ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗೆಳೆಯರೆ
ನನ್ನವ್ವ ನನ್ನನ್ನು ಹೆತ್ತಳು
ಸರಕಾರಿ ಆಸ್ಪತ್ರೆಯಲಿ
ನನ್ನ ಮತ್ತು ಬಾಣ0ತಿ
ನೋಡಲು ಯಾರಾರು
ಬಂದಿದ್ದರು ನನಗೆ ಗೊತ್ತಿಲ್ಲ

ಮನೆಯಲ್ಲಿ ಹಬ್ಬ ಸಂತಸ
ಸಂಭ್ರಮ ತುಂಬಿತ್ತು ಆ ದಿನ
ಯಾರು ಅವ್ವನಿಗೆ ಕಾಫಿ
ತಿಂಡಿ ಕೊಟ್ಟರು
ನನಗೆ ಕುಂಚಿಗೆ ಕುಲಾಯಿ
ಕೊಟ್ಟರು ಗೊತ್ತಿಲ್ಲ

ಅಂಬೆಗಾಲಲಿ ತಿರುಗಿದ್ದೆ
ಮನೆ ಮಠ ಗುಡಿ ಛಾವಣಿ
ಅದೆಷ್ಟೋ ಜನ ನನ್ನ
ತಮ್ಮ ಹೆಗಲ ಸೊಂಟದಲಿ
ಕುಳ್ಳಿರಿಸಿ ಊರೇಲ್ಲ ತಿರುಗಿದರು
ನನಗೆ ಗೊತ್ತಿಲ್ಲ

ಅದೇನು ದೊಡ್ಡವನಾದೆ
ಈಗ ನಾನುಣ್ಣುವ ಊಟ
ಯಾವ ರೈತ ಬೆಳೆದ
ಹಣ್ಣು ಸೊಪ್ಪು ತರಕಾರಿ
ಯಾವ ತೋಟಿಗ ಕೊಟ್ಟ
ನನಗೇನೂ ಗೊತ್ತಿಲ್ಲ

ನಾನುಡುವ ಬಟ್ಟೆ
ತೊಟ್ಟ ಜಾಕೀಟು
ಕೋಟು ಪ್ಯಾಂಟು ಶರ್ಟ್
ಯಾವ ನೇಕಾರ ನೇಯ್ದ  
ದರ್ಜಿ ಹೊಲಿಗೆ ಹಾಕಿದ
ನನಗೆ ಗೊತ್ತಿಲ್ಲ

ನಾ ಮೆಡುವ ಮೆಟ್ಟು
ನಡದೋಳಗಿನ ಬೆಲ್ಟ್
ಕಿಸೆಯಲ್ಲಿನ ಪರ್ಸ್
ಯಾವ ಚರ್ಮ
ಯಾವ ಸಮಗಾರ ಮಾಡಿದ
ನನಗೆ ಗೊತ್ತಿಲ್ಲ

ನಾನಿರುವ ಬಂಗಲೆ
ಕಿಟಕಿ ಬಾಗಿಲು ತಂಗಾಳಿ
ಕಲ್ಲು ಇಟ್ಟಿಗೆ ಗೋಡೆ
ಗಟ್ಟಿ ಗೊಂಡವು ನೆಲದಿ
ಅದೆಷ್ಟೋ ಜನರು ದುಡಿದರು
ಸೂರಿಗೆ ನನಗೆ ಗೊತ್ತಿಲ್ಲ

ನನಗೂ  ವಯಸಾಗುವುದು
ರೋಗ ರುಜಿನ ದಮ್ಮು ಕೆಮ್ಮು
ಯಾವ ವೈದ್ಯ ನರ್ಸ ಔಷದ
ಉಪಚಾರ ಕಾಳಜಿ
ಸತ್ತಾಗ ಮಸಣಕ್ಕೆ ಯಾರಾರು ಬರುವರು
 ಖಂಡಿತ  ನನಗೆ ಗೊತ್ತಾಗುವದಿಲ್ಲ

ಮತ್ತೇಕೆ ಕದನ ಜಗಳ ಬೇಡ
ಬಾಳೋಣ ನಾನು ನೀವು
ಸ್ನೇಹ ಪ್ರೀತಿಯ ಹಂಚಿ
ನಾವೇನು ತಂದಿಲ್ಲ ಏನನ್ನೂ
 ಒಯ್ಯಲ್ಲ
ಪ್ರೇಮದೊಲುಮೆ ಸಾಕು
ಭೂದೇವಿಗೆ ನೂರು ನಮನ
———————-

About The Author

21 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರಕವಿತೆ ‘ಗೊತ್ತಿಲ್ಲ’”

  1. ಡಾ. ಮೀನಾಕ್ಷಿ ಪಾಟೀಲ್ ವಿಜಯಪುರ

    ಎಲ್ಲರೂ ನನ್ನವರೇ ಎಲ್ಲರೂ ಸುಖವಾಗಿ ಬಾಳಬೇಕು ಎಂಬ ಆಶಯವನ್ನು ಹೊಂದಿದ
    ಅತ್ಯಂತ ಆಪ್ತವೆನಿಸುವ ಕವನ
    ಧನ್ಯವಾದಗಳು ಸರ್

