
ಅರಿವಳಿಕೆಯಲ್ಲಿ !

ಬದುಕಿಗೆ
ಹಸುರಾಗವ ವೈದ್ಯ ಈಗ
ಬರೇ ಗಾಣದ ಎತ್ತು
ಕರ್ತವ್ಯದ ಪ್ರತಿ ತುತ್ತಿಗೂ ಸುಸ್ತು!

ತನ್ನ ಪೂರ್ವಜರು
ಧನ್ವಂತರಿಯಂತಾಗದೆ
ಸುಶ್ರೂತರಂತಾಗದೆ
ಕಡೆಗೆ ಹಿಪೋಕ್ರಟಿಸ್ಸ ರ
ಆಣತಿಯಂತೆಯೂ
ನಡೆಯಲಿಕ್ಕಾಗದ
ವೈದ್ಯ

ಈಗಲೂ ಪರಿಶುದ್ಧ
ಸಮಾಜ ಸೇವೆಗೆ ಸದಾ ಬದ್ಧ !!


About The Author

2 thoughts on “ಡಾ.ಡೋ.ನಾ.ವೆಂಕಟೇಶ ಅವರ ಕವಿತೆ- ಡಾಕ್ಟರ್”

  1. ಹಿಪ್ಪೋಕ್ರಟಿಸರ ಅಣತಿ ಪಾಲಿಸುವವರು ಅರ್ಧಭಾಗದ ವೈದ್ಯಗಳಾದರೆ, ಇನ್ನರ್ಧ ಭಾಗ ವೈದ್ಯರು ಲಕ್ಷ-ಕೋಟಿಗಳಿಸುವ ಆಮೀಷಕ್ಕೆ ಒಳಗಾದರೆ, ಹುಲುಮಾನವರಿಗೆ ಕಾಪಾಡಲು ಭಗವಂತನಿಗೂ ದಾರಿಕಾಣದಾಗಿದೆಯಯ್ಯ. ಡಾ:ಪುರುಷೋತ್ತಮ.

Leave a Reply

You cannot copy content of this page

Scroll to Top