ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾದು ಕುಳಿತಿವೆ
ಅದೆಷ್ಟು ನರಿಗಳು
ಗಿಡಗನಂತೆ ನುಂಗಿಹಾಕಲು !

ಮೈ ಮರೆತರೆ
ದಾಟುವರು ಗಡಿರೇಖೆ
ಒಳನುಸುಲು ವೈರಿಪಡೆ
ಅದಕ್ಕಾಗಿ ಜೇನುನೋಣಗಳಂತೆ
ಬಾಳೋಣ ಒಂದಾಗಿ !

ಒಟ್ಟಗಿದ್ದರೆ
ಜೋಳದ ತೆನೆಯಂತೆ  
ಯಾರೂ ಬಿಡಿಸಲಾರರು ಈ ಬಂಧ !

ಹೇಗೆ ಮರವು
ತನ್ನ ಬಳಿ ಬರುವವರಿಗೆ
ನೆಲೆ,ನೆರಳು ನೀಡುವುದೊ
ಹಾಗೆ ಮರವಾಗೋಣ ನಾವು !

——————————————

ನಾಗಪ್ಪ ಸಿ ಬಡ್ಡಿ

About The Author

2 thoughts on “ನಾಗಪ್ಪ ಸಿ ಬಡ್ಡಿ ಕವಿತೆ-ಮರವಾಗೋಣ !”

Leave a Reply

You cannot copy content of this page

Scroll to Top