ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸುಧಾ ಪಾಟೀಲ್

ಅರಿವು

ಪವಿತ್ರ ಆತ್ಮದ
ನಿಜವಾದ ಬೆಳಗಿನ
ವಾಣಿ
ಅನ್ಯೋನ್ಯ ಬಾಂಧವ್ಯದ
ಸತ್ಯದ ಹಂದರದಲ್ಲಿ
ಸತ್ವ ವಿಚಾರಗಳ
ಅನವರತ ಆಲಿಸಿ
ಮೂಡಿತಾಗ ಅರಿವು

ಆಧ್ಯಾತ್ಮದ ನೆಲೆಯಲ್ಲಿ
ಕಟ್ಟಿಕೊಂಡ
ಅಪರೂಪದ ಈ
ಅನುಭವ
ಬೆಲೆಕಟ್ಟಲಾಗದ ನಿಲುವಿನ
ಅರಿವು

ಸಂಕೀರ್ಣತೆಯಿಂದ
ತಿಳಿಯಾದ ತಿಳಿಗೊಳದಲ್ಲಿ
ಪರಿಪೂರ್ಣತೆಯತ್ತ
ಹೊರಳುವ
ಅದಮ್ಯ ಚೈತನ್ಯದ
ಅರಿವು

ಜ್ಞಾನದೀವಿಗೆಯ ಹಚ್ಚಲು
ಪುಣ್ಯದ ಫಲ
ಪಡೆಯಲು
ವಿಶ್ವಾಸದಿಂದ ಮುನ್ನಡೆಯಲು
ಮೂಡಿತು ಅನಂತ
ಕೋಟಿ ದಾರ್ಶನಿಕ
ತತ್ವದ ಅರಿವು

ಒಂದೇ ವಿಚಾರದಲ್ಲಿ
ನಮ್ಮನ್ನು ನಾವು
ಹಿಡಿದಿಟ್ಟುಕೊಳ್ಳುವ
ಕಲೆಯ ಕರಗತ
ಮಾಡಿಕೊಂಡು
ಹೆಜ್ಜೆಯಿಟ್ಟಾಗ ಆಗುವುದು
ವಿಜಯದುಂದುಭಿಯ
ಅರಿವು

ಬೇಕು ಬೇಡಗಳ
ವ್ಯತ್ಯಾಸ ತಿಳಿದಾಗ
ನಮ್ಮದು ಎನ್ನುವ
ಅಭಿಮಾನ ಮೂಡಿದಾಗ
ಸದಾಶಯಗಳನ್ನು
ಹೊತ್ತು ಹೊರಟಾಗ
ಆಗುವುದು ಸಂಪೂರ್ಣ
ಅರಿವು


ಸುಧಾ ಪಾಟೀಲ್

About The Author

3 thoughts on “ಸುಧಾ ಪಾಟೀಲ್ ಕವಿತೆ ಅರಿವು”

  1. ಅರಿವಿನ ಹಂದರವನ್ನು ಅನಾವರಣಗೊಳಿಸಿದ ಕವಿತೆ. ಚೆನ್ನಾಗಿದೆ ಮೇಡಂ ಧನ್ಯವಾದಗಳು

  2. ಡಾ. ಮೀನಾಕ್ಷಿ ಪಾಟೀಲ್ ವಿಜಯಪುರ

    ಅರಿವಿನ ಹಂದರವನ್ನು ಅನಾವರಣಗೊಳಿಸಿದ ಕವಿತೆ ತುಂಬಾ ಚೆನ್ನಾಗಿದೆ ಮೇಡಂ ಧನ್ಯವಾದಗಳು

Leave a Reply

You cannot copy content of this page

Scroll to Top