ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹೋಗಲಿ ಬಿಡಿ ಕನಸುಗಳು
ಹೊಸ ಕನಸು ಕಾಣೋಣ
ಹಳೆಯ ಕನಸುಗಳ್ಯಾವವೂ
ನಮಗಾಗಿ ಎಟುಕಲಿಲ್ಲಾ

ಕನಸಿನ ಸಾಕಾರತೆಯೊಂದೇ ಸಾಧನೆಯಲ್ಲಾ
ಕಾಣಲೇಬೇಕೆಂಬ ಒತ್ತಾಯವೂ ಇಲ್ಲಾ
ಹಾರಿದರೂ ಕನಸಿನಾಕಾಶದೊಳಗೆ
ಹಿರಿದಾದ ಕೈಯೆಂದೂ ಗಗನ ಮುಟ್ಟಿಲ್ಲಾ

ಮನಸಿನ ಭಾವ ಕನಸಿನ ಲೋಕದೊಳಗೆ
ಕಳ್ಳೆಮಳ್ಳೆ ಆಡಿದರೆ
ಹೃದಯಕ್ಕೆನೋ ಹಿತವೆಂದು
ಮರೀಚಿಕೆಯ ಲೋಕ ನೆಚ್ಚುತ್ತೇವೆ

ಕನಸಿನ ನೈಜತೆ ಅರಿತಾದಮೇಲೆ
ಎಟುಕದ ನೋವನ್ನೂ ಸಹಿಸುತ್ತೆ
ಹಗಲು ಕನಸೋ ರಾತ್ರಿಯದೊ
ಕಾಣುವ ವ್ಯಕ್ತಿಯಲ್ಲಿ ಕುಳಿತಿದೆ

ವಾಸ್ತವೀಕತೆ ಹಾದಿಯಲ್ಲಿ ಕನಸು
ಬಂದು ಹೋಗುವ ವಾಹನದಂತೆ
ಸಾಲು ಸಾಲಾಗಿ ಸಾಗುತ್ತಿದ್ದರೂ
ಕಾಣುವವನರಸಿ ನಿಲ್ಲುತ್ತವೆ

ಸೆಳೆಯುತ್ತಲೇ ಇದೆ ಮಾಯಾಲೋಕ
ದೊರಕುವ ಭರವಸೆಯಲ್ಲಿ ಮುಳುಗಿಸಿ
ಅಸಹಾಯಕತೆಯಲ್ಲಿ ನಿಲ್ಲಿಸಿ
ಇದ್ದ ದಾರಿ ದೂರಾಗಿಸುತ್ತೆ

ಕನಸಿಗೆ ಗುರಿ ಒಂದೆ
ಕಾಣುವವನ ಬೆನ್ಹತ್ತುವುದು
ಗೊತ್ತೇ ಅದಕೆ ಶ್ರಮವಿಲ್ಲದೆ ಫಲವಿಲ್ಲೆಂದು
ಯೋಚಿಸಿ ನೋಡಿ ಸಫಲತೆ ಕನಸನ್ನು

ಬಿಟ್ಟುಬಿಡಿ ಕನಸಿನ ಕನಸನ್ನು

——————————————–

About The Author

1 thought on “ಪ್ರಮೋದ ಜೋಶಿ ಕವಿತೆ-ಕನಸು”

  1. ಕನಸಿನ ಬೆನ್ನು ಹತ್ತದೇ ಶ್ರಮದ ಸಫಲತೆ ಯತ್ತ ಸಾಗುವ ಸಂದೇಶದ ಸುಂದರ ಕವನ ಪ್ರಮೋದ್ ಸರ್ ಅಭಿನಂದನೆಗಳು

Leave a Reply

You cannot copy content of this page

Scroll to Top