ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ರತ್ನರಾಯಮಲ್ಲ

“ಬೆಹರ್ ಆಧಾರಿತ ಗಜಲ್”

ಹಗಲಿರುಳು ನೆನಪಿನ ದೋಣಿಯಲಿ ಚಲಿಸುತಿರುವೆ
ಅನುದಿನವು ಒಲವಿನ ಲೋಕದಲಿ ಚಲಿಸುತಿರುವೆ

ಉರುಳುತಿವೆ ದಿನಗಳು ಆಗದವು ತಡೆಹಿಡಿಯಲು
ಅನುಪಮದ ಅಮಲಿನ ಕಾಡಿನಲಿ ಚಲಿಸುತಿರುವೆ

ಸುಮದೊಡಲು ಅರಳಿದೆ ನೆಮ್ಮದಿಯ ಕಲರವವದು
ಅರಮನೆಯ ಅರಿಷಿಣ ಹಂಚುವಲಿ ಚಲಿಸುತಿರುವೆ

ಹಣೆಬರಹ ನೆನೆದರೆ ಸಂತಸವು ತೊರೆಯದಿರದು
ಜಗದಗಲ ನಲಿವನು ಸಾರುತಲಿ ಚಲಿಸುತಿರುವೆ

ಬಯಸಿದೊಡೆ ಬರುವುದು ಮಲ್ಲಿಗೆಯ ಪರಿಮಳವದು
ಮನದೊಡತಿ ಪಿರುತಿಯ ತೊಟ್ಟಿಲಲಿ ಚಲಿಸುತಿರುವೆ


ರತ್ನರಾಯಮಲ್ಲ

About The Author

1 thought on “ರತ್ನರಾಯಮಲ್ಲ “ಬೆಹರ್ ಆಧಾರಿತ ಗಜಲ್””

Leave a Reply

You cannot copy content of this page

Scroll to Top