ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಪ್ರಭಾ ಅಶೋಕ ಪಾಟೀಲ

ಇವರೇಕೆ ಹೀಗೆ?

ಮುಖವಾಡಗಳ ಸೋಗಿನಲಿ
ಆಡಂಬರದ ಬಲೆಯಲಿ
ಒಣ ಪ್ರತಿಷ್ಠೆಯ ಹಮ್ಮಲಿ
ಹೊಡೆದಾಡಿ ನಲುಗುತಲಿ
ಇವರೇಕೆ ಹೀಗೆ?

ಅಧಿಕಾರದ ಲಾಲಸೆಯಲಿ
ಗದ್ದುಗೆಯ ಗುದ್ದಾಟದಲಿ
ಭ್ರಷ್ಟತೆಗೆ ಕೈ ಚಾಚುತಲಿ
ಸಮಾಜ ಸೇವೆಯ ನೆಪದಲಿ
ಇವರೇಕೆ ಹೀಗೆ?

ಸ್ವಾರ್ಥದ ಅಟ್ಟಹಾಸದಲಿ
ಹಣದಾ ಮದದಲಿ
ನಿರ್ಗತಿಕರ ತುಳಿಯುತಲಿ
ಬಡಿವಾರದ ಬಾಷಣದಲಿ
ಇವರೇಕೆ ಹೀಗೆ?

ಭೂಮಿಗಾಗಿ ಹೊಡೆದಾಟ
ಜಾತೀಯತೆಯ ಹಾರಾಟ
ದೇಶವನ್ನೇ ಕಬಳಿಸುವರು
ಗೆದ್ದಲು ಹಿಡಿದ ಕಟ್ಟಿಗೆಯಂತೆ
ಇವರೇಕೆ ಹೀಗೆ?

ಅಂತರಾತ್ಮವೆಂಬುದು ಇವರಿಗಿಲ್ಲವೇ
ಕಣ್ಣು ಬಿಟ್ಟು ನೋಡಿರೊಮ್ಮೆ
ಸ್ವಾರ್ಥದ ಪರದೇ ಸರಿಸಿ ರೊಮ್ಮೆ
ಅರಿವ ಬೆಳಕ ಕಾಣೀರೊಮ್ಮೆ
ಇವರೇ ಕೆ ಹೀಗೆ?


ಪ್ರಭಾ ಅಶೋಕ ಪಾಟೀಲ

About The Author

4 thoughts on “ಪ್ರಭಾ ಅಶೋಕ ಪಾಟೀಲ-ಇವರೇಕೆ ಹೀಗೆ?”

Leave a Reply

You cannot copy content of this page

Scroll to Top