ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಒಲವಿನ ಬಲೆ ಬೀಸಿ ಮನವ ಕಲಕಿ ಹಾಸಿಬಿಟ್ಟೆ ಪ್ಯಾರ್
ಪ್ರೇಮದ ಪಾಶ ಬಿಗಿದು ಎದೆಯ ಹಿಸುಕಿ ಹಾಸೆಬಿಟ್ಟೆ ಪ್ಯಾರ್

ಯಾರೋ ನೀನು ಯಾರೋ ನಾನು ಹನಿಯೊಡೆಯಿತು
ಮಾಯದ ಮದವೇರಿಸಿ ಕೈ ಸೋಕಿ ಹಾಸಿಬಿಟ್ಟೆ ಪ್ಯಾರ್

ನೋಟ ಕೊಡಿ ನವಿರಾದ ಭಾವ ಮೂಡಿ ಬಸಿರಾಯಿತು
ಸ್ಪರ್ಶ ಸುಖದ ನಶೆಯೇರಿಸಿ ಕೆದಕಿ ಹಾಸಿಬಿಟ್ಟೆ ಪ್ಯಾರ್

ಯಾವ ಜನ್ಮದ ನಂಟು ಈ ಜನ್ಮದಲ್ಲಿ ಬಂದು ಬೆಸೆಯಿತು
ಹಿತ ಮಾತಿನ ಲಾಲಿಹಾಡಿ ಕಾಡಿ ಬೆದಕಿ ಹಾಸಿಬಿಟ್ಟೆ ಪ್ಯಾರ್

ಜೀವ ಜೀವಗಳ ಸಂಬಂಧದ ಕುಡಿಯೊಡೆದು ಚಿಗುರಿತು
ಒಡನಾಟದ ತಾಪದ ತಂಪೆರೆದು ತದಿಕಿ ಹಾಸಿಬಿಟ್ಟೆ ಪ್ಯಾರ್

ಮಾಯದ ಗಾಳಿ ಸೂಸಿ ದೇಹವನಾವರಿಸಿ ಮಂಪರಿಸಿತು
ಸಲ್ಲಾಪದ  ಸುಖ ನೀಡಿ ನೆಮ್ಮದಿ ಹೊಸಕಿ ಹಾಸಿಬಿಟ್ಟೆ ಪ್ಯಾರ್

ಅನುವಿನಂತರಾಳದಲಿ ಇಲ್ಲದ ಗುಲ್ಲೆಬ್ಬಿಸಿ ಶಾಂತಿ ಕದಡಿದೆ
ಮುತ್ತುಮಳೆಗರೆದು ಬಿಗಿದಪ್ಪಿ ಮಿಟುಕಿ ಹಾಸಿಬಿಟ್ಟೆ ಪ್ಯಾರ್

——————–

About The Author

1 thought on “ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್”

Leave a Reply

You cannot copy content of this page

Scroll to Top