ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಿನ್ನವರೆನಿಸಿಕೊಂಡವರು ದೂರ ನಿಂತಾಗ
ಪ್ರತಿಹೆಜ್ಜೆಗೂ ತಪ್ಪು ಹುಡುಕುವವರ ಕಂಡಾಗ
ಸುಮ್ಮನೊಂದು ನಗು ಬೀರಿ ಸಾಗು ಮುಂದೆ

ಅಲ್ಪಜ್ಞಾನಿ ಬಿಡದೆ ಬಡಾಯಿ ಕೊಚ್ಚುವಾಗ
ಅವಿವೇಕಿಯನೆಲ್ಲರೂ ಅಭಿನಂದಿಸುವಾಗ
ಹೀಗೊಂದು ನಗೆಯಾಡಿ ನಡೆಯುತಿರು ಮುಂದೆ

ಮಾತು ಮಾತಿಗೂ ಮನನೋಯಿಸುವವರ
ಮಾತಿಗೂ ಮತಿಗೂ ಸಂಬಂಧವಿಲ್ಲದವರ
ಕಂಡೊಮ್ಮೆ ನೋಡಿ ನಕ್ಕು ಬಿಡು ಸುಮ್ಮನೆ

ಸಮಯಕ್ಕೆ ಹೊಂದುವ ಬಣ್ಣ ತೊಡುವವರು
ಅವಶ್ಯಕತೆಗಾಗಿ ನಿನ್ನ ಅವಲಂಬಿಸುವವರು
ಎದುರು ಕಂಡಾಗ ಹೀಗೊಮ್ಮೆ ನಕ್ಕು ಬಿಡು

ಲಂಚ ಭ್ರಷ್ತಾಚಾರ ಮೇಲುಗೈ ಸಾಧಿಸಿದಾಗ
ಸಮಯ ಸಾಧಕರೆ ಜಗದಿ ತುಂಬಿರುವಾಗ
ಹುಸಿನಗೆಯನೊಂದ ಬೀರಿ ಸಾಗುತಿರು ಮುಂದೆ


About The Author

4 thoughts on “ಮಧುಮಾಲತಿ ರುದ್ರೇಶ್ ‘ನಕ್ಕು ಮುಂದೆ ಸಾಗುತಿರು’”

  1. ಸಂಗಾತಿ ಬ್ಲಾಗ್ ಹೊಸಬರಹಗಾರರಿಗೆ ಅತ್ಯುತ್ತಮ ವೇದಿಕೆ.ಎಲ್ಲರನ್ನೂ ಪ್ರೋತ್ಸಾಹಿಸುವ ತಮ್ಮ ಸಾಹಿತ್ಯ ಪ್ರೀತಿಗೆ ಶರಣು.ಇನ್ನೂ ಹೆಚ್ಚಿನ ಓದುಗರನ್ನು ಸೆಳೆಯಲಿ ಎಂಬ ಆಶಯದೊಂದಿಗೆ.
    ಮಧುಮಾಲತಿಬೇಲೂರು

  2. ‘ನಕ್ಕು ಮುಂದೆ ಸಾಗುತಿರು’ ತಮ್ಮ ಕವಿತೆ ತುಂಬಾ ಅರ್ಥಪೂರ್ಣವಾಗಿದೆ ಮೇಡಂ.

Leave a Reply

You cannot copy content of this page

Scroll to Top