ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸಮಯದ ಮಿತಿ ಇದೆ

ಕಾಯುತ್ತಿದ್ದೇನೆ
ನೀ ಬಂದೆ ಬರುವೆಯೆಂದು
ನೀನೇನು ಹೇಳಲಿಲ್ಲ
ನಾನೇ ನಂಬಿದ್ದೇನೆ

ನಿನ್ನ ಬರುವು, ಇರುವು
ನನಗೆ ಉಸಿರು
ಬಾರದಿದ್ದರೂ ನೀ
ನನ್ನೆದೆಯೊಳಗೆ ಸದಾ ಹಸಿರು

ಪ್ರೀತಿ ಹುಟ್ಟಲು
ಕಾರಣರು ಯಾರು
ನಾನೋ-ನೀನೋ ಅದೊಂದು
ಅರಿಯಲಾಗದ ಬಸಿರು

ನಕ್ಷತ್ರಗಳಿಗೇನು ಗೊತ್ತು
ಪ್ರೀತಿಯ ಅರ್ಥ
ಅವು ಚೆಲ್ಲುವ ನಗು ಕೂಡಾ
ಬೆಳಕಿಗೆ ವ್ಯರ್ಥ

ಕಾಯುವುದಕ್ಕೂ,
ಕನಸು ಕಾಣುವುದಕ್ಕೂ,
ಸಮಯದ ಮಿತಿ ಇದೆ
ಸರಿ ಹೊತ್ತಿಗೆ ಸೇರಿಕೋ
ಕಾಯುತ್ತಿದ್ದೇನೆ….


ಒಲವು

About The Author

2 thoughts on “ಸಮಯದ ಮಿತಿ ಇದೆ”

Leave a Reply

You cannot copy content of this page

Scroll to Top