ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕುಣಿಯುವ ನವಿಲನು ನೋಡುತ
ನಗುವಿನೊಂದಿಗೆ ನಲಿವಿರಲಿ ಎನ್ನುತ
ಗೆಳೆಯರ ಬಳಗ ಕೂಡಿ ಹೊರಟಿರಲು
ಎಲ್ಲಾ ರೀತಿಯ ಸಿದ್ಧತೆಯಾಗಿರಲು…..

ಹೊರ ನೋಟಕ್ಕೆ ಚಂದವು ಎಲ್ಲ
ಸಿದ್ಧವಾಗಲು ಬಹಳ ಸಮಯ ಹಿಡಿಯುತದಲ್ಲ
ನೋಡ ತಕ್ಷಣ ಚಂದ ಎನ್ನುವರೆಲ್ಲ
ಬೆಳವಣಿಗೆ ಎಷ್ಟು ಕಷ್ಟ ಎಂಬುದ ತಿಳಿದಿರುವರೆಲ್ಲ …..

ಸೌಂದರ್ಯ ತೋರಲು ಬೆಳವಣಿಗೆ ಬೇಕು
ಬೆಳೆಯುವ ತನಕ ಅದು ಸುರಕ್ಷಿತವಾಗಿರಬೇಕು
ಎಲ್ಲರ ಕಣ್ಣಿಂದ ರಕ್ಷಿಸಿಕೊಳ್ಳಬೇಕು
ಆಗ ತಾನೇ ಚೆಂದದ ಸೌಂದರ್ಯ ಹೊರಹೊಮ್ಮಬೇಕು…..

ಕೊಲಬೇಡ, ನೋಡಿ ಅಣಕಿಸಲು ಬೇಡ,
ಅದರ ಪಾಡಿಗೆ ಅದನು ಬಿಟ್ಟು ಬಿಡಿ
ಕೆಣಕಲು ಹೋಗಬೇಡಿ, ಬೆಳೆಯಲಿ ಬಿಡಿ
ಕಳೆ ಇದ್ದರೆ ಕಿತ್ತುಬಿಡಿ, ಪರಿಸರವನ್ನು ಉಳಿಸಿ ನೋಡಿ….

ಎಲ್ಲ ಸಮಯದಲ್ಲೂ ಒಂದೇ ನಡೆಯುವುದಿಲ್ಲ
ಎಲ್ಲಾ ದಿನ ಸೋಮವಾರವಾಗಿರುವುದಿಲ್ಲ
ಸಮಯ ಎಂಬುದು ಯಾರ ಸ್ವತ್ತು ಅಲ್ಲ
ಬ್ರಹ್ಮನ ಮುಂದೆ ಯಾವ ಬರಹವೂ ಇಲ್ಲ …….


About The Author

Leave a Reply

You cannot copy content of this page

Scroll to Top