ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ.ಡೋ.ನಾ.ವೆಂಕಟೇಶ

ಹಮ್ಮು ಬಿಮ್ಮು

ಹಮ್ಮಿಗೆ ಬಿಮ್ಮು
ತಾದಾತ್ಮ್ಯಗೊಂಡಾಗ
ಕಂದಾ
ಇರುವಷ್ಟು ದಿನ ಪ್ರತಿಕ್ಷಣ
ಸೊಬಗು,ಸೊಗಸು!

ಚೆಲುವಿನ ಜೊತೆ ತನ್ಮಯತೆ
ವಿಜೃಂಭಿಸಿದರಷ್ಟೆ ಪ್ರಕೃತಿ
ಸಂಪೂರ್ಣೆ,ಪರಿಪೂರ್ಣೆ!

ನಗುವಿನ ಜೊತೆ
ಅಂತಃಕರಣ ಇದ್ದರಷ್ಟೇ
ಅನ್ನಪೂರ್ಣೆ!!

ಗಡುಸು ವ್ಯಕ್ತಿತ್ವದ ಪುರುಷನ
ಕೈಯಲ್ಲಿ ದುಡಿಯುವ ಛಲ
ಇದ್ದರಷ್ಟೇ ಅಲ್ಲ-
ಅಂತಃಕರಣ ಬೇಕು
ಸ್ವಪ್ರತಿಷ್ಠೆ ಬಿಡ ಬೇಕು
ಸಮನ್ವಯತೆಯ ಸಾಕಾರ ಇರಬೇಕು!

ಅವಳ ಹಮ್ಮು ಮರೆತು ನೀನಾಗು ಬಿಮ್ಮು!
ಅಹಂಕಾರಕ್ಕೆ ಉದಾಸೀನ ಅಲ್ಲ-
ನೀಡು ಉದಾತ್ತತೆಯ ಮದ್ದು!


ಡಾ.ಡೋ.ನಾ.ವೆಂಕಟೇಶ

About The Author

6 thoughts on “ಡಾ.ಡೋ.ನಾ.ವೆಂಕಟೇಶ ಕವಿತೆ-ಹಮ್ಮು ಬಿಮ್ಮು”

  1. ಡಾ ಅರಕಲಗೂಡು ನೀಲಕಂಠ ಮೂರ್ತಿ

    ವೆಂಕಟೇಶ್, ನಿಮ್ಮ “ಹಮ್ಮು ಬಿಮ್ಮು” ಕವನ ಎಲ್ಲ ಥರದ ಹಮ್ಮಿನವರಿಗೂ ಮೂಗುದಾರ ಹಾಕಿ ಮನುಷ್ಯರನ್ನಾಗಿಸುವ ಪ್ರಯತ್ನ ಉತ್ತಮ ರಚನೆ. ಅಭಿನಂದನೆ.

  2. ಹಮ್ಮು ಬಿಮ್ಮು ಕವಿತೆ ತುಂಬಾ ಚೆನ್ನಾಗಿದೆ.ಅಹಂಕಾರವಿಲ್ಲದೆ ಜೀವನ ನಡೆಸಲು ಉತ್ತಮ ಮಾರ್ಗವಾಗಿದೆ.

Leave a Reply

You cannot copy content of this page

Scroll to Top