ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ವ್ಯಾಸ ಜೋಶಿ

ತನಗಗಳು

ವಡಲೊಳಗಿದ್ದಾಗ
ಕೊಟ್ಟು ಅನ್ನ ಉಸಿರು,
ಧರೆ ಸ್ಪರ್ಶವಾದೊಡೆ
ಆನಂದದ ಕಣ್ಣೀರು.
***
ತನ್ನ ವಿಶ್ರಾಂತಿಯಲೂ
ಅಳುತಿರೆ ಕಂದಮ್ಮ,
ಎತ್ತಿ ಮುದ್ದಾಡಿಸಲು
ಬೇಸರಿಸದ ಅಮ್ಮ.
***
ಇಬ್ಬರ ಮನೆತನ
ಬೆಸೆದವಳು ನಾರಿ
ಬೆಳಗುವಳು ಖಾತ್ರಿ
ಎರಡು ಮನೆ ಕೀರ್ತಿ.
***
ಕೊಚ್ಚೆಯ ಮಾಡಿರಲಿ
ರಚ್ಚೆ ಹಿಡಿದಿರಲಿ
ಮಗುವಿನ ಭಾಷೆಯ
ಬಲ್ಲ, ತಾಯಿ ಕರುಳು.
***
ಗಂಡು ಹೆಣ್ಣು ಇಬ್ಬರೂ
ಎಲ್ಲಕ್ಕೂ ಸರಿಸಮಾನೆ!
ಗಂಡಸಿಗಿಲ್ಲದ್ದಿದೆ
ಅದೇ ತವರು ಮನೆ.

———————-

ವ್ಯಾಸ ಜೋಶಿ.

About The Author

1 thought on “ವ್ಯಾಸ ಜೋಶಿ ಅವರ ತನಗಗಳು”

Leave a Reply

You cannot copy content of this page

Scroll to Top