ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ರುಚಿಮೊಗ್ಗು ಅರಳಿ
ಲಾಲಾರಸ ಸ್ರವಿಸಿ
ನಾಲಿಗೆ ಬೇಡುವುದು
ಉಪ್ಪಿನಕಾಯಿಗೆಂದು

ಮಿಡಿ ಮಾವಿನಕಾಯಿ
ಬೆಟ್ಟದ ನೆಲ್ಲಿಕಾಯಿ
ಅದೆಷ್ಟು ರುಚಿಕರ
ಆಹಾ ಉಪ್ಪಿನಕಾಯಿ !

ಕೆಂಪು ಚಟ್ನಿಯೊಡನೆ
ಆಲೂಗೆಡ್ಡೆ ಪಲ್ಯವು
ಆ ಮಸಾಲೆದೋಸೆಗೆ
ಯಾವುದು ಸಮಾನವು

ಉದರಕ್ಕೆ ಹಿತವು
ಚಟ್ನಿಯೊಡನೆ ಇಡ್ಲಿ
ಮನಸ್ಸು ಕೇಳುವುದು
‘ ಮತ್ತೆ ಇನ್ನಷ್ಟು ಕೊಡ್ಲಿ’

ಅನ್ನ ಸಾರು ಪಲ್ಯದ
ಜೊತೆ ಹಪ್ಪಳ ಬೇಕು
ಮೃಷ್ಟಾನ್ನ ಭೋಜನಕೆ
ಇವುಗಳಷ್ಟೇ ಸಾಕು


About The Author

Leave a Reply

You cannot copy content of this page

Scroll to Top