ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಮಹಿಳಾ ದಿನದ ವಿಶೇಷ

 ಸುಜಾತಾ ರವೀಶ್

Blue Abstract Painting Women in Art Print Original Sad Girl | Etsy India

ಪಿಂಡವಾಗಿದ್ದ  ಅಸ್ತಿತ್ವಕ್ಕೆ ಸಂಚಕಾರದ ಭೀತಿ ಇತ್ತು ಗೆಳತಿ 
ಕೆಂಡವಾಗಿದ್ದ ಹೃದಯಕ್ಕೆ ಸಂಪ್ರದಾಯದ ರೀತಿಯಿತ್ತು ಗೆಳತಿ

ಕಟ್ಟುಪಾಡು ರಿವಾಜುಗಳು ಬಿಗಿ ಸಂಕೋಲೆಗಳನು 
ಬಿಗಿದಿದ್ದವು
ಬಿಟ್ಟುಹಾಕಿ ನಡೆಯಲು ಬೆಳೆದ ಸಂಸ್ಕಾರಗಳ ನೀತಿಯಿತ್ತು ಗೆಳತಿ 

ಕಬಂಧ ಬಾಹುಗಳಾಗಿ ಸಮಾಜದ ಅನಿಷ್ಟಗಳು ಕಾಡುತ್ತಿದ್ದವು
ಸಂಬಂಧ ಬಾಂಧವ್ಯದ ಚೌಕಟ್ಟಲಿ ನೆಮ್ಮದಿಯ ಪ್ರೀತಿಯಿತ್ತು ಗೆಳತಿ 

ಅತಂತ್ರ ಪರಿಸ್ಥಿತಿ ಪದ್ಧತಿಗಳು ಕಡುಬೆಂಕಿಯಾಗಿ ಸುಡುತ್ತಿದ್ದವು
ಕುತಂತ್ರ ಇರದೆಲೇ ನ್ಯಾಯನಿಷ್ಠೆಯ ದಿವ್ಯ ಕಾಂತಿಯಿತ್ತು ಗೆಳತಿ 

ಗಜಿಬಿಜಿಯ ಬಾಳಿನಲ್ಲಿ ರಕ್ಷೆಗಳು ಸುಖ ಸಂತಸ ನೀಡುತ್ತಿದ್ದವು 
ಸುಜಿಮನದ ಪರಿಧಿಯಲ್ಲಿ ಕಂಡ ಅಸ್ಮಿತೆಯ ಶಾಂತಿಯಿತ್ತು ಗೆಳತಿ 
    


About The Author

Leave a Reply

You cannot copy content of this page

Scroll to Top