  2. ಒಂದೊಳ್ಳೆಯ ಜೀವನದ ಬಗೆಗಿನ ಅತ್ಯುತ್ತಮ ಅಭಿವ್ಯಕ್ತಿ… ಸರ್
    ಎಲ್ಲರೂ ಮನನಮಾಡಿಕೊಳ್ಳಬೇಕಾದ ಅರ್ಥವತ್ತಾದ ಸಾಲುಗಳು
    ಸುಶಿ

  3. ನಿಜ ಸರ್ ವಾಸ್ತವ ಸಂಗತಿಯ ಬದುಕಿನ ಅನಾವರಣ, ಈ ಕವಿತೆ ಓದುತ್ತಿದ್ದಂತೆ ನಾವು ಒಮ್ಮೆ ನಮ್ಮ ಬದುಕನ್ನು ನೋಡಿಕೊಳ್ಳುವಂತೆ ಇದೆ. ಅರಿವಿಲ್ಲದೆ ಕಣ್ಣು ತೇವಗೊಂಡಿತು, ಹೃದಯಸ್ಪರ್ಶಿ ಕವನಕ್ಕೆ ಆ ಕವಿ ಮನಸ್ಸಿನ ಅನುಭವಕ್ಕೆ ಕೋಟಿ ಕೋಟಿ ನಮನಗಳು

    ಡಾ ಶರಣಮ್ಮ ಗೋರೆಬಾಳ

  4. ನಿಜ ಸರ್ ವಾಸ್ತವ ಸಂಗತಿಯ ಬದುಕಿನ ಅನಾವರಣ, ಈ ಕವಿತೆ ಓದುತ್ತಿದ್ದಂತೆ ನಾವು ಒಮ್ಮೆ ನಮ್ಮ ಬದುಕನ್ನು ನೋಡಿಕೊಳ್ಳುವಂತೆ ಇದೆ. ಅರಿವಿಲ್ಲದೆ ಕಣ್ಣು ತೇವಗೊಂಡಿತು, ಹೃದಯಸ್ಪರ್ಶಿ ಕವನಕ್ಕೆ ಆ ಕವಿ ಮನಸ್ಸಿನ ಅನುಭವಕ್ಕೆ ಕೋಟಿ ಕೋಟಿ ನಮನಗಳು

    1. Excellent poem ಸತ್ಯಮಾತು ನಿಜವಾದುದನ್ನೇ ಹೇಳಿರುವಿರಿ
      ಅನ್ನಪೂರ್ಣ ಸಕ್ರೋಜಿ ಪುಣೆ

  5. ವಾಸ್ತವ ವಿದ್ಯಮಾನಗಳನ್ನು ಕವನವನ್ನಾಗಿಸಿದ ನಿಮ್ಮ ಕವಿಮನಕ್ಕೆ ನೂರು ವಂದನೆಗಳು ಸರ.

  6. ಗೌರಮ್ಮ ಹಾಲಭಾವಿ

    ವಾಸ್ತವ ವಿದ್ಯಮಾನಗಳನ್ನು ಗಮನಿಸಿ ಇಷ್ಟು ಸುಂದರವಾದ ಕವನ ಬರೆಯಲು ನಿಮ್ಮಿಂದಲೇ ಸಾಧ್ಯ , ಸರ.

    ಗೌರಮ್ಮ ಹಾಲಭಾವಿ

  7. ತುಂಬ ಅರ್ಥಪೂರ್ಣ ಕವನ. ಗೊತ್ತಿಲ್ಲದ ಸುಳಿಯಲ್ಲಿ ಬದುಕುತ್ತಿರುವೆವು. ಪ್ರೀತಿ, ಪ್ರೇಮದಿಂದ ಖುಷಿಯಾಗಿರಬೇಕು ಎನ್ನುವ ಸಂದೇಶವಿರುವ ಈ ಕವನ ಮಾರ್ಮಿಕವಾದುದು.

  8. ನಿಜ ಜೀವನದ ಸಾಲುಗಳು ಲೀಲಾಜಾಲವಾಗಿ ಕವನ ರೂಪದಲ್ಲಿ ಮೂಡಿಬಂದಿವೆ.ಸುಂದರ ಸುಂದರ.ನಮನಗಳು ಸರ್

  9. ಗೊತ್ತಿಲ್ಲ ಕವನ ಹೇಳೋಕೆ ಮಾತು ಗೊತ್ತಾಗ್ತಾ ಇಲ್ಲಾ ಅದ್ಬುತವಾದ ಕವನ ಸರ್

  10. ಗೊತ್ತಿಲ್ಲ ಕವನ ಹೇಳೋಕೆ ಮಾತು ಗೊತ್ತಾಗ್ತಾ ಇಲ್ಲ ಸರ್ ….ಅದ್ಬುತವಾದ ಕವನ ಸರ್

  11. ಎಲ್ಲರಿಗೂ ಅನ್ವಯಿಸುವ ಈ ಕವಿತೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್ಅಭಿನಂದನೆಗಳು ಸರ್

  12. ಗೊತ್ತಿಲ್ಲದ ಸಂಗತಿಗಳ ಜೊತೆಗೆ ವಾಸ್ತವ ಜೀವನ ಬೆಸೆದ ಬದುಕಿನ ಚಿತ್ರಣದ ಸೊಗಸಾದ ಕವನ Nice sir

Leave a Reply

You cannot copy content of this page

Scroll to Top