ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮತ್ತೆ ಬಂದಿದೆ ನಗೆಯ ಸಂಕ್ರಾಂತಿ
ಮನೆ ಮನದಲಿ ಹರುಷದ ಕಾಂತಿ
ತಂದಿದೆ ಆನಂದ ನೆಮ್ಮದಿ ಶಾಂತಿ
ಎಲ್ಲರಲಿ ಉಕ್ಕಿದೆ ಉತ್ಸಾಹ ಪ್ರೀತಿ

ರವಿಯ ಕಿರಣಕೆ ಅರಳಿದೆ ಹೂಬನ
ನವ ಕಳೆಯಲಿ ನಿಸರ್ಗದ ನರ್ತನ
ವರ್ಷದ ಸುಗ್ಗಿಯ ಕಾಲದ ಆಗಮನ
ರೈತರ ಮೊಗದಲಿ ಸಂತಸದ ತನನ

ಬಾನೆತ್ತರದಿ ಗಾಳಿಪಟಗಳ ಹಾರಾಟ
ಮಕ್ಕಳಿಗೆ ಮನ ತಣಿಸುವ ಚೆಂದಾಟ
ಹಸು ಎತ್ತುಗಳಿಗೆ ಅಂದದ ಸಿಂಗಾರ
ಕಿಚ್ಚು ಹಾಯಿಸುತ ಸಂತಸ ಸಡಗರ

ನಗು ನಗುತಲಿ ಸಿಹಿ ಮಾತನಾಡುತ
ಎಳ್ಳು ಬೆಲ್ಲವ ವಿನಿಮಯಗೊಳ್ಳುತ
ಹೊಸ ಸಂಬಂಧಗಳನು ಬೆಸೆಯುತ
ಬದುಕು ಚೆಂದ ಕಹಿಯ ಮರೆಯುತ

ಸಂಭ್ರಮದ ನಗೆಯ ಸಂಕ್ರಾಂತಿಯು
ಶುಭವನು ತರಲಿ ಎಲ್ಲರ ಬಾಳಿನಲಿ
ಸಂತೃಪ್ತಿ ಸಂತೋಷ ಸಮೃದ್ಧಿಯು
ನಿರಂತರವಾಗಿ ವೃದ್ಧಿಸಲಿ ನಾಡಿನಲಿ


About The Author

1 thought on “ಜಯಶ್ರೀ ಎಸ್ ಪಾಟೀಲ ಕವಿತೆ-“ನಗೆ ಸಂಕ್ರಾಂತಿ””

  1. ಅಂದದ ಕವಿತೆ
    ಚೆಂದದ ಪಟ
    ಸಂಕ್ರಾಂತಿಯ ಶುಭಾಶಯ
    ಉತ್ತಮ ಯಲಿಗಾರ
    9448010055

Leave a Reply

You cannot copy content of this page

Scroll to Top