ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಿನ್ನ ಹ್ಯಾಂಗ
ಹಿಡಿಯಲಿ
ಕೆಲವು ಸಾಲಿನ ಕವನ
ಕನ್ನಡದ ಮುಡಿಗೆ
ನೀನಾದೆ ದವನ
ಹಳ್ಳಿಯ ಹುಡುಗ
ಸೈಕಲ್ಲಿನ ಜೋಡ
ಮನೆಯ ಮಗನಾದೆ
ಮಧುರ ಚೆನ್ನ
ಅರವಿಂದರ ಅರಿವು
ಶರಣರ ಸೂಳ್ನುಡಿಯು
ಅಕ್ಕ ಸಿದ್ಧರಾಮ
ಬಸವನ ಬೆಳಕು
ಮುಲ್ಕಿ ಶಿಕ್ಷಣ
ಮಾಸ್ತರನ ಪಯಣ
ವಿಶ್ವ ವಿದ್ಯಾಲಯ
ತಲೆ ಬಾಗಿತು
ನಿನ್ನ ನಯನ
ಅಧ್ಯಾತ್ಮ ಚಿಂತನ
ಅನುಭಾವ ಚೇತನ
ಕೈ ಮಾಡಿ ಕರೆಯಿತು
ಧಾರವಾಡ ತಪೋವನ
ಹಲವು ಗರಿಗಳ ಸಾಧನ
ನಿಮಗಿತ್ತ ಸನ್ಮಾನ
ಬಡವಾಯಿತು ಸಾಹಿತ್ಯ
ಬೆಂದ ತನು ಮನ
ಚೆನ್ನಮಲ್ಲರ ಕೃಪೆ
ಗುರು ಲಿಂಗ ಜಂಗಮ
ಬಿಟ್ಟು ಹೋದಿರಿ ಭುವಿಯ

ಬಯಲು ಸಂಗಮ


̲̲̲̲̲̲̲

About The Author

10 thoughts on “ನಾಡಿನ ಹೆಸರಾಂತ ಸಾಹಿತಿ ಸಂಶೋಧಕ ಡಾ ಗುರುಲಿಂಗ ಕಾಪಸೆ ಅವರು ಇಂದು 27 ಮಾರ್ಚ್ ಬಯಲಾದರು. ಅವರಿಗೆ ಭಾವಪೂರ್ಣ ನಮನಗಳು”

    1. ಕವಿತೆ ತುಂಬಾ ಚೆನ್ನಾಗಿ ಬರೆದಿದ್ದೀರಿ.ಕಣ್ಣು ತೇವವಾಯಿತು.

  1. ಡಾ ಶರಣಮ್ಮ ಗೊರೇಬಾಳ�

    ಗುರುವಿನ ಗುರು ಡಾ ಗುರುಲಿಂಗ ಸರ್ ಗೆ ನಮನ

  2. ಸರ್… ನಾನು ಗುರುಲಿಂಗ ಕಾಪ್ಸೆ ಅವರನ್ನು
    ನೋಡಿರಲಿಲ್ಲ… ಆದರೆ ನಿಮ್ಮ ಕವನದ ಮೂಲಕ ಅವರ ಇಡೀ ವ್ಯಕ್ತಿತ್ವವನ್ನು ಅತ್ಯಂತ
    ಗೌರವ ಮತ್ತು ಹೆಮ್ಮೆಯ ಭಾವನೆಯೊಂದಿಗೆ ನಮಗೆಲ್ಲ ತಿಳಿಸಿಕೊಟ್ಟಿದ್ದೀರಿ… ಧನ್ಯವಾದಗಳು

    ಸುಶಿ

Leave a Reply

You cannot copy content of this page

Scroll to Top