ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮನಸಿಗಂಟಿದ ಭಾವ
ಮನಸ್ಸಿನೊಳಗಿನ ನೋವ
ಭಾವದೊಳಗಿನ ಜೀವ
ಜೀಕುವ ನೆನಪುಗಳ ಹಾಗೆಯೇ ಎತ್ತಿಡಬಹುದೇ
ಹೂವಿನಂತ ಮನಸಿದು
ಮುಳ್ಳಿನಿಂದ ಗೀಚಬೇಡ
ಚುಚ್ಚು ಮಾತನಾಡಬೇಡ
ಬಣ್ಣದ ರೆಕ್ಕೆಗಳ ಕಟ್ಟಿ ಹಾರಿಸಿ
ಬಿಡಬೇಡ
ಕೋಮಲ ಭಾವನೆಗಳ
ಹಿಸುಕಿ ಕೊಲ್ಲಬೇಡ
ಮೊಗ್ಗರಳ್ಳಿ ಹೂವಾಗುವ
ಮೊದಲೇ ಕೀಳಬೇಡ
ಸುಂದರ ನಾಳೆಗಳ ಕನಸುಗಳು ಕನಸಾಗಿಯೇ ಉಳಿಯುವಂತೆ
ಮಾಡಬೇಡ
ಬದುಕಿನ ಸವಿ ಅನುಭವಿಸುವ
ಮೊದಲೇ ಕಹಿಯಾಗಿಸಬೇಡ
ಕಣ್ಣಂಚಲಿ ಮಿನುಗುವ ಬೆಳಕು
ಪ್ರಜ್ವಲಿಸಲಿ ಬಿಡು
ಮನಸಿನೊಳಗಿನ ಬೆರಗು
ಹೊರ ಹೊಮ್ಮಲಿ
ಜೀವ ಚಿಲುಮೆ ಚಿಮ್ಮಲಿ
ಬದುಕಿನೊಲುಮೆ ಅರಳಲಿ
ಜೀವ ಕಳೆಯು ಮರಳಲಿ

———————–

About The Author

1 thought on “ನಾಗರಾಜ ಜಿ. ಎನ್.ಬಾಡ ಕವಿತೆ-ಭಾವ ಚಿಲುಮೆ”

  1. ಭಾವಕ್ಕೆ ಬಣ್ಣಗಳು ಬಳಿದಾಗ ಅದು ಬದುಕಾಗುತ್ತದೆ. ಮನಸಿನ ಭಾವ, ಮಾತು ವಾಸ್ತವದ ಅಡಿಪಾಯ. ಅಲ್ಲಿ ನೆನಪುಗಳ ಚಿಲುಮೆಯಿದೆ. ಭಾವಗಳ ಒಲುಮೆಯಿದೆ. ಬದುಕಿಸುವ ಅಂತರಾಳವಿದೆ. ಪ್ರೀತಿ ಬದುಕಿನ ಚಿರಕಾಲದ ಭರವಸೆ. ಅದರ ಪೂರ್ಣತೆ ಇರುವುದು ಅನುಭವದಲ್ಲಿ ಅನುಭಾವದ ಜೊತೆಯಲ್ಲಿ. ಭಾವ ಪ್ರೀತಿಯಾಗಿ ಒಂದು ಒಳ್ಳೆಯ ಸಂಕಲ್ಪ, ಸಂವೇದನೆಯಾಗಿ ಉಳಿಯಲಿ ಎನ್ನುವ ಈ ಕವನ ಚೆನ್ನಾಗಿದೆ……

    ನಾಗರಾಜ ಬಿ.ನಾಯ್ಕ
    ಹುಬ್ಬಣಗೇರಿ.

Leave a Reply

You cannot copy content of this page

Scroll to Top