ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗುರುಲಿಂಗ ಜಂಗಮ
ನನ್ನೊಡೆಯ ಬಸವ
ಎಲ್ಲಿ ನೋಡಿದರೂ
ಕಾಣುತಿದೆ ನನಗೆ ಕೈಲಾಸವೆಂಬ
ಈ ನಿನ್ನ ಗುಣವು ಓ ಅಣ್ಣ ಬಸವಣ್ಣ..!!

ಕಲಿಯುಗದ ಶರಣರಿಗೆ
ನೀನಾಗಿರುವೆ ಗುರು
ಓ ಅಣ್ಣ ಬಸವಣ್ಣ ಎಲ್ಲವೂ
ನಿನ್ನದೇ ಕೃಪೆಯಿಂದ ಕಾಣುತಿದೆ  
ಈ ಕಲಿಯುಗದ ಬೆಳಕು
ಓ ಅಣ್ಣ ಬಸವಣ್ಣ..!!

ಕೈಲಾಸವೆಂಬ ಅರಮನೆಯಲ್ಲಿ
ಅನುಭವ ಮಂಟಪ ತೆರೆದು  
ಶರಣರ ಬದುಕಿಗೆ ಬೆಳಕಾಗಿ
ನಿಂತಿರುವೆ ನೀನು ಓ ಅಣ್ಣ ಬಸವಣ್ಣ..!!

ಜಾತಿ ಭೇದ ತೊರೆದೆ ಎಲ್ಲರೂ
ಆ ಶಿವನ ಮಕ್ಕಳೆಂದು
ಸಾರಿ ಸಾರಿ ಹೇಳಿರುವೆ
ಓ ಅಣ್ಣ ವಿಶ್ವಗುರು ಬಸವಣ್ಣ..!!

————————

About The Author

Leave a Reply

You cannot copy content of this page

Scroll to Top